Daily Horoscope 12 November 2024: ಸಣ್ಣ ಮಾತು ದೊಡ್ಡ ಕಲಹಕ್ಕೆ ಕಾರಣವಾಗಬಹುದು

| Updated By: Digi Tech Desk

Updated on: Dec 13, 2024 | 11:14 AM

Daily Horoscope 12 November 2024: ನವೆಂಬರ್ 12,​ 2024ರ ಮಂಗಳವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ. ನವೆಂಬರ್ 12,​ 2024ರ ಮಂಗಳವಾರ ಇಂದಿನ ಗ್ರಹಗಳ ಸಂಚಾರ ಮಾಹಿತಿ ಇಲ್ಲಿದೆ

Daily Horoscope 12 November 2024: ಸಣ್ಣ ಮಾತು ದೊಡ್ಡ ಕಲಹಕ್ಕೆ ಕಾರಣವಾಗಬಹುದು
ಸಣ್ಣ ಮಾತು ದೊಡ್ಡ ಕಲಹಕ್ಕೆ ಕಾರಣವಾಗಬಹುದು
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಹರ್ಷಣ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:08 ರಿಂದ 04:34ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:25 ರಿಂದ 10:51ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17ರಿಂದ 01:43 ರವರೆಗೆ.

ಮೇಷ ರಾಶಿ: ನೌಕರರಿಂದ ಕಾರ್ಯದಲ್ಲಿ ತೊಂದರೆ ಸಾಧ್ಯತೆ. ನಿಮ್ಮದಲ್ಲದ ಕಾರ್ಯವನ್ನು ಮಾಡಲು ಒಪ್ಪುಕೊಳ್ಳಲಾರಿರಿ. ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಪೂರಕ ವಾತಾವರಣದಲ್ಲಿ ಕೊರತೆ ಇರುವುದು. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು. ಉದ್ವೇಗದಲ್ಲಿ ಇದ್ದರೂ ಸಮಾಧಾನಿಗಳಂತೆ ತೋರುವಿರಿ.‌ ಪುಣ್ಯದ ಫಲವು ಇಂದು ಸಿಗುವುದು. ಸಹೋದ್ಯೋಗಿಗಳ ವರ್ತನೆಯು ನಿಮಗೆ ಆಚ್ಚರಿಗೊಳ್ಳುವಿರಿ. ಕಾರ್ಮಿಕ ವಲಯದಿಂದ ಗೌರವ ಸಿಗಲಿದೆ. ಮನೋಬಲವು ಯಾರಿಂದಲಾದರೂ ಕುಗ್ಗಬಹುದು. ಸಿಟ್ಟು ಮಾಡಿಕೊಂಡು ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುವಿರಿ. ಮುಖಂಡರು ತಮ್ಮನ್ನು ಬಿಂಬಿಸಿಕೊಳ್ಳುವರು.

ವೃಷಭ ರಾಶಿ; ಸಹೋದ್ಯೋಗಿಗಳು ಸುಮ್ಮನೇ ತಡೆ ತರಬಹುದು. ನೀವು ಕೆಲಸ ಮಾಡುವ ಸಂಸ್ಥೆಯ ರಹಸ್ಯವನ್ನು ನೀವು ಬಿಟ್ಟುಕೊಡಲಾರಿರಿ. ನಿಮ್ಮ‌ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಉತ್ಸಾಹವೂ ಇರಲಿದೆ. ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದರೆ. ನಿಮ್ಮ ಅಸೂಯು ಇನ್ನೊಬ್ಬರಿಗೆ ಕಷ್ಟ ಕೊಡುವುದು. ಅಧಿಕ ಖರ್ಚನ್ನು ಇಂದು ಮಾಡಬೇಕಾಗುವುದು. ನಿಮ್ಮ ದುರಭ್ಯಾಸವನ್ನು ಇನ್ನೊಬ್ಬರಿಗೂ ಹಿಡಿಸುವ ಸಾಧ್ಯತೆ ಇದೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಅತಿಯಾದ ಚಿಂತೆ ಇರಲಿದೆ. ಸಿಕ್ಕಿದ್ದನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿದೆ. ಸುಮ್ಮನೇ ಇರುವುದು ನಿಮಗೆ ಇಂದು ಪ್ರಿಯವಾದೀತು. ಹೂಡಿಕೆಯಿಂದ ಹಣವನ್ನು ಕಳೆದುಕೊಳ್ಳುವಿರಿ.

