Daily Horoscope 9 November 2024: ಈ ರಾಶಿಯವರ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2024 | 12:02 AM

Daily Horoscope 9 November 2024: ನವೆಂಬರ್ 09,​ 2024ರ ಶನಿವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 9 November 2024: ಈ ರಾಶಿಯವರ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ
ಈ ರಾಶಿಯವರ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:24ರಿಂದ 10:50ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:43 ರಿಂದ 03:09ರವರೆಗೆ, ಗುಳಿಕ ಕಾಲ ಸಂಜೆ 06:32ರಿಂದ 07:58 ರವರೆಗೆ.

ಮೇಷ ರಾಶಿ: ಆರ್ಥಿಕ ವ್ಯವಹಾರವನ್ನು ಮಾಡುವವರಿಗೆ ಅವಕಾಶ, ಆದಾಯವೂ ಹೆಚ್ಚಾಗುವುದು. ಇಂದು ನಿಮಗೆ ಮಾತಿನಿಂದಾಗಿ ತೊಂದರೆಗಳು ಬರಬಹುದು. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ಪ್ರಮುಖ ಜವಾಬ್ದಾರಿಯು ನಿಮ್ಮ ದೈನಂದಿನ ಯೋಜನೆಗಳಿಗೆ ಅಡ್ಡಿಯಾಗಬಹುದು. ಭಾಗ್ಯದ ಬಾಗಿಲು ತೆರೆದಿದೆ ಬರಬೇಕಾದ ಹಣವನ್ನು ನೀವೇ ಖುದ್ದಾಗಿ ಹೋಗಿ ಪಡೆಯಬೇಕಾಗಬಹುದು. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನಿಲ್ಲಿಸುವಿರಿ. ಇಂದು ನಿಮ್ಮ ಬಂಧುಗಳ‌ ಮನೆಯಲ್ಲಿ ಉಳಿಯುವುದು ಅನಿವಾರ್ಯವಾಗುವುದು. ವಿನಾಕಾರಣ ಪತ್ನಿಯನ್ನು ದ್ವೇಷಿಸುವಿರಿ. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ. ಹೇಳಬೇಕೆನಿಸಿದ ವಿಚಾರಗಳನ್ನು ಯಾರಲ್ಲಿ ಹೇಳಬೇಕು ಎಂದು ಅವರಲ್ಲಿಯೇ ಹೇಳಿ.

ವೃಷಭ ರಾಶಿ: ಪರಿಶ್ರಮದ ಗಳಿಕೆಯನ್ನು ಉಳಿಸಿಕೊಳ್ಳುವುದು ಉತ್ತಮ. ಇಂದಿನ ಅನಾರೋಗ್ಯವು ಕುಟುಂಬದವರ ಆರೈಕೆಯಿಂದ ಕಡಿಮೆಯಾಗುವುದು. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ವ್ಯವಹಾರದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ವ್ಯವಹಾರದಲ್ಲಿ ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುವವರನ್ನು ಭೇಟಿಯಾಗುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮಾತಿನ ಮೇಲೆ‌ ನಂಬಿಕೆ ಕಡಿಮೆ ಆದೀತು. ಇಂದು ಶಿಸ್ತಿಗೆ ಹೆಚ್ಚಿನ ಗಮನವನ್ನು ಕೊಡುವಿರಿ. ವೃತ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನೊಬ್ಬರ ದೋಷವೇ ನಿಮಗೆ ಬಲವನ್ನು ಕೊಡುವುದು.

