Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶನಿವಾರದ ದಿನ ಭವಿಷ್ಯ

|

Updated on: Mar 18, 2023 | 6:00 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶನಿವಾರದ ದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯ
Image Credit source: istock
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 18 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಪರಿಘ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 39 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:40 ರಿಂದ 11:11ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:11 ರಿಂದ 03:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:40 ರಿಂದ 08:10ರ ವರೆಗೆ.

ಸಿಂಹ: ಇಂದು ಅನೇಕ ದಿನಗಳಿಂದ ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳುವುದು. ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ಒಂದು ಪ್ರಮುಖ ವಿಚಾರವನ್ನು ಆಪ್ತರೊಂದಿಗೆ ಹಂಚಿಕೊಳ್ಳುವಿರಿ. ಆಸ್ತಿಯ ವಿಚಾರವಾಗಿ ನೆರೆ-ಹೊರೆಯವರೊಂದಿಗೆ ವಿವಾದವಾಗಬಹುದು. ತಪ್ಪಾಗುವ ಚಟುವಟಿಕೆಗಳಿಗೆ ಬಗ್ಗೆ ಗಮನ ಕೊಡಬೇಡಿ. ರಾಜಕೀಯ ವ್ಯವಹಾರಗಳಲ್ಲಿ ತೊಡಗಿಕೊಳ್ಳುವಿರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ. ಕಾರ್ತಿಕೇಯನ ಸ್ಮರಣೆಯನ್ನು ಮಾಡಿ.

ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಸಂತೋಷಗೊಳ್ಳುವಿರಿ. ಸಮಾಜದಿಂದ ಗೌರವ ಸಮ್ಮಾನಗಳು ಸಿಗಲಿವೆ. ಆಸ್ತಿ ಖರೀದಿಸುವ ಯೋಚನೆ ಇದ್ದರೆ ಖರೀದಿಸಿ. ಇಂದು ಕಾಲ ಚೆನ್ನಾಗಿದೆ. ಕೋಪವನ್ನು ತೋರಿಸಲು ಹೋಗಬೇಡಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ನಿಮ್ಮ ಜೀವನಕ್ಕೆ ದಿಕ್ಕು ಸಿಗುವ ಸಾಧ್ಯತೆ ಇದೆ. ದಿನವನ್ನು ಸರಿಯಾಗಿ ಬಳಸುವ ಕುರಿತು ಸಮಯವನ್ನು ಹಾಕಿಕೊಳ್ಳಿ. ವ್ಯರ್ಥವಾಗುವ ಸಮಯದಲ್ಲಿ ಸದುಪಯೋಗವನ್ನು ಮಾಡಿಕೊಳ್ಳಿ. ವಿಷ್ಣುಸಸಹ್ರನಾಮದಿಂದ ನಿಮಗೆ ಶುಭವಾದುದು ಸಂಭವಿಸಲಿದೆ.

ತುಲಾ: ಆಪ್ತರಿಂದ ಹಲವು ದಿನಗಳ ಅನಂತರ ಸಂತೋಷದ ವಾತಾವರಣವನ್ನು ಪಡೆಯುವಿರಿ. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಮನೆಕೆಲಸದಲ್ಲಿ ಭಾಗಿಯಾಗುವಿರಿ. ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವಿರಿ. ಯಾರೊಂದಿಗಾದರೂ ವಿವಾದವನ್ನು ಮಾಡುವ ಪರಿಸ್ಥಿತಿ ಇರಬಹುದು, ಗಮನವಿರಲಿ. ನಿಮ್ಮ ಯಶಸ್ಸನ್ನು ಅತಿಯಾಗಿ ಯೋಚನೆ ಮಾಡದೇ ಶಾಂತವಾಗಿ ನಿಮ್ಮ ಕಾರ್ಯಗಳನ್ನು ಮಾಡಿ. ಯಶಸ್ಸು ತಾನಾಗಿಯೇ ಬರಲಿದೆ. ವ್ಯವಹಾರದಲ್ಲಿ ಬಂಧುಗಳನ್ನು ಇಟ್ಟುಕೊಳ್ಳುವ ಮನಸ್ಸು ಬೇಡ. ತ್ರಿಪುರಸುಂದರಿಯನ್ನು ಧ್ಯಾನಿಸಿ.

ವೃಶ್ಚಿಕ: ಆಸ್ತಿಗೆ ಸಂಬಂಧಿಸಿದಂತೆ ಪ್ರಕರಣ ಹಲವು ವರ್ಷಗಳಿಂದ ನಡೆಯುತ್ತಿದ್ದು, ಇಂದು ಅದರ ಫಲವು ಗೊತ್ತಾಗಲಿದೆ. ಭವಿಷ್ಯದ ಕುರಿತು ಹತ್ತಾರು ಯೋಜನೆಗಳನ್ನು ಹಾಕಿಕೊಳ್ಳುವಿರಿ. ಸಾಲದಿಂದ ಬೆಂದ ನಿಮಗೆ ಇಂದು ಅದು ಮುಕ್ತಾಯಗೊಳ್ಳಲಿದೆ. ಸಂತೃಪ್ತಿಯಿಂದ ಇರಲಿದ್ದೀರಿ. ನಮ್ಮ ಇಷ್ಟದ ಕೆಲಸದತ್ತ ಹೆಚ್ಚು ಗಮನ ಹರಿಸುವಿರಿ. ಕೆಲಸಗಳಲ್ಲಿ ಅನಿರೀಕ್ಷಿತ ತೊಡಕುಗಲಕು ಉಂಟಾಗುವ ಸಾಧ್ಯತೆ ಇದೆ. ವೃತ್ತಿಪರರು ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಪತಿ-ಪತ್ನಿ ಸಂಬಂಧವು ಮಧುರವಾಗಿರುತ್ತದೆ. ಗಂಗಾಧರನಿಗೆ ನಿರ್ಮಲ‌ಜಲದ ಅಭಿಷೇಕ ಮಾಡಿ.

-ಲೋಹಿತಶರ್ಮಾ ಇಡುವಾಣಿ