Nitya Bhavishya- ಭಾನುವಾರದ ದಿನ ಭವಿಷ್ಯ
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2022 ಡಿಸೆಂಬರ್ 25ರ ಭಾನುವಾರ ನಿಮ್ಮ ರಾಶಿ ಫಲ ( Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಪಾಡ್ಯ, ಉತ್ತರಾಷಾಢ ನಕ್ಷತ್ರ, ಭಾನುವಾರ, ಡಿಸೆಂಬರ್ 25, 2022. ಮೂಲಾ ನಕ್ಷತ್ರ, ರಾಹುಕಾಲ: ಇಂದು ಸಂಜೆ 4 ಗಂ॥ 45 ನಿ।। ರಿಂದ ಇಂದು ಸಂಜೆ 06 ಗಂ॥ 10 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 55 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 09 ನಿಮಿಷಕ್ಕೆ.
ತಾ. 25-12-2022 ರ ಭಾನುವಾರದ ರಾಶಿ ಭವಿಷ್ಯ ಹೀಗಿದೆ:
- ಮೇಷ:
ತಂದೆ-ತಾಯಿ, ಅಜ್ಜ-ಅಜ್ಜಿಯರೊಂದಿಗೆ ಕಾಲಕಳೆಯಿರಿ. ಅವರ ಮಾರ್ಗದರ್ಶನ ಅವಶ್ಯಕ. ಕುಟುಂಬದಲ್ಲಿ ನೆಮ್ಮದಿ, ಸಂತೋಷವನ್ನು ಕಾಣಬಹುದು. ಅನಿರೀಕ್ಷಿತವಾಗಿ ಬಂದ ಖರ್ಚಿನಿಂದಾಗಿ ಹಣದ ಹೊಂದಾಣಿಕೆ ಕಷ್ಟವಾದೀತು. ಶಿಕ್ಷಣಕ್ಷೇತ್ರದಲ್ಲಿ ಇರುವವರಿಗೆ ಮೇಲಧಿಕಾರಿಗಳಿಂದ ಒತ್ತಡ, ಮಾಡಿದ ಕೆಲಸ ಸರಿಯಾಗಿಲ್ಲವೆಂಬ ದೂರನ್ನು ಕೇಳಬೆರಕಾಗಬಹುದು. ವಿಧೇಯರಾಗಿ ಪ್ರೀತಿ, ನಂಬಿಕೆಗಳನ್ನು ಗಳಿಸಿ ಕಾರ್ಯವೆಸಗಿ. ದೇವಸೇನಾನಿಯನ್ನು ಸ್ತುತಿಸಿದರೆ ಕೈ ಬಿಡುವನೇ?
- ವೃಷಭ:
ಸ್ತ್ರೀಯರು ಅನಿರೀಕ್ಷಿತ ಸುವಾರ್ತೆ, ಮಕ್ಕಳೊಂದಿಗೆ ಕಾಲಕಳೆಯುವುದು, ಅಪರೂಪದ ಗೆಳತಿಯ ಆಗಮನಗಳಿಂದ ಶುಭವಾಗಲಿದೆ. ಮನೆಗೆಲಸ, ಕಛೇರಿ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಕ್ತಾಯಗೊಳ್ಳದೇ ನಿಧಾನವಾಗಿ ಸಾಗಲಿವೆ. ದುಡುಕಿನ ತೀರ್ಮಾನವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಎದುರಾದಾಗ ಕ್ಷಣಕಾಲ ಸುಮ್ಮನಿರಿ. ಅನಂತರ ನಿಮಗೆ ಸರಿಯಾದ ಮಾರ್ಗ ತೋರುತ್ತದೆ. ಅದರಂತೆ ಮುನ್ನುಗ್ಗಿ. ಪ್ರೇಮಾಂಕುರವಾಗಬಹುದು. ಆತುರದಲ್ಲಿ ಅಂಕುರವನ್ನು ಹೊಸಕಿಹಾಕದಿರಿ.
- ಮಿಥುನ:
ಸಹೋದ್ಯೋಗಿಗಳೊಂದಿಗೆ ವೈಮನಸ್ಯವನ್ನು ಇಟ್ಟುಕೊಳ್ಳಬೇಡಿ. ಉದ್ಯೋಗವನ್ನೇ ಬಿಟ್ಟು ಹೋಗುವ ಪರಿಸ್ಥಿತಿಯೂ ಎದುರಾದೀತು. ಹಸಿದವರಿಗೆ ತೃಪ್ತಿಯಾಗುವಷ್ಟು ಉಣಬಡಿಸಿ. ಅವರು ಸಂತೃಪ್ತರಾದರೆ ಬೇರೆ ದೈವಾನುಗ್ರಹಬೇಕಿಲ್ಲ. ಮಕ್ಕಳೊಂದಿಗೆ ಕಾಲ ಕಳೆಯಿರಿ. ಅವರು ತೋರುವ ಪ್ರೀತಿಗೆ ಸೋಲುತ್ತೀರಿ. ನೀರಿನ ಸ್ಥಳಗಳಿಗೆ ಹೋಗುವಾಗ ಎಚ್ಚರವಿರಲಿ. ಬಹಳ ಸುಂದರವಾಗಿ ಅಲಂಕರಿಸಿಕೊಂಡರೆ ಸಂಜೆ ಹಿರಿಯರಿಂದ ದೃಷ್ಟಿಯನ್ನು ತೆಗೆಸಿಕೊಳ್ಳಿ.
- ಕಟಕ:
ಹೊರಗಿನ, ಅತಿಯಾದ, ಅಶುದ್ಧ ಆಹಾರ ಸೇವನೆ, ವಾತಾವರಣದಿಂದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಬಹುದು. ಮಾನಸಿಕವಾಗಿ ತುಂಬ ಒತ್ತಡವನ್ನು ಅನುಭವಿಸಬೇಕಾಗಬಹುದು. ಹೇಳಿಕೊಳ್ಳಲಾಗದ ಕಿರಿಕಿರಿ. ಅಸ್ವಾಭಾವಿಕ ಸಿಟ್ಟಿನ ಕೈಯಲ್ಲಿ ನಿಮ್ಮನ್ನು ಕೊಟ್ಟುಕೊಳ್ಳದೇ, ಅಂತಹ ಸಂದರ್ಭವು ಬಂದಾಗ ಮೌನಕ್ಕೆ ಶರಣಾಗಿ ಮುಂದಾಗುವ ಅನಾಹುತವನ್ನು ನಿಲ್ಲಿಸಿ. ಸಮಯಕ್ಕೆ ಸರಿಯಾಗಿ ಬರುವ ಬುದ್ಧಿಯನ್ನು ಅನುಸರಿಸಿ.
- ಸಿಂಹ
ವಿದ್ಯುತ್ ಉಪಕರಣಗಳ ವ್ಯಾಪಾರಿಗಳಿಗೆ ಲಾಭವು ಹೆಚ್ಚಾಗಲಿದೆ. ವಾಹನವನ್ನು ಚಲಿಸುವಾಗ ಎಚ್ಚರವಿರಲಿ. ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವಾಗ ನೋಡಿಕೊಳ್ಳಿ. ವೈದ್ಯರು ಹೇಳುವ ಪಥ್ಯವನ್ನು ಮಾಡಿ. ಆರೋಗ್ಯವನ್ನು ಸರಿಮಾಡಿಕೊಳ್ಳಿ. ಸ್ನೇಹಿತರೊಂದಿಗೆ ದಿನವನ್ನು ಕಳೆಯುವಿರಿ. ಹಬ್ಬದ ವಾತಾವರಣವಿರಲಿದೆ. ಒಳ್ಳೆಯ ಸಮಾಚಾರ ನಿಮ್ಮನ್ನು ಇನ್ನಷ್ಟು ಖುಷಿಯಾಗಿಡಲಿದೆ. ಮುಕ್ಕಣ್ಣ ಶಿವನನ್ನು ಸ್ತೋತ್ರ ಮಾಡಿ. ಅನುಕೂಲ ಗಾಳಿಯು ನಿಮ್ಮನ್ನು ದಡ ಸೇರಿಸುವುದು.
- ಕನ್ಯಾ
ಹಿರಿಯರೊಂದಿಗೆ ಗೌರವಯುತವಾಗಿ ಮಾತನಾಡಿ. ಅಸಡ್ಡೆಯ ಭಾವ ಬೇಡ. ಇದರಿಂದ ಸುಮ್ಮನೇ ಮನಸ್ತಾಪಕ್ಕೆ ಕಾರಣವಾಗುವುದು. ಪೂಜೆ, ಹವನ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಲ್ಲದ ಕಾರಣಕ್ಕೆ ಪತ್ನಿಯೊಂದಿಗೆ ಮಾತಿನ ಹೊಯ್ದಾಟ. ಇಬ್ಬರೂ ಮುನಿಸಿಕೊಂಡು ವಿರುದ್ಧದಿಕ್ಕಿನಲ್ಲಿ ಇರುವಿರಿ. ದಿನಾಂತ್ಯದಲ್ಲಿ ಮನಸ್ತಾಪಶಮನಗೊಂಡು, ನಡೆದುದನ್ನು ಮರೆತು ಸಹಬಾಳ್ವೆ ನಡೆಸುವಿರಿ.
