Mars Transit 2023: ಮಂಗಳ ಸಂಚಾರದಿಂದ‌ ಯಾವ ರಾಶಿಯವರಿಗೆಲ್ಲ ಅಮಂಗಳ?

Effect of Mars Transit 2023; ಕುಜನಿಂದ ಇನ್ನು ಮುಂದಿನ ಒಂದಿಷ್ಟು ದಿನ ಅಮಂಗಲವನ್ನೇ ನೋಡಬೇಕಾಗಿಬರಬಹುದು. ಅದರಲ್ಲಿಯೂ ಹೆಚ್ಚು ಅಮಂಗಲವನ್ನು ಯಾವ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ಗಮನಿಸಬೇಕಿದೆ. ಆ ಕುರಿತಾದ ವಿವರ ಮತ್ತು ಕೈಗೊಳ್ಳಬೇಕಾದ ಪರಿಹಾರದ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ.

Mars Transit 2023: ಮಂಗಳ ಸಂಚಾರದಿಂದ‌ ಯಾವ ರಾಶಿಯವರಿಗೆಲ್ಲ ಅಮಂಗಳ?
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Ganapathi Sharma

Updated on: Aug 18, 2023 | 8:55 PM

ಸುಮಾರು ಒಂದುವರೆ ತಿಂಗಳುಗಳ ಅನಂತರ ಕುಜನು ಸ್ಥಾನವನ್ನು ಬದಲಿಸುತ್ತಿದ್ದಾನೆ. ಇಷ್ಟು ದಿನ ಸಿಂಹ ರಾಶಿಯಲ್ಲಿ ಬುಧನ ಜೊತೆ ಹೆಚ್ಚು ಕಾಲ ಹಾಗೂ ಶುಕ್ರನ ಜೊತೆ ಕೆಲವು ದಿನ ಹಾಗೂ ಸೂರ್ಯನ ಜೊತೆ ಒಂದೆರಡು ದಿನ ಇದ್ದು ಅನಂತರ ಕನ್ಯಾರಾಶಿಯನ್ನು ಪ್ರವೇಶಿಸುವನು. ಮಿತ್ರನ ಗೃಹದಲ್ಲಿ ಇದ್ದ ಕುಜನು ಇನ್ನು ಶತ್ರುವಿನ ಮನೆಯನ್ನು ಪ್ರವೇಶ ಮಾಡುವನು. ಹಾಗಾಗಿ ಕುಜನಿಂದ ಇನ್ನು ಮುಂದಿನ ಒಂದಿಷ್ಟು ದಿನ ಅಮಂಗಲವನ್ನೇ ನೋಡಬೇಕಾಗಿಬರಬಹುದು. ಅದರಲ್ಲಿಯೂ ಹೆಚ್ಚು ಅಮಂಗಲವನ್ನು ಯಾವ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ಗಮನಿಸಬೇಕಿದೆ.

ಕನ್ಯಾ ರಾಶಿ

ಈ ರಾಶಿಯನ್ನೇ ಪ್ರವೇಶಿಸುವುದರಿಂದ ಬಲದ ವಿಚಾರವು ಬಂದಾಗ ನೀವು ಹಿಂದೇಟು ಹಾಕುವಿರಿ. ಯಂತ್ರಕ್ಕೆ ಸಂಬಂಧಿಸಿದ ವ್ಯಾಪಾರಗಳಿಂದ ನಷ್ಟವಾಗಬಹುದು. ಶರೀರಕ್ಕೆ ನಾನಾ ಪ್ರಕಾರದ ತೊಂದರೆಗಳು, ನೋವುಗಳು ಆಗಬಹುದು.

