
ಹೊಸ ಸ್ಥಳಗಳಿಗೆ ಪ್ರವಾಸಕ್ಕೆ ತೆರಳುವ ಯೋಗ ಇದೆ. ಅಥವಾ ಇನ್ನು ಮುಂದೆ ಹೋಗಬೇಕು ಎಂದುಕೊಂಡಂಥ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಗೃಹಿಣಿಯರ ಮನೆ ಬಜೆಟ್ ವಿಚಾರದಲ್ಲಿನ ನಿರ್ಧಾರಗಳು ಕುಟುಂಬಸ್ಥರ ಮೆಚ್ಚುಗೆಯನ್ನು ಪಡೆಯಲಿವೆ. ಇಷ್ಟು ಸಮಯ ಕಾಡುತ್ತಿದ್ದ ದ್ವಂದ್ವ- ಗೊಂದಲಗಳು ನಿವಾರಣೆ ಆಗಲಿವೆ. ಅದರಲ್ಲೂ ಮದುವೆ, ಪ್ರೀತಿ- ಪ್ರೇಮ, ಸಂಬಂಧಗಳ ವಿಷಯದಲ್ಲಿ ಸ್ಪಷ್ಟತೆ ಸಿಗಲಿದೆ. ಬೇಳೆ- ಕಾಳುಗಳ ಹೋಲ್ ಸೇಲ್ ವ್ಯಾಪಾರ ಮಾಡುತ್ತಾ ಇರುವವರು ವ್ಯವಹಾರ ವಿಸ್ತರಣೆಗೆ ಯೋಜನೆ ರೂಪಿಸುತ್ತೀರಿ. ಅದಕ್ಕೆ ಬೇಕಾದ ಹಣದ ಹೊಂದಾಣಿಕೆ ಮಾಡಲು ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ಪ್ರಯತ್ನ ಮಾಡಲಿದ್ದೀರಿ. ಕೃಷಿಕರು ರಾಸುಗಳನ್ನು ಖರೀದಿ ಮಾಡಲಿದ್ದೀರಿ. ಇದರ ಜೊತೆಗೆ ಕೊಟ್ಟಿಗೆ ನಿರ್ಮಾಣ ಅಥವಾ ಈಗ ಇರುವಂಥದ್ದರ ನವೀಕರಣ ಮಾಡುವುದಕ್ಕೆ ಮುಂದಾಗಲಿದ್ದೀರಿ.
ಇತರರು ನಿಮ್ಮನ್ನು ಹಗುರವಾಗಿ ಕಾಣುತ್ತಿದ್ದಾರೆ ಎಂಬ ಭಾವನೆ ಮನಸ್ಸಿನಲ್ಲಿ ಸುಳಿದಾಡಲಿದೆ. ಈ ದಿನ ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಅನ್ನು ಹೇಗೆ ಪರಿಣಾಮಕಾರಿ ಆಗಿ ಬಳಸಿಕೊಳ್ಳಬಹುದು ಎಂಬ ಕಡೆಗೆ ಹೆಚ್ಚು ಮನಸ್ಸಿಟ್ಟು ಕೆಲಸ ಮಾಡಿ. ಪರಿಸ್ಥಿತಿ ನಿಮ್ಮ ವಿರುದ್ಧ ಆಗುತ್ತಿದೆ ಎಂಬ ಸಂಗತಿ ಆತ್ಮವಿಶ್ವಾಸವನ್ನು ಕುಗ್ಗಿಸದಂತೆ ನೋಡಿಕೊಳ್ಳಿ. ನಿಮ್ಮ ಮಾಹಿತಿಯ ಮೂಲದ ವಿಶ್ವಾಸಾರ್ಹತೆ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಪರಿಶೀಲಿಸಿಕೊಳ್ಳಿ. ನಿಯಂತ್ರಣವನ್ನು ಮೀರಿದ ವಿಚಾರಗಳು, ಇನ್ನು ಇದರಲ್ಲಿ ಯಾವುದೇ ಬದಲಾವಣೆ ನಿಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದೆನಿಸಿದ ಕೆಲಸ- ಕಾರ್ಯ, ವಿಚಾರಕ್ಕೆ ಶ್ರಮ ಹಾಕಬೇಡಿ. ನಿಮ್ಮ ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ ಎಂದೆನಿಸಿದ ಸ್ಥಳಕ್ಕೆ ತೆರಳಿ, ಸ್ವಲ್ಪ ಸಮಯವನ್ನು ಅಲ್ಲಿ ಕಳೆಯಿರಿ. ವಕೀಲ ವೃತ್ತಿಯಲ್ಲಿ ಇರುವವರಿಗೆ ಸಂಜೆಯ ನಂತರ ಒಳ್ಳೆ ಬೆಳವಣಿಗೆಗಳು ನಡೆಯಲಿವೆ.