ಮಿಥುನ ರಾಶಿ: ಮಕ್ಕಳ ಕ್ಷೇಮದ ಬಗ್ಗೆ ಅತಿಯಾದ ಕಾಳಜಿ ಇರುವುದು. ನ್ಯಾಯಾಲಯದ ವಿಚಾರದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮದ ಅಗತ್ಯವಿದೆ. ಉದ್ಯೋಗಕ್ಕಾಗಿಯೂ ಕಷ್ಟಪಡಬೇಕಾಗಬಹುದು. ಹಣದ ಅನಿರೀಕ್ಷಿತ ಖರ್ಚು ಇರುತ್ತದೆ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ. ಇಂದು ನಿಮಗೆ ಜೊತೆಗೆ ಯಾರೂ ಇಲ್ಲ ಎಂಬ ಅನಾಥಪ್ರಜ್ಞೆಯು ಕಾಡುವುದು. ಸಂಗಾತಿಯಿಂದ ಗೌರವವನ್ನು ಅಪೇಕ್ಷಿಸುವಿರಿ. ಇನ್ನೊಬ್ಬರ ಆಡಿದ ಮಾತು ಸತ್ಯವಾಗುವುದು ಎಂಬ ನಂಬಿಕೆ ಬರಬಹುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ನಿಮ್ಮನ್ನು ರೂಪಿಸಿಕೊಳ್ಳುವ ಬಗ್ಗೆ ಆಲೋಚಿಸುವಿರಿ.

ಕರ್ಕಾಟಕ ರಾಶಿ: ಅತಿಥಿ ಸತ್ಕಾರದಿಂದ ನಿಮಗೆ ಸಂತೋಷ. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ‌ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ವೆಚ್ಚಗಳ ಹೆಚ್ಚಳವು ನಿಮಗೆ ಉಳಿತಾಯವನ್ನು ಮಾಡಲು ಕಷ್ಟಕರವಾಗಿಸುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರು ನಿಮಗೆ ಸಹಾಯ ಮಾಡುತ್ತಾರೆ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುಬುದು. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುಬಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಆದ ಪ್ರಗತಿಯಿಂದ ನಿಮಗೆ ಸಂತೋಷವಾಗಲಿದೆ. ಸಮಯಸ್ಫೂರ್ತಿಯಿಂದ ಇಂದಿನ ಅನಾಹುತವನ್ನು ತಪ್ಪಿಸಿಕೊಳ್ಳುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು.

ಸಿಂಹ ರಾಶಿ: ಸಾಹಿತ್ಯಾಸಕ್ತಿಯುಳ್ಳವರಿಗೆ ಹೊಸ ದಿಕ್ಕು ತೋಚುವುದು. ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯೊಂದಿಗೆ ಸಮಾಲೋಚಿಸಿ ಕೆಲಸ ಮಾಡಿದರೆ ಲಾಭವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದಿರಿ.: ಆಕಸ್ಮಿಕವಾದ ವಿಷಯದಿಂದ ನಿಮಗೆ ದುಃಖವಾಗುವುದು. ಕೊಡಬಹುದು. ಅಶಿಸ್ತಿನ ಜೀವನವು ನಿಮಗೆ ಸಮಾಧನಾವನ್ನು ಕೊಡದು. ನೀವು ಯಾರ ಮಾತನ್ನೂ ಕೇಳುವುದಿಲ್ಲ. ನಿಮ್ಮ ತಪ್ಪನ್ನು ಬೇರೆಯವರು ಎತ್ತಿ ಹೇಳುವುದು ನಿಮಗೆ ಸಿಟ್ಟು ಬರಬಹುದು. ಯಾರ‌ನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ಸರ್ಕಾರದ ಆರ್ಥಿಕ ತಜ್ಞರಿಗೆ ಪದೋನ್ನತಿ‌ ಸಿಗಲಿದೆ.

