ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 17 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 51 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.
ಧನು: ಹೆಚ್ಚು ಉತ್ಸಾಹದಾಯಕವಾದ ದಿನ ನಿಮ್ಮದಾಗಲಿದೆ. ಎಂತಹ ಸಮಸ್ಯೆಗಳನ್ನೂ ಧೈರ್ಯದಿಂದ ಅಳುಕಿಲ್ಲದೇ ಎದುರಿಸುವಿರಿ. ಹೊಸದಾಗಿ ವಿದ್ಯಾಭ್ಯಾಸವನ್ನು ಮಾಡಿ ಮುಗಿಸಿದವರಿಗೆ ಕೆಲಸವು ಸಿಗುವುದು ಕಷ್ಟವಾದೀತು. ಸ್ವಂತ ವ್ಯವಹಾರದಲ್ಲಿ ಲಾಭವಿರಲಿದೆ. ಕೆಲವರ ಮಾತು ನಿಮಗೆ ಕಿರಿಕಿರಿಯಾದೀತು. ಹಣವನ್ನು ಖರ್ಚು ಮಾಡಲು ಯೋಚಿಸಿ. ಕಛೇರಿಗೆ ಹೋಗುವಾಗ ಏನಾದರೂ ಆದೀತು. ಕುಲದೇವರ ಸ್ಮರಣೆ ಮಾಡಿ ಹೋಗಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಕಲಿಯಬೇಕಾದೀತು. ನಿಮಗೆ ಗೊತ್ತಿರುವ ವಿಚಾರವನ್ನು ಇನ್ನೊಬ್ಬರಿಗೆ ಹಂಚುವಿರಿ.
ಮಕರ: ಯಾರ ಮೇಲೂ ಗೊತ್ತಿಲ್ಲದೇ ಏನನ್ನಾದರೂ ಹೇಳಿಬಿಡಬೇಡಿ. ಅದರಿಂದ ನೋವಾದೀತು ಅವರಿಗೆ. ನೇರ ನುಡಿಯನ್ನು ಕಡಿಮೆ ಮಾಡಿ. ಹೇಳಬೇಕಾದ ಹಾಗೆ ಹೇಳಿ. ನಿಮ್ಮ ಯೋಗ್ಯತೆಯ ಪರೀಕ್ಷೆಗೆ ಆಗಬಹುದು. ಎಚ್ಚರವಾಗಿರಿ. ಮಕ್ಕಳ ಯಶಸ್ಸನ್ನು ಎಲ್ಲರೂ ಖುಷಿಯಿಂದ ಹಂಚಿಕೊಳ್ಳುವಿರಿ. ಸುಮ್ಮನೇ ಇದ್ದರೂ ನಿಮ್ಮ ಮೇಲೆ ಆರೋಪ ಮಾಡಿಯಾರು. ಸಹೋದರ ಜೊತೆಗಿನ ಸಂಬಂಧವು ಅತ್ಯಂತ ಆಪ್ತವಾಗಲಿದೆ. ಅತಿಯಾದ ಚಿಂತೆಯಿಂದ ಯಾವ ಪ್ರಯೋಜನವಾಗದು. ಸಹಜವಾಗಿ ಇರಿ. ಹನುಮಾನ್ ಚಾಲೀಸ್ ಪಠಿಸಿರಿ.
ಕುಂಭ: ಇಂದು ನಿಮಗೆ ಅಪರೂಪದ ವ್ಯಕ್ತಿಗಳ ಭೇಟಿಯಾಗಬಹುದು. ಘಟನೆಗಳು ನಿಮ್ಮ ಅಲೋಚನಾ ಕ್ರಮಗಳು ಬದಲಿಸಬಹುದು. ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಒಳ್ಳೆಯದು. ನಿಮ್ಮ ಪರೀಕ್ಷೆಗಳೂ ಆಗಬಹುದು. ಆಪ್ತರೇ ನಿಮ್ಮನ್ನು ಎಲ್ಲರೆದುರು ಟೀಕಿಸಿಯಾರು. ಇದರಿಂದ ಬೇಸರವಾದೀತು. ಯಾರನ್ನೂ ಹೆಚ್ಚು ಅವಲಂಬಿಸಿ ಯೋಜನೆಗಳನ್ನು ಘೋಷಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ, ಸರಳತೆ ಇರಲಿ. ಸಭೆ, ಸಮಾರಂಭಗಳಿಗೆ ಆಹ್ವಾನ ಬರಬಹುದು. ಅದಕ್ಕೆ ಹೋಗಬೇಕಾದೀತು. ಶಿವನಿಗೆ ರುದ್ರಾಭಿಷೇಕ ಮಾಡಿಸಿ.
ಮೀನ: ಇಂದು ನಿಮ್ಮ ಅನೇಕ ದಿನಗಳ ಕಾಲ ಬಾಕಿ ಇರುವ ಕೆಲಸಗಳು ಒಂದೊಂದಾಗಿಯೇ ಸಮಾಪ್ತಿಯಾಗಲಿದೆ. ಬಂಧುಗಳ ಜೊತೆ ವಿವಾದವು ಆಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವು ಬರಬಹುದು. ಪರಿಸ್ಥಿತಿಯ ಅನನುಕೂಲವಾಗಿದ್ದು ನಿಮಗೆ ಕೋಪವನ್ನು ತರಿಸಬಹುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆಯು ಕೆಲವು ವಿಚಾರದಲ್ಲಿ ಕಾಣಿಸುವುದು. ಮಕ್ಕಳಿಗೆ ಸಮಯ ಕೊಡಲಾಗದಷ್ಟು ಕಾರ್ಯದಲ್ಲಿ ನಿರತರಾಗುವಿರಿ. ಶ್ರಮ ಹೆಚ್ಚು ಆದಾಯ ಕಡಿಮೆಯಾಗಬಹುದು. ಹನುಮಾನ್ ಚಾಲೀಸ್ ಪಠಣ ಮಾಡಿ.
-ಲೋಹಿತಶರ್ಮಾ ಇಡುವಾಣಿ