ರಾಶಿ ಭವಿಷ್ಯ
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 03 ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ತ್ರಯೋದಶಿ, ನಿತ್ಯನಕ್ಷತ್ರ : ಪುನರ್ವಸು, ಯೋಗ : ವಿಷ್ಕಂಭ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 31 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 11:20 ರಿಂದ ಮಧ್ಯಾಹ್ನ 12:47ರವರೆಗೆ. ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:05ರವರೆಗೆ, ಗುಳಿಕ ಕಾಲ 08:28 – 09:54ರವರೆಗೆ.
- ಮೇಷ: ತಂದೆ ಮತ್ತು ತಾಯಿಯ ಹೆಚ್ಚಿನ ಪ್ರೀತಿಗೆ ನೀವು ಪಾತ್ರರಾಗುವಿರಿ. ಸುಂದರ ಸಂಜೆಯನ್ನು ನೀವು ಅನುಭವಿಸಬಹುದು. ಖನಿಜ ಮುಂತಾದ ಭೂಗರ್ಭದಲ್ಲಿ ಇರುವ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭವಿದೆ. ಸಮಯವನ್ನು ಗೌರವಿಸುವುದನ್ನು ಅಭ್ಯಾಸಮಾಡಿಕೊಳ್ಳಿ. ಆಲಸ್ಯಕ್ಕೆ ನೀವಿಂದು ಮದ್ದನ್ನು ಕಂಡುಕೊಳ್ಳುವಿರಿ. ನಿಮ್ಮ ಕುರಿತು ಯಾರಾದರೂ ಏನಾದರೂ ಅಂದಾರು ಎನ್ನುವ ಭಾವವನ್ನು ಬಿಟ್ಟು ನಿರ್ಬಿಡೆಯಿಂದ ನಿಮ್ಮ ಕಾರ್ಯದಲ್ಲಿ ಮಗ್ನರಾಗಿ. ಸಮಾರಂಭಗಳಿಗೆ ಭೇಟಿ ಆಗಲಿದೆ.
- ವೃಷಭ: ನೌಕರರಿಗೆ ಸಂತಸದ ಸುದ್ದಿಯು ಕೇಳಿಬರುವುದು. ಯಾರ ಮೇಲೂ ಅನುಮಾನ ಪಡುವ ಅವಶ್ಯಕತೆ ಬೇಡ. ನಿಮ್ಮ ಆಲೋಚನೆಯು ಸರಿಯಾಗಿದೆ ಎಂದು ನಿಮಗನ್ನಿಸಿ ನೀವೇ ಕಾರ್ಯಪ್ರವೃತ್ತರಾಗುವಿರಿ. ದೀರ್ಘಕಾಲದ ಅನಂತರ ಪ್ರಯಾಣವನ್ನು ಮಾಡುತ್ತಿದ್ದೀರಿ. ಮನಸ್ಸು ಬಹಳ ಪ್ರಪುಲ್ಲವಾಗಿರುವುದು. ಉದ್ಯೋಗವನ್ನು ಅರಸಿ ಬೇರೆ ಊರಿಗೆ ಹೋಗಬಹುದು. ಅನಿಶ್ಚಿತತೆಯು ನಿಮ್ಮನ್ನು ಕಾಡಬಹುದು. ದೈವವು ತನ್ನ ಕೆಲಸವನ್ನು ಮಾಡುವುದು ಎಂಬ ದೃಢವಾದ ನಂಬಿಕೆಯು ನಿಮ್ಮಲ್ಲಿರುವುದು.
- ಮಿಥುನ: ಬೆಳಗಿನ ಮಾನಸಿಕ ಸ್ಥಿತಿಯೇ ದಿನವಿಡೀ ಇರುವ ಸಾಧ್ಯತೆ ಇದೆ. ಕೆಲವು ಘಟನೆಗಳು ನಿಮ್ಮ ಮನಸ್ಸಿಗೆ ಒಪ್ಪಿಗೆಯಾಗದೇ ಕಿರಿಕಿರಿ ತರಬಹುದು. ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವುದಕ್ಕಿಂತ ಮರೆಯುವುದು ಒಳ್ಳೆಯದು. ತಿಳಿದವರು ನಿಮಗೆ ಹಿತೋಪದೇಶವನ್ನು ಮಾಡಲಿದ್ದಾರೆ. ಆರೋಗ್ಯವು ಸುಧಾರಿಸಬಹುದು. ಕುಶಲ ಕೆಲಸವನ್ನು ಮಾಡುವವರಿಗೆ ಇಂದು ಕಾರ್ಯಲಾಭವಾಗಲಿದೆ. ಬಂಧುಗಳ ಕಡೆಯಿಂದ ಅಶುಭಸಮಾಚರವು ಬರಲಿದೆ. ನಿಮ್ಮ ಪರೀಕ್ಷೆಯ ಕಾಲವೂ ಇದಾಗಿದೆ.
