Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: May 18, 2023 | 5:30 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ 02:05 ರಿಂದ 03:41ರ ವರೆಗೆ, ಯಮಘಂಡ ಕಾಲ 06:05 ರಿಂದ 07:41ರ ವರೆಗೆ, ಗುಳಿಕ ಕಾಲ 09:17 ರಿಂದ 10:53ರ ವರೆಗೆ.

ಮೇಷ: ಅಂದುಕೊಂಡ ಕೆಲಸವು ಆಗದೇ ಹತಾಶಾಭಾವವು ಮೂಡಬಹುದು. ಅಪರಿಚತವಾದ ಹುದ್ದೆಗಳನ್ನು ಅನಿವಾರ್ಯವಾಗಿ ಅಲಂಕರಿಸಬೇಕಾದೀತು. ಆಸ್ತಿಯ ಇಬ್ಬಾಗಕ್ಕೆ ಸಹಿ ಹಾಕಲೇಬೇಕಾದೀತು. ಅತಿಯಾದ ನಗುವು ಬೇಡ. ಕಳೆದುಕೊಂಡವರ ಬಗ್ಗೆ ಪಶ್ಚಾತ್ತಾಪ‌ ಇರಲಿದೆ. ನಿಮ್ಮ ವಿನಮ್ರತೆಯು ನಿಮಗೆ ವರದಾನವಾಗಿದೆ. ಕಲಾವಿದರು ಹೆಚ್ಚಿನ ಕೀರ್ತಿಯನ್ನು ಪಡೆಯುವರು. ಎಲ್ಲರೂ ಸ್ವಾರ್ಥಿಗಳಂತೆ ಕಂಡಾರು. ಎಲ್ಲದಕ್ಕೂ ಕಾರಣವನ್ನು ಹುಡುಕಿ ಪ್ರಯೋಜನವಾಗದು.

ವೃಷಭ: ಎಲ್ಲರ ಮಾತುಗಳು ನಿಮಗೆ ಕರ್ಣಕಠೋರವಾದೀತು. ಗೃಹೋಪಯೋಗಿ ವಸ್ತುಗಳು ನಿಮಗೆ ದುಬಾರಿ ಎನಿಸಬಹುದು. ಹತ್ತಿರದವರ ಬಳಿ ಹಣವನ್ನು ಪಡೆಯುವಿರಿ. ವಾಸಸ್ಥಳವನ್ನು ಬದಲಿಸಬಹುದು. ಪ್ರತಿಕೂಲ ವಾತಾವರಣವನ್ನು ಉದ್ವೇಗದಿಂದ ಬಗೆಹರಿಸಿಕೊಳ್ಳುವುದು ಬೇಡ. ಅನಗತ್ಯವಾಗಿ ಖರ್ಚನ್ನು ಮಾಡಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ವಾತಂತ್ರ್ಯವನ್ನು ಬಯಸುವವರು. ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಮನೆಗೆಲಸವೇ ನಿಮಗೆ ಆಯಾಸ ತರಿಸೀತು.

ಮಿಥುನ: ನಿಮ್ಮವರಿಗೆ ಆಡಿದ ಕಠೋರ ಮಾತುಗಳು ನಿಮ್ಮನ್ನು ಸಿಟ್ಟಿಗೇರಿಸುವುದು. ಹಣವು ವ್ಯಯವಾಗುವ ಸಾಧ್ಯತೆ ಇದೆ‌. ನಿಮ್ಮ ಕನಸುಗಳು ನಿನಗೆ ಉತ್ಸಾಹವನ್ನು ತಂದುಕೊಡುತ್ತವೆ. ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುವಿರಿ. ನಿಮ್ಮ ಆಲೋಚನೆಗಳು ಇಷ್ಟವಾದೀತು. ಇರುವ ಸಮಯವನ್ನು ಕುಟುಂಬದ ಜೊತೆ ಕಳೆಯಿರಿ. ನೆಮ್ಮದಿ ಸಿಗಲಿದೆ‌. ಉಚಿತವಾದುದನ್ನು ಪಡೆಯಲು ಪ್ರಯತ್ನಿಸಿ. ಮಕ್ಕಳು ನಿಮ್ಮನ್ನು ಇಷ್ಟಪಡುವರು. ಸಾಹಸಕ್ಕೆ ಆದಷ್ಟು ಕೈ ಹಾಕುವುದು ಬೇಡ.

ಕಟಕ: ಸಂತೋಷವಾಗಿರಲು ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿದರೂ ಅದು ವ್ಯತ್ಯಾಸ ಆಗಬಹುದು. ಅಥವಾ ಇನ್ನೇನೋ ಆಗಬಹುದು. ಇದು ನಿಮ್ಮನ್ನು ಸಿಟ್ಟಿಗೇಳಿಸುತ್ತದೆ. ಎಲ್ಲರ ಜೊತೆ ಕಲಹವಾಡುವಿರಿ. ಕಿರಿಯರ ಭಾವನೆ ಸ್ಪಂದಿಸುವಿರಿ. ನಿರಂತರ ಶ್ರಮದಿಂದ ಆಯಾಸವಾದ ನಿಮಗೆ ಇಂದು ಸ್ವಲ್ಪ ಬಿಡುಗಡೆಯಂತೆ ತೋರುವುದು‌. ದೇವರ ಕಾರ್ಯದಲ್ಲಿ ತೊಡಗುವಿರಿ. ನಿಮ್ಮ ಮಾತುಗಳು ಬಲಿಶವೆನಿಸಬಹುದು ಕೆಲವರಿಗೆ. ಭೂಮಿಯ ವ್ಯವಹಾರದಲ್ಲಿ ಸರಿಯಾದ ಯೋಜನೆ ಇರಲಿ.