Horoscope: ಈ ರಾಶಿಯವರಿಗೆ ಶತ್ರು ನಿಗ್ರಹ, ಸರ್ಕಾರಿ ಕೆಲಸ ವಿಳಂಬವಾಗಿ ನಿಮಗೆ ಬೇಸರವಾಗುವುದು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2023 | 12:20 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರಿಗೆ ಶತ್ರು ನಿಗ್ರಹ, ಸರ್ಕಾರಿ ಕೆಲಸ ವಿಳಂಬವಾಗಿ ನಿಮಗೆ ಬೇಸರವಾಗುವುದು
ದಿನಭವಿಷ್ಯ
Image Credit source: iStock Photo
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 23 ) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ:ಮೂಲಾ, ಯೋಗ:ಸೌಭಾಗ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 27 ನಿಮಿಷಕ್ಕೆ,ರಾಹು ಕಾಲ ಬೆಳಿಗ್ಗೆ 09:24 ರಿಂದ 10:54 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:56 ರಿಂದ 03:26 ರವರೆಗೆ, ಗುಳಿಕ ಕಾಲ ಸಂಜೆ 06:23 ರಿಂದ 07:53ರ ವರೆಗೆ.

ಧನು ರಾಶಿ: ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಲಿ ಸಮಯವು ಸಿಗದೇ ಕಷ್ಟವಾಗುವುದು. ಮಿತ್ರನಿಗೆ ಗೊತ್ತಿಲ್ಲದೇ ಹಣವನ್ನು ಪಡೆಯುವಿರಿ. ತಂದೆಯ ಆರೋಗ್ಯವು ವ್ಯತ್ಯಾಸವಾಗಲಿದ್ದು ಸೂಕ್ತ ಚಿಕಿತ್ಸೆಯನ್ನು ಕೊಡಿಸುವಿರಿ. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗವುದು. ಆರೋಪದ ಬಗ್ಗೆ ಏನನ್ನೂ ನೀವು ಹೇಳಲಾರಿರಿ. ಬಂಧುಗಳ ಪ್ರೀತಿಯು ನಿಮಗೆ ಸಿಗುವುದು. ಸಾಲದಿಂದ ಮುಕ್ತರಾಗಲು ನಿಮಗೆ ಸಾಧ್ಯವಾಗದು. ತಾಳ್ಮೆಯನ್ನೂ ನೀವು ಕಳೆದುಕೊಳ್ಳುವಿರಿ. ನೀವು ದ್ವೇಷಿಸುವವರ ಬಳಿಯೇ ಸಹಾಯ ಕೇಳುವಿರಿ. ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಿ.

ಮಕರ ರಾಶಿ: ನಿಮ್ಮ ಬಾಲಿಶವಾದ ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದು. ಬರಬೇಕಾದ ಹಣವು ನಿಮಗೆ ಪೂರ್ತಿಯಾಗಿ ಬರದು. ಚಂಚಲ ಮನಸ್ಸನ್ನು ನಿಯಂತ್ರಿಸಲು ಕಷ್ಟವಾದೀತು. ಇದರಿಂದ ಕೆಲಸದಲ್ಲಿ ಹಿನ್ನಡೆಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು.‌ ನಿಮ್ಮನ್ನು ಕುಟುಂಬವು ನಿರ್ಲಕ್ಷ್ಯಿಸಿದಂತೆ ಕಾಣುವುದು. ಸಂಗಾತಿಯಿಂದ ಶುಭ ಸಮಾಚಾರವು ಇರಲಿದೆ. ಸ್ನೇಹಿತರ ಜೊತೆ ಸುತ್ತಾಟದಿಂದ ಖರ್ಚು ಬರಬಹುದು. ತಮ್ಮ ಗುರುವನ್ನು ಶಿಷ್ಯರು ಭೇಟಿ ಮಾಡಲಿದ್ದು, ಉಡುಗೊರೆಯನ್ನು ನೀಡುವರು. ಹೂಡಿಕೆಯನ್ನು ಮಿತವಾಗಿ ಮಾಡಿ. ನಿಮ್ಮವರೇ ನಿಮಗೆ ಸಹಕಾರ ಕೊಡರು.

ಕುಂಭ ರಾಶಿ: ಇಂದು ಆಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸುವಿರಿ. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ದೃಷ್ಟಿದೋಷವು ನಿಮಗೆ ಅಧಿಕವಾಗಬಹುದು. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಕಳೆದುಹೋಗಬಹದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆಯಾದ ಅನುಮಾನ ಇರುವುದು. ಅನಾರೋಗ್ಯದ ಕಾರಣ ವಿಶ್ರಾಂತಿಯಿಂದ ಅನಿವಾರ್ಯವಾಗುವುದು. ಇನ್ನೊಬ್ಬರ ವಿಷಯದಲ್ಲಿ ಹೊಟ್ಟೆಕಿಚ್ಚು ಇರುವುದು. ದಾಂಪತ್ಯವನ್ನು ಸರಿದೂಗಿಸಿಕೊಳ್ಳುವ ಕಲೆಯು ನಿಮಗೆ ಗೊತ್ತಾಗುವುದು. ಪರಿಚಿತರು ನಿಮ್ಮ ವಸ್ತುವನ್ನು ಕಾಣೆ ಮಾಡುವರು. ವಿವಾಹದ ಮಾತುಕತೆಯು ಗೊಂದಲದಲ್ಲಿ ಮುಕ್ತಾಯವಾಗಬಹುದು. ಕುಲದೇವರ ಆರಾಧನೆಯಲ್ಲಿ ತೊಡಗುವಿರಿ.

ಮೀನ ರಾಶಿ: ಮನೆಯ ಹಿರಿಯರಿಂದ ನಿಮಗೆ ಕಿವಿಮಾತು ಹೇಳುವರು. ನಿಮಗೆ ಗೌರವವು ಪ್ರಾಪ್ತವಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಯಾದೀತು. ಶತ್ರು ನಿಗ್ರಹ. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ರಾಜಕಾರಣಿಗಳ ಕೆಲಸಕ್ಕೆ ಪ್ರಶಂಸೆಯು ಸಿಗುವುದು. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಲಿದೆ. ಸಂಪತ್ತಿನ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದು ಅಸಾಧ್ಯವಾಗುವುದು. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಇನ್ನೊಬ್ಬರಿಗೆ ಕೊಟ್ಟು ಬಿಡುವಿರಿ. ಶಿವಪಂಚಾಕ್ಷರವನ್ನು ಪಠಿಸಿ.