Horoscope: ರಾಶಿಭವಿಷ್ಯ, ಈ ರಾಶಿಯವರು ಉದ್ಯೋಗವಿಲ್ಲವೆಂದು ಸಂಕಟಪಡುತ್ತಿದ್ದರೆ ಉತ್ತಮ ಅವಕಾಶವು ಸಿಗಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 24, 2023 | 12:30 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರು ಉದ್ಯೋಗವಿಲ್ಲವೆಂದು ಸಂಕಟಪಡುತ್ತಿದ್ದರೆ ಉತ್ತಮ ಅವಕಾಶವು ಸಿಗಲಿದೆ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:21 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:28 ರಿಂದ 11:01ರ ವರೆಗೆ.

ಧನು ರಾಶಿ : ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ಸ್ಥಳವು ಸಿಗಬಹುದು. ನಿಮಗೆ ಇಷ್ಟವಾದ ವಿಚಾರವನ್ನು ಬೇಗ ಗ್ರಹಿಸುವಿರಿ. ಉದ್ಯೋಗವಿಲ್ಲವೆಂದು ಸಂಕಟಪಡುತ್ತಿದ್ದರೆ ಉತ್ತಮ ಅವಕಾಶವು ಸಿಗಲಿದೆ. ಮತ್ತೇನನ್ನೂ ವಿಚಾರಿಸದೇ ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ. ನಿಮ್ಮ‌ನಕಾರಾತ್ಮಕ ಆಲೋಚನೆಗಳಿಂದ ಕುಟುಂಬವನ್ನೂ ಕೆಡಸುವುದು ಬೇಡ. ನಿಮ್ಮವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಆರ್ಥಿಕ ವಿಚಾರವನ್ನು ಹೇಳಬೇಕಾದವರಲ್ಲಿ ಹೇಳಿ. ಅಪರಿಚಿತರು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆಯನ್ನು ಕೊಡುವರು. ಪ್ರೀತಿಪಾತ್ರರ ಭೇಟಿಯು ನಿಮಗೆ ನೆಮ್ಮದಿಯನ್ನು ನೀಡಬಹುದು. ಉದ್ಯೋಗದ ಕಾರಣ ಓಡಾಟವು ಇರಬಹುದು.

ಮಕರ ರಾಶಿ : ವೈಯಕ್ತಿಕ‌ ಕೆಲಸಗಳು ಬಹಳಷ್ಟು ಇದ್ದು ಅದನ್ನು ಮಾಡಲು ನಿಮಗೆ ಸಮಯವು ಸಿಗದಾಗುವುದು. ಮಿತ್ರರ ಸಹಾಯದಿಂದ ನಿಮಗೆ ಉತ್ತಮ‌ ಲಾಭವು ಸಿಗಲಿದೆ. ಎಲ್ಲರೆದುರು ನಿಮಗೆ ಅಪಮಾನವಾಗುವ ಸಂದರ್ಭವು ಬರಬಹುದು. ನಿಮಗೆ ಪರಿಚಿತರಾದವರು ಆಪ್ತರಾಗುವರು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದೇ ನಿಮ್ಮ ಮೇಲೆ ಸಿಟ್ಟುಗೊಂಡಾರು. ನಿಮ್ಮ‌ಇಂದಿನ‌ ಸಂಪಾದನೆಯು ಮನೆಯ ಬಳಕಗೇ ಆಗವುದು. ಕುಲದೇವರ ದರ್ಶನವನ್ನು ನೀವು ಮಾಡಲಿದ್ದು ನೆಮ್ಮದಿ ಇರುವುದು.‌ ಗೆಳೆತನದಿಂದ ಸಲ್ಲದ ಮಾತುಗಳು ನಿಮ್ಮ ಬಗ್ಗೆ ಬರಬಹುದು. ನಿಮ್ಮ ಗುಣಗಳನ್ನು ದುರುಪಯೋಗ ಮಾಡುವರು. ಮಕ್ಕಳು‌ ನಿಮ್ಮ ಮಾತನ್ನು ಕೇಳಲಾರರು.

ಕುಂಭ ರಾಶಿ : ವೃತ್ತಿಯನ್ನು ಹೊರತುಪಡಿಸಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಒಳ ಜಗಳವು ಇಂದು ಹೊರಬರುವುದು. ನಿಮ್ಮನ್ನು ನಂಬಿಕೊಂಡವರಿಗೆ ಕಷ್ಟವಾದೀತು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಇದ್ದರೂ ನಿಮಗೆ ಸಮಾಧಾನ ಇರದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ನೀಡುವಿರಿ. ಸಿಟ್ಟನ್ನು ಮಾಡಬಾರದು ಎಂದುಕೊಂಡರೂ ಸಂದರ್ಭವು ನಿಮ್ಮ ನಿರ್ಧಾರವನ್ನು ಬದಲಿಸುವುದು. ಮಕ್ಕಳಿಂದ ನೆಮ್ಮದಿಯು ಸಿಗುವುದು. ವ್ಯವಹಾರವನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಲು ನೀವು ಸೋಲಬಹುದು. ನಿಮ್ಮ ಗುರಿಯನ್ನು ತಲುಪಲು ನಿಮಗೆ ವಿಘ್ನಗಳು ಬರಬಹುದು.

ಮೀನ ರಾಶಿ : ನಿಮ್ಮ ಕಾರ್ಯವು ಆಗಬೇಕಾದರೆ ತಿರುಗಾಟವನ್ನು ಮಾಡುವುದು ಅನಿವಾರ್ಯ. ನೀವು ಇಂದು ಉತ್ಸಾಹದಿಂದ ಇರುವಿರಿ. ನಿಮಗಾಗದವರನ್ನು ಮುಖಾಮುಖಿಯಾಗುವ ಸಂದರ್ಭವು ಬರುವುದು. ಇಬ್ಬರ ನಡುವೆ ವಾಗ್ವಾದವೂ ಆಗಲಿದೆ. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಮಾತೇ ನಿಮಗೆ ತೊಂದರೆಯನ್ನು ತರುವುದು. ಸಂಗಾತಿಯು ಇತರರನ್ನು ಹೋಲಿಸಿಕೊಂಡು ಮಾತನಾಡುವರು. ಒಂದೊಂದು ರುಪಾಯಿಯನ್ನೂ ಬಹಳ ಜೊಪಾನ ಮಾಡುವಿರಿ. ನಿಮ್ಮ ಉತ್ಸಾಹವನ್ನು ಭಂಗ ಮಾಡುವ ಮಾತುಗಳು ನಿಮ್ಮ ನಡುವೇ ಬರಬಹುದು. ವಿಚಲಿತರಾಗುವ ಸಾಧ್ಯತೆ ಇದೆ.

-ಲೋಹಿತಶರ್ಮಾ – 8762924271 (what’s app only)