AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಭಾರತಕ್ಕೂ ವಿಸ್ತರಿಸಿದ ಇಶಾ ಗ್ರಾಮೋತ್ಸವ; 10 ರಾಜ್ಯಗಳಲ್ಲಿ ನಡೆಯಲಿದೆ ಗ್ರಾಮೀಣ ಕ್ರೀಡಾ ಹಬ್ಬ

ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬಗಳಲ್ಲಿ ಒಂದಾದ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಆಯೋಜಿಸುವ 'ಇಶಾ ಗ್ರಾಮೋತ್ಸವ' ಈ ವರ್ಷ ದೇಶದ ಕ್ರೀಡಾ ಭೂಪಟದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದೆ. ಈ ಬಾರಿ ಕೇವಲ ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗದೆ, ಉತ್ತರ ಮತ್ತು ಪೂರ್ವ ಭಾರತದ ರಾಜ್ಯಗಳಿಗೂ ವಿಸ್ತರಿಸುವ ಮೂಲಕ ದೇಶದ ಬರೋಬ್ಬರಿ 10 ರಾಜ್ಯಗಳು ಮತ್ತು 40,000 ಹಳ್ಳಿಗಳನ್ನು ತಲುಪಿದೆ. ಇದುವರೆಗೆ ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿಗಳಲ್ಲಿ ನಡೆಯುತ್ತಿದ್ದ ಇಶಾ ಗ್ರಾಮೋತ್ಸವಕ್ಕೆ ಈ ಬಾರಿ ಹೊಸದಾಗಿ 5 ರಾಜ್ಯಗಳು ಸೇರ್ಪಡೆಯಾಗಿವೆ. ಅವುಗಳೆಂದರೆ, ಉತ್ತರ ಪ್ರದೇಶ, ಹರಿಯಾಣ, ಒಡಿಶಾ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ.

ಉತ್ತರ ಭಾರತಕ್ಕೂ ವಿಸ್ತರಿಸಿದ ಇಶಾ ಗ್ರಾಮೋತ್ಸವ; 10 ರಾಜ್ಯಗಳಲ್ಲಿ ನಡೆಯಲಿದೆ ಗ್ರಾಮೀಣ ಕ್ರೀಡಾ ಹಬ್ಬ
Isha GramotsavamImage Credit source: TV9
ಸುಷ್ಮಾ ಚಕ್ರೆ
|

Updated on: Jul 15, 2026 | 9:53 PM

Share

ಮುಖ್ಯಾಂಶಗಳು

  • 10 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ 40,000 ಗ್ರಾಮಗಳ ಕ್ರೀಡಾಪಟುಗಳು ಭಾಗಿ
  • 80,000ಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳು ಅಖಾಡಕ್ಕೆ
  • 1 ಕೋಟಿ ರೂ.ಗೂ ಅಧಿಕ ಮೊತ್ತದ ನಗದು ಬಹುಮಾನ

ನವದೆಹಲಿ, ಜುಲೈ 15: ಸದ್ಗುರು ಜಗ್ಗಿ ವಾಸುದೇವ್ ಅವರ ‘ಇಶಾ ಔಟ್‌ರೀಚ್’ ಸಂಸ್ಥೆ ಆಯೋಜಿಸುವ ಪ್ರಸಿದ್ಧ ಗ್ರಾಮೀಣ ಕ್ರೀಡಾ ಹಬ್ಬ ‘ಇಶಾ ಗ್ರಾಮೋತ್ಸವ’ (Isha Gramotsavam) ಈ ಬಾರಿ ಉತ್ತರ ಭಾರತಕ್ಕೂ ಕಾಲಿಟ್ಟಿದೆ. ತನ್ನ 18ನೇ ಆವೃತ್ತಿಯಲ್ಲಿ ಬರೋಬ್ಬರಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಣೆಯಾಗಿದ್ದು, ಇದು ಇದುವರೆಗಿನ ಅತ್ಯಂತ ಬೃಹತ್ ಕ್ರೀಡಾಕೂಟವಾಗಿರಲಿದೆ. ಈ ಬೃಹತ್ ಹಬ್ಬದಲ್ಲಿ 40,000ಕ್ಕೂ ಹೆಚ್ಚು ಹಳ್ಳಿಗಳ 80,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ.