ಮಿಥುನ ರಾಶಿ: ದುಷ್ಕಾರ್ಯಕ್ಕೆ ನಿಮ್ಮನ್ನು ಪ್ರಚೋದಿಸಬಹುದು. ಮನಸ್ಸು ಯಾವುದೋ ಕಾರಣಕ್ಕೆ ಭಾರವಾಗಬಹುದು. ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಆಪತ್ತಿನ ಸಹಾಯಕ್ಕೆ ಪ್ರಶಂಸೆ ಸಿಗಲಿದೆ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪಾಂಡಿತ್ಯವಿದೆ ಎಂದು ಪ್ರದರ್ಶಿಸಲಾಗದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು. ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳಿಬಿಡುವಿರಿ. ನಿಮಗೆ ಇಂದು ಜಯದ ಸಂಭ್ರಮವು ಸಿಗಲಿದೆ. ಕಾರ್ಯದಲ್ಲಿ ಏಕಾಗ್ರತೆ ಇರಲಿದೆ.‌

ಕಟಕ ರಾಶಿ: ಹಣ ಬರುವ ದಾರಿಯನ್ನೇ ನೋಡಿತ್ತ ಕುಳಿತರೆ ಆಗದು. ಕಾರ್ಯವು ಆರಂಭವಾಗಲಿ. ಯಶಸ್ಸಿಗಾಗಿ ಏನನ್ನೂ ಮಾಡದೇ ಕರ್ತವ್ಯ ದೃಷ್ಟಿಯಿಂದ ಮಾಡಿದಾಗ ಯಶಸ್ಸನ್ನು ನಿಮ್ಮನ್ನು ಬಂದು ಸೇರುವುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ನಿಮ್ಮ ಅಜ್ಞಾನವನ್ನು ಕಿರಿಯರು ಬಗೆಹರಿಸುವರು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ‌. ಅಪರಿಚಿತರಿಗೆ ಇಂದು ಅಲ್ಪ ಧನಸಹಾಯವನ್ನು ಮಾಡಬೇಕಾಗುವುದು. ಕೋಪದ ನಿಯಂತ್ರಣವು ಕಷ್ಟವಾದೀತು. ದೇಹವು ನಿಮಗೆ ಭಾರವಾಗುವುದು. ಸಂಸಾರದಲ್ಲಿ ನಿರಾಸಕ್ತಿಯು ಹೆಚ್ಚಾಗುವುದು. ಸಂಗಾತಿಯ ಜೊತೆ ನಿಮಗೆ ಸಮಯ ಕಳೆಯಲೂ ಕಷ್ಟವಾದೀತು. ಇಷ್ಟದವರನ್ನು ನೀವು ಭೇಟಿಯಾಗುವಿರಿ. ತಪ್ಪಿಗೆ ಯಾರಾದರೂ ಕ್ಷಮೆಯನ್ನು ಕೇಳಬಹುದು.