ತುಲಾ ರಾಶಿ

ದ್ವಾದಶಕ್ಕೆ ಬರುವ ಕುಜನಿಂದ ಭೂಮಿಯ ವ್ಯವಹಾರವು ಲಾಭದಾಯಕವಾಗದು. ಹಾಗೂ ಭೂಮಿಯಿಂದ ಉತ್ಪನ್ನವಾಗುವ ವಸ್ತುಗಳ ವ್ಯಾಪಾರದಲ್ಲಿಯೂ ಹಿನ್ನಡೆ ಅಥವಾ ನಷ್ಟವಾದೀತು. ಅಗ್ನಿಭಯವು ಉಂಟಾಗುವುದು.

ಧನು ರಾಶಿ

ಇದು ಕುಜನ‌ ದೃಷ್ಟಿಯು ಬೀಳುವ ರಾಶಿಯಾಗಿದ್ದು ವೃತ್ತಿಗೆ ಸಂಬಂಧಿಸಿದಂತೆ ತೊಂದರೆಗಳು ಬರಬಹುದು. ಕಛೇರಿಯಲ್ಲಿ ಮಾನಸಿಕ ನೆಮ್ಮದಿಯ ಕೊರತೆಯು ಎದ್ದು ತೋರುವುದು. ಉದ್ಯೋಗವನ್ನು ಬದಲಿಸಲೂ ಆಲೋಚನೆಯು ಬರಬಹುದು.

ಮೀನ ರಾಶಿ

ಇದು ಸಪ್ತಮರಾಶಿಯಾಗಲಿದ್ದು ವಿವಾಹಕ್ಕೆ ಅಡ್ಡಿಗಳು ಬರಬಹುದು. ಮಾತುಕತೆಯಾದ ವಿವಾಹವು ಮುರಿದು ಹೋಗಬಹುದು. ಮನಸ್ಸು ಬೇಡದ ನಕಾರಾತ್ಮಕ ಆಲೋಚನೆಗಳನ್ನೇ ಹೆಚ್ಚು ಮಾಡುವುದು.

ಮೇಷ ರಾಶಿ

ಕುಜನ ಕ್ಷೇತ್ರವೂ ಆಗಿದ್ದಾರೂ ಶತ್ರುವಿನ ಮನೆಯಲ್ಲಿ ಇರುವ ಕಾರಣ ಸಂಪೂರ್ಣ ಶುಭಫಲವನ್ನು ಕೊಡಲಾರನು. ಶತ್ರುಗಳ ಸಂಹಾರಕನಾಗಿರವವನು ತನ್ನ ಬಲವನ್ನು ಕಳೆದುಕೊಳ್ಳುವನು. ಸಾಲಬಾಧೆಯು ನಿಮ್ಮನ್ನು ಕಾಡುವುದು.

ಮಿಥುನ ರಾಶಿ

ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಕಷ್ಟವಾದೀತು. ಸಹೋದರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚು ಬರಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು.

ಈ ಎಲ್ಲ ರಾಶಿಯವರೂ ದೇವಸೇನಾನೀ ಎನಿಸಿಕೊಂಡ ಕಾರ್ತಿಕೇಯನನ್ನು ನಿತ್ಯವೂ ಪ್ರಾರ್ಥಿಸಿ, ಸ್ತೋತ್ರವನ್ನು ಪಠಿಸುವುದರಿಂದ ಆತನಿಂದ ಬರಬಹುದಾದ ತೊಂದರೆಗಳು ಕಡಿಮೆ ಆಗಬಹುದು, ಇಲ್ಲವಾಗಲೂಬಹುದು.

ಸುಬ್ರಹ್ಮಣ್ಯನ ಪಠಣಶ್ಲೋಕ

ಷಡಾನನಂ ಕುಂಕುಮರಕ್ತವರ್ಣಂ ಮಹಾಮತಿಂ ದಿವ್ಯಮಯೂರವಾಹನಮ್ | ರುದ್ರಸ್ಯ ಸೂನುಂ ಸುರಸೈನ್ಯನಾಥಂ ಗುಹಂ ಸದಾ ಶರಣಮಹಂ ಪ್ರಪದ್ಯೇ ||

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು