ಇಂದಿನ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ರಿಂದ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:36 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:44 ರಿಂದ 05:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ.
ಧನು ರಾಶಿ: ಹಣದ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೆನಿಸಬಹುದು. ನಿಮ್ಮವರನ್ನು ಅವಶ್ಯಕತೆಗಷ್ಟೇ ಬಳಸಿಕೊಳ್ಳುವಿರಿ. ನಿಮ್ಮ ಬಗ್ಗೆ ತಪ್ಪು ಕಲ್ಪನೆಗಳು ಮೂಡಲಿದ್ದು ಅದನ್ನು ಸರಿ ಮಾಡಿಕೊಳ್ಳಲು ಬಯಸುವಿರಿ. ಅನಗತ್ಯ ಕಾರ್ಯಗಳನ್ನು ಮಾಡಲು ಸಮಯವನ್ನು ಕೊಡುವ ಬದಲು ಸದುಪಯೋಗವಾಗುವಂತೆ ಇರಲಿ. ತುರ್ತು ಕಾರ್ಯದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ನೀವು ಆಡಿದ ಮಾತು ನಿಜವೇ ಆಗಿದ್ದರೂ ಕೂಡಲೇ ನಂಬುವುದು ಕಷ್ಟವಾದೀತು. ನಿಮ್ಮ ಸ್ಚಂತ ಕೆಲಸಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರುವಿರಿ. ಅರೋಗ್ಯದ ವಿಚಾರದಲ್ಲಿ ನಿಮ್ಮ ನಿರ್ಲಕ್ಷ್ಯ ಬೇಡ.
ಮಕರ ರಾಶಿ: ಹೂಡಿಕೆಯನ್ನು ಮಾಡುವ ವಿಚಾರವು ನಿಮ್ಮಲ್ಲಿ ಬಲವಾಗಿ ಇರುವುದು. ಅಧಿಕ ಶ್ರಮವಿದ್ದರೂ ಫಲವು ಮಾತ್ರ ಅಲ್ಪವೇ ಸಿಗುವುದು. ದೂರ ಪ್ರಯಾಣದಿಂದ ಪ್ರಯಾಸವಾಗುವುದು. ಇಂದಿನ ನಿಮ್ಮ ಆಲೋಚನೆಗಳಿಗೆ ಹಲವರಿಂದ ಮಾನ್ಯತೆ ಪಡೆಯುವುದು. ದೃಷ್ಟಿ ದೋಷವು ಕಾಣಿಸಿಕೊಳ್ಳಬಹುದು. ಹೆಚ್ಚಿನ ಉತ್ಸಾಹದಿಂದ ಇರುವ ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಸ್ನೇಹಸಂಬಂಧಗಳು ದೂರವಾಗಬಹುದು. ಕೃಷಿಯಲ್ಲಿ ಅಧಿಕ ಆದಾಯವನ್ನು ಪಡೆಯಬೇಕು ಎನ್ನಿಸುವುದು. ನೀರನಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ.
ಕುಂಭ ರಾಶಿ: ನಿಮ್ಮ ಮನಸ್ಸು ಕಿರಿಕಿರಿಯಿಂದ ಹೊರಬರಲು ಸಮಯವನ್ನು ತೆಗೆದುಕೊಳ್ಳುವುದು. ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯನ್ನು ಮುಟ್ಟಲು ಹೆಚ್ಚು ಶ್ರಮ ಹಾಗೂ ಸಮಯವನ್ನು ಕೊಡಬೇಕಾಗುವುದು. ಪ್ರಯಾಣವು ಸುಖಕರ ಎನಿಸದರೂ ಅನಂತರ ಅದರ ನೋವು ನಿಮಗೆ ಗೊತ್ತಾಗುವುದು. ಉತ್ತಮ ಉದ್ಯೋಗದ ಅವಕಾಶವು ಬಂದರೂ ನಿಮ್ಮ ಅಜ್ಞಾನದ ಕೊರತೆಯಿಂದ ಬಿಡುವಿರಿ. ನೀವು ಇಂದು ಅಪರಿಚಿತ ವ್ಯಕ್ತಿಗಳ ನಡುವೆ ಇರುವಿರಿ. ಸಂಗಾತಿಯ ಮಾತುಗಳು ನಿಮಗೆ ಮನಸ್ಸಿಗೆ ನಾಟುವುದು. ಅಸಂಬದ್ಧ ಮಾತುಗಳನ್ನು ಕಡಿಮೆ ಮಾಡಿ. ಕೇಳಿದಷ್ಟಕ್ಕೆ ಮಾತ್ರ ನಿಮ್ಮ ಉತ್ತರವಿರಲಿ.
ಮೀನ ರಾಶಿ: ಆಕಸ್ಮಿಕವಾಗಿ ಅಲ್ಪ ಸಂಪತ್ತು ಬಂದರೂ ಅದು ನಷ್ಟವಾಗಿ ಹೋಗುವುದು. ದಾಂಪತ್ಯದಲ್ಲಿ ಒಲವು ಹೆಚ್ಚಾಗುವುದು. ತಾಳ್ಮೆಯನ್ನು ಕಳೆದುಕೊಳ್ಳುವಷ್ಟು ಕೋಪವು ಬೇಡ. ಹಲವು ಆದಾಯ ಮೂಲಗಳಲ್ಲಿ ಇಂದು ಒಂದು ಮಾತ್ರ ಉಳಿದುಕೊಳ್ಳುವುದು. ಬಂಧುಗಳ ಜೊತೆ ಹಣಕಾಸಿನ ವ್ಯವಹಾರವನ್ನು ಮಾಡಬೇಕಾಗಿ ಬಂದರೆ ಪಾರದರ್ಶಕತೆಯೇ ಮುಖ್ಯವಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಹಲವರಿಂದ ಕೇಳಿ ಮನಸ್ಸು ಭಾರವಾಗುವುದು. ನಿಮ್ಮ ಉದ್ಯಮವನ್ನು ನಿಲ್ಲಿಸುವ ಚಿಂತನೆ ಮಾಡುವಿರಿ. ನಿಮ್ಮ ಆರ್ಥಿಕತೆಯನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