Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ರಹಸ್ಯವಾಗಿ ಪ್ರೀತಿಸುತ್ತಾ ಅವರ ಜೊತೆ ಕಾಲ ಕಳೆಯಲಿದ್ದಾರೆ

Rakesh Nayak Manchi

|

Updated on: May 26, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ರಹಸ್ಯವಾಗಿ ಪ್ರೀತಿಸುತ್ತಾ ಅವರ ಜೊತೆ ಕಾಲ ಕಳೆಯಲಿದ್ದಾರೆ
ಮೇ 26 ರ ರಾಶಿಭವಿಷ್ಯ
Image Credit source: freepik

Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 26 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಸುಕರ್ಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ 05:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:40 ರಿಂದ 09:17ರ ವರೆಗೆ.

ಸಿಂಹ: ಅತಿಯಾಗಿ ದೇಹವನ್ನು ದಂಡಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ನೋಡಿಕೊಳ್ಳಿ. ಹಣವಿದ್ದರೂ ವಾಹನವನ್ನು ಕೊಳ್ಳುವ ಯೋಗ ದೂರವಿದೆ. ವಸ್ತುಗಳ ಕಳ್ಳತನವಾಗಬಹುದು ಅಥವಾ ಕಣ್ಮರಡಲೆಯಾದೀತು. ಬಟ್ಟೆಯ ವ್ಯವಹಾರವು ಲಾಭದಾಯಕವೆನಿಸಯವುದು. ಭೋಗ್ಯವಸ್ತುಗಳನ್ನು ಖರೀದಿಸುವಿರಿ. ಹಣಕಾಸಿನ ಸ್ಥಿತಿಯನ್ನು ಅನುಸರಿಸಿ ವ್ಯವಹಾರವನ್ನು ಮಾಡಿ. ಇದೇ ವಿಚಾರಕ್ಕೆ ಮನೆಯಲ್ಲಿ ಕಲಹವಾದೀತು. ರಾಜಕೀಯ ವ್ಯಕ್ತಿಗಳ ಸಹಾಯದಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ನಿಮ್ಮ ಬಗ್ಗೆ ನಿಮಗೆ ಕೀಳರಿಮೆ ಬರಬಹುದು. ಪ್ರೀತಿಯ ಮಾತುಗಳಿಂದ ಇಂದಿನ ಕೆಲಸವನ್ನು ಮಾಡಿಸಿಕೊಳ್ಳುವಿರಿ.

ಕನ್ಯಾ: ಬಹಳ ಆಯಾಸವಾದಂತೆ ಎನಿಸಬಹುದು. ನಿನ್ನೆಯ ಸುಸ್ತಿನಿಂದ ಹೊರಬರಲು ವಿಶ್ರಾಂತಿ ಪಡೆಯುವಿರಿ. ಆಹಾರ ಸೇವೆಯನ್ನು ಮಾಡಲು ನಿಮ್ಮ ಕ್ರಮವನ್ನು ರೂಢಿಸಿಕೊಳ್ಳುವಿರಿ. ಯಾವ‌ ನಿರ್ಧಾರವನ್ನೂ ವಿವೇಚನೆ ಇಲ್ಲದೇ ತೆಗೆದುಕೊಳ್ಳುವಿರಿ‌. ಎಲ್ಲ ಕೆಲಸಕ್ಕೂ ಲಾಭವನ್ನೇ ನಿರೀಕ್ಷಿಸಬಹುದು. ವಿದ್ಯಾಭ್ಯಾಸದ ಬಗ್ಗೆ ಸ್ನೇಹಿತರ ಮಾರ್ಗದರ್ಶನವನ್ನು ಪಡೆಯುವಿರಿ. ತಾಯಿಯ ಜೊತೆ ಇಂದು ನಿಮ್ಮ ಎಲ್ಲ ವಿಷಯವನ್ನು ಹೇಳಿಕೊಳ್ಳುವಿರಿ. ಮನೆಯನ್ನು ನಿರ್ಮಿಸಲು ಹೊಸ ಜಾಗವನ್ನು ಖರೀದಿಸಬಹುದು. ಮೋಜು ಮಾಡಲು ಹೋಗಿ ಹಣವನ್ನು ಕಳೆದುಕೊಳ್ಳುವ ಸಂಭವವಿದೆ.

ತುಲಾ: ಮನೋರಂಜನೆಗೆ ಹೆಚ್ಚಿನ ಒತ್ತು ಕೊಡಬಹುದು. ಕಲಾವಿದರು ಹೆಚ್ಚಿನ ಒತ್ತಡದಲ್ಲಿ ಇರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವ ಚಿಂತೆ ಇರಲಿದೆ. ಇಂದು ನೀವು ಸ್ವಲ್ಪ ಉತ್ಸಾಹದಿಂದ ಇರುವಂತೆ ಕಾಣುತ್ತದೆ. ನಿಮ್ಮ ವೃತ್ತಿಯಲ್ಲಿ ನೀವು ಗುರುತಿಸುವ ವ್ಯಕ್ತಿಯಾಗುವಿರಿ. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮ ಹಿಡಿತದಲ್ಲಿ ಇರಬೇಕು ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ಜೊತೆ ಮಾತನಾಡಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮಗೆ ಸಿಗುವ ಹಣವು ಮಧ್ಯವರ್ತಿಗಳ ಕಾರಣದಿಂದ ಕೈತಪ್ಪಬಹುದು. ವಿಷಯ ತಿಳಿದು ಮನಸ್ಸು ಕುಗ್ಗಬಹುದು.

ವೃಶ್ಚಿಕ: ನೀವು ಚೆನ್ನಾಗಿ ಇರುವುದು, ಸಂತೋಷದಿಂದ ಮಾತನಾಡುವುದು, ಎಲ್ಲರ ಜೊತೆ ಬೆರೆಯುವುದು ನಿಮ್ಮ ಬಂಧುಗಳಿಗೆ ಅಸಹ್ಯವಾದೀತು. ತುಂಬಾ ಕಷ್ಟದಿಂದ ಗಳಿಸಿದ ಹಣವನ್ನು ಖರ್ಚುಮಾಡಲು ಮನಸ್ಸುಬಾರದು. ಸ್ನೇಹಿತರ ಉದ್ಯಮಕ್ಕೆ ಹಣ ಹಾಕಲು ಒತ್ತಾಯ ಬರಬಹುದು. ಷರತ್ತುಗಳ ಮೇಲೆ ಇದನ್ನು ಕೊಡಿ. ರಹಸ್ಯವಾಗಿ ಪ್ರೀತಿಸುವಿರಿ. ಅವರ ಜೊತೆ ದಿನಗಳನ್ನು ಕಳೆಯಬಹುದು. ಹೊರಗಡೆ ಸುತ್ತಾಡಲು ಹೋಗಬಹುದು. ಇನ್ನೊಬ್ಬರನ್ನು ಅನುಕರಿಸುವ ನಿಮ್ಮ ಸ್ವಭಾವವನ್ನು ಬಿಡುವುದು ಒಳ್ಳೆಯದು. ಕೆಲವು ವಿಚಾರದಲ್ಲಿ ಧೈರ್ಯದ ಕೊರೆತೆ ಕಾಣುವುದು. ಹಳೆಯ ಸ್ನೇಹಿತೆಯು ಬಹಳ ಕಾಡಬಹುದು.

-ಲೋಹಿತಶರ್ಮಾ ಇಡುವಾಣಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada