
ನಿಮ್ಮ ದಿನ ಬಹುತೇಕ ಕೆಲಸಗಳಿಂದಲೇ ತುಂಬಿ ಹೋಗಲಿದೆ. ಜಾಣ್ಮೆಯ ಮತ್ತು ಮಿತವಾದ ಮಾತು ಗೌರವ ತರುತ್ತದೆ. ಇನ್ನು ಕೆಲವು ಕಡೆ ಮಾತನಾಡುವುದಕ್ಕಿಂತ ನಿಮ್ಮ ಕಾರ್ಯವೇ ಮುಖ್ಯವೆನ್ನಿಸುತ್ತದೆ. ಅಂದುಕೊಂಡಂತೆ ನಿಮಗೆ ಬರಬೇಕಾದ ಆದಾಯ ಬಾರದೆ ತಡವಾಗಲಿದೆ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ, ಅಗತ್ಯವಿರುವಷ್ಟನ್ನು ಮಾತ್ರ ಖರ್ಚು ಮಾಡಿ. ಕುಟುಂಬದಲ್ಲಿ ಹಿರಿಯರ ಸಲಹೆ ನಿಮಗೆ ಬೆಂಬಲವಾಗಿ ಇರುತ್ತದೆ. ಪ್ರೀತಿಯಲ್ಲಿ ನಂಬಿಕೆ ಅತ್ಯಂತ ಮುಖ್ಯ, ಅನುಮಾನದಿಂದ ನೆಮ್ಮದಿ ಹಾಳಾಗುತ್ತದೆ. ತಲೆನೋವು ಅಥವಾ ಮಾನಸಿಕ ದಣಿವು ಕಾಣಲಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟ ಮಾಡಿಕೊಳ್ಳಿ. ಏಕಾಗ್ರತೆ ಸಾಧಿಸುವುದಕ್ಕೆ ಹರಸಾಹಸ ಪಡುತ್ತಿದ್ದಲ್ಲಿ ಮೊದಲಿಗೆ ಮನಸ್ಸನ್ನು ನಿಯಂತ್ರಿಸಿ. ಸ್ನೇಹಿತರೊಂದಿಗೆ ಹೆಚ್ಚಾಗಿ ವಾಗ್ವಾದ ಬೇಡ, ನೀವು ಹೇಳಬೇಕಾದ ವಿಷಯಗಳನ್ನು ಸರಳವಾಗಿ ತಿಳಿಸಿ. ದೈವಸ್ಮರಣೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಮತ್ತು ನೆಮ್ಮದಿಯೂ ಸಿಗಲಿದೆ.
ಹೊಸ ಅವಕಾಶಗಳೊಂದಿಗೆ ನಿಮಗೆ ಈ ದಿನ ಆರಂಭವಾಗಲಿದೆ. ಕೆಲಸದಲ್ಲಿ ನಿಮಗೆ ಸಿಗುವಂಥ ಅವಕಾಶಗಳು ನಿಮ್ಮ ಕೌಶಲಕ್ಕೆ ಸರಿಯಾಗಿ ಹೊಂದಾಣಿಕೆ ಆಗಲಿವೆ. ಅನಗತ್ಯವಾಗಿ ಯಾವುದರಲ್ಲಿಯೂ ತಡ ಆಗುವುದನ್ನು ತಪ್ಪಿಸಿ, ಕೆಸ್ಪಷ್ಟ ಯೋಜನೆ ಇರಿಸಿಕೊಳ್ಳಿ. ಹೊಸದಾಗಿ ಹೂಡಿಕೆ ಮಾಡುವರಿಗೆ ಜಾಗ್ರತೆ ಅಗತ್ಯ. ಇನ್ನು ಇತರರ ಬಲವಂತಕ್ಕೋ ಅಥವಾ ಒತ್ತಡಕ್ಕೋ ಹಣದ ಹೂಡಿಕೆ ಮಾಡಬೇಡಿ. ಕುಟುಂಬದಲ್ಲಿ ಸಣ್ಣ- ಪುಟ್ಟ ಮನಸ್ತಾಪ ಉಂಟಾದಲ್ಲಿ ಮೃದುವಾದ ಮಾತುಗಳನ್ನಾಡಿ, ಅದನ್ನು ಪರಿಹರಿಸುವ ಕಡೆಗೆ ಗಮನ ನೀಡಿ. ಇನ್ನು ಪ್ರೀತಿಯಲ್ಲಿ ಇರುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಡಿ. ಜಠರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳಬಹುದು. ನಿಯಮಿತ ಆಹಾರ ಸೇವನೆ ಮತ್ತು ವಿಶ್ರಾಂತಿಗೆ ಪ್ರಾಮುಖ್ಯ ನೀಡಿ. ವಿದ್ಯಾರ್ಥಿಗಳಿಗೆ ಸ್ನೇಹಿತರ ಜತೆ ಒಳ್ಳೆಯ ಸಮಯ ಕಳೆಯುವ ಅವಕಾಶ ದೊರಕುತ್ತದೆ. ಸರಳತೆ ಮತ್ತು ಸಮಾಧಾನ ಇಂದು ನಿಮ್ಮ ಶಕ್ತಿ.