- ತುಲಾ
ಅವಶ್ಯಕತೆ ಇದ್ದರೆ ಮಾತ್ರ ಹಣವನ್ನು ಖರ್ಚು ಮಾಡಿ. ಹಣವಿದೆ ಎಂದು ಖರ್ಚನ್ನು ಮಾಡಬೇಡಿ. ಒಂದಕ್ಕೆ ಎರಡು ಪಟ್ಟು ವ್ಯಯವಾಗಬಹುದು. ಸಂಪತ್ತನ್ನು ಮಿತವಾಗಿ ಬಳಸಿ. ದಾಂಪತ್ಯದಲ್ಲಿ ವಿನಾಕಾರಣ ಮನಸ್ತಾಪಗಳು, ಜಗಳಗಳು ನಡೆಯಲಿವೆ. ಪರರ ಮಾತನ್ನು ಕೇಳಿ ವಿಶ್ವಾಸಾರ್ಹರ ಮೇಲೆ ಸಂದೇಹ ಪಡಬೇಡಿ. ವ್ಯಾಪರವನ್ನು ಇಷ್ಟ ಪಟ್ಟರೆ ವ್ಯವಹಾರ ಮಾರ್ಗದಲ್ಲಿಯೇ ಮುನ್ನಡೆಸಿ. ಕರಕುಶಲತೆಯನ್ನು ಇಷ್ಟಪಡುವಿರಿ. ತುರಿಕೆ, ಅಲರ್ಜಿ ಇತ್ಯಾದಿಗಳು ಆಗಬಹುದು.
- ವೃಶ್ಚಿಕ:
ಒಂದೇ ರೀತಿಯಲ್ಲಿ ಇರುವುದು ಬೇಸರ ತರಿಸಿ ಬದಲಾವಣೆಗಳನ್ನು ಬಯಸುವಿರಿ. ಸದ್ಯ ಬದಲಾವಣೆಯನ್ನು ಬಯಸದೇ ಇದ್ದ ಹಾಗೇ ಮುಂದುವರಿಯಿರಿ. ಇನ್ನೊಬ್ಬರಿಗೆ ಪ್ರೋತ್ಸಾಹವನ್ನು ನೀಡಿ, ನಿಮ್ಮನ್ನು ಗೌರವಿಸುವರು. ಅತಿಯಾದ ಅಲಸ್ಯ ಒಳ್ಳೆಯದಲ್ಲ. ಸೊಂಟನೋವು ಕಾಣಿಸಬಹುದು. ಅತಿಯಾದ ಆತ್ಮವಿಶ್ವಾಸ ಕಂದಕಕ್ಕೆ ಬೀಳುವಂತೆ ಮಾಡುತ್ತದೆ. ದಂಪತಿಗಳ ನಡುವೆ ಮನಸ್ತಾಪಗಳು ಏಳಬಹುದು. ಅಂತಹ ಕುಡಿಯನ್ನೇ ಚಿವುಟಿದರೆ ಮತ್ತೆ ಬೆಳೆಯದು.
- ಧನು:
ವೃತ್ತಿಯಲ್ಲಿ ಬರಹಗಾರರಾದವರಿಗೆ ಅಥವಾ ಬರಹಗಾರರಾಗಲು ಪ್ರಯತ್ನಿಸುವವರಿಗೆ ಹತ್ತಾರು ಅವಕಾಶಗಳು ನಿಮ್ಮ ಹುಡುಕಿ ಬರಲಿವೆ. ಯಾವ ಕೆಲಸಕ್ಕೂ ದೈವವನ್ನೇ ನಂಬಿ ಕುಳಿತುಕೊಳ್ಳಬೇಡಿ. ನಿಮ್ಮ ಪ್ರಯತ್ನವಿದ್ದಾಗ ಮಾತ್ರ ದೈವವೂ ಫಲಿಸುವುದು. ವ್ಯಾಪರಸ್ಥರು ವ್ಯವಹಾರವನ್ನು ಮಾಡುವಾಗ ಮೋಸಕ್ಕೆ ಒಳಗಾಗಬಹುದು. ಸಾಲವನ್ನು ಮಾಡಲು ಹೋಗಬೇಡಿ. ಹೊಸ ಕೆಲಸವನ್ನು ಆರಂಭಿಸುವವರು ಎರಡು ಬಾರಿ ಯೋಚಿಸಿ. ದೂರದ ಊರಿಗೆ ಸಂಚಾರ ಸಾಧ್ಯತೆ ಇದೆ.
