Daily Horoscope: ದೂರ ಪ್ರಯಾಣಕ್ಕೆ ಹೋಗುವವರು ಹಿರಿಯರ ಆಸೀರ್ವಾದ ಪಡೆಯುವುದು ಉತ್ತಮ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 18, 2023 | 12:10 AM

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ದೂರ ಪ್ರಯಾಣಕ್ಕೆ ಹೋಗುವವರು ಹಿರಿಯರ ಆಸೀರ್ವಾದ ಪಡೆಯುವುದು ಉತ್ತಮ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 18 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪುಷ್ಯ, ಯೋಗ: ವ್ಯಾಘಾತ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:26 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ.

ಮೇಷ: ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಇಂದು ನೀವು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿಯು ಇರಲಿದೆ.‌ ನಿಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಬಹುದು. ವ್ಯಾಪಾರವನ್ನು ಬಹಳ ಉತ್ಸಾಹದಿಂದ ಮಾಡುವಿರಿ. ಸಂಗಾತಿಯನ್ನು ಭೇಟಿಯಾಗಲು ಕಾರಣವನ್ನು ಹುಡುಕುವಿರಿ. ತಾಯಿಗೆ ನೋವನ್ನು ಕೊಡುವ ಸಾಧ್ಯತೆ ಇದೆ. ವೃತ್ತಿಯಲ್ಲಿ ನಿಮ್ಮ‌ ಸೇವೆಯು ಗಣನೀಯವಾಗಿರಲಿದೆ. ಏರು ದನಿಯಲ್ಲಿ ಹಿರಿಯ ಜೊತೆ ಮಾತನಾಡುವುದು ನಿಮಗೆ ಶೋಭೆ ತರದು. ನಿಮ್ಮನ್ನು ನಂಬಿಸಿ ಕೆಲಸವನ್ನು ಮಾಡಿಕೊಳ್ಳುವರು.

ವೃಷಭ: ಹಿತವಚನವು ನಿಮಗೆ ಯಾವ ಪರಿವರ್ತನೆಯನ್ನೂ ತರದು. ನಿಮ್ಮದು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಬೇಕಸದೀತು. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗಿ ಸಂತೋಷವಾಗುವುದು. ಹಣದ ಅಭಾವವಿದ್ದರೂ ಖರ್ಚನ್ನು‌ ಮಾಡಬೇಕಾದೀತು. ಮನೆಯಿಂದ ದೂರವಿದ್ದು ಬೇಸರವಾಗಬಹುದು. ನಿಮ್ಮ ಅಭಿಪ್ರಾಯಗಳನ್ನು ಹೇಳಲು ನೀವು ಮುಜುಗರ ಪಡುವಿರಿ. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಾತನಾಡುವಿರಿ.

ಮಿಥುನ: ನೀವು ಏನಾದರೂ ನಿರ್ಧರಿಸಿದರೆ ನಿಮಗೆ ಸಂಪೂರ್ಣ ಬೆಂಬಲವು ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಲಿದ್ದೀರಿ. ವಾತಕ್ಕೆ ಸಂಬಂಧಿಸಿದ ಖಾಯಿಲೆಗಳೂ ಕಾಣಿಸಿಕೊಳ್ಳಬಹುದು. ಭವಿಷ್ಯದ ಬಗ್ಗೆ ಚಿಂತೆ ಇದ್ದರೂ ಬಂದಂತೆ ಸ್ವೀಕರಿಸಬೇಕು ಎನ್ನುವ ನಿರ್ಧಾರವನ್ನೂ ನೀವು ಮಾಡಲಿದ್ದೀರಿ. ಸಂಗಾತಿಯ ಮಾತು ನಿಮಗೆ ಸಿಟ್ಟನ್ನು ತಂದೀತು. ಮಕ್ಕಳ ವಿಚಾರದಲ್ಲಿ ಕರುಣೆ ಬಂದು ಅವರಿಗೆ ಇಷ್ಟವಾದುದನ್ನು ಮಾಡುವಿರಿ. ಕಛೇರಿಯಲ್ಲಿ ನಿಮಗೆ ಸ್ವಲ್ಪ ಬಿಡುವುದು ಸಿಗಲಿದೆ. ಆಟದತ್ತ ನಿಮಗೆ ಗಮನ ಹೆಚ್ವಿರಲಿದೆ. ನಿಮ್ಮ ಬೇಸರವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ.