ನಿಮ್ಮ ಬಗೆಗಿನ ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಆಲೋಚನೆ ಮತ್ತು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ರೀತಿ ಮೆಚ್ಚುಗೆ ಪಡೆಯುತ್ತವೆ. ಒತ್ತಡವನ್ನು ಗೆಲ್ಲಲಿದ್ದೀರಿ. ಈ ಹಿಂದೆ ನೀವು ಮಾಡಿದಂಥ ದೊಡ್ಡ ಖರ್ಚುಗಳಿಗೆ ಹೇಗೆ ಹಣ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದರೆ ಅದಕ್ಕೆ ಪರಿಹಾರ ದೊರೆಯಲಿದೆ. ನಿಮ್ಮ ಮಾತಿನಿಂದ ಕುಟುಂಬದಲ್ಲಿ ಸಾಮರಸ್ಯ, ಒಗ್ಗಟ್ಟು ತರುವಲ್ಲಿ ಯಶಸ್ಸು ಕಾಣುತ್ತೀರಿ. ಪ್ರೀತಿಯಲ್ಲಿ ಇರುವವರು- ದಂಪತಿ ಮಧ್ಯೆ ಪರಸ್ಪರ ಗೌರವ ಹೆಚ್ಚಾಗಿ, ಸಂಬಂಧ ಗಾಢವಾಗಲಿದೆ. ಹೆಚ್ಚು ಖಾರದ ಪದಾರ್ಥಗಳ ಆಹಾರ ಸೇವನೆಯಿಂದ ದೂರ ಇರುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸಿ, ಕೋರ್ಸ್ ಗಳಿಗೆ ಸೇರುವ ಸಾಧ್ಯತೆ ಇದೆ. ಇನ್ನು ಓದಿನ ಜೊತೆಗೆ ಪಾರ್ಟ್ ಟೈಂ ಉದ್ಯೋಗ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಸ್ನೇಹಿತರೊಂದಿಗೆ ಅನವಶ್ಯಕ ಚರ್ಚೆಗಳಿಂದ ದೂರವಿರಿ.
ನಿಮ್ಮ ಕೆಲಸಗಳಲ್ಲಿ ಶಿಸ್ತು ಮತ್ತು ವೇಗ ಎರಡೂ ಈ ದಿನದ ಅಗತ್ಯ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದರಿಂದ ಹೊಸ ಅವಕಾಶಗಳು ದೊರೆಯಲಿದೆ. ನಿಮ್ಮ ತೀರ್ಮಾನಗಳಿಗೆ ಸಹೋದ್ಯೋಗಿಗಳ ಬೆಂಬಲ ಇದ್ದರೂ ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳುವಾಗ ಅಳೆದು ತೂಗಿ ಬಳಸಿ. ಹಣಕಾಸಿನಲ್ಲಿ ಬಾಕಿ ಉಳಿದ ವಿಷಯಗಳ ಪರಿಹಾರ ಕಂಡುಬರುವುದು. ಕುಟುಂಬದ ಸದಸ್ಯರ ಜತೆ ವ್ಯವಹರಿಸುವಾಗ- ಮಾತುಕತೆಯಾಡುವಾಗ ಅತಿಯಾದ ಭಾವುಕತೆ ಬೇಡ. ಇನ್ನು ಸಂವಹನ ಕೂಡ ಸರಿಯಾದ ರೀತಿಯಲ್ಲಿ ಇರಲಿ. ಪ್ರೀತಿಯಲ್ಲಿ ಇರುವವರು ನೀವು ಮಾತನಾಡುವಾಗ ಆಯ್ಕೆ ಮಾಡಿಕೊಳ್ಳುವ ಪದಗಳ ಬಗ್ಗೆ ಗಮನ ಕೊಡಿ. ಸ್ತ್ರೀರೋಗಗಳು ಅಥವಾ ತೂಕಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು, ನಿಯಮಿತ ವ್ಯಾಯಾಮ ಸಹಾಯಕವಾಗುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ಸಾಹ ಮೂಡುತ್ತದೆ. ಸ್ನೇಹಿತರಿಂದ ಸಹಾಯ ದೊರೆಯುವ ದಿನ ಇದಾಗಿರಲಿದೆ, ಆದರೆ ಅತಿಯಾದ ಅವಲಂಬನೆ ಬೇಡ.
