
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ – 06 : 05 am, ಸೂರ್ಯಾಸ್ತ – 07 : 02 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ12:34 – 14:11, ಯಮಘಂಡ ಕಾಲ 07:43 – 09:20, ಗುಳಿಕ ಕಾಲ 10:57 – 12:34
ಮೇಷ ರಾಶಿ: ಬಲದಿಂದ ವಶ ಕಷ್ಟವಾದರೆ ಭಾವದಿಂದ ಸಾಧ್ಯ. ಇಂದು ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಆದರೆ ನಿಮ್ಮ ಆರೋಗ್ಯವನ್ನೂ ನೀವು ಉಳಿಸಿಕೊಳ್ಳಬೇಕಾಗುವುದು. ನಿಮ್ಮ ಬಟ್ಟೆಯನ್ನು ಕಂಡು ನಿಮ್ಮನ್ನು ಅಳೆಯಬಹುದು. ಅಂಧಾನುಕರಣೆ ಬೇಡ. ಸಮಾರಂಭಕ್ಕೆ ಹೋಗುವಾಗ ಉತ್ತಮ ಬಟ್ಟೆಯು ಇರಲಿ. ಕಾರ್ಯವಾಗದಿದ್ದಾಗ ಬೇಸರ, ಹತಾಶೆ ಕಾಣಿಸುವುದು. ಸ್ತ್ರೀಯರಿಗೆ ತವರುಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ. ತಿಳಿವಳಿಕೆ ಇಲ್ಲದ ಕೆಲಸದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಿ. ವಾಹನವನ್ನು ಖರೀದಿಸುವಾಗ ಅವಶ್ಯಕತೆಯ ಬಗ್ಗೆ ಅರಿವಿರಲಿ. ನಂಬಿದವರಿಗೆ ಭರವಸೆಯ ಮಾತನ್ನಾದರೂ ಕೊಡಿ. ಕೂಲಂಕಷ ಅಧ್ಯಯನ ಮುಖ್ಯ. ಹಲವು ಸಂಗತಿಗಳು ಇಂದು ಸಂಗಾತಿಯ ಕಡೆಯಿಂದ ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಕೆಲಸವು ಎಂತದ್ದೇ ಆಗಿದ್ದರೂ ಇಂದು ಮಾಡಲಾರಿರಿ. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಗೌಪ್ಯತೆಯ ವಿಚಾರದಲ್ಲಿ ಮೆಚ್ಚುಗೆ.
ವೃಷಭ ರಾಶಿ: ಹೇಳಿದ್ದಷ್ಟನ್ನೇ ಮಾಡಿದರೆ ಎಲ್ಲಿಗೂ ಹೋಗಲಾರಿರಿ. ಇಂದು ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ಸಾಲವನ್ನು ಮಾಡಬೇಕಾಗಿ ಬಂದರೆ ಅಗತ್ಯವನ್ನು ನೋಡಿ ಮಾಡಿ. ನಿಮಗೆ ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವವಾಗಬಹುದು. ಮನಸ್ಸು ಒಂದು ಕಡೆ ನಿಲ್ಲದೇ ಓಡಾಡುವುದು. ಕಳೆದುಕೊಂಡದ್ದನ್ನು ಪಡೆಯುವ ಹಠವಿರುವುದು. ಅದು ನಿಮ್ಮ ವ್ಯಕ್ತಿತ್ವವನ್ನೂ ತೋರಿಸುವುದು. ಪ್ರೀತಿಸುವವರನ್ನು ಮುಕ್ತವಾಗಿ ಬಿಡುವಿರಿ. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಕೆಟ್ಟ ಕನಸು ನಿಮ್ಮ ಚಿಂತಿತರನ್ನಾಗಿ ಮಾಡುವುದು. ನೀವಿಂದು ಕಷ್ಟದ ಕೆಲಸವನ್ನು ಸುಲಭವಾಗಿ ಮಾಡುವ ವಿಧಾನವನ್ನು ಹುಡುಕುವಿರಿ.ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಹುಡುಗಾಟ ಬುದ್ಧಿಯನ್ನು ಕಡಿಮೆ ಮಾಡುವುದು ಒಳ್ಳೆಯದು. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ: ನಿಮ್ಮ ಬಗ್ಗೆ ಇತರರು ಅಧ್ಯಯನ ಮಾಡಬಹುದು. ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ನಿಮ್ಮ ಮಗುವಿನ ಬಗ್ಗೆ ನೀವು ಹೆಮ್ಮೆಪಡುತ್ತೀರಿ. ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಐತಿಹಾಸಿಕ ದೇವಾಲಯವನ್ನು ನೋಡುವ ಹಂಬಲವಿರುವುದು. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಲಿದೆ. ಅತಿಯಾದರೆ ಅಮೃತವೂ ವಿಷ. ದುರಭ್ಯಾಸವು ಗೊತ್ತಾಗದಂತೆ ನಿಮಗೆ ಬರಲಿದೆ. ಬಿಡಿಸಲು ಮನೆಯವರ ಪ್ರಯತ್ನ ಮಾಡುವರು. ಅಹಂಕಾರದಿಂದ ಮುಗ್ಗರಿಸಿ ಬೀಳುವಿರಿ. ನೀವು ನಿಮ್ಮ ಬಗ್ಗೆ ಮಾಡಿಕೊಳ್ಳುವ ಸಮರ್ಥನೆಯು ಅಹಂಕಾರವೆನಿಸುವುದು. ಮಂದಗತಿಯಲ್ಲಿ ಸಾಗುವ ಜೀವನ ಎಂದು ಮೂದಲಿಸದೇ ಖುಷಿಯಿಂದ ಮುನ್ನಡೆಯಿರಿ. ಸಂತೋಷವು ಸಿಗಲಿದೆ. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು. ಎಲ್ಲ ಕಾರ್ಯಗಳನ್ನು ಭಯದಿಂದ ಮಾಡುವಿರಿ.
ಕರ್ಕಾಟಕ ರಾಶಿ: ಮಕ್ಕಳಿಗೆ ಬೇಕೆಸಿನಿಸಿದ್ದನ್ನು ಕೂಡಲೆ ಕೊಡಲು ಹೋಗುವಿರಿ. ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಯಾರನ್ನೂ ಅವಲಂಬಿಸಬೇಕು ಅನ್ನಿಸದು. ನೀವು ಹಣಕಾಸಿನ ಲಾಭವನ್ನು ಆನಂದಿಸುವ ಸಾಧ್ಯತೆ ಇದೆದೆ. ಹುಟ್ಟಿನಿಂದ ಬಂದ ಸ್ವಭಾವವನ್ನು ತಿದ್ದಲಾಗದು. ಸಮಯವನ್ನು ತಿನ್ನುವವರಿಗೆ ಸಿಗದೇ ಇದ್ದರೆ ಒಳ್ಳೆಯದು. ಮನೆಯಲ್ಲಿ ನಿಮ್ಮ ಸ್ವಭಾವವನ್ನು ತಿದ್ದಲು ಪ್ರಯತ್ನಿಸುವರು. ಮಕ್ಕಳು ನಿಮ್ಮನ್ನು ಅತಿಯಾಗಿ ಹಚ್ಚಿಕೊಳ್ಳುವರು. ತುರ್ತು ನಿರ್ಧಾರವನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಅತಿ ಪರಿಚಯವು ನಿಮಗೆ ಮುಳುವಾಗಬಹುದು. ಅನಾರೋಗ್ಯವು ನಿಮಗೆ ಅಭ್ಯಾಸವಾಗಿದ್ದರೂ ಗುಣಪಡಿಸಿಕೊಳ್ಳುವುದು ಉತ್ತಮ. ಓದುವ ಸಮಯವನ್ನು ಓದಲೆಂದೇ ಮೀಸಲಿಡಿ. ಅವಕಾಶಗಳಿಗೆ ಕಾಯಬೇಡಿ. ಮಾಡಬೇಕು ಎಂದು ಅನ್ನಿಸಿದ್ದನ್ನು ಮಾಡಿಮುಗಿಸಿ. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು. ಸಕಾರಾತ್ಮಕವಾಗಿ ಸ್ವೀಕರಿಸಿ ಮುಂದೆ ಸಾಗಿ.
