ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಬ್ರಹ್ಮ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ 09:18 ರಿಂದ 10:53ರ ವರೆಗೆ, ಯಮಘಂಡ ಕಾಲ 02:04 ರಿಂದ 03:40ರ ವರೆಗೆ, ಗುಳಿಕ ಕಾಲ 06:07 ರಿಂದ 07:42ರ ವರೆಗೆ.
ಮೇಷ: ಇಂದು ನೀವು ಅಚ್ಚರಿಯ ಕಾರ್ಯ ಸಾಧನೆ ಮಾಡಲಿದ್ದೀರಿ. ಇದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ. ಕೆಲಸವನ್ನು ವಹಿಸಿಕೊಂಡು ಮಾಡುವ ಗುತ್ತಿಗೆದಾರರಿಗೆ, ಕಲಾವಿದರಿಗೆ ಇಂದು ಸಕಾಲವಾಗಿದೆ. ಹೆಚ್ಚು ಪ್ರಯತ್ನದಿಂದ ಅಧಿಕ ಲಾಭವನ್ನು ಪಡೆಯಬಹುದಗಿದೆ. ಸಮಾಜದಲ್ಲಿ ಅನೇಕ ಸಾಮಾಜಿಕ ಕಾರ್ಯವನ್ನು ಮಾಡುವವರಿಗೆ ಯೋಗ್ಯ ಗೌರವ, ಸಮ್ಮಾನಗಳು ಸಿಗಲಿದೆ. ಮಿತ್ರರ ಸಹಕಾರದಿಂದ ಹೊಸತನ್ನು ಸಾಧಿಸಬಹುದು. ಇಂದು ಷೇರು ವ್ಯವಹಾರವನ್ನು ಮಾಡಿದರೆ ಉತ್ತಮ ಲಾಭ.
ವೃಷಭ: ಇಂದು ನಿಮ್ಮ ವ್ಯಾಪರಗಳು ಸುಲಲಿತವಾಗಿ ನಡೆದರೂ ಲಾಭದಲ್ಲಿ ಸ್ವಲ್ಪ ಕೊರತೆ ಎದ್ದು ಕಾಣುವುದು. ಅದರಿಂದ ಬೇಸರವೂ ಆಗಬಹುದು. ಈ ಸಣ್ಣ ಕಾರಣವೇ ಕುಟುಂಬದಲ್ಲಿನ ಮನಸ್ತಾಪಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಮುಖ್ಯವಾಗಿ ಬೇಕಾಗುವುದು. ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಅಧಿಕವಾದ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಅನಿರೀಕ್ಷಿತ ಧನ ಲಾಭದಿಂದ ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸುವಿರಿ.
ಮಿಥುನ: ಇಂದು ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಮಾಡಿ ಮುಗಿಸುವರು. ಸಂಸಾರದಲ್ಲಿನ ಹೆಚ್ಚಿನ ಹೊಂದಾಣಿಕೆಯಿಂದ ಇರುವುದು ಇಂದು ಅಗತ್ಯವಾಗಬಹುದು. ಯಾರಾದರೂ ಒಬ್ಬರೂ ತಲೆಬಾಗಲೇಬೇಕಾದೀತು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವರು. ಕೆಲಸಕ್ಕಾಗಿ ಬಹಳ ಹುಡುಕುತ್ತಿದ್ದರೆ ನಿಮಗೆ ಅನುಗುಣವಾಗಿ ಉದ್ಯೋಗವು ಪ್ರಾಪ್ತಿಯಾಗುವುದು. ಧಾರ್ಮಿಕಕ್ಷೇತ್ರಗಳ ದರ್ಶನವನ್ನು ಪಡೆಯುವ ಸದವಕಾಶ ಸಿಗಲಿದೆ. ಆರೋಗ್ಯವು ಸುಧಾರಿಸಿದ್ದರಿಂದ ತೃಪ್ತಿ ಇರುವುದು. ಇಚ್ಛೆ ಇದ್ದರೆ ನೂತನ ವಾಹನವನ್ನೂ ಖರೀದಿಸುವಿರಿ.
ಕರ್ಕ: ಇಂದು ಪ್ರಮುಖ ವಿಚಾರಗಳಲ್ಲಿ ಹೆಚ್ಚು ವಿವೇಕಪೂರ್ವಕವಾಗಿ ಮುನ್ನಡೆಯುವು ಉತ್ತಮ. ಸಾಮಾಜಿಕ ಕ್ರಾಂತಿಯನ್ನು ಮಾಡಲು ಹೊರಟ ನಿಮಗೆ ಕೆಲವು ವಿಘ್ನಗಳೂ ಬರಬಹುದು. ಬಹುದಿನಗಳಿಂದ ವಿವಾಹದ ಸಿದ್ಧತೆಯಲ್ಲಿ ಇದ್ದವರಿಗೆ ಕಂಕಣ ಬಲ ಕೂಡಿ ಬರಲಿದೆ. ಕುಟುಂಬದಲ್ಲಿ ಕಿರಿಕಿರಿಯಾದರೂ ಸಮಾಧಾನದಿಂದ ಹೋಗುವುದು ಒಳಿತು. ದೇವತಾ ಕಾರ್ಯಗಳಿಗೆ ಹಣವನ್ನು ವ್ಯಯ ಮಾಡುವಿರಿ. ಕಛೇರಿಯ ಕೆಲಸದಲ್ಲಿ ಆಕಸ್ಮಿಕ ಬದಲಾವಣೆಯಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯವೂ ಸಿಗಬಹುದು.