ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವರಿಯಾನ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:14 ರಿಂದ 07:50ರ ವರೆಗೆ.
ಧನುಸ್ಸು: ನಿಮ್ಮ ಗೌರವಕ್ಕೆ ತೊಂದರೆಯಾಗಲಿದೆ. ನೀವು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟಪಡುವಿರಿ. ವಾಯುವಿಹಾರದಿಂದ ಆರೋಗ್ಯದ ಮೇಲೆ ತೊಂದರೆಯಾಗಲಿದೆ. ರಾಜಕೀಯವಾಗಿ ಬೆಳೆಯಲು ತಂತ್ರಗಳನ್ನು ನೀವು ರೂಪಿಸುವಿರಿ. ಕಛೇರಿಯಲ್ಲಿ ಸ್ತ್ರೀಯರ ಸಹಾಯವನ್ನು ಪಡೆದು ಕೆಲಸವನ್ನು ಮುಗಿಸಿಸುವಿರಿ. ಸಂಗಾತಿಯ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಷಯವು ಬಹಳಷ್ಟು ಇರಲಿದೆ. ಆಗಾಗ ಆರೋಗ್ಯದಲ್ಲಿ ಪರಿವರ್ತನೆಯು ಕಾಣುತ್ತಿದ್ದು ವೈದ್ಯರ ಸಲಹೆಯನ್ನೂ ದೈವಜ್ಞರಿಂದ ಪರಿಹಾರವನ್ನೂ ತಿಳಿದುಕೊಳ್ಳಿ. ಇಷ್ಟದವರಿಗೆ ಏನನ್ನಾದರೂ ಕೊಡಲು ಇಷ್ಟಪಡುವಿರಿ.
ಮಕರ: ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿದೆ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿಕೊಳ್ಳಿ. ಯಾರ ಮೇಲೂ ಉದ್ಧಟತನದ ಮಾತುಗಳನ್ನು ಆಡುವುದು ಉಚಿತವಲ್ಲ. ವಿದ್ಯಾಭ್ಯಾಸವು ಕಾರಣಾಂತರಗಳಿಂದ ನಿಲ್ಲಬಹುದು. ನಿಮಗೆ ಭರವಸೆಯನ್ನು ತುಂಬುವವರು ಬೇಕಾಗಿದ್ದಾರೆ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಗಳತ್ತ ಹೊರಳುವುದು. ನಿಮ್ಮದಲ್ಲದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ.
ಕುಂಭ: ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲೆ ಕಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ನಿಮ್ಮ ಉದ್ಯಮವನ್ನು ಮಾಡಲಿದ್ದೀರಿ. ಆಸ್ತಿಯ ಖರೀದಿಯ ಬಗ್ಗೆ ಖಚಿತ ನಿರ್ಧಾರವನ್ನು ಮಾಡಿಕೊಳ್ಳಿ. ಅನಿರೀಕ್ಷಿತವಾಗಿ ಅಮೂಲ್ಯ ಉಡುಗೊರೆಯನ್ನು ನಿಮ್ಮ ಆಪ್ತರಿಗೆ ಕೊಡುವಿರಿ. ನಿಮ್ಮ ಮೇಲಿನ ವಿಶ್ವಾಸವು ಕಡಿಮೆಯಾಗಲಿದೆ. ಇಷ್ಟಪಟ್ಟವರನ್ನು ಸೇರಿ ಸಂತೋಷಪಡುವಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರಲಿದೆ. ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಬೇಕಾಗಬಹುದು. ಪ್ರಸಿದ್ಧ ನಟರನ್ನು ಭೇಟಿಯಾಗುವಿರಿ.
ಮೀನ: ವಾಹನದಿಂದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭವಿರಲಿದೆ. ವೃತ್ತಿಯಲ್ಲಿ ನಿಮಗೆ ಅಸಹಕಾರವನ್ನು ತೋರಿಸುವರು. ನೀವು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಮನಸ್ಸು ಪರಿವರ್ತನೆಯಾಗುತ್ತ ಇರುವುದು. ಸ್ನೇಹಿತರ ಜೊತೆ ವಿನಾಕಾರಣ ವಾಗ್ವಾದ ಮಾಡುವಿರಿ. ನಿಮಗೆ ವಿರೋಧಿಗಳ ಭಯವು ಕಾಡಬಹುದು. ಸಾಮಾಜಿಕ ಕೆಲಸಗಳನ್ನು ಮಾಡಲು ನೀವು ಹಿಂಜರಿಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ಬಗ್ಗೆ ವಿರೋಧಿಗಳು ದೂರನ್ನು ಸಲ್ಲಿಸಬಹುದು. ಕುಟುಂಬಕ್ಕೆ ನಿಮ್ಮ ಸಹಕಾರವು ಅಲಭ್ಯವಾಗುವುದು.