Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: Apr 09, 2023 | 5:30 AM

2023 ಏಪ್ರಿಲ್​ 9 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: zeenews.india.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 9 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ತೃತೀಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಸಿದ್ಧಿ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ 05:12 ರಿಂದ 06:44ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:34 ರಿಂದ 02:07ರ ವರೆಗೆಮ ಗುಳಿಕ ಕಾಲ 03:39 ರಿಂದ 05:12ರ ವರೆಗೆ.

ಮೇಷ: ಅಪ್ರಬುದ್ಧರ ಎದುರು ನಿಮ್ಮ ಮನೆಯ ವ್ಯವಹಾರಗಳನ್ನು ಹೇಳಬೇಡಿ. ಅದು ಮತ್ತೇನೋ ಆಗಿ ನಿಮ್ಮ ಮರ್ಯಾದೆಗೆ ಕುತ್ತು ಬರಬಹುದು. ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ಕೊಟ್ಟರೆ ಒಳ್ಳೆಯದು. ಇದರಿಂದ ಅತ್ಯಂತ ಮಹತ್ತ್ವದ ಯೋಜನೆಯು ಪ್ರಾರಂಭವಾಗುತ್ತದೆ. ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ‌. ಇಂದು ನೀವು ನಿಮ್ಮ ತಾಯಿಯೊಂದಿಗೆ ಸಣ್ಣ ಕಾರಣಕ್ಕೆ ಜಗಳವಾಡಬಹುದು. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತುಅಲ ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ.

ವೃಷಭ: ತಂದೆಗೆ ಸಮಾನವಾದವರ ಬಳಿ ಹಿತೋಪದೇಶವನ್ನು ಕೇಳುವಿರಿ. ನೀವು ಉತ್ತಮ ವ್ಯಕ್ತಿಯನ್ನು ಭೇಟಿಯಾಗಿ, ಅವರ ಜೊತ ಕಾಲವನ್ನು ಕಳೆಯುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ನಿಮ್ಮ ಕಾರ್ಯವು ಸಾಧ್ಯವಾಗುವುದು. ನಿಮ್ಮ ಯಶಸ್ಸನ್ನು ಸಹಿಸಲಾಗದೇ ನೊಂದುಕೊಳ್ಳುವವರಿದ್ದಾರೆ. ದಾಂಪತ್ಯಜೀವನದಲ್ಲಿ ವಿವಾದವಾಗುವ ಸಾಧ್ಯತೆ ಇದೆ. ಆರಂಭದಲ್ಲಿಯೇ ಅದನ್ನು ಚಿವುಟಿ ಹಾಕಿ. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯ ಮತ್ತು ಹಣ ಎರಡೂ ನಷ್ಟ ಮಾಡಿಕೊಳ್ಳಬೇಕಾಗಬಹುದು. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ.

ಮಿಥುನ: ಸಂಬಂಧಗಳು ಸಡಿಲವಾಗದಂತೆ ಸಂಭಾಳಿಸಿಕೊಂಡು ಹೋಗಿ. ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸವು ವ್ಯರ್ಥವಾಗಬಹುದು. ಬೇಸರಿಸದೇ ಅದನ್ನು ಆಸ್ವಾದಿಸಿ. ಖುಷಿಯಿಂದ ಇರಬಹುದು. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವರು. ಅವರನ್ನು ಕಂಡು ನಿಮಗೆ ಸಂತೋಷವಾಗಲಿದೆ. ಇಂದು ನೆರೆ ಹೊರೆಯವರ ಜೊತೆ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳಬೇಡಿ. ನಿಮ್ಮ ಇಚ್ಛೆಗೆ ಪೂರಕವಾಗಿಲ್ಲವೆಂದು ಕೋಪಗೊಳ್ಳುವುದು ಬೇಡ. ನಿಮ್ಮ ಕೆಲಸವು ಅನೇಕರಿಗೆ ಇಷ್ಟವಾಗಲಿದೆ.

ಕರ್ಕ: ನಿಮ್ಮ ವೃತ್ತಿಯ ಬಗ್ಗೆ ನಿಮಗೆ ಕೀಳರಿಮೆ ಬರಬಹುದು. ವಿನಾಕಾರಣ ಯಾರ ಮೇಲೂ ಸಿಟ್ಟಾಗಬೇಡಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ. ನೀವು ದೊಡ್ಡ ವ್ಯಕ್ತಿಗಳ ಭೇಟಿಯಾಗಲಿದೆ. ಒಟ್ಟಿಗೆ ಬದುಕುವ ಆನಂದವನ್ನು ಅನುಭವಿಸುವಿರಿ. ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ಶುಭ ಸುದ್ದಿಗಳನ್ನು ಪಡೆಯುವಿರಿ. ಸುಮ್ಮನಿರುವ ಶತ್ರುಗಳನ್ನು ತಟ್ಟಿ ಎಬ್ಬಿಸಬೇಡಿ. ನಿಮ್ಮ ಕಾರ್ಯವನ್ನು ಮೊದಲು ಪೂರ್ತಿ ಮಾಡಿಕೊಳ್ಳಿ. ವಿದೇಶಕ್ಕೆ ಬೇಕಾದ ತಯಾರಿಗಳನ್ನು ಮಾಡುವಿರಿ.