Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ Image Credit source: Maharashtratimes.Com
Follow us
Rakesh Nayak Manchi
|

Updated on: Apr 19, 2023 | 5:15 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಐಂದ್ರ, ಕರಣ: ಭಸದರ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:32 ರಿಂದ 02:00ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 7:51 ರಿಂದ 09:25ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:32ರ ವರೆಗೆ.

ಮೇಷ: ಸ್ವಾಭಿಮಾನಿಗಳಾಗಿ ಇರುವಿರಿ. ತಾನು ಹೇಳಿದಂತೆ ನಡೆಯಬೇಕು ಎನ್ನುವ ಮಾನಸಿಕ ಸ್ಥಿತಿಯಿಂದ ಹೊರ ಬನ್ನಿ. ಹಠವು ಒಳ್ಳೆಯದಲ್ಲ ಇಂದು. ಬೆಳಗ್ಗೆ ಅಂದುಕೊಂಡ ಕಾರ್ಯವು ಮುಕ್ತಾಯವಾಗದು. ಹೊಸದಾಗಿ ಸೇರಿದ ಕೆಲಸದಲ್ಲಿ ಗೊಂದಲಗಳಿದ್ದು ಅದನ್ನು ಸರಿಮಾಡಿಕೊಳ್ಳುವಿರಿ. ಇಂದು ನಿಮ್ಮ ಮಹತ್ತ್ವದ ಕಾರ್ಯವು ಕೈಗೂಡಬಹುದು. ಆತುರಪಡದೇ ತಾಳ್ಮೆಯಿಂದ ನೀವು ವ್ಯವಹರಿಸಿ. ಆತ್ಮೀಯರ ಭೇಟಿಯಿಂದ ಖುಷಿಯಾಗಲಿದೆ. ಹಳೆಯ ಸಮಾಚಾರವನ್ನು ಪುನಃ ನೆನಪಿಸಿಕೊಳ್ಳುವಿರಿ. ಮಾತನ್ನು ಕಡಿಮೆ‌ ಮಾಡಿ.

ವೃಷಭ: ಇನ್ನೊಬ್ಬರು ನಿಮ್ಮ ಶ್ರೇಯಸ್ಸನ್ನು ಸಹಿಸದೇ ಅಸೂಯೆಪಡುವರು. ಮನಸ್ಸಿನಲ್ಲಿಯೇ ಸಂಕಟಪಡುವ ಬದಲು ಅದನ್ನು ಆಪ್ತರಿಗೆ ಹೇಳಿ ಹಗುರಾಗಿ. ಕೃಷಿಕರಿಗೆ ಲಾಭವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಗೊಂದಲಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಹಿತಶತ್ರುಗಳ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಇಂದು ಸಹಾಯವನ್ನು ಕೇಳಿದವರಿಗೆ ಇಲ್ಲವೆನ್ನದೇ ಮಾಡಿ. ವಿಶ್ರಾಂತಿಯ ಜೊತೆ ಕೆಲಸವನ್ನು ಮಾಡಿ.‌ ಅತಿಯಾದ ಆಯಾಸವಾದರೆ ಕೆಲಸವನ್ನು ನಿಲ್ಲಿಸುವುದು ಉತ್ತಮ. ಗುರಿಯೆಡಗೆ ಪ್ರಯತ್ನವು ನಿರಂತರವಾಗಿರಲಿ.

ಮಿಥುನ: ನೀವಾಡುವ ಮಾತುಗಳು ನಿಮಗೆ ಖುಷಿ ಕೊಡಬಹುದು. ಅದರೆ ಅದರಿಂದ ಇನ್ನೊಬ್ಬರಿಗೆ ನೋವಾಗುತ್ತದೆ ಎಂಬುದನ್ನೂ ನೆನಪಿಸಿಕೊಳ್ಳಿ. ಮನದಲ್ಲಿ ಅವ್ಯಕ್ತವಾದ ಭಯವು ಕಾಡವುದು. ದೇವರ ಸ್ತೋತ್ರಾದಿಗಳನ್ನು ಮಾಡಿ. ವಿದೇಶಕ್ಕೆ ಹೋಗುವ ಅವಕಾಶವು ತಪ್ಪಿಹೋಗುವುದು. ಅಗತ್ಯವಿದ್ದಷ್ಟೇ ಖರ್ಚು ಮಾಡಿ. ಎಲ್ಲವೂ ಬೇಕೆನಿಸಬಹುದು. ಮನಸ್ಸನ್ನು ಕಡಿಮಾಣ ಹಾಕಿ ನಿಲ್ಲಿಸುವುದು ಉತ್ತಮ. ಏಕಾಂತವೂ ನಿಮಗೆ ಹಿಂಸೆಕೊಡಬಹುದು. ಕಳೆದುದನ್ನು ನೆನಪಿಸಿಕೊಳ್ಳಬೇಡಿ. ಕುಲದೇವರ ಸ್ಮರಣೆ, ಪ್ರಾರ್ಥನೆಯನ್ನು ಮಾಡಿ.

ಕರ್ಕಾಟಕ: ಇಂದು ನಿಮ್ಮ ಪರೀಕ್ಷೆಗೆಂದು ಕೆಲವು ಘಟನೆಗಳು ನಡೆಯಬಹುದು. ಅದನ್ನು ಸರಿಯಾಗಿ ನಿಭಾಯಿಸಿ. ಕಛೇರಿಯಲ್ಲಿ ನಿಮಗೆ ಉತ್ಸಾಹದ ಸ್ವಾಗತ ಸಿಗಲಿದೆ. ನಿಮ್ಮಿಂದ ದೂರಹೋದವರ ಬಗ್ಗೆ ಅತಿಯಾದ ಆಸಕ್ತಿ ಬೇಡ. ಮಕ್ಕಳು ನಿಮಗೆ ಸಂತೋಷವನ್ನು ಕೊಡುವರು. ಅವರ ಜೊತೆ ಸಮಯವನ್ನು ಕಳೆಯಿರಿ. ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಉತ್ತಮ. ಇಂದು ನಿಮಗೆ ತುಂಬಾ ಸಮಯ ಸಿಗಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ಅತಿಯಾದ ಆಸೆಬುರುಕುತನ ಒಳ್ಳೆಯದಲ್ಲ. ಮನಸ್ಸು ಹೇಳಿದಂತೆ ಕೇಳಬೇಡಿ, ಸಮಾಧಾನದಿಂದ ಇರಿ. ಗೋಗ್ರಾಸವನ್ನು ನೀಡಿ.

-ಲೋಹಿತಶರ್ಮಾ ಇಡುವಾಣಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್