ಸಿಂಹ ರಾಶಿ: ಗುರಿಯ ಬಗ್ಗೆ ಯಾವುದೇ ಅಳುಕು ಇರದು. ಬಂಧುಗಳ ಕಾರಣದಿಂದ ಇಂದಿನ ಕಾರ್ಯದಲ್ಲಿ ತೊಡಕುಗಳು ಕಾಣಿಸಿಕೊಳ್ಳುವುದು. ತಂದೆಗೆ ಬೇಕಾದ ಧನಸಹಾಯವನ್ನು ನೀವು ಮಾಡುವಿರಿ. ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಪರಾವಲಂಬಿಯಾಗಿ ಹೆಚ್ಚು ಕಾಲ ಇರಲಾಗದು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಸಂಸ್ಥೆಯ ಮುಖ್ಯಸ್ಥರಾಗಲು ಆಹ್ವಾನವು ಬರಬಹುದು. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಉದ್ಯಮವನ್ನು ವಿಸ್ತರಿಸುವ ಚಿಂತನೆಯಲ್ಲಿ ಇರುವಿರಿ. ಜನರ ಮಾತನ್ನು ಕೇಳುವ ತಾಳ್ಮೆ ನಾಯಕನಿಗೆ ಬೇಕು. ನಿಮ್ಮ ಅನಿರೀಕ್ಷಿತ ನಡೆಯು ಶತ್ರುಗಳಿಗೆ ಭಯ ಹುಟ್ಟಿಸೀತು.

ಕನ್ಯಾ ರಾಶಿ: ರಾಜಕೀಯದ ಅಸಹಜ ಬೆಳವಣಿಗೆಯಿಂದ ಅತಂತ್ರ ಸ್ಥಿತಿ ಕಾಣಿಸಿಕೊಳ್ಳಬಹುದು. ಸಾಲವನ್ನು ಇನ್ನೊಬ್ಬರಿಗಾಗಿ ಮಾಡಬೇಕಾದೀತು. ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ಆರ್ಥಿಕ ಸಮಸ್ಯೆಗೆ ಸಾಲ ಮಾಡುವುದೊಂದೇ ಆಗಿರದು. ನಿದ್ರೆಯು ಕಡಿಮೆಯಾದ ಕಾರಣ ಕಾರ್ಯದಲ್ಲಿ ಉತ್ಸಾಹ ಕಡಿಮೆ ಇರಲಿದೆ‌. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಸ್ತ್ರೀಸಂಬಂಧದ ವಿಷಯದಲ್ಲಿ ಆರೋಪವು ಕೇಳಿಬರಬಹುದು. ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ. ಇನ್ನೊಬ್ಬರ ಮೇಲೆ ಪರಿಣಾಮ ಬೀರುವಂತೆ ಮಾಡುವಿರಿ.

ತುಲಾ ರಾಶಿ: ಬೌದ್ಧಿಕ ಕಸರತ್ತಿಗೆ ನೀವು ಒಗ್ಗುವುದು ಕಷ್ಟ. ಇಂದು ನೀವು ಹೊರಟ ಕಾರ್ಯದಿಂದ ಅರ್ಧಕ್ಕೆ ಬರಬೇಕಾದೀತು. ಶತ್ರುಗಳ ಕಾರಣದಿಂದ ಖರ್ಚುನ್ನು ಮಾಡಬೇಕಾದ ಸ್ಥಿತಿಯು ಬರಲಿದೆ. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಫಲಿತಾಂಶದಿಂದ ಹೊರಬರುವುದು ನಿಮಗೆ ಆಗದೇ ಇರಬಹುದು. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ನಿರಂತರ ಕೆಲಸವನ್ನು ಮಾಡುವುದು ಇಷ್ಟವಾಗಲಿದೆ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ಗೃಹನಿರ್ಮಾಣವು ಕಾರಣಾಂತರಗಳಿಂದ ಮುಂದೆ ಹೋಗುವುದು. ನಿಮಗೆ ಬೇಕಾದ ಅವಕಾಶವು ಸಿಗದೇ ಒದ್ದಾಡುವಿರಿ. ವಿದ್ಯುತ್‌ ಉಪಕರಣದಿಂದ ಅಪಾಯವು ಆಗಬಹುದು. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಆತಂಕದಿಂದ ನೀವು ಮುಕ್ತರಾಗಲು ಬಯಸುವಿರಿ. ಸಂಗಾತಿಯ ವಿಚಾರದಲ್ಲಿ ಪ್ರತಿಸ್ಪಂದವಿರದು.

