AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಈ ರಾಶಿಯವರ ದುಂದುವೆಚ್ಚಕ್ಕೆ ಸಂಗಾತಿಯು ಬ್ರೇಕ್ ಹಾಕಬಹುದು

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರ ದುಂದುವೆಚ್ಚಕ್ಕೆ ಸಂಗಾತಿಯು ಬ್ರೇಕ್ ಹಾಕಬಹುದು
ಇಂದಿನ ರಾಶಿಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: Rakesh Nayak Manchi|

Updated on: Jul 19, 2023 | 12:40 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ತುಲಾ: ಭೂಮಿಯನ್ನು ಖರೀದಿಸುವ ಯೋಗವು ಬಂದಿದ್ದರೂ ಹಣವನ್ನು ಸೇರಿಸಲು ಕಷ್ಟವಾದೀತು. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕೀತು. ನೀವು ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳಬೇಕಾಗಬಹುದು‌. ಸ್ನೇಹಿತರ ಜೊತೆ ಸುತ್ತಾಟ ಮಾಡುವಿರಿ. ಮರೆಯಲ್ಲಿದ್ದ ಪ್ರೇಮವನ್ನು ನೀವು ತಿಳಿಸಬೇಕಾದವರಿಗೆ ಹೇಳುವಿರಿ. ನಿಮ್ಮ ಸ್ಥಾನಕ್ಕಾಗಿ ಮತ್ಯಾರನ್ನೋ ಕೆಳಗಿಳಿಸುವ ಹುನ್ನಾರ ನಡೆಸುವಿರಿ. ನಿಮ್ಮ ಬಂಧುಗಳನ್ನು‌ ನೀವು ಬಹಳ ಎಚ್ಚರಿಕೆಯಿಂದ ಕರೆದುಕೊಂಡು ಹೋಗಬೇಕಾದೀತು.‌ ನಿಮ್ಮ ಪ್ರತಿ ಮಾತೂ ತೂಕಕ್ಕೆ ಹೋಗಬಹುದು.

ವೃಶ್ಚಿಕ: ಮೇಲಧಿಕಾರಿಗಳ ಕಿರುಕುಳವು ನಿಮಗೆ ಬಹಳ ಕಷ್ಟವಾದೀತು. ಉದ್ಯೋಗವನ್ನು ಬದಲಿಸಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಡಲು ನಿಮಗೆ ಇಂದು ಸುಸಂದರ್ಭ. ದೂರದಲ್ಲಿ ಇರುವ ನಿಮಗೆ ಕುಟುಂಬದ ವಾರ್ತೆಯು ಸಂತೋಷವನ್ನು ತರುವುದು. ಪ್ರೀತಿಯನ್ನು ನೀವು ಲಘುವಾಗಿ ಸ್ವೀಕರಿಸಿ ಪ್ರಿಯಕರನಿಂದ ದೂರಾಗುವ ಸಾಧ್ಯತೆ ಇದೆ. ಬೇಗ ಮುಗಿಯಬಹುದಾದ ಕೆಲಸವನ್ನು ಮೊದಲು ಮಾಡಿ ಮುಗಿಸಿ. ಸಹೋದರನ ಆರೋಗ್ಯವು ನಿಮ್ಮನ್ನು ಕುಗ್ಗಿಸಬಹುದು. ಆರೋಗ್ಯಧ ಸುಧಾರಣೆಗೆ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ.‌ ಗೋವಿನ ಸೇವೆಯು ನಿಮಗೆ ಹೆಚ್ಚು ಅನುಕೂಲವಾಗಲಿದೆ.

ಧನುಸ್ಸು: ಯಂತ್ರೋಪಕರಣವನ್ನು ಬಳಸಿಕೊಂಡು ಹೊಸ ಉದ್ಯೋಗವನ್ನು ನೀವು ಆರಂಭಿಸಲಿದ್ದೀರಿ. ವಿದೇಶದಲ್ಲಿ ಇರುವವರಿಗೆ ಸಂಕಟವಾಗಬಹುದು. ಪುರಾಣಪ್ರವಚನದಲ್ಲಿ ನೀವು ಭಾಗವಹಿಸುವಿರಿ. ನಿಮ್ಮ ದೌರ್ಬಲ್ಯವನ್ನು ನೀವು ವರವಾಗಿ ಪಡೆದು ಸಾಧಿಸಬೇಕೆನಿಸಬಹುದು. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಬೇಕಾದ ಸಹಾಯವನ್ನು ಮಾಡುವರು. ಪೂರ್ವಯೋಜಿತ ಕಾರ್ಯಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟವಾದೀತು. ನಿಮ್ಮ ದುಂದು ವೆಚ್ಚಕ್ಕೆ ಸಂಗಾತಿಯು ಬ್ರೇಕ್ ಹಾಕಬಹುದು. ಇಂದು ನಿಮಗೆ ಪ್ರತಿಭಟನೆಯ ಮನೋಭಾವವು ಇರಲಿದೆ.