ನಿಮ್ಮ ಆಲೋಚನೆ- ಚಿಂತನೆಗಳು ಸ್ಪಷ್ಟವಾಗಿ ಇರುತ್ತವೆ. ಅದೇ ರೀತಿ ಗಟ್ಟಿಯಾದ ನಿರ್ಣಯ ಸಹ ತೆಗೆದುಕೊಳ್ಳುತ್ತೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಾಯಕತ್ವ ಗುಣ ಮೆಚ್ಚುಗೆಗೆ ಪಾತ್ರ ಆಗುತ್ತದೆ. ನೀವು ಅಂದುಕೊಂಡ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸೂಕ್ತ ದಿನವಿದು. ಹೊಸ ಸಂಪಾದನೆ ಮಾರ್ಗೋಪಾಯ ಗೋಚರಿಸುತ್ತದೆ ಅಥವಾ ಬಾಕಿ ಬರಬೇಕಾದ ಹಣ ಲಭಿಸಬಹುದು. ಕುಟುಂಬದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ- ಗೌರವ ಹೆಚ್ಚಾಗುತ್ತದೆ. ಪ್ರೀತಿಸುವವರು ಮೂರನೇ ವ್ಯಕ್ತಿಗಳ ಮಾತಿಗೆ ಪ್ರಾಮುಖ್ಯ ನೀಡಬೇಡಿ. ಕೈ-ಕಾಲು ನೋವು ಅಥವಾ ದೈಹಿಕ ದಣಿವು ಕಾಣಬಹುದು, ವಿಶ್ರಾಂತಿಗೆ ಹೆಚ್ಚಿನ ಸಮಯ ಇರಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ಚುರುಕುಗೊಳ್ಳುತ್ತದೆ. ಸ್ನೇಹಿತರೊಂದಿಗೆ ಲಾಭದಾಯಕ ಚರ್ಚೆ ಮಾಡಲಿದ್ದೀರಿ. ಗುರುಪೂಜೆ ಅಥವಾ ಹಿರಿಯರ ಆಶೀರ್ವಾದ ಒಳಿತನ್ನು ಹೆಚ್ಚಿಸುತ್ತದೆ. ಆತ್ಮವಿಶ್ವಾಸ ನಿಮ್ಮ ದೊಡ್ಡ ಶಕ್ತಿಯಾಗುತ್ತದೆ.
