Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ

| Updated By: Vinay Bhat

Updated on: Oct 15, 2021 | 6:39 AM

Horoscope ಅಕ್ಟೋಬರ್ 15, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಶ್ವಯುಜ ಮಾಸ, ಶರದೃತು, ಶುಕ್ಲಪಕ್ಷ, ದಶಮಿ ತಿಥಿ, ಶುಕ್ರವಾರ, ಅಕ್ಟೋಬರ್ 15, 2021. ಶ್ರವಣ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 10.33 ರಿಂದ ಇಂದು ಬೆಳಿಗ್ಗೆ 12.01 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.09. ಸೂರ್ಯಾಸ್ತ: ಸಂಜೆ 5.54

ತಾ.15-10-2021 ರ ಶುಕ್ರವಾರದ ರಾಶಿಭವಿಷ್ಯ.

ಮೇಷ: ಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯುವುದು. ಲಾಭದಾಯಕ ಹುದ್ದೆ ದೊರೆಯುವುದು. ಶುಭ ಸಂಖ್ಯೆ: 6

ವೃಷಭ: ನೆನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಮಾನಸಿಕ ಉತ್ಸಾಹ ಕಂಡುಬರುವುದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವುದು. ಕಾರಣಾಂತರ ಅಧಿಕ ಖರ್ಚುಬರಬಹುದು. ಶುಭ ಸಂಖ್ಯೆ: 1

ಮಿಥುನ: ಅಂತಃಶತ್ರುಗಳ ಕಾಟ ಹೆಚ್ಚಾಗುವ ಲಕ್ಷಣವಿದೆ. ಹಳೆಯ ಸಮಸ್ಯೆಗಳು ಮತ್ತೆ ಎದುರಾಗುವ ಸಂಭವವಿದೆ. ಚಂಚಲತೆ ಬೇಡ, ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿ. ಆರ್ಥಿಕ ಲಾಭವಿದೆ ಆದರೆ ವಿದ್ಯೆಯಲ್ಲಿ ಹಿನ್ನಡೆ ಕಂಡುಬರುವುದು. ಶುಭ ಸಂಖ್ಯೆ: 3

ಕಟಕ: ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ. ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲಸ ನಿರ್ವಹಿಲು ಆಗದಂತಹ ಸ್ಥಿತಿ ಬರಬಹುದು. ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 7

ಸಿಂಹ: ಶತ್ರುಗಳ ಉಪಟಳವು ಆಗಾಗ ಕಂಡುಬಂದರೂ ಧೈರ್ಯದಿಂದ ಕಾರ್ಯ ಸಾಧಿಸುವಿರಿ. ಇಷ್ಟಸಿದ್ಧಿಯ ಕಾಲ ಇರುವದರಿಂದ ಅನೇಕ ರೀತಿಯ ಭೋಗಭಾಗ್ಯಗಳು ಕೂಡಿಬರಲಿವೆ. ಸಾಂಸಾರಿಕ ಸಮಸ್ಯೆಗಳು ಪರಿಹಾರವಾಗುವವು. ಶುಭ ಸಂಖ್ಯೆ: 1

ಕನ್ಯಾ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 7

ತುಲಾ: ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 5

ವೃಶ್ಚಿಕ: ವ್ಯಾಪಾರದಲ್ಲಿ ಪ್ರಗತಿ ಇರುವುದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 3

ಧನು: ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ. ಶುಭ ಸಂಖ್ಯೆ: 2

ಮಕರ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡೆಯುವುದು ಉತ್ತಮ. ಶುಭ ಸಂಖ್ಯೆ: 8

ಕುಂಭ: ವಾದ-ವಿವಾದ, ಹಠಸಾಧನೆ, ತಪ್ಪುಗಳ ಸಮರ್ಥನೆ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ. ಆಯಾಸದಿಂದ ಕೂಡಿದ ಕೆಲಸ ಇರುವದು. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ. ಶುಭ ಸಂಖ್ಯೆ: 6

ಮೀನ: ದಿಟ್ಟತನ, ಮನೋಸ್ಥೈರ್ಯ, ನೇರ, ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಶುಭ ಸಂಖ್ಯೆ: 9

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937