ನೀವು ಅಂದುಕೊಂಡಿದ್ದು, ಅಂದಾಜು ಮಾಡಿದ್ದು ಯಥಾವತ್ ನಿಜ ಆಗುವುದಕ್ಕೆ ಆರಂಭ ಆಗಲಿದೆ. ಫೈನಾನ್ಷಿಯಲ್ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವವರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೊಸ ಕ್ಲೈಂಟ್ ಗಳು ದೊರೆಯಲಿದ್ದಾರೆ. ವ್ಯವಹಾರ- ವ್ಯಾಪಾರದಲ್ಲಿ ತೊಡಗಿರುವವರಿಗೆ ಸಂಗಾತಿಯ ನೆರವು ಸಿಗಲಿದೆ. ಸಂಬಂಧಗಳಲ್ಲಿ ಅಭಿಪ್ರಾಯ ಭೇದ- ಮನಸ್ತಾಪ ಕಾಣಿಸಿಕೊಂಡಿದ್ದಲ್ಲಿ ಅದರ ನಿವಾರಣೆ ಮಾಡಿಕೊಳ್ಳಲಿದ್ದೀರಿ. ಪ್ರೀತಿಯಲ್ಲಿ ಇರುವವರು ಮನೆಯಲ್ಲಿ ಮದುವೆ ಪ್ರಸ್ತಾವವನ್ನು ಮಾಡಲಿದ್ದೀರಿ. ವಿದೇಶದಲ್ಲಿಯೇ ನೆಲೆಗೊಳ್ಳಬೇಕು ಎಂಬ ಆಲೋಚನೆ ಇರುವವರಿಗೆ ಅದಕ್ಕೆ ಪೂರಕವಾದ ಅವಕಾಶವೊಂದು ಗೋಚರಿಸಲಿದೆ. ಬೆನ್ನು ನೋವಿನ ಸಮಸ್ಯೆಯನ್ನು ಈಗಾಗಲೇ ಅನುಭವಿಸುತ್ತಿದ್ದೀರಿ ಅಂತಾದಲ್ಲಿ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ಹಿರಿಯರ ಸಲಹೆಯನ್ನು ಅನುಸರಿಸಿ.
ಮುಂದೆ ಏನು ಮಾಡಬೇಕು ಎಂಬುದು ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಕಾಡುವುದಕ್ಕೆ ಶುರುವಾಗಲಿದೆ. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಅನಿಶ್ಚಿತತೆ ಕಾಡಲು ಆರಂಭವಾಗುತ್ತದೆ. ಮೊದಲಿನ ಉತ್ಸಾಹ ಕಂಡುಬರುವುದಿಲ್ಲ. ಕೆಲವರನ್ನು ಭೇಟಿ ಮಾಡುವುದನ್ನು ಅಥವಾ ಫೋನ್ ನಲ್ಲಿ ಮಾತನಾಡುವುದನ್ನು ಬೇಕೆಂತಲೆ ನೀವಾಗಿಯೇ ತಪ್ಪಿಸಿಕೊಳ್ಳುತ್ತೀರಿ. ಈ ದಿನ ಎಷ್ಟು ಸಾಧ್ಯವೋ ಅಷ್ಟು ಉತ್ಸಾಹ ಹಾಗೂ ಆಸಕ್ತಿ ಉಳಿಸಿಕೊಳ್ಳುವುದು ತುಂಬ ಮುಖ್ಯ ಎನಿಸುತ್ತದೆ. ಸೆಕೆಂಡ್ ಹ್ಯಾಂಡ್ ಆಟೋ ಅಥವಾ ಕಾರು ಖರೀದಿ- ಮಾರಾಟದಲ್ಲಿ ತೊಡಗಿರುವವರು ಕಾಗದ- ಪತ್ರ, ದಾಖಲಾತಿಗಳ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಸ್ನೇಹಿತರ ಮಾತಿಗೆ ಕಟ್ಟುಬಿದ್ದೋ ಅಥವಾ ಹೆಚ್ಚಿನ ಲಾಭ ಸಿಗುತ್ತದೆ ಎಂಬ ಕಾರಣಕ್ಕೋ ಹೀಗೆ ಮಾಡಿದಲ್ಲಿ ಪೊಲೀಸ್ ಸ್ಟೇಷನ್ ಗೆ ಅಲೆದಾಡುವ ಪರಿಸ್ಥಿತಿ ಬಂದೊದಗುತ್ತದೆ, ಜಾಗ್ರತೆ ವಹಿಸಿ.