- ಕಟಕ: ಕಲ್ಪನಾ ಜಗತ್ತಿನಿಂದ ಹೊರಬಂದು ವಾಸ್ತವದಲ್ಲಿ ಬದುಕಲು ಪ್ರಯತ್ನಿಸುವಿರಿ. ಅಸಹಜವಾದ ನಿಮ್ಮ ನಡೆಯಿಂದ ನಿಮ್ಮವರಿಗೆ ಬೇಸರವಾಗಬಹುದು. ಪ್ರಯಾಣವನ್ನು ಮಾಡುವುದು ಬೇಡ. ನಿಮ್ಮವರಿಂದ ಅವಮಾನಕ್ಕೆ ಗುರಿಯಾಗುವಿರಿ. ಕಾರ್ಯ ನಿರ್ವಹಣೆಯಲ್ಲಿ ನೀವು ನಿಸ್ಸೀಮರು. ಅಧಿಕ ಹಣವನ್ನು ಸಂಪಾದಿಸಿದರೂ ತೃಪ್ತಿಯನ್ನು ಅನುಭವಿಸುವುದಿಲ್ಲ. ಕೊರತೆಯನ್ನೇ ಕಂಡು ಕೊರಗುವಿರಿ. ಆಮಿಷಗಳಿಗೆ ಒಳಗಾಗಬೇಡಿ.
- ಸಿಂಹ: ಬರಬೇಕಾದ ಹಣವು ಬರದೇ ಸಮಸ್ಯೆಗಳು ಆಗಬಹುದು. ನಿಮ್ಮ ಸಾಲದ ಬಾಬ್ತು ಹಾಗೇ ಇರುವುದು. ನಿಮ್ಮವರ ನೆರವಿಗೆ ಹೋಗಬೇಕಾಗಿ ಬರಬಹುದು. ಶುಭ ಸುದ್ದಿಯಿಂದ ನಿಮಗೆ ಸಂತಸವಾಗುವುದು. ವೃತ್ತಿಯಲ್ಲಿ ಜವಾಬ್ದಾರಿಗಳು ಬರಲಿವೆ. ಸಹಾಯವನ್ನು ಮಾಡಲು ಹೋಗಿ ಆಪತ್ತಿಗೆ ಸಿಲುಕಬೇಡಿ. ತಾಳ್ಮೆಯನ್ನು ಇಟ್ಟುಕೊಳ್ಳಿ. ಮಕ್ಕಳಿಂದ ನೋವನ್ನು ಪಡೆಯಬೇಕಾಗಿಬರಬಹುದು. ರಂಗಭೂಮಿಯ ಕಲಾವಿದರು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವಿರಿ.
- ಕನ್ಯಾ: ಕೆಲಸದ ಹೊರೆಯು ಅತಿಯಾಗಿ ಒತ್ತಡವೂ ಅತಿಯಾಗುವುದು. ಸಾಮರ್ಥ್ಯದ ಆಧಾರದ ಮೇಲೆ ಅವುಗಳನ್ನು ಅನಾಯಾಸವಾಗಿ ಪೂರೈಸುವಿರಿ. ನಿಮ್ಮ ಮಾತುಗಳನ್ನು ಇಷ್ಟಪಡುವರು. ದೂರದ ಸಂಬಂಧಗಳು ಹತ್ತಿರವಾಗುವುದು. ಕಂಡಿದ್ದು ಮಾತ್ರ ಸತ್ಯ ಎಂದು ಯಾವ ತೀರ್ಮಾನಕ್ಕೂ ಹೋಗಬೇಡಿ. ಪರಿಶೀಲಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ವರ್ಗಾವಣೆಗಳು ಆಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆಯನ್ನು ಇಟ್ಟಿಕೊಂಡಿರುತ್ತೀರಿ. ಆಪ್ತರ ಸಹಾಯವು ಸಿಗಲಿದೆ.
