AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಮುಸ್ಲಿಮನಾ?’; ಅಮೆರಿಕದ ಮಾಲ್‌ನಲ್ಲಿ ಧರ್ಮ ಕೇಳಿ ಭಾರತೀಯ ಮೂಲದ ವ್ಯಕ್ತಿಗೆ 15 ಬಾರಿ ಚಾಕು ಇರಿತ

ಅಮೆರಿಕದ ಯೂಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯಲ್ಲಿರುವ 'ವ್ಯಾಲಿ ಫೇರ್ ಮಾಲ್'ನಲ್ಲಿ ಜನಾಂಗೀಯ ದ್ವೇಷದ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಮಾಲ್‌ನ ಕಿಯೋಸ್ಕ್ ಉದ್ಯೋಗಿಯಾಗಿದ್ದ ಭಾರತೀಯ ಮೂಲದ ಸೊಹೈಲ್ ಎಂಬುವವರ ಧರ್ಮವನ್ನು ಕೇಳಿ, ಅವರ ಮೇಲೆ ಭೀಕರವಾಗಿ 15 ಬಾರಿ ಚಾಕು ಇರಿಯಲಾಗಿದೆ. ದಾಳಿಕೋರನು ಸಂತ್ರಸ್ತ ವ್ಯಕ್ತಿ ಮುಸ್ಲಿಂ ಎಂದು ತಿಳಿದ ತಕ್ಷಣವೇ ಅವರನ್ನು ಕೊಲ್ಲುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

'ನೀನು ಮುಸ್ಲಿಮನಾ?'; ಅಮೆರಿಕದ ಮಾಲ್‌ನಲ್ಲಿ ಧರ್ಮ ಕೇಳಿ ಭಾರತೀಯ ಮೂಲದ ವ್ಯಕ್ತಿಗೆ 15 ಬಾರಿ ಚಾಕು ಇರಿತ
Indian Man Stabbed In UsImage Credit source: x
ಸುಷ್ಮಾ ಚಕ್ರೆ
|

Updated on: Jul 15, 2026 | 10:27 PM

Share

ವಾಷಿಂಗ್ಟನ್, ಜುಲೈ 15: ಅಮೆರಿಕದ (United States) ಯೂಟಾ ರಾಜ್ಯದ ಶಾಪಿಂಗ್ ಮಾಲ್‌ ಒಂದರಲ್ಲಿ ಅತ್ಯಂತ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ಮೂಲದ ಉದ್ಯೋಗಿಯೊಬ್ಬರ ಧರ್ಮವನ್ನು ಕೇಳಿ ಅವರ ಮೇಲೆ ಜನಾಂಗೀಯ ದ್ವೇಷದಿಂದ ಚಾಕುವಿನಿಂದ ಇರಿಯಲಾಗಿದೆ. ದಾಳಿ ನಡೆಸಲು ಬಂದವನು ಮೊದಲು ಆ ವ್ಯಕ್ತಿಯ ಬಳಿ “ನೀನು ಮುಸ್ಲಿಮನಾ?” ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಅವರು “ಹೌದು, ನಾನು ಮುಸ್ಲಿಂ” ಎಂದಿದ್ದಾರೆ. ಆ ವ್ಯಕ್ತಿ ಮುಸ್ಲಿಂ ಎಂದು ಖಚಿತವಾದ ನಂತರ ಕೊಲ್ಲುವ ಉದ್ದೇಶದಿಂದಲೇ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು ಹೇಗೆ?:

ವೆಸ್ಟ್ ವ್ಯಾಲಿ ಸಿಟಿಯ ‘ವ್ಯಾಲಿ ಫೇರ್ ಮಾಲ್’ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮಾಲ್‌ನ ಸಣ್ಣ ಮಳಿಗೆ ಒಂದರಲ್ಲಿ ಭಾರತೀಯ ಮೂಲದ ಸೊಹೈಲ್ ಎಂಬುವವರು ಕೆಲಸ ಮಾಡುತ್ತಿದ್ದರು. 48 ವರ್ಷದ ಪೀಟರ್ ಮೈಕೇಲ್ ಲಾರ್ಸೆನ್ ಎಂಬ ಆರೋಪಿ ಸೊಹೈಲ್ ಅವರ ಬಳಿ ಬಂದು ಮೊದಲು ಕುಡಿಯಲು ಒಂದು ಬಾಟಲಿ ನೀರು ಕೇಳಿದ್ದಾನೆ. ಆಗ ಅವರಿಬ್ಬರ ನಡುವೆ ಮಾತುಕತೆ ನಡೆದಿದೆ.

ಇದನ್ನೂ ಓದಿ: ದೆಹಲಿ ಜೈಲಿನಲ್ಲಿ ಅಮೆರಿಕನ್ ಸ್ಟೈಲ್ ಡಯಟ್ ಕೇಳಿ ಕೋರ್ಟ್ ಮೆಟ್ಟಿಲೇರಿದ ವಿದೇಶಿ ಕೈದಿ!

ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಸತ್ಯ:

ಆ ಅಂಗಡಿಯ ಪಕ್ಕದ ಜ್ಯುವೆಲ್ಲರಿ ಅಂಗಡಿಯ ಪ್ರತ್ಯಕ್ಷದರ್ಶಿ ಉದ್ಯೋಗಿ ಲೂನಾ ನುನೆಜ್ ತಿಳಿಸಿರುವಂತೆ, “ಆರೋಪಿ ಲಾರ್ಸೆನ್ ಸೊಹೈಲ್ ಬಳಿ ಬಂದು ‘ನೀನು ಎಲ್ಲಿಂದ ಬಂದಿದ್ದೀಯಾ?’ ಎಂದು ಕೇಳಿದನು. ಅದಕ್ಕೆ ಸೊಹೈಲ್, ‘ನಾನು ಭಾರತದವನು, ನನ್ನ ಹೆಸರು ಸೊಹೈಲ್’ ಎಂದರು. ತಕ್ಷಣ ಲಾರ್ಸೆನ್ ‘ನೀನು ಮುಸ್ಲಿಮನಾ?’ ಎಂದು ಪ್ರಶ್ನಿಸಿದಾಗ ಸೊಹೈಲ್ ‘ಹೌದು’ ಎಂದರು. ಸೊಹೈಲ್ ನೀರಿನ ಬಾಟಲಿ ನೀಡಲು ತಿರುಗುತ್ತಿದ್ದಂತೆಯೇ, ಲಾರ್ಸೆನ್ ಚಾಕು ತೆಗೆದು ಅವರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ” ಎಂದು ಅವರು ತಿಳಿಸಿದ್ದಾರೆ. ಲೂನಾ ನುನೆಜ್ ಅವರು ಸೊಹೈಲ್ ರಕ್ಷಣೆಗಾಗಿ ಚಪ್ಪಲಿ, ಕುರ್ಚಿ ಸೇರಿದಂತೆ ಕೈಗೆ ಸಿಕ್ಕಿದ್ದನ್ನೆಲ್ಲ ಆರೋಪಿಯ ಮೇಲೆ ಎಸೆದಿದ್ದಾರೆ.

ಇದನ್ನೂ ಓದಿ: ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾದ ವಿವಾದಾತ್ಮಕ ಆದೇಶ ತಿದ್ದುಪಡಿ ಮಾಡಿದ ಮಣಿಪುರ ಹೈಕೋರ್ಟ್

ಸೊಹೈಲ್ ಅವರ ದೇಹಕ್ಕೆ ಬರೋಬ್ಬರಿ 15 ಬಾರಿ ಚಾಕು ಇರಿಯಲಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ. ಸೊಹೈಲ್ ಮೇಲೆ ದಾಳಿ ನಡೆಯುತ್ತಿದ್ದಾಗ, ಮಾಲ್‌ನಲ್ಲಿದ್ದ ಸಾರ್ವಜನಿಕರು ತಕ್ಷಣವೇ ಸಹಾಯಕ್ಕೆ ಬಂದಿದ್ದಾರೆ. ನಂತರ ಅಲ್ಲಿದ್ದ ಇತರರು ಆರೋಪಿಯನ್ನು ಹಿಡಿದು ಕೆಳಕ್ಕೆ ತಳ್ಳಿ, ಪೊಲೀಸರು ಬರುವವರೆಗೂ ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ.

ಮುಸ್ಲಿಮರನ್ನು ಕೊಲ್ಲುವುದೇ ನನ್ನ ಉದ್ದೇಶ:

ಬಂಧಿತ ಆರೋಪಿ ಪೀಟರ್ ಮೈಕೇಲ್ ಲಾರ್ಸೆನ್ ತನಿಖಾಧಿಕಾರಿಗಳ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಾನು ಮುಸ್ಲಿಮರನ್ನು ಕೊಲ್ಲುವ ಉದ್ದೇಶದಿಂದಾಗಿಯೇ ಸೊಹೈಲ್ ಮುಸ್ಲಿಂ ಎಂದು ಖಚಿತಪಡಿಸಿಕೊಂಡು ದಾಳಿ ಮಾಡಿದ್ದಾಗಿ ಹೇಳಿದ್ದಾನೆ. ಆತನ ಮೇಲೆ ಕೊಲೆ ಯತ್ನ ಹಾಗೂ ನಿಷೇಧಿತ ಮಾರಕಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಾಲ್ಟ್ ಲೇಕ್ ಕೌಂಟಿ ಜೈಲಿನಲ್ಲಿ ಇಡಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಬತ್ತದ ಹುಲ್ಲಿಗೆ ಹಚ್ಚಿದ ಬೆಂಕಿಗೆ ಉರಿದು ಬೂದಿಯಾಯ್ತು 20ಕ್ಕೂ ಹೆಚ್ಚು ಪಂಪ್
ಬತ್ತದ ಹುಲ್ಲಿಗೆ ಹಚ್ಚಿದ ಬೆಂಕಿಗೆ ಉರಿದು ಬೂದಿಯಾಯ್ತು 20ಕ್ಕೂ ಹೆಚ್ಚು ಪಂಪ್
ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