Horoscope: ಈ ರಾಶಿಯವರ ಸ್ವಭಾವ ಹೇಗಂದರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುತ್ತಾರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2023 | 12:10 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರ ಸ್ವಭಾವ ಹೇಗಂದರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುತ್ತಾರೆ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 25 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ನವಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:42ರ ವರೆಗೆ,
ಯಮಘಂಡ ಕಾಲ ಬೆಳಗ್ಗೆ 06:21 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:28 ರಿಂದ 11:01ರ ವರೆಗೆ.

ಶ್ರಾವಣ ಮಾಸದ ಶುಕ್ರವಾರಗಳು ಅತ್ಯಂತ ಶ್ರೇಷ್ಠವಾದ ವಾರಗಳಾಗಿವೆ. ಅದರಲ್ಲಿಯೂ ಈ ಬಾರಿ ನವಮೀ ತಿಥಿಯು ಸೇರಿಕೊಂಡಿದ್ದು ಮತ್ತಷ್ಟು ವಿಶೇಷ. ದುರ್ಗೆಯರು ಒಂಭತ್ತು ಮತ್ತು ನವಮಿಯ ಅಧಿದೇವತೆಯು ದುರ್ಗೆಯಾಗಿದ್ದು ಶುಕ್ರವಾರವೂ ಬಂದಿರುವ ಕಾರಣ ಬಹಳ ಶ್ರೇಷ್ಠವಾದ ದಿನವಾಗಿದೆ. ಇಷ್ಟಾರ್ಥಗಳು, ಸಂಪತ್ ಸಮೃದ್ಧಿ, ಎಲ್ಲವೂ ಬರಲಿದೆ.

ಮೇಷ ರಾಶಿ: ಅತಿಥಿಗಳ ಸತ್ಕಾರವನ್ನು ಮನೆಯಲ್ಲಿ ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಹರಟೆ ಹೊಡೆಯುವಿರಿ. ಮಕ್ಕಳ‌ ಕಾರ್ಯವು ನಿಮಗೆ ಹೆಮ್ಮೆ ಎನಿಸುವುದು. ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರಲಿದೆ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ನಿಮ್ಮ ಶುದ್ಧ ಮನಸ್ಸಿನಿಂದ ಎಲ್ಲರಿಗೂ ಶುಭವನ್ನೇ ಹಾರೈಸಿ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವಿರಿ. ಉತ್ತಮ ಅವಕಾಶಗಳನ್ನು ವೈರಾಗ್ಯ ಬುದ್ಧಿಯಿಂದ ಬಿಟ್ಟು ಕೊಡುವಿರಿ. ಕುಟುಂಬದಲ್ಲಿ ಐಕಮತ್ಯದ ಕೊರತೆಯು ಕಾಣಿಸುವುದು. ಹಿರಿಯರ ಜೊತೆ ಚರ್ಚಿಸಿ ಸೂಕ್ತವಾದುದನ್ನು ತೆಗೆದುಕೊಳ್ಳಿ

ವೃಷಭ ರಾಶಿ: ವಿಪರೀತ ಓಡಾಟದಿಂದ‌ ನಿಮಗೆ ದಣಿವಾಗಲಿದೆ. ಹೆಚ್ಚಿನ ಸುಖಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಪ್ರೋತ್ಸಾಹವು ಸಿಗಲಿದೆ. ಏಕಮುಖವಾದ ನಿರ್ಧಾರವು ನಿಮಗೆ ಸಫಲತೆಯನ್ನು ತಂದುಕೊಡದು. ಸಣ್ಣ ವಿಚಾರಗಳಿಗೂ ಬೇಸರಗೊಳ್ಳುವಿರಿ. ಅಪರಿಚಿತರ ಸಹವಾಸವನ್ನು ಮಾಡುವಿರಿ. ಓಡಾಡುವಾಗ ಎಚ್ಚರ ಇರಲಿ. ಎಲ್ಲವನ್ನೂ ಒಬ್ಬರೇ ಮಾಡಿ ಮುಗಿಸಬೇಕು ಎನ್ನುವ ಉತ್ಸಾಹವು ಇದ್ದರೂ ಇನ್ನೊಬ್ಬರನ್ನು ನಿಮ್ಮ ಜೊತೆಗೆ ಜೋಡಿಸಿ ಕೊಂಡು ಕಾರ್ಯವನ್ನು ಯಶಸ್ವಿಯಾಗಿಸಿ. ಆಹಾರವು ಅಜೀರ್ಣವಾಗಿ ರೋಗವು ಬರುವುದು. ಇರುವುದನ್ನು ಇದ್ದಂತೆ ಹೇಳುವುದರಿಂದ ನಿಮಗೆ ತೊಂದರೆಯಾದೀತು.

ಮಿಥುನ ರಾಶಿ: ನೀವು ಇಂದು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ನೀವು ಭಾಗಿಯಾಗಲಾರಿರಿ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದ‌‌‌ ಕೆಲಸಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರವು ಲಾಭದಾಯಕವಲ್ಲದಿದ್ದರೂ ಅದನ್ನೇ‌ ನಡೆಸಲು ಬಯಸುವಿರಿ. ಸುಖವಾದ ಜೀವನವನ್ನು ನಡೆಸಲು ನೀವು ಸರಳ‌ ಸೂತ್ರವನ್ನು ಬಳಸುವಿರಿ. ನ್ಯಾಯಾಲಯದಲ್ಲಿ ನಿಮ್ಮ ದಾಯಾದಿ ಕಲಹಗಳು ತಟಸ್ಥವಾಗಿ ಇರಲಿದ್ದು ನಿಮಗೆ ತುರ್ತು ನಿರ್ಧಾರವಾಗಬೇಕಾದ ಸನ್ನಿವೇಶವು ಇರಲಿದೆ.

ಕರ್ಕ ರಾಶಿ: ವಿವಾಹ ಯೋಗವು ಬಂದಿದ್ದು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ.‌ ನಿಮ್ಮ‌ ಮಾತು ಯಾರನ್ನಾದರೂ ಘಾಸಿ ಮಾಡೀತು. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಉತ್ತಮ. ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ಹಣವನ್ನು ಕೊಡುವ ಸಂದರ್ಭವು ಬರಬಹುದು. ಚುರುಕಾದ ಕಾರ್ಯಗಳು ನಿಮ್ಮ ಯಶಸ್ಸನ್ನು ಹೆಚ್ಚಿಸುವುದು. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿ ಶುದ್ಧತೆ ಇರಲಿ. ಭವಿಷ್ಯದ ಬಗ್ಗೆ ಬಹಳ ಆಲೋಚನೆಯನ್ನು ಮಾಡುವಿರಿ.