ಈ ದಿನ ನಿಮ್ಮ ಕಮ್ಯುನಿಕೇಷನ್ ಬಹಳ ಪರಿಣಾಮಕಾರಿ ಆಗಿ ಇರಲಿದೆ. ಅದೆಂಥ ಕಷ್ಟ ಎನಿಸುವ ಕ್ಲೈಂಟ್ ಆದರೂ ಅಥವಾ ನಿಮ್ಮ ಉದ್ಯೋಗ, ವ್ಯಾಪಾರ- ವ್ಯವಹಾರ ಯಾವುದರಲ್ಲೇ ಆಗಲಿ ಬೇಡಿಕೆ ನಿಭಾಯಿಸುವುದು ಕಷ್ಟ ಎನಿಸಿದವರನ್ನು ನೀವು ಚೆನ್ನಾಗಿ ಸಂಭಾಳಿಸಲಿದ್ದೀರಿ. ಯುವತಿಯರು ಫ್ಯಾಷನ್ ದಿರಿಸುಗಳನ್ನು ಖರೀದಿಸುವ ಯೋಗ ಇದೆ. ಪತ್ರಿಕೆಗಳಲ್ಲಿ ಗಾಸಿಪ್ ಕಾಲಂಗಳನ್ನು ನಿರ್ವಹಿಸುವವರಿಗೆ ದೊಡ್ಡ ಮಾಹಿತಿ ಸಿಗಲಿದ್ದು, ಇತರರು ಬೆರಗಿನಿಂದ ನೋಡುವಂತೆ ಆಗಲಿದೆ. ವೃತ್ತಿನಿರತರು ನೀಡಿರುವ ಅಪಾಯಿಂಟ್ ಮೆಂಟ್ ಸಮಯಕ್ಕೆ ಆ ಸ್ಥಳದಲ್ಲಿ ಇರುವುದಕ್ಕೆ ಆದ್ಯತೆ ನೀಡಿ. ನಿಮ್ಮ ಕಷ್ಟದ ಕಾಲದಲ್ಲಿ ನೆರವಿಗೆ ನಿಂತಂಥ ವ್ಯಕ್ತಿಗಳಿಗೆ ಈಗ ಸಹಾಯದ ಅಗತ್ಯವಿದೆ ಎಂಬುದು ಗಮನಕ್ಕೆ ಬರಲಿದೆ. ನಿಮ್ಮಿಂದ ಸಾಧ್ಯವಾದ ಗರಿಷ್ಠ ಮಟ್ಟದ ಸಹಾಯವನ್ನು ಅವರಿಗೆ ಮಾಡಿ ಋಣ ಸಂದಾಯದ ಸಮಾಧಾನವನ್ನು ಪಡೆದುಕೊಳ್ಳಿ.
ಕಾರಣವೇ ಇಲ್ಲದೆ ನಿಮ್ಮನ್ನು ಯಾರಾದರೂ ಹೊಗಳುತ್ತಾ ಇದ್ದಾರೆ ಅಂತಾದಲ್ಲಿ ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮಗೆ ಗೊತ್ತಿರುವ ಕೆಲಸವನ್ನು ಉಚಿತವಾಗಿ ಮಾಡಲು ಹೋಗಬೇಡಿ. ಸಂಬಂಧಿಗಳ ಮನೆಯಲ್ಲಿನ ಸಮಾರಂಭಗಳಿಗೆ ತೆರಳುವವರು ಅಲ್ಲಿ ಹಣಕಾಸಿನ ಪರಿಸ್ಥಿತಿ ಬಗ್ಗೆ ಚರ್ಚೆ ಬಾರದಂತೆ ನೋಡಿಕೊಳ್ಳಿ. ಅಥವಾ ಹಾಗೊಂದು ವೇಳೆ ಇತರರು ಮಾತನಾಡುತ್ತಿದ್ದಾರೆ ಅಂತಾದಲ್ಲಿ ನಿಮ್ಮ ಅಭಿಪ್ರಾಯ ಹೇಳುವುದಕ್ಕೆ ಹೋಗಬೇಡಿ. ಮನೆಗೆ ಮಂಚ, ಹಾಸಿಗೆ, ದಿಂಬು, ಹೊದಿಕೆ ಇಂಥವುಗಳನ್ನು ಖರೀದಿ ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಅದರಲ್ಲೂ ತಂದೆ- ತಾಯಿಗಳಿಗೆ ಬೇಕಾದಂಥ ಅನುಕೂಲಗಳನ್ನು ಮಾಡಿಕೊಡಲು ಆದ್ಯತೆ ನೀಡುತ್ತೀರಿ. ಸೋದರ ಸಂಬಂಧಿಗಳ ಜತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದ್ದು, ಕಿರು ಪ್ರವಾಸವನ್ನಾದರೂ ಆಯೋಜಿಸುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ವೃತ್ತಿಜೀವನ ಹೇಗಿರಲಿದೆ ತಿಳಿಯಿರಿ
ಏಕಾಏಕಿ ನಿಮ್ಮ ಆಲೋಚನೆಯಲ್ಲಿ ದೊಡ್ಡ ಬದಲಾವಣೆ ಕಾಣಿಸಿಕೊಳ್ಳಲಿದೆ. ಈಗ ಬರುತ್ತಿರುವ ಆದಾಯದ ಪ್ರಮಾಣವನ್ನು ಗಣನೀಯವಾಗಿ ಜಾಸ್ತಿ ಮಾಡಿಕೊಳ್ಳಬೇಕು ಎಂದು ಯೋಜನೆ ರೂಪಿಸುತ್ತೀರಿ. ಇಷ್ಟು ಸಮಯ ಕಂಫರ್ಟ್ ಝೋನ್ ನಲ್ಲಿ ಇದ್ದೆ ಎಂದೆನಿಸಲು ಶುರು ಆಗಲಿದೆ. ಮಾಡಿದ ಕೆಲಸಕ್ಕೆ ಇಂತಿಷ್ಟು ಹಣ ಎಂದು ಬಾಯಿ ಬಿಟ್ಟು ಕೇಳುವುದಕ್ಕೆ ಕಾಡುತ್ತಿದ್ದ ಸಂಕೋಚದಿಂದ ಹೊರಗೆ ಬರುತ್ತೀರಿ. ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವವರು ಆಹಾರ ಪಥ್ಯದಲ್ಲಿ ಇನ್ನಷ್ಟು ಕಠಿಣ ಮಾರ್ಗಗಳನ್ನು ಅನುಸರಿಸಲು ಆರಂಭಿಸುತ್ತೀರಿ. ದಿನಗೂಲಿ ನೌಕರರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇದಕ್ಕಾಗಿ ತುಂಬ ಒಳ್ಳೆ ಹುದ್ದೆಯಲ್ಲಿ ಇರುವವರು ನೆರವಾಗಲಿದ್ದಾರೆ. ನಿಮಗೆ ಎಷ್ಟೇ ಆಪ್ತರಾದರೂ ಮಾತನಾಡುವಾಗ ಬಳಸುವ ಪದಗಳ ಬಗ್ಗೆ ಜಾಗ್ರತೆಯಿಂದ ಇರಬೇಕು.