ಸಿಂಹ ರಾಶಿ: ನೀವು ಗಳಿಸಿದ ವಸ್ತು ಮತ್ತಾರನ್ನೋ ತಲುಪುವುದು. ಭಾಗ್ಯವನ್ನು ಇಂದು ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಭಯದಿಂದ ಹಿಂಜರಿಯುವಿರಿ. ಸಮಯ ಮುಂದುವರೆದಂತೆ ನಿಮ್ಮ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡುವುದು ಉಚಿತ. ಯಾರಿಗೂ ತಿಳಿಸದೇ ಎಲ್ಲಿಗೋ ಹೋಗುವಿರಿ. ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಸಮಾರಂಭದಲ್ಲಿ ಮುಖ್ಯಸ್ಥಾನವನ್ನು ಪಡೆಯುವಿರಿ. ಅಪವಾದಗಳನ್ನು ಕೇಳುವ ಸ್ಥಿತಿಯೂ ಬರಬಹುದು. ಮನಸ್ಸಿನಲ್ಲಿ ದೃಢತೆ ಇರಲಿ. ಅನುಭವಿಸುವುದನ್ನು ತಪ್ಪಿಸಲಾಗದು. ಇಂದು ಅನಿವಾರ್ಯವೊಂದು ಒದಗಿ ಬಂದಾಗ ಇದನ್ನು ಮೊದಲೇ ಕಲಿಯಬೇಕಿತ್ತು ಎಂದನ್ನಿಸುವುದು. ನಿಮಗೆ ಕೊಟ್ಟ ಹುದ್ದೆಯನ್ನು ನಿರ್ವಹಿಸುವಾಗ ಅದರ ಭಾರವೆಷ್ಟು ಎಂದು ಅರಿಯಿರಿ. ನಿಮ್ಮನ್ನು ಅಳೆಯುತ್ತಿರುವರು ಎಂಬುದನ್ನು ಗಮನಿಸಿ. ಬಹಳ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಮನಸ್ಸು ಇಂದು ಒಂದೆಡೆ ಕುಳಿತುಕೊಳ್ಳಲು ಬಿಡದು.
ಕನ್ಯಾ ರಾಶಿ: ತಾಳ್ಮೆ ಇದ್ದರೆ ಏನನ್ನೂ ಪಡೆಯಬಹುದು. ನೀವು ಹೂಡಿಕೆಯನ್ನು ಗೌಪ್ಯವಾಗಿ ಇಡಲಾಗದು. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮ ಬಿಡುವಿನ ವೇಳೆಯನ್ನು ಸ್ವಯಂ ಸೇವಕರಾಗಿ ಅಥವಾ ಇತರರಿಗೆ ಸಹಾಯ ಮಾಡಲು ಕಳೆಯಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದು ನಿಮಗೆ ಅಚ್ಚರಿಯಾಗಬಹುದು. ನಿಮ್ಮ ಮಾತು ಕೇಳುವುದಿಲ್ಲ ಎಂದೆನಿಸುವುದು. ಸದ್ಯ ಗ್ರಹಗತಿಗಳ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಇನ್ನೊಬ್ಬರ ವಿಷಯಕ್ಕೆ ಮೂಗು ತೂರಿಸಲು ಹೋಗದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗಿರಿ. ಆಘಾತದ ಸ್ಥಿತಿಯನ್ನೂ ಎದುರಿಸಬೇಕಾಗುವುದು. ಕಂಡಿದ್ದನ್ನು ಮಾತ್ರ ಸತ್ಯವೆಂದು ನಂಬಬೇಡಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು.