Horoscope Today 19 November : ಇಂದು ಈ ರಾಶಿಗೆ ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು

ದಿನ ಭವಿಷ್ಯ, 19, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ಚತುರ್ದಶೀ ತಿಥಿ ಬುಧವಾರ ಕೈತುಂಬ ಕಾರ್ಯ, ಸುಖ ನಿದ್ರೆ, ಕುಟುಂಬದ ಪ್ರೀತಿ, ವಸ್ತುಗಳ ನಷ್ಟ, ಧಾರ್ಮಿಕ ಆಚರಣೆ, ಸ್ವಾರ್ಥದ ಆಲೋಚನೆ, ಸ್ಥಾನಕ್ಕಾಗಿ ಕಿತ್ತಾಟ ಇವೆಲ್ಲ ಇಂದಿನ ವಿಶೇಷ‌.

Horoscope Today 19 November : ಇಂದು ಈ ರಾಶಿಗೆ ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು
ದಿನ ಭವಿಷ್ಯ
Edited By:

Updated on: Nov 19, 2025 | 12:13 AM

ಮೇಷ ರಾಶಿ:

ಸೃಜನಶೀಲತೆ, ದಯೆ, ಕರ್ತವ್ಯ ಎರಡೂ ಮಿಶ್ರವಾಗಿ ಕಾಣುತ್ತದೆ. ಕೆಲಸದಲ್ಲಿ ಶುಭ ಸುದ್ದಿ ಅಥವಾ ಅನಿರೀಕ್ಷಿತ ಅವಕಾಶ. ದಿನದ ಕಾರ್ಯದಲ್ಲಿ ಅಡೆತಡೆಯಾಗಲಿದೆ. ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತ್ತದೆಂಬ ಭಯ. ಬೇಕಾದುದನ್ನು ಹಣ ಕೊಟ್ಟೇ ಪಡೆಯುವಿರಿ. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ಬಹಳ‌ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಆಗಬಹುದು. ಕೃಷಿಯಲ್ಲಿ ಆದ ಪ್ರಗತಿಯಿಂದ ಸಂತೋಷ. ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಲ್ಲಿ ನಿಮ್ಮ ಪ್ರಯತ್ನವೂ ಬೇಕು. ಇಂದು ನಿಮ್ಮ ನಿಮ್ಮವರ ವಿವಾಹದ ಬಗ್ಗೆ ಮಾತುನಾಡಲು ಹೋಗಲಿದ್ದೀರಿ. ಕುಟುಂಬದಲ್ಲಿ ಪ್ರೀತಿ, ಮಮತೆ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ದೇಹದ ದಣಿವು. ನಿಮ್ಮ ದಾಖಲೆಗಳನ್ನು ಬಹಳ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುವುದು. ಯಾರಾದರೂ ನಿಮ್ಮ ಪವಿತ್ರ ಭಾವನೆಯನ್ನು ಮಲಿನ ಮಾಡಬಹುದು.

ವೃಷಭ ರಾಶಿ:

ಕಾರ್ಯದಲ್ಲಿ ತಿದ್ದುಪಡಿ ಅಗತ್ಯವಾದರೂ ಅಂತಿಮ ಫಲ ಒಳ್ಳೆಯದಾಗುತ್ತದೆ. ಇಂದು ನೀವು ಗೌಪ್ಯವಾಗಿ ಸಮಾಲೋಚನೆ ನಡೆಸಿ ಮುಂದಿನ ಯೋಜನೆಯನ್ನು ಹೇಳುವಿರಿ. ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ಮನೆಯಲ್ಲಿ ಸಣ್ಣ ವಿಚಾರಕ್ಕೆ ನೀವು ವಿವಾದ ಮಾಡಿಕೊಳ್ಳುವಿರಿ. ನಿಮ್ಮ ನೆಮ್ಮದಿಯನ್ನು ಸಂಗಾತಿಯು ಭಂಗ ಮಾಡಬಹುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಸ್ಪಷ್ಟತೆ ಇರದು. ವಂಚನೆಯಲ್ಲಿ ಗೊತ್ತಾಗದಂತೆ ಸಿಕ್ಕಿಕೊಳ್ಳುವಿರಿ. ಹಲವು ನಕಾರಾತ್ಮಕ ಯೋಚನೆಯ ನಡುವೆಯೂ ಸಕಾರಾತ್ಮಕತೆ ಇರಲಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು. ಕುಟುಂಬದಲ್ಲಿ ಸ್ವಲ್ಪ ಅಂತರ ಇರಬಹುದು. ಆರೋಗ್ಯದಲ್ಲಿ ಕಣ್ಣಿನ ಬಗ್ಗೆ ಎಚ್ಚರಿಕೆ ಬೇಕು. ನಿಮಗೆ ಕೃತಜ್ಞತೆ ಇರಲಿ. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು.

ಮಿಥುನ ರಾಶಿ:

ಶಿಸ್ತು, ನಿಯಮ, ಕ್ರಮಬದ್ಧತೆಗೆ ಮಹತ್ವ. ಕೆಲಸದಲ್ಲಿ ನಿಮ್ಮ ಗಂಭೀರ ಸ್ವಭಾವವೇ ದೊಡ್ಡ ಬಲ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ಅನಿರೀಕ್ಷಿತವಾಗಿ ಧನವ್ಯಯವಾಗಿದ್ದು ಆತಂಕವು ಆಗಲಿದೆ. ರಾಜಕೀಯದಿಂದ ನೀವು ಪ್ರೇರಣೆ ಪಡೆಯುವಿರಿ. ಮನಸ್ಸಿನ ಜಾಡ್ಯಕ್ಕೆ ನಿರಂತರ ಪ್ರೇರಣೆ ಅಗತ್ಯ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಹಣದಲ್ಲಿ ಖರ್ಚು ಹೆಚ್ಚಾಗುವ ಸೂಚನೆಯಿದ್ದು ಅದನ್ನು ನಿಯಂತ್ರಿಸುತ್ತೀರಿ. ಕುಟುಂಬದಲ್ಲಿ ಹಿರಿಯರ ಮಾತು ಉಪಯುಕ್ತ. ಪ್ರಭಾವೀ ಜನರ ಭೇಟಿಯಿಂದ ಅನೇಕ ಲಾಭವನ್ನು ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಸಣ್ಣ ಕೊಡುಗೆ ನೀಡುವಿರಿ.

ಕರ್ಕಾಟಕ ರಾಶಿ:

ಕಲಿಕೆ, ನೂತನ ಚಟುವಟಿಕೆ, ಚಿಂತನೆಗಳಿಗೆ ದಿನ. ನಿಮ್ಮ ಮನಸ್ಸು ಬಹಳ ಚುರುಕಾಗಿ ಕಾರ್ಯಮಾಡುವುದು. ಕೆಲಸದಲ್ಲಿ ಹೊಸ ಯೋಜನೆಗೆ ಆರಂಭದ ಶೂರತ್ವವಿರಲಿದೆ. ಮನಸ್ಸಿಗೆ ಯೋಗ್ಯರಾದವರ ಜೊತೆ ಮಾತ್ರ ಬಿಚ್ಚುಮನಸ್ಸಿನಿಂದ ಇರುವಿರಿ. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಪ್ರಶಂಸೆಯಿಂದ ಸಣ್ಣ ಅಹಂಕಾರವು ಬರಬಹುದು. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಗುಣಮಟ್ಟವನ್ನು ಉದ್ಯಮದಲ್ಲಿ ಕಾಯ್ದುಕೊಳ್ಳಲು ಯೋಚಿಸಿ. ದೌರ್ಬಲ್ಯವನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಡವು ಸಾಧಿಸುವಿರಿ. ಹಣಕಾಸಿನಲ್ಲಿ ಸಹಕಾರ, ಉತ್ತಮ ಫಲ. ಕುಟುಂಬದಲ್ಲಿ ಸಂತೋಷದ ಮಾತುಕತೆ. ಪೂರ್ವಯೋಜಿತ ಕಾರ್ಯಕ್ಕೂ ನೀವು ಸಮಯವನ್ನು ಹೊಂದಿಸಿಕೊಳ್ಳಲಾಗದು. ನಿಮಗೆ ಎಲ್ಲವನ್ನೂ ಪ್ರತಿಭಟಿಸುವ ಮನೋಭಾವ ಬರುವುದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು.

ಸಿಂಹ ರಾಶಿ:

ನಿಮ್ಮ ಚಿಂತನೆ, ಕೆಲಸ, ಮಾತು ಎಲ್ಲವೂ ಬಲವಾಗಿರುತ್ತದೆ. ಕೆಲಸದಲ್ಲಿ ಸ್ಪರ್ಧೆ ಹೆಚ್ಚಿರಬಹುದು, ಆದರೆ ನೀವು ಅದನ್ನೂ ಗೆಲ್ಲುತ್ತೀರಿ. ನಂಬಿಕೆ ಇದ್ದವರು ಇರುತ್ತಾರೆ.‌ ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ದಾನವೇ ನಿಮಗೆ ಕುತ್ತನ್ನು ತರುವ ಸಾಧ್ಯತೆ ಇದೆ. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು. ಕುಟುಂಬದಲ್ಲಿ ಅಲ್ಪ ಸಿಟ್ಟು ಬರಬಹುದು. ಅದನ್ನು ತಡೆದರೆ ದಿನ ಸುಗಮ. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. ಬೇಗ ಮುಗಿಯುವ ಕೆಲಸವನ್ನು ಮೊದಲು ಮಾಡಿ. ಸಹೋದರನ ಆರೋಗ್ಯವು ಕೆಡಬಹುದು.

ಕನ್ಯಾ ರಾಶಿ:

ನೀವು ಇಂದು ಸೌಂದರ್ಯ ರಕ್ಷಣೆಗೆ ಒತ್ತು ನೀಡಬೇಕಾಗುವುದು. ಬುದ್ಧಿವಂತಿಕೆಯಿಂದ ಮಾಡಿದ ನಿರ್ಧಾರಗಳು ಫಲಕಾರಿ. ಕೆಲಸದಲ್ಲಿ ಎರಡು, ಮೂರು ಕಾರ್ಯಗಳು ಒಂದೇ ಸಮಯದಲ್ಲಿ ಬರಬಹುದು, ಆದರೆ ನೀವು ನಿಭಾಯಿಸಬಲ್ಲಿರಿ. ಯಾರದೋ ಹಂಗಿನಿಂದ ದೂರವಿರಲು ಬಯಸುವಿರಿ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ದೇವರ ಮೇಲೆ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥವು ಪೂರ್ತಿಯಾಗಿದ್ದು ನಿಮಗೆ ಅತಿಶಯ ಸಂತೋಷವಾಗಲಿದೆ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಕೆಲವು ಸಂದರ್ಭಗಳು ನಿಮ್ಮನ್ನು ದಾರಿ ತಪ್ಪಿಸಬಹುದು. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಗುವುದು. ಹಣದಲ್ಲಿ ಜಾಗರೂಕತೆ ಅಗತ್ಯ. ಕುಟುಂಬದಲ್ಲಿ ಸಂವಾದ ಹೆಚ್ಚಿಸಬೇಕು. ಆರೋಗ್ಯದಲ್ಲಿ ಮಾನಸಿಕ ಒತ್ತಡ ಸ್ವಲ್ಪ ಇರಬಹುದು. ನಿಮ್ಮ ಸ್ಥಾನವನ್ನು ಬೇರೆಯವರು ಆಕ್ರಮಿಸಿಕೊಳ್ಳುವರು. ಒಂದೇ ಕಾರ್ಯಕ್ಕೆ ಯೋಜನೆಗಳು ಹಲವು ಇರುವುವು.

ತುಲಾ ರಾಶಿ:

ನಿಮ್ಮ ವಿಶ್ಲೇಷಣೆಯ ಸಾಮರ್ಥ್ಯ ಹೆಚ್ಚಾಗಿ ಕೆಲಸ ಮಾಡುತ್ತದೆ. ಪುಸ್ತಕ, ದಾಖಲೆ, ಯೋಜನೆಗಳು, ಪರೀಕ್ಷೆ ಇದೆಲ್ಲಕ್ಕೂ ಇದು ಉತ್ತಮ ದಿನ. ಹಣದ ಸ್ಥಿತಿಯಲ್ಲಿ ಉತ್ತಮ ಬದಲಾವಣೆ. ಕುಟುಂಬದಲ್ಲಿ ಶಾಂತಿ. ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಸಹೋದ್ಯೋಗಿಗಳು ಸುಮ್ಮನೇ ಕಿರಿಕಿರಿ ಮಾಡುವರು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಯಾರ ಮೇಲೂ ದ್ವೇಷ ಬೇಡ. ಸಿಟ್ಟು ಬಂದರೆ ತೋರಿಸಿ, ಯಥಾಸ್ಥಿತಿಯಲ್ಲಿ‌ ಇರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು. ನಿಮ್ಮದೇ ಆದ ಸಂಸ್ಥೆಯನ್ನು ಆರಂಭಿಸಲು ಕೆಲವರನ್ನು ಸೇರಿಸಿಕೊಳ್ಳುವಿರಿ. ಸಂಬಂಧಗಳಲ್ಲಿ ಅತಿಯಾದ ವಿಶ್ಲೇಷಣೆ ಮಾಡಬೇಡಿ; ಅದು ದೂರವನ್ನು ಸೃಷ್ಟಿಸಬಹುದು. ಆರೋಗ್ಯದಲ್ಲಿ ಅಲರ್ಜಿ ಅಥವಾ ಚರ್ಮ ಸಂಬಂಧಿತ ಸಮಸ್ಯೆ.

ವೃಶ್ಚಿಕ ರಾಶಿ:

ನಿಮಗೆ ನಿಮ್ಮದೇ ವೇಗ ಇಂದು ಇರುವುದು. ಸಭೆ, ಮಾತನಾಡುವಿಕೆ, ನಿರ್ಧಾರಗಳಿಗೆ ಇದು ಶ್ರೇಷ್ಠ ದಿನ. ನಿಮ್ಮ ಗೌರವ ಹೆಚ್ಚಾಗುವ ಸೂಚನೆ. ರಾಜಕೀಯ ವ್ಯಕ್ತಿಗಳ ವಿರುದ್ಧ ಸುಳ್ಳು ಸುದ್ದಿಗಳು ಬರಬಹುದು. ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಕುಟುಂಬದ ಗುಟ್ಟನ್ನು ಬಿಟ್ಟುಕೊಡಬಾರದು. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಮಹಾತ್ಮರ ಸೇವೆಗೆ ಅನಿರೀಕ್ಷಿತ ಅವಕಾಶವು ಸಿಗಲಿದೆ. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು. ಹಣಕಾಸಿನಲ್ಲಿ ಅಭಿವೃದ್ಧಿ ಇದ್ದರೂ ದೊಡ್ಡ ಹೂಡಿಕೆ ಮಾಡಬೇಡಿ. ಮನಸ್ಸಿನಲ್ಲಿ ಹಳೆಯ ಯಶಸ್ಸಿನ ಸ್ಮರಣೆ ಸಂತೋಷ ಕೊಡುತ್ತದೆ. ಆರೋಗ್ಯದಲ್ಲಿ ಬೆನ್ನು ಮತ್ತು ಭುಜ ನೋವುವನ್ನು ಗಮನಿಸಬೇಕು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

ಧನು ರಾಶಿ:

ಭಾವನಾತ್ಮಕವಾಗಿ ನೀವು ತುಂಬಾ ಬಲವಾಗಿರುವ ದಿನ. ಮನೆಯ ವಿಚಾರಗಳು, ಕುಟುಂಬದ ಸದಸ್ಯರ ಬಗ್ಗೆ ಹೆಚ್ಚು ಕಾಳಜಿ ತೋರಿಸುವಿರಿ. ಕೆಲಸದಲ್ಲಿ ಹಿರಿಯರಿಂದ ಮಾರ್ಗದರ್ಶನ ಸಿಗುವುದು ನಿಮಗೆ ದೊಡ್ಡ ಬಲ. ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಸಮಾರಂಭದಲ್ಲಿ ಸಂತೋಷದಿಂದ ಇರಲಾಗದು. ಸಂಬಂಧದಲ್ಲಿ ಹಳೆಯ ವಿಷಯಗಳನ್ನು ನೆನೆದು ಚಿಂತೆ ಮಾಡಬೇಡಿ. ಆರೋಗ್ಯದಲ್ಲಿ ನೀರಿನ ಕೊರತೆ, ದೇಹದ ದಣಿವು ತಪ್ಪಿಸಿ. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು. ನಿಮ್ಮ ಸಾಮರ್ಥ್ಯವನ್ನು ಎಲ್ಲಿಯೋ ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಇಂದು ಮೋಸದ ಕರೆಗಳಿಂದ ವಂಚನೆಯ ಜಾಲಕ್ಕೆ ಸಿಕ್ಕಿಕೊಳ್ಳಬಹುದು. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳು ತಿರಸ್ಕರಿಸಬಹುದು. ‌

ಮಕರ ರಾಶಿ:

ಬರವಣಿಗೆ, ಸಂಭಾಷಣೆಗಳಲ್ಲಿ ನೀವಾಡುವ ಮಾತುಗಳೇ ದಿನದ ಗೆಲುವು ಸಾಧಿಸುವುದು. ಹಣಕಾಸಿನಲ್ಲಿ ಲಾಭದ ಲಕ್ಷಣ. ಮಕ್ಕಳ ಕುರಿತು ನಿಮಗೆ ಅಭಿಮಾನ ಮೂಡಬಹುದು. ಪ್ರಯಾಣವು ಅಹಿತವೆನಿಸಬಹುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮನ್ನು ಗುರುತಿಸುವರು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ಅನುಭವಿಸಬೇಕಾದ್ದನ್ನು ಅನುಭವಿಸಿಯೇ ತೀರಬೇಕು. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ. ಖುಷಿಯಾಗಿರಲು ನಾನಾ ಮಾರ್ಗಗಳನ್ನು ಹುಡುಕುವಿರಿ. ಯಾರಿಗೋ ನೀಡಿರುವ ಮಾತುಗಳನ್ನು ಮರೆಯಬೇಡಿ. ಕುಟುಂಬದಲ್ಲಿ ಸಹಕಾರ ದೊರೆತರೂ ಸ್ವಲ್ಪ ಬುದ್ಧಿವಾದದ ಸಂವಾದ ಅಗತ್ಯ. ತಾಳ್ಮೆಯಲ್ಲಿ ಇಂದು ನೀವು ಉತ್ತೀರ್ಣರಾಗುವುದು ಕಷ್ಟ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ. ಧಾರ್ಮಿಕ ಆಚರಣೆಗಳನ್ನು ಬಹಳ ಶ್ರದ್ಧೆ ಭಕ್ತಿಯಿಂದ ಮಾಡುವಿರಿ.