ಇದುವರೆಗೆ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿಗಳಿಗಷ್ಟೇ ಸೀಮಿತವಾಗಿದ್ದ ಈ ಉತ್ಸವ, ಈಗ ಮೊದಲ ಬಾರಿಗೆ ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ವಿಸ್ತರಿಸಿದೆ. ಇಡೀ ದೇಶಾದ್ಯಂತ ಒಟ್ಟು 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸ್ಪರ್ಧೆಗಳು ನಡೆಯಲಿವೆ.

ಕ್ರೀಡಾಕೂಟದ ವಿಶೇಷತೆಗಳು:

ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಇಶಾ ಫೌಂಡೇಶನ್‌ನ ಸ್ವಾಮಿ ಪುಲಕ, ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಗಳು ನಡೆಯಲಿವೆ ಎಂದಿದ್ದಾರೆ. ಆದರೆ, ಪ್ರತಿ ತಂಡದಲ್ಲಿ ಆಡುವ ಎಲ್ಲಾ ಆಟಗಾರರು ಕಡ್ಡಾಯವಾಗಿ ಒಂದೇ ಗ್ರಾಮ ಪಂಚಾಯಿತಿಗೆ ಸೇರಿದವರಾಗಿರಬೇಕು.

ಇದನ್ನೂ ಓದಿ: ಪ್ರಚಾರಕ್ಕಾಗಿ ಸದ್ಗುರುವಿನ ನಕಲಿ ಫೋಟೋ, ವಿಡಿಯೋ ಬಳಸದಿರಲು ದೆಹಲಿ ಹೈಕೋರ್ಟ್ ಆದೇಶ

ವೃತ್ತಿಪರ ಆಟಗಾರರಿಗೆ ನಿರ್ಬಂಧ:

ಕೇವಲ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಇರುವುದರಿಂದ ಯಾವುದೇ ವೃತ್ತಿಪರ ಆಟಗಾರರಿಗೆ ಇಲ್ಲಿ ಆಡಲು ಅವಕಾಶವಿಲ್ಲ. ಒಟ್ಟು 7,000 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ ಸುಮಾರು 15,000 ಮಹಿಳಾ ಆಟಗಾರರು ಇರಲಿದ್ದಾರೆ. ಒಟ್ಟು ನಗದು ಬಹುಮಾನದ ಮೊತ್ತ 1 ಕೋಟಿ ರೂ.ಗೂ ಅಧಿಕವಾಗಿದೆ.

Isha Gramotsavam (1)

Isha Gramotsavam

ಕ್ರೀಡಾಕೂಟದ ವೇಳಾಪಟ್ಟಿ:

ಜುಲೈ ಎರಡನೇ ವಾರದಿಂದ ಕ್ಲಸ್ಟರ್ ಮಟ್ಟದ ಪಂದ್ಯಗಳು ಆರಂಭವಾಗಲಿದ್ದು, ನಂತರ ವಿಭಾಗೀಯ ಮತ್ತು ರಾಜ್ಯ ಮಟ್ಟದ ಫೈನಲ್ಸ್ ನಡೆಯಲಿವೆ. ಸೆಪ್ಟೆಂಬರ್‌ನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸದ್ಗುರುಗಳ ಸಮ್ಮುಖದಲ್ಲಿ ಮಹಾ ಫೈನಲ್ಸ್ ನಡೆಯಲಿದೆ.