- ತುಲಾ: ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ನೀವು ಅನುಭವಿಗಳು. ಕೌಟುಂಬಿಕ ಕಲಹವನ್ನು ಮಾತಿನ ಮೂಲಕವೇ ಬಗೆ ಹರಿಸಿ. ವಿವಾದಕ್ಕೆ ಎಡಮಾಡಿಕೊಡಬೇಡಿ. ಕೆಲಸದಲ್ಲಿ ಒತ್ತಡ ಇರಲಿದೆ. ಸಮಸ್ಯೆಗಳನ್ನು ಎರಡೂ ಕಡೆಯಿಂದ ನೋಡಿ ನಿರ್ಧರಿಸಿ. ಇಲ್ಲವಾದರೆ ನಿಮಗೆ ಶತ್ರುಗಳು ಹೆಚ್ಚಾದಾರು. ಕೆಲಸಗಳನ್ನು ಮುಕ್ತಾಯಗೊಳಿಸಲು ಆಗದೇ ಏಗುವಿರಿ. ನಿಮಗೆ ತೆರಿಗೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಆಗಬಹುದು. ಮಾತಿನಿಂದಲೇ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ.
- ವೃಶ್ಚಿಕ: ಸಮಸ್ಯೆಗಳು ನೀವು ಆಯ್ಕೆಮಾಡಿಕೊಂಡ ಉದ್ಯಮದಲ್ಲಿ ಇದ್ದೇ ಇರುತ್ತದೆ. ಅದನ್ನು ಸಮಯ ಸ್ಫೂರ್ತಿಯಿಂದ ನಿಭಾಯಿಸಬೇಕು. ಚಿಂತಾಕ್ರಾಂತರಾಗಿ ಇರುವುದರಿಂದ ಅಸಾಧ್ಯ. ಸಮಾರಂಭಗಳಿಗೆ ದೂರದ ಊರಿಗೆ ಹೋಗಬೇಕಾಬಹುದು. ಸಾಲಬಾಧೆಯಿಂದ ಹೊರಬಂದು ನಿರಾಳ ಮನಃಸ್ಥಿತಿಯನ್ನು ಅನುಭವಿಸುವಿರಿ. ಅಧಿಕವಾದ ಶ್ರಮದಿಂದ ನಿಮ್ಮ ಕೆಲಸವು ಸಾಕಾರಗೊಳ್ಳುವುದು. ಭವಿಷ್ಯದ ಕುರಿತು ಅತಿಯಾದ ಆಲೋಚನೆ ಇರಲಿದೆ. ನೇರ ನುಡಿಯು ನಿಮಗೆ ಅಪಾಯವನ್ನು ತರುವುದು.
- ಧನು: ಕೆಲಸವನ್ನು ವೇಗವಾಗಿ ಮುಗಿಸಿ ನಿಶ್ಚಿಂತರಾಗುವಿರಿ. ಯಾರ ಮೇಲೂ ಅವಲಂಬಿತರಾಗದೇ ಸ್ವಂತಶ್ರಮದಿಂದ ಮೇಲೇರುವಿರಿ. ದುಶ್ಚಟಗಳು ನಿಮ್ಮನ್ನು ದಾರಿತಪ್ಪಿಸಬಹುದು. ನಿಮ್ಮನ್ನೇ ನೀವು ಪರೀಕ್ಷಿಸಿಕೊಳ್ಳಿ. ಇಂದು ಮನೆಯಲ್ಲಿಯೇ ಇರಲಿದ್ದೀರಿ. ನಿಮ್ಮ ಕೆಲಸಕ್ಕೆ ಉತ್ತಮಫಲಿತಾಂಶ ಸಿಗಲಿದೆ. ಸಂಗಾತಿಯೊಂದಿಗೆ ಸುಂದರ ದಿನವನ್ನು ಕಳೆಯುವಿರಿ. ಕೆಲಸದ ನಿಮಿತ್ತ ಓಡಾಡಬೇಕಾಗಿಬರಬಹುದು. ಸ್ವಂತಿಕೆಯನ್ನು ಇಟ್ಟುಕೊಂಡು ನೀವು ಕೆಲಸಮಾಡಿದರೆ ಶ್ರೇಯಸ್ಸು ಸಿಗುವುದು.
