Horoscope: ದಿನಭವಿಷ್ಯ, ಈ ರಾಶಿಯವರು ಹಿತಶತ್ರುಗಳ ಬಗ್ಗೆ ಗಮನ ಇಡುವುದು ಅವಶ್ಯಕ

| Updated By: Rakesh Nayak Manchi

Updated on: Aug 19, 2023 | 12:15 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ಹಿತಶತ್ರುಗಳ ಬಗ್ಗೆ ಗಮನ ಇಡುವುದು ಅವಶ್ಯಕ
ಇಂದಿನ ದಿನಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 19 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಿದ್ಧ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03:44ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:20 ರಿಂದ 07:54ರ ವರೆಗೆ.

ಮೇಷ ರಾಶಿ: ನಿಮ್ಮ ಮಕ್ಕಳ‌ ಬಗ್ಗೆ ನಿರ್ಲಕ್ಷ್ಯ ಮಾಡುವುದು ಬೇಡ. ಸಂಗಾತಿಯನ್ನು ಹೆಚ್ಚು ಇಷ್ಟುಪಡುವಿರಿ. ಏನಾದರೂ ಉಡುಗೊರೆಯನ್ನು ಕೊಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆ ಬರುವುದು. ಮಿತ್ರರ ಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶೀಯ ವ್ಯಾಪಾರದಿಂದ ಲಾಭವಾಗುವುದು.‌ ನಿಮ್ಮ ವಿರುದ್ಧ ಯಾರಾದರೂ ಮಾತು ಕೇಳಿಬರಬಹುದು. ಹಿತಶತ್ರುಗಳ ಬಗ್ಗೆ ಗಮನವು ಅವಶ್ಯಕ. ಅಪರಿಚಿತರ ಕರೆಯನ್ನು ನಿರ್ಲಕ್ಷಿಸಿ. ದೂರ ಪ್ರಯಾಣವನ್ನು ಮಾಡುವಿರಿ‌. ಅನಿರೀಕ್ಷಿತವಾಗಿ ಒತ್ತಡಕ್ಕೆ ಸಿಲುಕುವಿರಿ.

ವೃಷಭ ರಾಶಿ: ವೃತ್ತಿಯ ಸ್ಥಳದಲ್ಲಿ ನಿಮಗೆ ಕಿರಿಕಿರಿ ಆಗಬಹುದು. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಸಿಲುಕುವರು. ಅಪರಿಚಿತರ ಜೊತೆ ಮಾತನ್ನು ಕಡಿಮೆ‌ ಮಾಡಿ. ಸಂಗಾತಿಯ ಮಾತು ನಿಮಗೆ ಇಷ್ಟವಾಗದೇ ಹೋಗದಬಹುದು. ಕಫಕ್ಕೆ ಸಂಬಂಧಿಸಿದ ರೋಗವು ಬರಬಹುದು. ವಾಹನದಿಂದ ತೊಂದರೆಯಾಗಬಹುದು. ಮಿತ್ರರನ್ನು ಪಾಲುದಾರರನ್ನಾಗಿ ಮಾಡುವಿರಿ. ರಾಜಕಾರಣಿಗಳು ಹಿನ್ನಡೆಯನ್ನು ಪಡೆಯುವರು. ನಿಮ್ಮ‌ ಮಾತಿಗೆ ವಿರೋಧವು ಬರುವುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಇಂದು ಸಮಯವನ್ನು ಸಂತೋಷದಿಂದ ಕಳೆಯುವಿರಿ.

ಮಿಥುನ ರಾಶಿ: ಹಿಂದೆ ಮಾಡಿದ ಹೂಡಿಕೆಯು ಇಂದು ಪ್ರಯೋಜನವಾಗುವುದು. ಸ್ವಂತ ವ್ಯವಹಾರವು ಲಾಭದಾಯಕವಾಗುವುದು. ಮನೆಯನ್ನು ಬದಲಾಯಿಸಬೇಕಾಗಬಹುದು. ಕಛೇರಿಯ ಒತ್ತಡದಿಂದ ಕುಟುಂಬದ ಜೊತೆ ಕಳೆಯುವುದು ಆಗದು. ಯಾರದೋ ವಿಚಾರಕ್ಕೆ ನಿಮ್ಮನ್ನು ತೋರಿಸುವರು. ನೀವು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಪಡುವಿರಿ. ಇಷ್ಟದೇವರ ಆರಾಧನೆಯನ್ನು ಮಾಡುವ ಮನಸ್ಸು ಮಾಡುವಿರಿ. ಸಂಬಂಧಗಳನ್ನು ನೀವು ಚೆನ್ನಾಗಿ ಇಟ್ಟುಕೊಳ್ಳುವಿರಿ. ನಿದ್ರೆಯಿಂದ ಸುಖವು ಸಿಗಲಿದೆ.

ಕರ್ಕ ರಾಶಿ: ನಿಮ್ಮ ಹಳೆಯ ವಸ್ತುಗಳನ್ನು ಆರ್ಥಿಕ ಸಮಸ್ಯೆಯಿಂದಾಗಿ ಮಾರಾಟ ಮಾಡುವಿರಿ. ಸ್ಥಿರಾಸ್ತಿಯನ್ನೂ ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ಮನೆಯವರ ಜೊತೆ ಚರ್ಚಿಸಿ ತೀರ್ಮಾನಿಸಿ. ಪ್ರಯಾಣ‌ ಮಾಡವ ಮನಸ್ಸಿದ್ದರೂ ಶರೀರಕ್ಕೆ ಅದು ಅಸಾಧ್ಯ ಎನಿಸಬಹುದು. ಬೇಕು ಎನಿಸಿದವರಿಗೆ ಸಹಾಯವನ್ನು ಮಾಡುವಿರಿ. ನೀವು ನಂಬಿಕೆಯನ್ನು ಒಂದು ಮಾತಿನಿಂದ ಕಳೆದುಕೊಳ್ಳುವಿರಿ. ಆಕಸ್ಮಿಕವಾಗಿ ಅಶುಭವಾರ್ತೆಯು ಬರಲಿದೆ. ಕಾರ್ಯದ ಒತ್ತಡವನ್ನು ನೀವು ಕಡಿಮೆ ಮಾಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಇರಲಿದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