Horoscope: ದಿನಭವಿಷ್ಯ, ಈ ರಾಶಿಯವರು ಲಾಭಕ್ಕಾಗಿ ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳುವ ಸಾಧ್ಯತೆ ಇದೆ, ಎಚ್ಚರ…

| Updated By: Rakesh Nayak Manchi

Updated on: Aug 08, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 08) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ಲಾಭಕ್ಕಾಗಿ ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳುವ ಸಾಧ್ಯತೆ ಇದೆ, ಎಚ್ಚರ...
ಇಂದಿನ ದಿನಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 08 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:48 ರಿಂದ 05:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:03 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38 ರಿಂದ 02:13ರ ವರೆಗೆ.

ಧನು ರಾಶಿ: ಮನೆಯಲ್ಲಿಯೇ ಇದ್ದು ನಿರುಮ್ಮಳವಾಗಿ ಇರುಲಿರುವಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂಜರಿಯುವಿರಿ. ಬಂಧುಗಳ ವಿಯೋಗವಾಗಬಹುದು. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಲು ಇಷ್ಟಪಡುವಿರಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಅದು ಸರಿಮಾಡಿಕೊಳ್ಳುವಿರಿ. ಯಾರಿಗಾದರೂ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಇರಲಿದೆ. ಸಹೋದರಿಗೆ ನೀವು ಧನಸಹಾಯವನ್ನು ಮಾಡುವ ಇಚ್ಛೆ ಉಳ್ಳವರಾಗುವಿರಿ. ನಿಮ್ಮ ಯೋಚನೆಯನ್ನು ಬಲಿಷ್ಠವಾಗಿದ್ದರೂ ಅದನ್ನು ಕ್ರಿಯಾರೂಪಕ್ಕೆ ತರುವುದು ಕಷ್ಟವಾದೀತು.

ಮಕರ ರಾಶಿ: ನಿಮ್ಮ ಕಾರ್ಯದಿಂದ ಶತ್ರುಗಳ ಇಲ್ಲವಾಗುವರು. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ‌ ಪ್ರಗತಿಯಾಗಲಿದೆ. ತಂದೆಯ ಸೇವೆಯನ್ನು ಮಾಡುವ ಮನಸ್ಸು ಆಗಲಿದೆ. ಬೇರೆಯವರ ಮಾತನ್ನು ಪೂರ್ಣವಾಗಿ ನಂಬಲು ನಿಮಗೆ ಇಷ್ಟವಾಗುವುದು. ನಿಮಗೆ ಮಕ್ಕಳಿಂದ ಹೆಚತಚಿ ಸಂತೋಷವು ನಿಮಗೆ ಸಿಗಲಿದೆ. ದುಶ್ಚಟಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವಾಭಿಮಾನವು ನಿಮಗೆ ಕೈ ಕಟ್ಟಿದಂತೆ ಆಗುವುದು. ನಿಮ್ಮ ಗಮನವನ್ನು ಬೇರೆ ಕಡೆ ಸೆಳೆದು ವಂಚಿಸಬಹುದು. ಸ್ನೇಹಿತರ ಜೊತೆ ಪ್ರವಾಸ ಮಾಡುವ ಮನಸ್ಸಾಗಲಿದೆ. ಲಾಭಕ್ಕಾಗಿ ಎಂದು ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳಬೇಕಾದೀತು. ಸಾವಧಾನತೆಯಿಂದ ಇದ್ದರೆ ನಿಮಗೆ ಶುಭವಾಗುವುದು.

ಕುಂಭ ರಾಶಿ: ಉಳಿದಿದ್ದ ಎಲ್ಲ ಸಾಲವನ್ನೂ ತೀರಿಸುವಿರಿ. ಬೆನ್ನು ನೋವು ನಿಮ್ಮನ್ನು ಕಾಡಬಹುದು. ಸಹೋದರನ ಅಸಹಕಾರವು ನಿಮಗೆ ಹಿಂಸೆಯನ್ನು ಕೊಡುವುದು. ಅತಿಯಾದ ಅನಾರೋಗ್ಯವು ಉಂಟಾದರೆ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳೇ ನಿಮ್ಮನ್ನು ಸಂತೋಷವಾಗಿ ಇಡುವುದು. ಇನ್ನೊಬ್ಬರ ಅನವಶ್ಯಕ ವಿಚಾರಕ್ಕೆ ನೀವು ಸಲಹೆಗಾರರಾಗುವುದು ಬೇಡ. ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಗಲಿದೆ. ಹೆಚ್ಚು ಆಯಾಸವಾಗುವ ಕೆಲಸದಿಂದ ನಿಮಗೆ ಆಲಸ್ಯವು ಬೇಗನೆ ಬರಬಹುದು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ. ಆಸ್ತಿಯ ರಕ್ಷಣೆಯನ್ನು ಮಾಡುವುದು ನಿಮಗೆ ಬಹಳ ಕ್ಲಿಷ್ಟ ಎನಿಸಬಹುದು. ಮಧ್ಯಗತಿಯಲ್ಲಿ ಇರುವ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನವು ನಡೆಯುವುದು.

ಮೀನ ರಾಶಿ: ನಿಮ್ಮ ವಿವಾಹವು ಮುಂದೆ ಮಂದೆ ಹೋಗುವುದಕ್ಕೆ ಕಾರಣವನ್ನು ದೈಜ್ಞರಿಂದ ಪಡೆಯಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಓದು ಅಸಮಾಧಾನ ತರಿಸಬಹುದು. ‌ಪ್ರಶಾಂತ ವಾತಾವರಣವನ್ನು ಹುಡುಕುವಿರಿ. ನಿಮ್ಮ ಮಾತೇ ನಿಮಗೆ ಬೇರೆಯವರ ಮೂಲಕ ಬರಬಹುದು. ಹೊಸ ವಾಹನದ ಖರೀದಿಗೆ ಹಣವನ್ನು ಖರ್ಚು ಮಾಡಬೇಕಾದೀತು‌. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರುವುದು. ನಾಯಕರಿಗೆ ಕೆಲವು ತೊಂದರೆಗಳು ಬರಬಹುದು. ನಿಮಗೆ ಕಾರ್ಯದ ಒತ್ತಡ ಇದ್ದರೂ ನಿಮ್ಮವರಿಗೆ ಸ್ವಲ್ಪ ಸಮಯವನ್ನು ಕೊಡುವಿರಿ. ಸಂಗಾತಿಯ ಸಂಪೂರ್ಣ ಬೆಂಬಲವು ಕೆಲಸದಲ್ಲಿ ಉತ್ಸಾಹವನ್ನು ತರುವುದು.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