ಮಕರ: ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ವಾಹನವನ್ನು ಖರೀದಿಸುವ ಮೊದಲು ಆಪ್ತರ ಸಲಹೆಯನ್ನು ಪಡೆಯಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ತಾಯಿಯ ಆರೋಗ್ಯವನ್ನು ಸರಿಮಾಡಿಸಲು ಹಣಕಾಸಿನ ವ್ಯಯವಾಗಲಿದೆ. ಪ್ರಭಾವಿ ಜನರ ಭೇಟಿಯಿಂದ ನಿಮಗೆ ಅನೇಕ ಲಾಭಗಳು ಆಗಲಿದೆ. ಮಹತ್ಕಾರ್ಯಕ್ಕೆ ನಿಮ್ಮದೊಂದು ಸಣ್ಣ ಕೊಡುಗೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಯಿಂದ ನೀವು ಹಿಮ್ಮುಖರಾಗುವಿರಿ. ಅಗ್ನಿಭೀತಿಯು ನಿಮ್ಮನ್ನು ಕಾಡಬಹುದು.

ಕುಂಭ: ನಿಮ್ಮ ವ್ಯವಹಾರದಲ್ಲಿ ನಿಮಗೆ ವಂಚನೆಯಾಗಲಿದೆ. ಆರೋಗ್ಯವನ್ನು ಸರಿಮಾಡಿಕೊಳ್ಳಲು ವೈದ್ಯರ ಭೇಟಿ ಮಾಡುವಿರಿ. ನೀವು ಹಾಕಿಕೊಂಡ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ. ನಿಮ್ಮ ಕಳುವಾದ ವಸ್ತುವು ಸಿಗಲಿದೆ. ರಾಜಕೀಯದಿಂದ ಪ್ರೇರಿತವಾದ ಮಾತುಗಳು ನಿಮಗೆ ಶೋಭೆಯನ್ನು ತರದು. ಆಸಕ್ತಿ ಇಲ್ಲದೇ ಇದ್ದರೂ ಕೆಲವು ಕೆಲಸಗಳನ್ನು ಮಾಡಲೇಬೇಕಾದೀತು. ಮನಸ್ಸು ಚಂಚಲವಾಗಿವ ಯಾರ ಮಾತನ್ನೂ ಕೇಳುವ ಮನಃಸ್ಥಿತಿ ಇರದು. ದೂರದ ಬಂಧುಗಳು ಪರಿಚಿತರಾಗಿ ಹತ್ತಿರವಾಗಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಕೃತಜ್ಞತೆ ಇರಲಿ. ಕುಲದೇವರ ಸನ್ನಿಧಿಗೆ ಹೋಗಲಿದ್ದೀರಿ.

ಮೀನ: ಇಂದು ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣ ಅತ್ಯವಶ್ಯಕ. ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ಬಂಧುಗಳ ಸಹಕಾರದಿಂದ ನಿಮ್ಮ ಸಾಲಬಾಧೆಯು ಪರಿಹಾರವಾಗಲಿದೆ. ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಲ್ಲಿ ನಿಮ್ಮ ಪ್ರಯತ್ನವಿರುವುದು. ಇಂದು ವಿವಾಹದ ಮಾತುಕತೆಗಳನ್ನು ನಡೆಸಲು ಹೋಗಲಿದ್ದೀರಿ. ನಿಮ್ಮ ಸಮಯವನ್ನು ಇತರರು ವ್ಯರ್ಥ ಮಾಡಬಹುದು. ನಿಮ್ಮ ಬಗ್ಗೆ ಕೆಲವು ಊಹಾಪೋಹಗಳು ಹರಡಬಹುದು.

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!