- ಮಕರ: ಜ್ಞಾನಸಂಪಾದನೆಯ ಮಾಡಿಕೊಳ್ಳಲು ಪ್ರಯತ್ನಪಡುವಿರಿ. ಉದ್ಯೋಗವನ್ನು ಸದ್ಯ ಬದಲಾವಣೆ ಮಾಡಲು ಹೋಗುವುದು ಬೇಡ. ಆರ್ಥಿಕತೆಯ ಕುರಿತು ನಿಮ್ಮ ಯೋಜನೆಗಳು ಬದಲಾಗಿ ಹೊಸ ವಿಚಾರಗಳನ್ನು ರೂಢಿಸಿಕೊಳ್ಳುವಿರಿ. ಖರ್ಚನ್ನು ಕಡಿಮೆ ಮಾಡಿಕೊಳ್ಳಲು ಚಿಂತನೆ ನಡೆಸುವಿರಿ. ದ್ವೇಷವನ್ನು ಸಾಧಿಸುತ್ತಿದ್ದವರು ಇಂದಿನಿಂದ ಮಿತ್ರರಾಗಬಹುದು. ಆರೋಗ್ಯವು ವ್ಯತ್ಯಾಸವಾಗಿ ನಿಮಗೆ ಹಿಂಸೆ ಪಡಬಹುದು. ಜೀವನಶೈಲಿಯನ್ನು ಬದಲಿಸಿಕೊಳ್ಳಲು ನಿರ್ಧರಿಸಿ. ಆರೋಗ್ಯವೂ ಸರಿಯಾಗುವುದು.
- ಕುಂಭ: ಹೊಸ ಉದ್ಯೋಗವನ್ನು ಆರಂಭಿಸಲು ನಿಶ್ಚಯಿಸುವಿರಿ. ಆಪ್ತರ ಜೊತೆ ಮಾತನಾಡಿಕೊಳ್ಳಿ. ಸಲಹೆಯನ್ನು ಸ್ವೀಕರಿಸಿ. ಮಗನಾಗಿ ನಿಮ್ಮ ಕರ್ತವ್ಯಗಳನ್ನು ಮಾಡಲಿದ್ದೀರಿ. ಯಾರದೋ ಸಿಟ್ಟನ್ನು ಯಾರದೋ ಮೇಲೆ ತೀರಿಕೊಳ್ಳುವುದು ಸರಿಯಲ್ಲ. ನಿಮ್ಮನ್ನು ನಂಬಿದವರಿಗೆ ನೀವು ಬೆಂಬಲವನ್ನು ಕೊಡುವಿರಿ. ದುರ್ಬಲರ ಮೇಲೆ ಶಕ್ತಿಯನ್ನು ಪ್ರದರ್ಶಿಸಬೇಡಿ. ಸಹೋದ್ಯೋಗಿಗಳ ನಡುವೆ ಕಲಹವಾಗಬಹುದು. ನಿಮ್ಮನ್ನು ಪ್ರೀತಿಸುವವರ ಜೊತೆ ಸ್ವಲ್ಪ ಸಮಯವನ್ನು ಕಳೆಯಿರಿ.
- ಮೀನ: ಧೈರ್ಯದಿಂದ ಮುನ್ನಡೆದರೆ ಯಾವ ಕೆಲಸವೂ ಆಗದೇ ಇರದು. ಧೈರ್ಯವನ್ನು ತುಂಬುವವರ ಅವಶ್ಯಕತೆ ಇರುತ್ತದೆ. ಕುಟುಂಬದಿಂದ ಬೇರೆಯಾಗುವ ನಿಮ್ಮ ಯೋಚನೆಯನ್ನು ಬಿಟ್ಟುಬಿಡಿ. ಇದರಿಂದಾಗಿ ತಂದೆಯವರಿಗೆ ಬೇಸರವಾದೀತು. ನಿಮ್ಮ ಆಸೆಗೆ ತಣ್ಣೀರು ಎರಚುವ ಕೆಲಸವನ್ನು ಮಾಡಲಿದ್ದಾರೆ. ನಿರ್ಧಾರವು ನಿಶ್ಚಲವಾಗಿರಲಿ. ನಿಮ್ಮ ಬೆಳವಣಿಗೆಯನ್ನು ಕಂಡು ಖುಷಿಪಡಲಿದ್ದಾರೆ. ಅವರನ್ನು ಕೃತಜ್ಞತೆಯಿಂದ ಸ್ಮರಿಸಿ. ಅವರಿಗೆ ಸಮಯವನ್ನು ಕೊಡಿ.
-ಲೋಹಿತಶರ್ಮಾ ಇಡುವಾಣಿ