ಕನ್ಯಾ ರಾಶಿ: ಇಂದು ನಿಮ್ಮದೇ ಆದ ಒರಟುತನವು ಇತರರಿಗೆ ಕಷ್ಟಕೊಡುವುದು. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗಬಹುದು. ದುಡುಕಿ ಆಡಿದ ಮಾತಿನಿಂದ ಸತ್ಯವು ಹೊರಬರಬಹುದು. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ. ಪೂರ್ವಜರ ಆಸ್ತಿಯಿಂದ ಲಾಭ ಆಗುವುದು. ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಬೇಕು. ಯೋಚಿಸದೆ ಯಾವುದೇ ಭರವಸೆಗಳನ್ನು ನೀಡಬೇಡಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು. ಪಾಲುದಾರಿಕೆಯಿಂದ ಹೊರಬರವುದು ಒಳ್ಳೆಯದು ಎಂದು ಅನ್ನಿಸಬಹುದು. ಸ್ಪರ್ಧಾಮನೋಭಾವವು ನಿಮಗೆ ಇಷ್ಟವಾಗದು. ನಿಮ್ಮ ಕಾರ್ಯಗಳು ಸೂಚನೆಯ ಅನುಸಾರವಾಗಿ ನಡೆಯಲಿ. ಯಾವುದನ್ನಾದರೂ ಆಯ್ಕೆ ಮಾಡುವಾಗ ನಿಮ್ಮನೇ ನೀವು ಕೇಳಿಕೊಳ್ಳುವುದು ಉತ್ತಮ. ಆತ್ಮೀಯವಾಗಿ ಮಾತನಾಡುವವರು ಇಂದು ಸಿಗಬಹುದು.

ತುಲಾ ರಾಶಿ: ಇಂದು ನೀವು ವ್ಯವಸ್ಥೆಯನ್ನು ಸರಿ ಮಾಡುವ ಯೋಜನೆ ಹಾಕಿಕೊಳ್ಳುವಿರಿ. ಉದ್ಯೋಗದ ಬದಲಾವಣೆ ಆಗಲಿದ್ದು ಸರಿಯಾದ ಪ್ರತ್ಯುತ್ತರ ಸಿಗದೇ ಬೇಸರವಾಗುವುದು. ಸಮಯವನ್ನು ಆನಂದಿಸಲು ಸಾಧ್ಯವಾಗುತ್ತದೆ. ಮಾತನಾಡುವಾಗ ಮತ್ತು ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆಯನ್ನು ತಿಳಿಯುವಿರಿ. ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು. ಮಕ್ಕಳು ನಿಮ್ಮ ಮಾತನ್ನು ಕೇಳದೇ ತಮಗೆ ತೋಚಿದಂತೆ ನಡೆದುಕೊಳ್ಳುವುದು ನಿಮಗೆ ಇಷ್ಟವಾಗದು. ಪದೋನ್ನತಿಯ ವಿಚಾರದಲ್ಲಿ ನಿಮಗೆ ಸ್ಪಷ್ಟ ಮಾಹಿತಿ ಸಿಗದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದು ದಾರಿಯಾದರೆ ನಿಮ್ಮದೇ ಒಂದು ದಾರಿ.

ವೃಶ್ಚಿಕ ರಾಶಿ: ವಿಳಂಬವಾದ ಕಾರ್ಯಕ್ಕೆ ದಂಡಕಟ್ಟುವ ಸಂದರ್ಭ ಬರಲಿದೆ. ಸಾಲಗಾರರಿಗೆ ಚಿಂತೆ ಇರಲಿದೆ. ಪಾಲುದಾರಿಕೆಯಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಆಗಬಹುದು. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು. ಕುಟುಂಬದ ನಿರೀಕ್ಷೆಗಳನ್ನು ಪೂರೈಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯಮಿಗಳು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಸಂಗಾತಿಯ ಮೌನದಿಂದ ನಿಮಗೆ ಆತಂಕ ಹುಟ್ಟಬಹುದು‌. ಬೇಕಾದಷ್ಟು ಮಾತುಗಳು ಮಾತ್ರ ಆಡಿರಿ. ಇಷ್ಟಪಟ್ಟ ವಸ್ತುವು ಕಾಣೆಯಾಗುವುದು. ನಿಮಗೆ ನೇರವಾಗಿ ಸಂಬಂಧಪಟ್ಟ ವಿಚಾರಗಳ ಬಗ್ಗೆ ಮಾತ್ರ ಪ್ರವೇಶಿಸಿ. ಸಂಗಾತಿಯ ಮಾತುಗಳಿಂದ ನೀವು ಸಿಟ್ಟಾಗಬಹುದು. ಇಂದು ನಿಮ್ಮನ್ನು ಅಪರಿಚಿತರು ಭೇಟಿ ಮಾಡಬಹುದು. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ನಿಮ್ಮ ಮಾತಿಗೆ ಸಜಾಯಿಷಿ ಸಿಕ್ಕರೆ ನಿಮಗೆ ಸಂತೋಷವಾಗುವುದು.

