Daily Horoscope: ಉದ್ಯೋಗಸ್ಥರ ಆದಾಯದಲ್ಲಿ ಹೆಚ್ಚಳ, ಸಾಲಗಳಿಂದ ಮುಕ್ತಿ ಸಾಧ್ಯತೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 22 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವರಿಯಾನ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:14 ರಿಂದ 07:50ರ ವರೆಗೆ.
ಮೇಷ: ಮದುವೆ ಮೊದಲಾದ ಶುಭಸಮಾರಂಭಗಳಿಗೆ ಭೇಟಿಕೊಡುವಿರಿ. ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಆತುರದಲ್ಲಿ ನಿರ್ಧಾರವನ್ನು ಮಾಡಬೇಡಿ. ಮಕ್ಕಳ ಬಗ್ಗೆ ಹೆಚ್ಚು ಅನುಮಾನ ಬೇಡ. ವಿದ್ಯಾರ್ಥಿಗಳು ಓದಿನಿಂದ ಶ್ರೇಯಸ್ಸನ್ನು ಪಡೆಯುವರು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆಪ್ತೆರ ಜೊತೆ ಮೃದುವಾಗಿ ವರ್ತಿಸಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯವಾಗಿರಲಿ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿನ ಮೇಲೆ ನಂಬಿಕೆ ಇರಲಿ. ನಿಮ್ಮನ್ನು ಹೊಗಳಿ ಶೂಲಕ್ಕೆ ಏರಿಸಬಹುದು. ನಿಮ್ಮ ಬಗ್ಗೆ ನಿಮಗೆ ಅರಿವಿರಲಿ.
ವೃಷಭ: ಅನಿರೀಕ್ಷಿತ ಘಟನೆಗಳಿಂದ ನೀವು ಬೆಚ್ಚಿಬೀಳುವಿರಿ. ಹೊಸ ವ್ಯಕ್ತಿಯ ಪರಿಚಯದಿಂದ ಸಂತಸವಾಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಉದ್ಯೋಗಸ್ಥರಿಗೆ ಆದಾಯದಲ್ಲಿ ಅಲ್ಪ ಏರಿಕೆ ಇರಲಿದೆ. ಒತ್ತಡದಲ್ಲಿ ಕೆಲಸಚನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಪಾಲುದಾರಿಕೆಯಲ್ಲಿ ತಾಳ್ಮೆ ಅಗತ್ಯ. ಅವಿವಾಹಿತರಿಗೆ ವಿವಾಹಯೋಗವು ಇರಲಿದೆ. ಯಾರನ್ನೋ ದ್ವೇಷಿಸುವ ಸ್ವಭಾವವು ಬದಲಾಗಲಿ. ಉಚಿತವಾದುದನ್ನು ಪಡೆಯಲು ಶ್ರಮಿಸುವಿರಿ. ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಮಿಥುನ: ನೀವು ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನವನ್ನು ಇಟ್ಟಕೊಳ್ಳುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದೆ. ಮನೆಯವರನ್ನು ಕರೆದುಕೊಂಡು ದೂರದ ಪ್ರಯಾಣವನ್ನು ಮಾಡುವಿರಿ. ಆಸ್ತಿಗಾಗಿ ದಾಖಲೆಗಳನ್ನು ಬದಲಿಸುವ ಯೋಚನೆ ಮಾಡುವಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನವನ್ನು ನಿರೀಕ್ಷಿಸಬಹುದು. ಸಂಗಾತಿಯ ಆದಾಯವನ್ನು ಬಳಸಿಕೊಳ್ಳುವಿರಿ. ನೀವು ವೃತ್ತಿಯನ್ನು ಹೊಸ ರೀತಿಯಲ್ಲಿ ನೋಡುವಿರಿ. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಲಿದೆ.
ಕಟಕ: ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಂದ ಶಾಂತಿ ಇರುವುದು. ಮಕ್ಕಳ ಬಗ್ಗೆ ಅನಾವಶ್ಯಕ ಅನುಮಾನ ಬೇಡ. ಓದುವ ಹವ್ಯಾಸವನ್ನು ಹೆಚ್ಚಿಸಿ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾನ್ಯ ನೀಡಿ. ಹಣದ ಹರಿವು ಇಂದು ಮಂದಗತಿಯಲ್ಲಿ ಇರುತ್ತದೆ. ವ್ಯರ್ಥ ಓಡಾಟದಿಂದ ತೊಂದರೆಯಾಗಲಿದೆ. ಎಷ್ಟೇ ಸಮಾಧನಾ ಇದ್ದರೂ ಒತ್ತಡವೂ ನಿಮಗೆ ಗೊತ್ತಿಲ್ಲದೇ ಇರಲಿದೆ. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವುದು ಉಚಿತವಲ್ಲ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯವು ಸಿಗಲಿದೆ. ಹೆಚ್ಚು ವೃತ್ತಿಗಳಲ್ಲಿ ನಿಮಗೆ ಆಯ್ಕೆಗೆ ಗೊಂದಲವಾಗಬಹುದು.