ವೃಶ್ಚಿಕ ರಾಶಿ: ಸ್ತ್ರೀಯರಿಗೆ ಸಂಬಂಧಿಸಿದ ವಿಚಾರದಲ್ಲಿ ಮನಸ್ತಾಪ ಕಾಣಿಸಿಕೊಳ್ಳುವುದು. ಹಣಕ್ಕಿಂತ ಆರೋಗ್ಯ ಮುಖ್ಯವಾದ ಕಾರಣ ಅಂತಹ ಸನ್ನಿವೇಶವನ್ನು ನೀವು ಅರ್ಥಮಾಡಿಕೊಳ್ಳಬೇಕು. ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿ‌ಯು ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ‌ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ದೃಷ್ಟಿದೋಷದಿಂದ ಬೇರೆ ತೊಂದರೆಗಳು ಕಾಣಿಸಿಕೊಳ್ಳುವುದು. ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು. ಸ್ನೇಹಿತರಿಗೆ ಸಾಲವಾಗಿ ಹಣವನ್ನು ಪುನಃ ಬರುವ ನಿರೀಕ್ಷೆ ಇಲ್ಲದೇ ಕೊಡುವಿರಿ. ಸಾಮಾಜಿಕ ತಾಣದಿಂದ ಪ್ರೇಮವು ಉಂಟಾಗಬಹುದು. ಅಹಂಕಾರದ ಕಾರಣದ ಅನ್ಯೆರನ್ನು ದ್ವೇಷಿಸುವಿರಿ. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸಿ.

ಧನು ರಾಶಿ: ಇಂದು ಬಂದ ಹಣವನ್ನು ಉಳಿಸಿಕೊಳ್ಳಲಾಗದ ಭೀತಿ ಕಾಡುವುದು. ನಿಮ್ಮನ್ನು ಅಗೌರವದಿಂದ ಕಾಣುವವರ ಮೇಲೆ‌ ಕೋಪ ಬರುವುದು. ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ವಿದ್ಯಾಭ್ಯಾಸದಲ್ಲಿ ಸಹಪಾಠಿಗಳಿಂದ ತೊಂದರೆ. ಸಂಗಾತಿಯಿಂದ ಅವಮಾನವಾಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ಮಿತ್ರರು ನಿಮ್ಮ ಆರೋಗ್ಯವನ್ನು ವಿಚಾರಿಸಿಕೊಳ್ಳಬಹುದು. ನಿಮ್ಮ ಜೀವನದ ಕುರಿತು ತಂದೆ ತಾಯಿಯರು ಚಿಂತಿಸುವರು. ನೀವು ಮಾತಿಗೆ ತಪ್ಪಿದವರು ಎಂಬ ಪಟ್ಟಕ್ಕೆ ಸಿಗುವುದು. ಯಾರ ಯೋಗ್ಯತೆಯನ್ನೂ ಅಳೆಯಲು ಸಾಧ್ಯವಾಗದು. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿವಿದೆ. ಜಾಣತನ ಇಂದು ನಿಮ್ಮ ಉಪಯೋಗಕ್ಕೆ ಬಾರದು.

ಮಕರ ರಾಶಿ: ವಾಹನ ಖರೀದಿಯ ಯೋಗವು ಸಫಲವಾಗುವುದು. ಒಳ್ಳೆಯ ವ್ಯವಸ್ಥೆಯನ್ನು ಇಟ್ಟುಕೊಂಡು ಸರಿಯಾದ ಸೇವೆ ಕೊಡಲು ಕಷ್ಟವಾಗಬಹುದು. ತಾತ್ಕಾಲಿಕವಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗಲಿದ್ದು ಸ್ವಲ್ಪ ಉಸಿರಾಡುವುದಕ್ಕೆ ಅನುವುಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅತಿಯಾಗಿ ಬೇಕು. ಮೋಸದ ಜಾಲಕ್ಕೆ ಸಿಕ್ಕಬಹುದು, ಸಾಧ್ಯತೆ ಇದೆ. ಆಭರಣ ಖರೀದಿಯಿಂದ ಮುಂದಕ್ಕೆ ಬಳಕೆಯಾಗಬಹುದು. ಅನುಭವಕ್ಕೆ ಬಾರದೇ ಏನನ್ನು ಒಪ್ಪಿಕೊಳ್ಳುವುದು ಬೇಡ. ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡುವಿರಿ. ನಿಮ್ಮ ಬಗ್ಗೆ ಇರುವ ಸುಳ್ಳು ಸುದ್ದಿಯು ಸರಿಯಾಗಬಹುದು. ಬರುವ ಆದಾಯವನ್ನು ಗೌಪ್ಯವಾಗಿ ಇಡುವಿರಿ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ.

