AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ: ನನಗೇನು ಸಮಸ್ಯೆ ಇರಲಿಲ್ಲ, ಅದಕ್ಕೆ ಹೋಗಲಿಲ್ಲ

ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ: “ನನಗೇನು ಸಮಸ್ಯೆ ಇರಲಿಲ್ಲ, ಅದಕ್ಕೆ ಹೋಗಲಿಲ್ಲ”

ಅಕ್ಷಯ್​ ಪಲ್ಲಮಜಲು​​
|

Updated on: Jul 15, 2026 | 5:04 PM

Share

ಬೆಂಗಳೂರು ಶಾಸಕರ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ತಮಗೆ ಯಾವುದೇ ಸಮಸ್ಯೆಗಳಿಲ್ಲದ ಕಾರಣ ಸಭೆಗೆ ಹೋಗಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆ ಸಿಗದಿರುವ ಅಸಮಾಧಾನ ಹಳೆಯ ಕಥೆಯಾಗಿದೆ, ಹೊಸದಾಗಿ ಯಾವುದೇ ಅಸಮಾಧಾನವಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಜು.15: ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರು ಇತ್ತೀಚೆಗೆ ಕರೆದಿದ್ದ ಬೆಂಗಳೂರು ಶಾಸಕರ ಸಭೆಗೆ ಗೈರು ಆಗಿರುವ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. “ಸಮಸ್ಯೆಗಳಿದ್ದವರು ಮುಖ್ಯಮಂತ್ರಿಗಳ ಸಭೆಗೆ ಹೋಗಿದ್ದರು. ನನಗೇನು ಸಮಸ್ಯೆಗಳಿರಲಿಲ್ಲ, ಆದ್ದರಿಂದ ನಾನು ಹೋಗಲಿಲ್ಲ,” ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಡಾ. ಜಿ. ಪರಮೇಶ್ವರ ಅವರು ಬೆಂಗಳೂರಿಗೆ ಸಂಬಂಧಿಸಿದ BMRDA ಮತ್ತು BDA ಖಾತೆಗಳನ್ನು ಹೊಂದಿದ್ದಾರೆ. ಸಮಸ್ಯೆಗಳಿದ್ದ ಶಾಸಕರು ಸಭೆಗೆ ಹಾಜರಾಗಿದ್ದರು. ತಮಗೆ ಯಾವುದೇ ವಿಷಯಗಳ ಕುರಿತು ಚರ್ಚೆ ಅಗತ್ಯವಿಲ್ಲದ ಕಾರಣ ಸಭೆಯಿಂದ ದೂರ ಉಳಿದಿರುವುದಾಗಿ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಈ ಹಿಂದೆ, ಬೆಂಗಳೂರು ಅಭಿವೃದ್ಧಿ ಖಾತೆ ಸಿಗದಿರುವ ಬಗ್ಗೆ ಅವರಲ್ಲಿ ಅಸಮಾಧಾನವಿದೆ ಎಂಬ ಊಹಾಪೋಹಗಳಿದ್ದವು. ಆದರೆ, ಈ ಕುರಿತು ಕೇಳಿದ ಪ್ರಶ್ನೆಗೆ ರಾಮಲಿಂಗಾ ರೆಡ್ಡಿ, “ಅದೆಲ್ಲಾ ಹಳೆಯ ಕಥೆಯಾಗಿದೆ. ನನಗೇನು ಅಸಮಾಧಾನವಿದ್ದರೆ ವಿಧಾನಸೌಧಕ್ಕೇ ಬರುತ್ತಿರಲಿಲ್ಲ,” ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆಯ ಕುರಿತು ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us