ಈ ದಿನ ನಿಮ್ಮ ನೆಮ್ಮದಿ ಮತ್ತು ಮನಶ್ಶಾಂತಿ ಹೆಚ್ಚುವುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿರೀಕ್ಷೆಗಿಂತ ಕಡಿಮೆ ಒತ್ತಡ ಇರಲಿದ್ದು, ಖಚಿತವಾದ ಗುರಿಯೊಂದಿಗೆ ಮುಂದಕ್ಕೆ ಹೆಜ್ಜೆಯಿಡುವುದು ಮುಖ್ಯ. ಆಸ್ತಿ-ಪಾಸ್ತಿ, ಭೂಮಿ, ಮನೆ, ವಾಹನದ ಖರೀದಿ ಬಗ್ಗೆ ಆಲೋಚಿಸುವುದಕ್ಕೆ ಹೆಚ್ಚು ಸಮಯ ಮೀಸಲಿಡುತ್ತೀರಿ. ನಿಮ್ಮ ಆಪ್ತರ ಬಗ್ಗೆ ಕಾಳಜಿ ಹೆಚ್ಚಾಗುತ್ತದೆ. ಪ್ರೀತಿಯಲ್ಲಿ ವೈಯಕ್ತಿಕವಾಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದರಿಂದ ಸಂಬಂಧ ಬಲಗೊಳಿಸುತ್ತದೆ. ಹೆಚ್ಚಿನ ಎಣ್ಣೆ-ಮಸಾಲೆ ಆಹಾರ ಪದಾರ್ಥಗಳ ಸೇವನೆ ಮಾಡಬೇಡಿ. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಪ್ರದರ್ಶಿಸಲು ವೇದಿಕೆ ದೊರೆಯಲಿದೆ. ಸ್ನೇಹಿತರೊಂದಿಗೆ ನಿಮಗೆ ಈ ಹಿಂದೆ ಇದ್ದ ಮನಸ್ತಾಪಗಳ ಪ್ರಸ್ತಾವ ಮಾಡಬೇಡಿ. ಗಾಢವಾದ ಸ್ನೇಹಕ್ಕೆ ಗೌರವ ಮುಖ್ಯವಾದ ಅಡಿಗಲ್ಲು. ಇನ್ನು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ಶಾಂತಿ ನೀಡುತ್ತದೆ. ಸಹಾನುಭೂತಿ ಮತ್ತು ಸಂಯಮ ನಿಮ್ಮನ್ನು ಯಶಸ್ವಿನತ್ತ ಒಯ್ಯುವ ಶಕ್ತಿ ಆಗುತ್ತದೆ.
ನಿಮ್ಮ ನಿಖರವಾದ ಯೋಜನೆ ಮತ್ತು ಪರಿಶ್ರಮದಿಂದಾಗಿ ಎಲ್ಲವೂ ಸಲೀಸಾಗಿ ಸಾಗುತ್ತದೆ. ಕೆಲಸದಲ್ಲಿ ನಿಧಾನ ಅಂತಾದರೂ ದೃಢವಾದ ಬೆಳವಣಿಗೆ ಕಾಣಬಹುದು. ಪರಿಣಾಮಗಳ ಬಗ್ಗೆ ಅರಿವಿಲ್ಲದೆ ಕೊಡುವಂಥ ಮಾತುಗಳನ್ನು ತಪ್ಪಿಸಿ. ಶಾಂತ ಸ್ವಭಾವದಿಂದ ಕೆಲಸದಲ್ಲಿ ತೊಡಗಿಕೊಂಡಲ್ಲಿ ಲಾಭದ ಬಗ್ಗೆ ಸ್ಪಷ್ಟ ಚಿತ್ರಣ ಇರುತ್ತದೆ. ಈ ದಿನ ಅನಿವಾರ್ಯ ಅಲ್ಲ ಅಂತಾದಲ್ಲಿ ಸಾಲ ತೆಗೆದುಕೊಳ್ಳುವ ವಿಚಾರದಲ್ಲಿ ಒಂದಕ್ಕೆ ನಾಲ್ಕು ಬಾರಿ ಯೋಚಿಸಿ. ಕುಟುಂಬದಲ್ಲಿ ನಿಮ್ಮ ಮಾತಿನ ತೂಕ ಹೆಚ್ಚಾಗುತ್ತದೆ, ಆದರೆ ಅಹಂಕಾರ ತೋರಿಸಬೇಡಿ. ಪ್ರೀತಿಯಲ್ಲಿ ಇರುವವರು ಮನೆಯಲ್ಲಿ ಮದುವೆ ಬಗ್ಗೆ ಪ್ರಸ್ತಾವ ಮಾಡುವ ಆಲೋಚನೆ ಮಾಡಲಿದ್ದೀರಿ. ನಿದ್ರೆ ಕೊರತೆಯಿಂದ ಅಲಸ್ಯ ಕಾಣಬಹುದು. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಪ್ರಾರ್ಥನೆಯಿಂದ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಬಹುದು. ಸತತ ಶ್ರಮ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ.
ಇಂದು ನಿಮ್ಮಲ್ಲಿ ಇರುವಂಥ ಸಂಕಲ್ಪಶಕ್ತಿ ಮತ್ತು ಇತರರಿಂದ ದೊರೆತ ಸಹಾಯಕ್ಕೆ ತೋರುವಂಥ ಕೃತಜ್ಞತೆಯು ಪ್ರಮುಖ ಪಾತ್ರ ವಹಿಸುತ್ತವೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಉಂಟಾಗಬಹುದು. ಆದರೆ ಸನ್ನಿವೇಶವನ್ನು ಸಮಾಧಾನದಿಂದ ಅವಲೋಕಿಸಿದಲ್ಲಿ ಪರಿಹಾರ ಕಾಣುತ್ತದೆ. ಹಣಕಾಸಿಗೆ ಸಂಬಂಧಿಸಿದಂತೆ ನೀವು ಕೇಳದೆಯೂ ಬರುವಂಥ ಪ್ರಯೋಜನಗಳ ಬಗ್ಗೆ ಸ್ಪಷ್ಟ ಯೋಚನೆ ಇರಿಸಿಕೊಳ್ಳುವುದು ಮುಖ್ಯ. ಇನ್ನು ನಿಮ್ಮ ಎಲ್ಲ ಕೆಲಸಗಳು ಹಾಗೂ ತೀರ್ಮಾನಕ್ಕೆ ಕುಟುಂಬ ಸದಸ್ಯರಿಂದ ಒಳ್ಳೆ ಬೆಂಬಲ ದೊರೆಯಲಿದೆ. ಸಂಬಂಧಗಳಿಂದ ಅಪೇಕ್ಷೆ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಶರೀರದಲ್ಲಿ ಸುಸ್ತು ಹೆಚ್ಚಾದಂತೆ, ಮೊದಲಿನ ಉತ್ಸಾಹದಲ್ಲಿ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಉತ್ಸಾಹ ಇರುವುದಿಲ್ಲ. ಲಘು ವ್ಯಾಯಾಮದಿಂದ ದೇಹದ ಚೈತನ್ಯ ಹೆಚ್ಚಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸು ಹಗುರವಾಗುತ್ತದೆ.
ನಿಮ್ಮ ಬುದ್ಧಿವಂತಿಕೆ ಮತ್ತು ಮಾತಿನ ಶೈಲಿ ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತದೆ. ಉದ್ಯೋಗ- ವೃತ್ತಿ- ವ್ಯವಹಾರಗಳಿಗೆ ಸಂಬಂಧಿಸಿದಂಯೆ ಚರ್ಚೆಗಳು, ಒಪ್ಪಂದಗಳು ನಿಮ್ಮ ಮೂಲಕ ಯಶಸ್ವಿ ಆಗಲಿದೆ. ನೀವು ನೀಡುವ ಸಲಹೆಯಲ್ಲಿ ಸ್ಪಷ್ಟತೆ ಇರಲಿದೆ. ಆರ್ಥಿಕವಾಗಿ ನಿಮ್ಮ ಪರಿಸ್ಥಿತಿ ಸುಧಾರಿಸುವುದಕ್ಕೆ ಹೊಸ ಅವಕಾಶ ಪಡೆಯಲಿದ್ದು, ವ್ಯಾಪಾರಿಗಳಿಗೆ ಲಾಭದ ಸೂಚನೆ ಸಿಗಲಿದೆ. ಕುಟುಂಬದಲ್ಲಿ ಹಬ್ಬದ ವಾತಾವರಣ ಇರಲಿದೆ. ಸಂಭ್ರಮದ ಸಮಯವನ್ನು ಹಂಚಿಕೊಳ್ಳುವ ದಿನ ಇದಾಗಿರಲಿದೆ. ನಿಮ್ಮಲ್ಲಿ ಕೆಲವರಿಗೆ ಬೆನ್ನು ನೋವು ಕಾಡಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆಯಿಂದ ಇರುವುದು ಮುಖ್ಯ. ವಿದ್ಯಾರ್ಥಿಗಳು ಔಟ್ ಆಫ್ ದಿ ಬಾಕ್ಸ್ ಆಲೋಚನೆಯಿಂದ ಎಲ್ಲರ ಗಮನವನ್ನು ನಿಮ್ಮೆಡೆ ಸೆಳೆದುಕೊಳ್ಳುವಿರಿ. ಸ್ನೇಹಿತರೊಂದಿಗೆ ಮೋಜಿನ ಸಮಯ ಕಳೆಯುವಿರಿ. ನಿಮ್ಮ ಮಾತೇ ನಿಮಗೆ ಗೌರವವನ್ನು ತಂದುಕೊಡಲಿದೆ.
ಲೇಖನ- ಎನ್.ಕೆ.ಸ್ವಾತಿ