ಕುಂಭ ರಾಶಿ:

ನಿಮಗೆ ಧೈರ್ಯ ಮತ್ತು ಶಾಂತಿಯ ಮಿಶ್ರದ ದಿನ. ಆಗಾಗ ನೀವು ತಾಳ್ಮೆ ಹಾಳಾಗುವ ಸಂದರ್ಭ ಬರಬಹುದು, ಆದರೆ ಅದನ್ನು ಸಮತೋಲಗೊಳ್ಳಲಿದೆ. ಆರ್ಥಿಕ‌ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಹೆಜ್ಜೆ ಇಡಬಹುದು. ಇಂದು ಏನಾದರೂ ಆಗುತ್ತದೆ ಎಂಬ ಅಪಾಯವು ಇರಲಿದೆ. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ಕೆಲಸದಲ್ಲಿ ನಿಮಗೆ ಬಂದಿರುವ ಗೊಂದಲಗಳು ನಿಧಾನವಾಗಿ ಪರಿಹಾರವಾಗುತ್ತವೆ. ಹಣದ ವಿಷಯದಲ್ಲಿ ಬಹಳ ಸಮಾಧಾನಕರ ಕ್ಷಣ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಪ್ರಶಂಸನೀಯವೇ. ನಿಮ್ಮದೇ ವಚನವನ್ನು ಮುರಿಯಬೇಕಾದೀತು. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲವೂ ಇರುವುದು.‌ ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ವಿದೇಶ ಪ್ರವಾಸಕ್ಕೆ ವಿಘ್ನಗಳು ಬರಬಹುದು.

ಮೀನ ರಾಶಿ:

ಕೆಲಸದ ಜವಾಬ್ದಾರಿಗಳು ಹೆಚ್ಚಾದರೂ, ನಿಮ್ಮಲ್ಲಿ ಇರುವ ನಾಯಕತ್ವ ಗುಣವು ನಿಮಗೆ ಲಾಭ ಕೊಡುತ್ತದೆ. ಹಿರಿಯರು ನಿಮ್ಮ ಕೆಲಸವನ್ನು ಗಮನಿಸಿ ಮೆಚ್ಚುವ ಸಾಧ್ಯತೆ ಇದೆ. ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಬಂಧುಗಳ ಆರೋಗ್ಯದ ಆರೈಕೆಯಲ್ಲಿ ನೀವು ತೊಡಗುವಿರಿ. ಅವಾಚ್ಯ ಮಾತುಗಳಿಂದ ನಿಂದನೆಗೆ ಒಳಗಾಗಬಹುದು.‌ ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳಲು ಭಯವಾಗಬಹುದು. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯಲ್ಲಿ ಮಗ್ನರಾಗುವುದು ಬೇಡ. ನಾಯಕತ್ವವನ್ನು ನೀವು ಸ್ವತಂತ್ರದ ಕಾರಣ ನಿರಾಕರಿಸುವಿರಿ. ಕುಟುಂಬದಲ್ಲಿ ಒಮ್ಮೊಮ್ಮೆ ಅಭಿಪ್ರಾಯ ಬೇಧ ಕಾಣಬಹುದು; ಆದರೆ ನಿಮ್ಮ ಸಮಾಧಾನಕರ ಮಾತಿನಿಂದ ವಿಷಯ ಸರಿ ಬರುತ್ತದೆ. ಹೊಸತನ್ನು ಕಲಿಯಲು ಹಿಂದೇಟು ಹಾಕುವುದಿಲ್ಲ. ನಿಮಗೆ ಸಿಕ್ಮಿದ್ದನ್ನು ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ.

19 ನವೆಂಬರ್​ 2025ರ ಬುಧವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ವಿಶಾಖಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಆಯುಷ್ಮಾನ್, ಕರಣ : ತೈತಿಲ, ಸೂರ್ಯೋದಯ – 06 – 21 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:06 – 13:31, ಗುಳಿಕ ಕಾಲ 10:39 – 12:05, ಯಮಗಂಡ ಕಾಲ 07:47 – 09:13

-ಲೋಹಿತ ಹೆಬ್ಬಾರ್-8762924271 (what’s app only)