ಎಲ್ಲಿ, ಯಾವಾಗ ಪಂದ್ಯ ನಡೆಯಲಿದೆ?:

ಉತ್ತರ ಪ್ರದೇಶ: ಲಕ್ನೋ, ವಾರಾಣಸಿ, ಮೀರತ್ ಮುಂತಾದೆಡೆ ಕ್ಲಸ್ಟರ್ ಪಂದ್ಯಗಳು ನಡೆದು, ಆಗಸ್ಟ್ 9ರಂದು ಲಕ್ನೋದಲ್ಲಿ ರಾಜ್ಯ ಮಟ್ಟದ ಫೈನಲ್ ನಡೆಯಲಿದೆ.

ಹರಿಯಾಣ: ಕರ್ನಾಲ್, ಅಂಬಾಲಾ ಮುಂತಾದೆಡೆ ಪಂದ್ಯಗಳು ನಡೆದು, ಆಗಸ್ಟ್ 9ರಂದು ಕರ್ನಾಲ್‌ನಲ್ಲಿ ರಾಜ್ಯ ಮಟ್ಟದ ಫೈನಲ್ ನಡೆಯಲಿದೆ.

Isha Gramotsavam (2)

Isha Gramotsavam

ಇದನ್ನೂ ಓದಿ: 79ನೇ ವರ್ಷದ ಸ್ವತಂತ್ರ ಭಾರತ; ಉದಾರೀಕರಣ ಮಾತ್ರವಲ್ಲ, ಮುಕ್ತಗೊಳಿಸುವ ಸಮಯ ಇದು: ಸದ್ಗುರು

ಕಳೆದ ಎರಡು ದಶಕಗಳಲ್ಲಿ ಈ ಗ್ರಾಮೋತ್ಸವವು 35,000ಕ್ಕೂ ಹೆಚ್ಚು ಹಳ್ಳಿಗಳ 2.6 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳನ್ನು ತಲುಪಿದೆ. ಕ್ರೀಡೆಯೊಂದಿಗೆ ಗ್ರಾಮೀಣ ಭಾರತದ ಸಂಸ್ಕೃತಿ, ಜಾನಪದ ಕಲೆ ಮತ್ತು ವಿಭಿನ್ನ ಪ್ರಾದೇಶಿಕ ಖಾದ್ಯಗಳ ಪ್ರದರ್ಶನಕ್ಕೂ ಇದು ಸಾಕ್ಷಿಯಾಗಲಿದೆ.

ಇಶಾ ಫೌಂಡೇಶನ್‌ನ ಈ ಉಪಕ್ರಮವು ಗ್ರಾಮೀಣ ಭಾಗದಲ್ಲಿ ದೈಹಿಕ ಸದೃಢತೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಕ್ರೀಡೆಯ ಮೂಲಕ ಹಳ್ಳಿಗಳಲ್ಲಿ ಸಮುದಾಯದ ಐಕ್ಯತೆಯನ್ನು ಸಾಧಿಸುವ ಗುರಿ ಹೊಂದಿದೆ. ದೈನಂದಿನ ಕಷ್ಟದ ಜೀವನ ಮತ್ತು ಜಡತ್ವದಿಂದ ಗ್ರಾಮೀಣ ಜನರನ್ನು ಹೊರತಂದು, ಅವರಲ್ಲಿ ಹೊಸ ಉತ್ಸಾಹ, ಕ್ರೀಡಾ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಮೂಡಿಸುವುದು ಇದರ ಮುಖ್ಯ ಆಶಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹೆಸರು ದುರ್ಬಳಕೆ, ನಂಬಿಕೆ ದ್ರೋಹ: ಧನ್ವೀರ್ ಮೇಲೆ ಕೇಸ್ ಜಡಿದ ದರ್ಶನ್
ಹೆಸರು ದುರ್ಬಳಕೆ, ನಂಬಿಕೆ ದ್ರೋಹ: ಧನ್ವೀರ್ ಮೇಲೆ ಕೇಸ್ ಜಡಿದ ದರ್ಶನ್
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’