ಕಟಕ: ನಿಮ್ಮ ಚೌಕಟ್ಟನ್ನು ಬಿಟ್ಟು ಆಚೆ ಇರಲಾರಿರಿ. ನೀವು ಸ್ವಾರ್ಥಿಗಳಂತೆ ತೋರಬಹುದು. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡಬೇಕಾದೀತು. ಮಾತಿನಿಂದ ನೀವು ಗೆಲ್ಲಲು ಯತ್ನಿಸುವಿರಿ. ಆರ್ಥಿಕತೆಗಾಗಿ ನಿರಂತರ ಶ್ರಮಿಸಬೇಕಾದೀತು. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ಪ್ರಯತ್ನಿಸಿ ವಿಫಲರಾಗುವಿರಿ. ಮನೋರಂಜನೆಗೆ ಹೆಚ್ಚಿನ ಸಮಯವನ್ನು ನೀವು ಕೊಡುವಿರಿ. ಇನ್ನೊಬ್ಬರಿಗೆ ಕೊಡುವುದು ನಿಮಗೆ ಇಷ್ಟವಾಗದು. ಆರೋಗ್ಯವು ಸ್ಥಿರವಾಗಿರಲಿದೆ. ಧಾರ್ಮಿಕ ಆಚರಣೆಗಳು ನಿಮಗೆ ಇಷ್ಟವಾಗದ ವಿಚಾರವಾಗಲಿದೆ.

ಸಿಂಹ: ಒಂಟಿಯಾಗಿ ಸುತ್ತಾಡಬೇಕು ಎಂದು ಅನ್ನಿಸಬಹುದು. ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿಂದ ಜನರು ಬರಬಹುದು. ಬಾರದೆಂದು ತಿಳಿದ ಹಣವು ಇಂದು ನಿಮ್ಮ ಕೈ ಸೇರಬಹುದು. ಕರ್ತವ್ಯಗಳತ್ತ ನಿಮ್ಮ ಗಮನವಿರಲಿದೆ. ನಿಮ್ಮ ಮೇಲೆ‌ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ‌ ಹಾಕಲಿದ್ದೀರಿ. ಮಾನಸಿಕ ನೋವನ್ನು ಕೊಡುವಲ್ಲಿ ಇಂದು ಆನಂದವನ್ನು ಹೊಂದುವಿರಿ. ಪ್ರಾಣಿಗಳ‌ ಮೇಲೆ‌ ಪ್ರೀತಿ ಅತಿಯಾಗಬಹುದು. ‌ಅನುಮಾನವನ್ನು ಬಿಟ್ಟು ನೇರವಾಗಿ ಇರಲು ಪ್ರಯತ್ನಿಸಿ. ಇಂದು ನೀವು ಹೆಚ್ಚು ನಗಲಿದ್ದೀರಿ.

ಕನ್ಯಾ: ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಅಧಿಕವಾಗಿ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ದೂರ ಹೋಗುವವರಿದ್ದರೆ ಹಿರಿಯರ ಆಸೀರ್ವಾದವನ್ನು ಪಡೆಯುವುದು ಉತ್ತಮ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಕೆದಕಿ ತೆಗೆಯಬಹುದು. ಸ್ತ್ರೀಸಂಬಂಧವಾದ ಅಪವಾದಗಳೂ ಬರಲಿದೆ. ಸಾರ್ವಜನಿಕ ಕೆಲಸದಲ್ಲಿ ನಿಮಗೆ ಮುಜುಗರವು ಹೆಚ್ಚಾದೀತು. ಆರೋಗ್ಯದ ವಿಚಾರವಾಗಿ ವೈದ್ಯರ ಜೊತೆ ಮಾತನಾಡಿ.‌ ವಿವಾಹವಿಲ್ಲದೇ ನಿಮಗೆ ಬೇಸರವಾದೀತು. ಸಜ್ಜನರ ಜೊತೆ ಸಮಯವನ್ನು ಕಳೆಯುವಿರಿ.