ಪುಟ್ಟ ಪ್ರಾಜೆಕ್ಟ್ ಗಳು ನಿಮ್ಮ ಪಾಲಿಗೆ ದೊರೆಯಲಿವೆ. ಹಣದ ದೃಷ್ಟಿಯಿಂದ ನೋಡದೆ ಅಚ್ಚುಕಟ್ಟಾಗಿ ಪೂರ್ಣಗೊಳಿಸುವ ಆಲೋಚನೆಯನ್ನು ಮಾಡಿ, ಇದರಿಂದ ಭವಿಷ್ಯದಲ್ಲಿ ದೊಡ್ಡ ಅನುಕೂಲ ಒದಗಿ ಬರಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಸಿಕ್ಕ ಸೌಲಭ್ಯದಲ್ಲಿ ಎಷ್ಟು ಅತ್ಯುತ್ತಮ ಆದದ್ದನ್ನು ನೀಡುವುದಕ್ಕೆ ಸಾಧ್ಯ ಎಂಬುದರ ಕಡೆಗೆ ಗಮನ ನೀಡಿ. ಇತರರ ಕಣ್ಣಿಗೆ ನಿಮ್ಮ ನಿರ್ಧಾರಗಳು ಸ್ವಾರ್ಥದಿಂದ ಕೂಡಿವೆ ಎಂದೆನಿಸಬಹುದು. ಆದರೆ ಫಲಿತಾಂಶ ಹಾಗೂ ಅದರ ಅನುಕೂಲ ಎಲ್ಲರಿಗೂ ದೊರೆಯುತ್ತದೆ ಎಂಬುದನ್ನು ಖಾತ್ರಿಪಡಿಸಿ. ಸಮಸ್ಯೆಗಳನ್ನು ಬಗೆಹರಿಸುವ ನಿಮ್ಮ ಸಾಮರ್ಥ್ಯದ ಗರಿಷ್ಠ ಪ್ರಮಾಣದ ಬಳಕೆಯನ್ನು ಈ ದಿನ ಮಾಡಿಕೊಳ್ಳಿ. ಹೆಚ್ಚು ಸಮಯ ಒಂದೇ ಕಡೆ ನಿಂತು ಕೆಲಸ ಮಾಡುವಂಥವರು ಅದರ ಆರೋಗ್ಯದ ಪರಿಣಾಮಗಳ ಬಗ್ಗೆ ಲಕ್ಷ್ಯ ನೀಡಬೇಕು. ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳ ಮಾತುಕತೆಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಮನೆದೇವರ ಸ್ಮರಣೆಯನ್ನು ಮಾಡಿಕೊಂಡು, ಹೊರಡಿ.
ಹೆಚ್ಚು ಶ್ರಮದಾಯಕ ಅಲ್ಲದ ಕೆಲಸಗಳನ್ನು ಆಯ್ಕೆ ಮಾಡಿಕೊಂಡು, ಮೊದಲಿಗೆ ಅವುಗಳನ್ನು ಪೂರ್ತಿ ಮಾಡುವ ಕಡೆಗೆ ಲಕ್ಷ್ಯವನ್ನು ನೀಡುವಿರಿ. ಪ್ರಾಮುಖ್ಯದ ಆಧಾರದಲ್ಲಿ ವ್ಯಕ್ತಿಗಳ ಭೇಟಿ, ಖರ್ಚಿನ ಲೆಕ್ಕಾಚಾರ, ಆರೋಗ್ಯ ಪರೀಕ್ಷೆ ಹೀಗೆ ಒಂದು ಕ್ರಮವನ್ನು ಅಳವಡಿಸಿಕೊಳ್ಳುವಿರಿ. ಪ್ಲಾನಿಂಗ್ ಗೆ ಹೆಚ್ಚು ಸಮಯವನ್ನು ನೀಡುವುದು ದೊಡ್ಡ ಮಟ್ಟದಲ್ಲಿ ನಿಮ್ಮ ಯಶಸ್ಸಿಗೆ ಸಹಾಯ ಮಾಡುವುದು. ನಿಮ್ಮ ಬಗ್ಗೆ ಇತರರು ಆಡುವ ಪ್ರಶಂಸೆಯ ಮಾತನ್ನು ತಲೆಗೆ ತೆಗೆದುಕೊಳ್ಳಬೇಡಿ. ಸವಾಲು ಎನಿಸಿದ ಕಾರ್ಯಗಳನ್ನು ಒಪ್ಪಿಕೊಳ್ಳುವಾಗ ಅದನ್ನು ಪೂರೈಸುವುದಕ್ಕೆ ಇರುವಂಥ ಸಂಪನ್ಮೂಲಗಳು ಯಾವುವು ಎಂಬುದನ್ನು ಅಳೆದು- ತೂಗಿ ನೋಡಿಕೊಳ್ಳಿ. ಆರೋಗ್ಯ ವಿಚಾರಕ್ಕೆ ಬಂದರೆ ಚಮತ್ಕಾರ ಎನಿಸುವಂಥ ಕೆಲವು ಬೆಳವಣಿಗೆಗಳು ಆಗಲಿವೆ. ಇನ್ನೂ ನಿಮ್ಮ ಕೈ ಸೇರದ ಹಣಕ್ಕೆ ಮೊದಲೇ ಯಾವುದೇ ಕಮಿಟ್ ಮೆಂಟ್ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.
ಲೇಖನ- ಎನ್.ಕೆ.ಸ್ವಾತಿ