- ಮಕರ:
ಒಳ್ಳೆಯದನ್ನು ಮಾಡಲಾಗದಿದ್ದರೇನಂತೆ ಒಳ್ಳೆಯದನ್ನು ಯೋಚಿಸಿ. ಸಕಾರಾತ್ಮಕ ಚಿಂತನೆಗಳು ವ್ಯಕ್ತಿತ್ವವನ್ನು ಬೆಳೆಸುತ್ತವೆ. ಮುಂಗೋಪಿಗಳಾಗದೇ ಸಹನೆಯ ಶಸ್ತ್ರವನ್ನು ಹಿಡಿದುಕೊಳ್ಳಿ. ಕೈಕಾಲುಗಳು ನೋವಿನಿಂದ ಬಳಲುತ್ತವೆ. ಇಂದು ಸ್ವಲ್ಪ ವಿಶ್ರಾಂತಿಯನ್ನು ಪಡಿಯಲಿ. ದಿನವೂ ಆಯಾಸಗೊಳ್ಳುವುದು ಇದ್ದೇ ಇರುತ್ತದೆ. ಯಾರಾದರೂ ನಿಮ್ಮನ್ನು ಯಾಚಿಸಿ ಬಂದರೆ ಇಲ್ಲವೆನಬೇಡಿ. ಇರುವುದರಲ್ಲಿ ಅಲ್ಪವನ್ನು ಕೊಟ್ಟು ಬಿಡಿ. ನಿಮ್ಮ ಯಾವುದೋ ದೋಷ ನಿವಾರಣೆಯಾಯಿತೆಂದು ತಿಳಿಯಿರಿ. ಶನೈಶ್ಚರನ ದೇಗುಲಕ್ಕೆ ಹೋಗಿ ಸ್ವಲ್ಪ ಕಾಲ ಧ್ಯಾನ ಮಾಡಿ.
- ಕುಂಭ:
ಸಾಲ ಬಾಧೆಯಲ್ಲಿ ಸಿಲುಕಿ ಕಂತುಗಳನ್ನು ಕಟ್ಟುತ್ತಿದ್ದರೆ ಕಂತಿಗೆ ಬೇಕಾದ ಹಣವು ಸಿಗಲಿದೆ. ಯಾರಾದರೂ ಸಾಲಕೊಡುತ್ತೇನೆಂದು ಬಂದರೆ ಪಡೆಯಬೇಡಿ. ಕೆಲವು ದಿನಗಳು ಕಳೆಯಲಿ. ದಿನಸಿ ವ್ಯಾಪರ ಬಹಳ ಚುರುಕಾಗಿ ನಡೆಯುತ್ತದೆ. ಹಣದ ಹರಿವಿದೆ. ಸಮಾರಂಭಗಳಿಗೆ ಭಾಗವಹಿಸಿ ಸಂತಸ ಪಡುವಿರಿ. ಸ್ನೇಹಿತರು ನಿಮ್ಮನ್ನು ಮೋಸಗೊಳಿಸಬಹುದು. ಮೋಸಹೋಗುವ ಸಂದರ್ಭವನ್ನು ತಂದುಕೊಳ್ಳಬೇಡಿ. ಈಶ್ವರನು ನಿಮ್ಮನ್ನು ಆರಾಧಿಸಿದರೆ ಸನ್ಮಾರ್ಗ ತೋರಿಸಿ ಕಾಪಾಡುವನು.
- ಮೀನ:
ವಿದ್ಯಾರ್ಥಿಗಳು ಪರೀಕ್ಷಾ ವಿಷಯದಲ್ಲಿ, ಓದಿನ ವಿಷಯದಲ್ಲಿ ಅಸಡ್ಡೆ ಮಾಡದೇ ಶ್ರದ್ಧೆ, ಏಕಾಗ್ರತೆಯಿಂದ ಓದಿದರೆ ಮುನ್ನೆಲೆಗೆ ಬರಲು ಸಾಧ್ಯ. ವಾಹನವನ್ನು ಓಡಿಸುವಾಗ ಎಚ್ಚರಿಕೆ ಇರಲಿ. ನಿಮ್ಮದೇನೂ ತಪ್ಪಿಲ್ಲದಿದ್ದರೂ ಬೇರೆಯವರ ಅಜಾಗರೂಕ ಚಾಲನೆಯಿಂದ ಅಪಘಾತಕ್ಕೆ ಈಡಾಗುವಿರಿ. ಕುಟುಂಬದ ಸದ್ಯರೊಂದಿಗೆ ಆನಂದದಿಂದ ಸುತ್ತಾಟ, ಭೋಜನ, ಚಿತ್ರಪ್ರದರ್ಶನಗಳನ್ನು ಮಾಡುತ್ತ ದಿನ ಕಳೆಯುವಿರಿ.
ಲೋಹಿತ ಶರ್ಮಾ, ಇಡುವಾಣಿ 96325 96444