Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಕಳೆದುಕೊಂಡ ಸಂಬಂಧ ಮತ್ತೆ ಚಿಗುರೊಡೆಯಬಹುದು

|

Updated on: May 26, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಕಳೆದುಕೊಂಡ ಸಂಬಂಧ ಮತ್ತೆ ಚಿಗುರೊಡೆಯಬಹುದು
ಮೇ 26, ಇಂದಿನ ರಾಶಿ ಭವಿಷ್ಯ
Image Credit source: freepik
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಸುಕರ್ಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ 05:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:40 ರಿಂದ 09:17ರ ವರೆಗೆ.

ಧನು: ಅನಾರೋಗ್ಯ ಕಾರಣದಿಂದ ನಿಮ್ಮ ಬಗ್ಗೆಯೇ ನಿಮಗೆ ಜುಗುಪ್ಸೆ ಬರಬಹುದು. ಹಣವನ್ನು ಗಳಿಸುವ ಹಂಬಲವು ಅತಿಯಾಗಿದ್ದರೂ ದಾರಿಗಳು ಮಾತ್ರ ಕಾಣಿಸದೇ ಇದ್ದೀತು. ವಿದ್ಯಾರ್ಥಿಗಳು ಮನೆಯ ಸ್ಥಿತಿಯನ್ನು ಕಂಡುಕೊಂಡು ನಿಮ್ಮ ವಿದ್ಯಾಭ್ಯಾಸದ ನಿರ್ಧಾರವನ್ನು ಮಾಡಿ. ವಾಹನ‌ಸವಾರರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಮರಣಭೀತಿಯು ನಿಮ್ಮನ್ನು ಕಾಡಬಹುದು.‌ ಕೆಟ್ಟ ಆಲೋಚನೆಗಳನ್ನು ಬಿಟ್ಟು ಸರಿಯಾದುದರ ಬಗ್ಗೆ ಗಮನವಿರಲಿ. ಸಂಗಾತಿಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ. ಮೇಲ್ನೋಟಕ್ಕೆ ಒಪ್ಪಿ ಅನಂತರ ಕಷ್ಟವಾದೀತು. ಮನೆಯ ಜವಾಬ್ದಾರಿಗಳು ಬರಬಹದು. ಅತ್ಯಾಪ್ತರ ಗುರುತೇ ಸಿಗದಾಗಬಹುದು.

ಮಕರ: ಭೋಗವಸ್ತುವಿನ ಜೊತೆ ಹೆಚ್ಚು ಕಾಲಕಳೆಯಲು ಬಯಸುವಿರಿ. ನಿಮ್ಮ ಗುರಿಯ ಬಗ್ಗೆ ಬಲ್ಲವರು ತಿಳಿಸಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಹೇಳಿಬಿಡಬಹುದು. ದೈವದ ಸಾಹಾಯವು ಕಡಿಮೆ‌ ಇದ್ದರೂ ಮಾನುಷ ಪ್ರಯತ್ನದಿಂದ ಸಾಧಿಸುವ ಉತ್ಸಾಹವಿರಲಿದೆ. ಪುಣ್ಯಕ್ಷೇತ್ರಗಳ ಭೇಟಿಯಿಂದ ನಿಮಗೆ ದಿವ್ಯವಾದ ಅನುಭೂತಿಯಾದೀತು. ವಿದ್ಯಾರ್ಥಿಗಳು ಶಿಕ್ಷಕರಾದ ನಿಮಗೆ ಅನಿರೀಕ್ಷಿತ ಉಡುಗೊರೆಯನ್ನು ಕೊಟ್ಟಾರು. ವೈವಾಹಿಕ‌ಜೀವನವು ಬಹಳ‌ ಕಷ್ಟ ಎನಿಸಬಹುದು. ಸಂತೋಷದಿಂದ ಇರುಲು ಕಷ್ಟಪಡಬೇಕಾದ ಸ್ಥಿತಿ ಇದೆ. ಕೊರತೆಗಳ ಬಗ್ಗೆ ಹೆಚ್ಚು ನೀವು ಕೊರಗಬಹುದು.

ಕುಂಭ: ನಿಮ್ಮ ವಿಚಾರದಲ್ಲಿ ಬೇರೆಯವರು ಮಧ್ಯಪ್ರವೇಶ ಮಾಡುವರು. ಇದು ನಿಮಗೆ ಬಹಳ ಸಿಟ್ಟನ್ನು ತರಿಸೀತು. ಅದನ್ನು ವ್ಯಕ್ತಪಡಿಸಲು ನೀವು ಸೂಕ್ತ ಸಂದರ್ಭವನ್ನು ಹುಡುಕುವಿರಿ. ನಿಮಗೆ ಇಂದು ಕೆಲವು ಜವಾಬ್ದಾರಿಗಳು ಬರುವ ಸಾಧ್ಯತೆ ಇದೆ. ನಿಮಗೆ ಬರುವ ಹಣವನ್ನು ನಿರೀಕ್ಷಿಸಿ. ಅಪರಿಚಿತ ದೂರವಾಣಿಯು ನಿಮ್ಮ ಬಳಿ ಹಣ ಹೂಡುವಂತೆ ಮಾಡಿಸೀತು. ನಿಮ್ಮ ಮಾತುಗಳು ಉನ್ನತಸ್ತರದಲ್ಲಿ ನಡೆಯಬಹುದು. ಜಗಳವಾಗುವ ಸ್ಥಿತಿ‌ ಇದ್ದರೂ ಸುಮ್ಮನಿರುವುದು ಇತರರಿಗೆ ಆಶ್ಚರ್ಯವನ್ನು ಕೊಟ್ಟೀತು. ನಿಮ್ಮವರು ನಿಮ್ಮ ಪ್ರೀತಿಗೆ ಸೋಲಬಹುದು. ಕಳೆದುಕೊಂಡ ಸಂಬಂದವು ಮತ್ತೆ ಚಿಗುರಬಹುದು.

ಮೀನ: ಸಕಾರಾತ್ಮಕ ಚಿಂತನೆಗಳನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಿದೆ. ಮನೆಯಿಂದ ದೂರವಿರುವ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ನಿಮ್ಮ ಮಾತಗಳು ತಂದೆ-ತಾಯಿಯವರಿಗೆ ಬೇಸರ ತರಿಸೀತು. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಇಂದು ನೀವು ಸಂಗಾತಿಯನ್ನು ಉದಾಸೀನ ಭಾವದಿಂದ ಕಾಣುವಿರಿ. ಇಂದು ತಿಳಿದು ಕೂಗಾಡಬಹುದು.‌ ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಿ ಹೊಸತನ್ನು ಹುಡುಕಲು ಇಚ್ಛಿಸಬಹುದು. ನಡವಳಿಕೆಯಿಂದ ಕೆಲವಷ್ಟು ಅಂಶಗಳನ್ನು ಕಲಿತಾರು. ಸಾಮಾಜಿಕ ಕೆಲಸಗಳು ನಿಮಗೆ ಇಷ್ಟವಾಗುವ ಕೆಲಸವೇ ಆಗಿದ್ದು ಬಿಡುವಿನ ವೇಳೆಯಲ್ಲಿ ಮಾಡುವಿರಿ.

-ಲೋಹಿತಶರ್ಮಾ ಇಡುವಾಣಿ