Horoscope: ದಿನಭವಿಷ್ಯ, ಈ ರಾಶಿಯವರ ಮನಸ್ಸಿನಲ್ಲಿರುವ ಆತಂಕವನ್ನು ಹೊರಹಾಕಲು ಪ್ರಯತ್ನಿಸುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 23, 2023 | 12:10 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರ ಮನಸ್ಸಿನಲ್ಲಿರುವ ಆತಂಕವನ್ನು ಹೊರಹಾಕಲು ಪ್ರಯತ್ನಿಸುವಿರಿ
ರಾಶಿ ಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 23 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು,
ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದಶಮೀ,
ನಿತ್ಯನಕ್ಷತ್ರ:ಶ್ರವಣ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:54 ರಿಂದ 09:22ರ ವರೆಗೆ,
ಯಮಘಂಡ ಕಾಲ ಬೆಳಿಗ್ಗೆ 10:49 ರಿಂದ 12:17ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:44 ರಿಂದ 03:12ರ ವರೆಗೆ.

ಮೇಷ ರಾಶಿ: ತಂತ್ರಜ್ಞರಿಗೆ ವೃತ್ತಿಯ ವಿಚಾರದಲ್ಲಿ ಗೊಂದಲವಿರುವುದು. ಸ್ನೇಹಿತರ ಉತ್ಸಾಹದ ಮಾತಿಗೆ ಮರುಳಾಗುವ ಸಾಧ್ಯತೆ ಇದೆ. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು.‌ ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಮಕ್ಕಳಿಂದ ಹಣವನ್ನು ಪಡೆಯುವಿರಿ. ಇಂದು ಮಾತುಗಳನ್ನು ಕಡಿಮೆ ಆಡುವಿರಿ. ಸಂಪತ್ತಿನ‌ ನಿರ್ವಹಣೆಯಲ್ಲಿ ಸೋಲಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾಗಬಹುಸು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಕೃಷಿಯಲ್ಲಿ ನಿಮಗೆ ಇಂದು ನಿರಾಸಕ್ತಿಯು ಇರುವುದು. ಸುಮ್ಮನೇ ಇದ್ದಷ್ಟೂ ನಿಮ್ಮ ಮೇಲೆ ಗೂಬೆ‌ ಕೂರಿಸಬಹುದು.

ವೃಷಭ ರಾಶಿ: ಮನಸ್ಸಿನಲ್ಲಿ ಯಾವುದೋ ಆತಂಕವು ಇರಲಿದ್ದು ಹೊರಹಾಕಲು ಪ್ರಯತ್ನಿಸುವಿರಿ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಬಂಗಾರದ ಖರೀದಿಗೆ ಉತ್ಸಾಹವನ್ನು ತೋರುವಿರಿ. ಅಸಾಧ್ಯವಾದ ಕಾರ್ಯವನ್ನು ಮಾಡಬೇಕು ಎನಿಸಬಹುದು. ಬರುವ ಅಲ್ಪ ಆದಾಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕುಟುಂಬದ ಪ್ರೀತಿಯು ಸಿಗಲಿದೆ. ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳುವಿರಿ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಆಸೆ ಪಡುವುದು ಬೇಡ.‌ ದುಃಖಪಡಬೇಕಾದೀತು. ಆಪ್ತರ ಮೇಲೆ ಹುಸಿ ಮುನಿಸು ಇರಲಿದೆ.

ಮಿಥುನ ರಾಶಿ: ಹೊಸ ವಸ್ತುಗಳನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ.‌ ವಾಹನವನ್ನು ಚಲಾಯಿಸುವ ಬೇರೆಯ ಯಾವ ಚಟುವಟಿಕೆಗಳನ್ನು ಮಾಡುವುದು ಬೇಡ. ಆಹಾರದಿಂದ ಆರೋಗ್ಯವು ಕೆಡಲಿದೆ. ನಿಮ್ಮ ಕುಶಲ ಕಾರ್ಯಗಳು ಮೇಲಧಿಕಾರಿಗಳಿಗೆ ತಿಳಿಯುವುದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು. ಸಂಗಾತಿಗೆ ನೀವು ಸಹಾಯವನ್ನು ಮಾಡುವಿರಿ. ಸಂಪತ್ತಿನ ಉಳಿತಾಯದ ದಾರಿಯನ್ನು ನೀವೇ ಕಂಡುಕೊಳ್ಳುವಿರಿ. ಮುಚ್ಚು ಮರೆ ಇಲ್ಲದೇ ಎಲ್ಲವನ್ನೂ ಆಪ್ತರ ಜೊತೆ ಹಂಚಿಕೊಳ್ಳಿ.

ಕರ್ಕ ರಾಶಿ: ಸ್ವಂತ ಉದ್ಯಮದಲ್ಲಿ ಕೆಲವು ಬದಲಾವಣೆಯನ್ನು ಮಾಡಬೇಕಾದ ಅನಿವಾರ್ಯತೆ ಬರಬಹುದು. ‌ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ. ಆದರೂ ಕಷ್ಟವಾದೀತು. ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆಪ್ತರ ಒಡನಾಟವು ಖುಷಿಯನ್ನು ಕೊಡಬಹುದು. ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ ಇರುವುದು. ನಂಬಿಕೆಯನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಹಿತಶತ್ರುಗಳನ್ನು ಅವರಿಗೆ ಗೊತ್ತಾಗದಂತೆ ದೂರವಿಡಿ. ನಿಮ್ಮ ಬಳಿ‌ ಕೇಳಿದರೆ ಮಾತ್ರ ಸಲಹೆಯನ್ನು ಕೊಡಿ.‌ ತಂದೆಯ ಕೋಪವನ್ನು ನೀವು ಸಮಾಧಾನ ಮಾಡುವಿರಿ. ವಿರೋಧಿಗಳು ಸೃಷ್ಟಿಯಾಗಬಹುದು. ಶುಭ ಸಮಾರಂಭಗಳಿಗೆ ಭೇಟಿ ಮಾಡುವಿರಿ. ಕ್ರೀಡೆಯಲ್ಲಿ ಸ ಅಸಕ್ತಿಯು ಕಡಿಮೆ ಆಗುವುದು.