ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 01 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ,ಪ ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶ್ರವಣಾ , ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 03 :49 ರಿಂದ 05:25ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:14ರ ವರೆಗೆ.
ಮೇಷ ರಾಶಿ: ಬಹಳಷ್ಟು ಮಾಡಬೇಕಾದ ಕೆಲಸಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ನಿಮ್ಮದಾದ ನಿಯಮಗಳನ್ನು ನೀವು ಬದಲಿಸಿಕೊಳ್ಳಲಾರಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕುಕೊಂಡು ಸಂತೋಷ ಪಡುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರವು ವಿಳಂಬವಾದರೂ ಸ್ಪಷ್ಟವಾಗಿ ಇರಲಿದೆ. ಬೇಕಾದಷ್ಟನ್ನೇ ಮಾತನಾಡಿ. ಮನಸ್ಸಿನಲ್ಲಿ ಆತಂಕವು ಹೆಚ್ಚಿರಲಿದೆ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬರಬಹುದು. ಇಂದು ನೀವು ಮಾಡುವ ಲೆಕ್ಕಾಚಾರದಿಂದ ಕಳೆದುಕೊಂಡಿದ್ದು ಎಷ್ಟು ಎಂಬ ಮಾಹಿತಿ ಸಿಗಲಿದೆ. ಅನಿರೀಕ್ಷಿತ ಲಾಭವಾಗಲಿದೆ.
ವೃಷಭ ರಾಶಿ: ಪೂರ್ವಪುಣ್ಯವು ನಿಮ್ಮನ್ನು ಕಾಪಾಡುವುದು. ನಿಮ್ಮನ್ನು ಹಾಸ್ಯ ಮಾಡಬಹುದು. ಯಾರೋ ಆಡಿದ ಮಾತಿನಿಂದ ನಿಮಗೆ ಬೇಸರವಾಗಬಹುದು. ಒಂದಿಲ್ಲೊಂದು ನೆನಪಗಳನ್ನು ಹೇಳಿ ಉದ್ಯೋಗಕ್ಕೆ ವಿರಾಮವನ್ನು ಹಾಕುವಿರಿ. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುವಿರಿ. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕುವಿರಿ. ಉಪಾಕರದ ಸ್ಮರಣೀಯನ್ನು ಇಟ್ಟಕೊಂಡು ಮುಂದುವರಿಯಿರಿ. ಸಿಟ್ಟು ಮಾಡುವ ಸಂದರ್ಭದಲ್ಲಿ ಸಿಟ್ಟ ನಿಮ್ಮ ಹಿಡಿತದಲ್ಲಿ ಇರಲಿ. ಸುತ್ತಾಡುವ ಮನಸ್ಸಾದೀತು. ಏಕಾಂತವನ್ನು ನೀವು ಇಷ್ಟಪಡಲಾರಿರಿ.
ಮಿಥುನ ರಾಶಿ: ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸಂಗಾತಿಗಳು ದೂರಾಗಬಹುದು. ನಿಮ್ಮ ಖಾತೆಯಲ್ಲಿ ಹಣವು ಕಡಿಮೆ ಆಗಿ ಆತಂಕ ಸೃಷ್ಟಿಯಾಗಬಹುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ ಮೇಲೆ ಅನುಮಾನಪಡಲಿದ್ದೀರಿ. ಸಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ. ಸ್ತ್ರೀಯರ ಮೇಲೆ ನಿಮಗೆ ದಯೆಯು ಉಂಟಾಗಬಹುದು. ಸಹೋದರನಿಗೆ ಧನದ ಸಹಾಯವನ್ನು ಮಾಡುವಿರಿ. ಅನಿರೀಕ್ಷಿತವಾಗಿ ಬರವ ಕೆಲವು ಸುದ್ದಿಗಳು ನಿಮಗೆ ದುಃಖವನ್ನು ಕೊಡಬಹುದು. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ. ಉದ್ಯೋಗದಲ್ಲಿ ನಿಮ್ಮ ನಡೆಯು ಸರಿಯಾಗಿರಲಿ.
ಕಟಕ ರಾಶಿ: ಒಂದೇ ತರದ ಜೀವನವು ನಿಮಗೆ ಬೇಸರವನ್ನು ತಂದೀತು. ಏನನ್ನಾದರೂ ಹೊಸತನ್ನು ಮಾಡಲು ಬಯಸುವಿರಿ. ಅಧಿಕ ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ಸಹೋದ್ಯೋಗಿಗಳಿಂದ ಕಿರಿಯಾಗಲಿದೆ. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಹಿರಿಯರ ಮಾತಿಗೆ ಎದುರಾಡುವುದು ಸರಿಯಾಗದು. ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಿ. ಸ್ನೇಹಿತರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ಸಂಗಾತಿಯ ಬಗ್ಗೆ ಅನುಕಂಪ ಬರಬಹುದು.