ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 28 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ :ಮಂಗಳ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 03 :40 ರಿಂದ 11:15ರವರೆಗೆ, ಯಮಘಂಡ ಕಾಲ 09:35ರಿಂದ 11:06ರ ವರೆಗೆ, ಗುಳಿಕ ಕಾಲ 12:38 ರಿಂದ 02:09ರ ವರೆಗೆ.
ಮೇಷ: ಮಕ್ಕಳ ಜೀವನವನ್ನು ಕಂಡು ಸಂಕಟಪಡಲಿದ್ದೀರಿ. ಅದಕ್ಕಾಗಿ ಏನಾದರೂ ಮಾಡಲೂ ನಿಮಗೆ ಮನಸ್ಸಾಗಲಿದೆ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ನಿರೀಕ್ಷಿತ ಮಟ್ಟವನ್ನು ಇಂದು ನಿಮ್ಮಕೆಲಸವು ತಲುಪದು. ಹಿರಿಯರನ್ನು ಗೌರವಿಸುವುದು ನಿಮ್ಮ ಸ್ವಭಾವವಾಗಿರುತ್ತದೆ. ಹತ್ತಿರದ ಬಂಧುಗಳ ಅಕಸ್ಮಾತ್ ಅಗಲುವಿಕೆ ನಿಮಗೆ ಆಶ್ಚರ್ಯವನ್ನು ತಂದೀತು. ಇಂದು ನಿಮ್ಮ ಊರಿನ ಗ್ರಾಮದೇವರಿಗೆ ಪೂಜೆ ಸಲ್ಲಿಸಿರಿ.
ವೃಷಭ: ಸಹೋದ್ಯೋಗಿಗಳು ನಿಮಗೆ ಸಿಗುವ ಅಧಿಕಾರವನ್ನು ಸಿಗದಂತೆ ಮಾಡಿಲಿದ್ದಾರೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ಅನಾಯಾಸಕರವಾದ ಪ್ರಯಾಣವನ್ನು ಮಾಡಲಿದ್ದೀರಿ. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಿ ಇರಲಿವೆ. ಸಂಗಾತಿಯ ಬಗ್ಗೆ ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವಿರಿ. ಆಪ್ತರೊಂದಿಗೆ ಅದನ್ನು ಹಂಚಿಕೊಂಡು ಸಮಾಧಾನಪಡುವಿರಿ. ಆರ್ಥಿಕತೆಯನ್ನು ಸುಧಾರಿಸಲು ಕ್ರಮವನ್ನು ಕೈಗೊಳ್ಳುವಿರಿ. ಲಕ್ಷ್ಮೀನಾರಾಯಣನ ಕೃಪಾಕಟಾಕ್ಷವನ್ನು ಗಳಿಸಿಕೊಳ್ಳುವುದು ಉತ್ತಮ.
ಮಿಥುನ: ಸರಿಯಾಗಿ ನಿದ್ರೆ ಇಲ್ಲದೇ ಮನಸ್ಸು ಕ್ಷೀಣಿಸುವುದು. ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಇಲ್ಲ ಸಲ್ಲದ ಆಲೋಚನೆಗಳನ್ನು ಬಿಡಿ. ನಿಮ್ಮ ಕಾರ್ಯಕ್ಕೆ ಸಾರ್ವಜನಿಕಾಗಿ ಗೌರವಗಳು ಸಿಗಲಿವೆ. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಶಿಸ್ತನ್ನು ಕಾಪಾಡಿಕೊಳ್ಳಲು ಬಯಸುವಿರಿ. ಸುಬ್ರಹ್ಮಣ್ಯನ ಸ್ತೋತ್ರವು ನಿಮಗೆ ನೆಮ್ಮದಿಯನ್ನು ಕೊಡಲಿದೆ.
ಕಟಕ: ಮಕ್ಕಳ ಜೊತೆ ಅಧಿಕವಾದ ಸಮಯವನ್ನು ಕಳೆಯಬೇಕು ಎಂದು ಅನಿಸದರೂ ಅದು ಸಾಧ್ಯವಾಗದು. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಕಛೇರಿಯ ಕೆಲಸಗಳು ಒಂದು ಹಂತ ಮುಗಿದರೂ ಮತ್ತೊಂದಿಷ್ಟು ನಿಮಗೆ ಬರಲಿದೆ. ಹಿರಿಯರನ್ನು ಪ್ರೀತಿಯಿಂದ ಗೌರವಿಸಿ. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಭವಿಷ್ಯದ ಕುರಿತು ಯೋಚನೆಯನ್ನು ಮಾಡಲಿದ್ದೀರಿ.