ಕುಂಭ ರಾಶಿ: ಆದಾಯದ ಮಾರ್ಗವು ಸರಿಯಾಗಿ ಇರಲಿ. ಅಧರ್ಮದ ಆದಾಯವನ್ನು ಪಡೆಯುವ ಇಚ್ಛೆ ಬರದು. ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟಚಾದೀತು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಬಂಧುಗಳ ನಕಾರಾತ್ಮಕ ಹೇಳಿಕೆಗಳು ನಿಮಗೆ ಉದ್ವೇಗವನ್ನು ಉಂಟಾಗಲಿದೆ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ‌ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಅತಿಯಾದ ಕೊಪವು ವ್ಯವಹಾರಸ್ಥರು ಮೇಲೆ ತೊಂದರೆ ಕೊಡುವುದು. ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನಿಮ್ಮ ನಿಲುವು ಕೆಲವರಿಗೆ ಇಷ್ಟವಾಗುವುದು. ನಿಮ್ಮಲ್ಲಿ ಭೀತಿಯ ಮನೋಭಾವವು ಇರಲಿದೆ. ಅತಿಥಿಗಳ ಆಗಮನವಾಗಲಿದೆ. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಕಛೇರಿಯ ವಾಸ್ತವವನ್ನು ಅರ್ಥಮಾಡಿಕೊಂಡು ವ್ಯವಹರಿಸಿ.

ಮೀನ ರಾಶಿ: ಸಣ್ಣ ಮಾತೂ ದೊಡ್ಡ ಕಲಹಕ್ಕೆ ಕಾರಣವಾಗಬಹುದು. ನಿಮ್ಮ‌ಸಾಮಾಜಿಕ‌ ಕಾರ್ಯಗಳಿಗೆ ಉತ್ತಮ‌ ಜನಸ್ಪಂದ ಸಿಗಬಹುದು. ನೀವು ಉದ್ಯಮಿಗಳ ಜೊತೆ ಹೊಸ ಯೋಜನೆಯನ್ನು ಪಡೆಯುವ ತವಕದಲ್ಲಿ ಇರುವಿರಿ. ನಂಬಿಕೆ ದ್ರೋಹಹವು ನಿಮಗಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನವು ಸಿಗಲಿದೆ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನಗತ್ಯ ವಿಚಾರವನ್ನು ಪ್ರಸ್ತಾಪಿಸಿ ವಿವಾದ ಮಾಡುವಿರಿ. ನಿಮ್ಮ ಆದಾಯವು ಅಧಿಕವಾಗಿದ್ದು ನಿಮಗೆ ಸಂತೋಷವನ್ನು ಕೊಡುವ ವಿಚಾರವು ಇದಾಗಿದೆ. ನಿರಂತರ ಪ್ರಯತ್ನದ ಫಲವು ಇಂದು ಸಿಗಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಮನಸ್ಸನ್ನು ಉದ್ವಿಗ್ನ ಮಾಡಿಕೊಳ್ಳದೇ ಶಾಂತತೆಯಿಂದ ನಿರ್ವಹಿಸಿ. ಇಂದು ನಿಮಗೆ ಗೊತ್ತಿಲ್ಲದೇ ದುಷ್ಟರ ಸಹವಾಸ ಸಿಗಬಹುದು.

ಲೋಹಿತ ಹೆಬ್ಬಾರ್ – 8762924271 (what’s app only)

Published On - 12:02 am, Tue, 12 November 24