ಧನು ರಾಶಿ: ವ್ಯಾಪಾರಕ್ಕೆ ಬೇಕಾದ ಹಣಕಾಸಿನ ಸಂಗ್ರಹವನ್ನು ನಾಲ್ಕಾರು ಜನರಿಂದ ಪಡೆಯುವಿರಿ. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ದೇಹದ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳದೇ ಗೌಪ್ಯವಾಗಿ ಇಟ್ಟಕೊಳ್ಳುವಿರಿ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮಗೆ ಉಪಯುಕ್ತ ಸಲಹೆಗಳು ಸಿಗ ಬಹುದು. ನಿಮ್ಮ ಕಾರ್ಯವನ್ನು ಕೊನೆಯಲ್ಲಿ ಬದಲಿಸುವುದು ನಿಮಗೆ ಸಿಟ್ಟು ತಂದೀತು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ನ್ಯಾಯಸಮ್ಮತವಾದ ನಿಮ್ಮ ನಿಲುವು ಅನ್ಯರ ಕಾರಣದಿಂದ ಬದಲಾಗುವುದು. ನಿಮ್ಮ ಅಹಂಕಾರವೇ ನಿಮಗೆ ಪಾಠವಾಗಬಹುದು.

ಮಕರ ರಾಶಿ: ಅಪರಿಚಿತ ಮಹಿಳೆಯರಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕುವಿರಿ. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯು ಬರಬಹುದು. ಅವಶ್ಯಕತೆ ಇರುವಷ್ಟು ಮಾತ್ರ ಮಾತನಾಡಿ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ಉದ್ಯೋಗಸ್ಥರಿಗೆ ಕೆಲಸದ ಕ್ಷೇತ್ರದಲ್ಲಿ ಉತ್ತಮ ಅವಕಾಶ ಪಡೆಯುವಿರಿ. ನಿಮ್ಮ ಖ್ಯಾತಿ ಹೆಚ್ಚಾಗಬಹುಸು. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಇಂದಿನ ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ನೇರ ಮಾತಿನಿಂದ ಬೇಸರವನ್ನು ಉಂಟುಮಾಡುವಿರಿ. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಡುವುದು ಬೇಡ. ಕಳೆದುಕೊಂಡಿದ್ದರ ಬಗ್ಗೆ ಹೆಚ್ಚು ಆಲೋಚನೆಯು ಇರಲಿದೆ. ನಿಮ್ಮ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿಬರಬಹುದು. ನಿಮ್ಮ ಇಂದಿನ ಅಸಹಾಯಕ‌ ಸ್ಥಿತಿಯನ್ನು ಯಾರಲ್ಲಿಯೂ ಹೇಳಿಕೊಳ್ಳುವುದು ಕಷ್ಟ. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ವೈವಾಹಿಕ ಸಂಬಂಧಗಳನ್ನು ಬಂಧುಗಳಲ್ಲಿ ಬೆಳೆಸುವಿರಿ.

ಕುಂಭ ರಾಶಿ: ಇಂದು ಕೂಡಿಟ್ಟ ಹಣದಿಂದ ವಾಹನ ಖರೀದಿ ಮಾಡುವ ಯೋಚನೆ ಬರುವುದು. ಆಸ್ತಿ ಸಂಬಂಧಿತ ಕೆಲಸವನ್ನು ಪೂರ್ಣಗೊಳಿಸಲು ಇದು ಸರಿಯಾದ ಸಮಯ. ಸಾಹಸಕ್ಕೆ ಕೈಹಾಕುವುದು ಬೇಡ. ನೆಮ್ಮದಿಯನ್ನು ನೀವು ಹಾಳುಮಾಡಿಕೊಳ್ಳುವಿರಿ. ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರಾಗುವಿರಿ. ಯೋಜಿತ ಕಾರ್ಯಗಳೆಲ್ಲ ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡುವುದು ನಿಮಗೆ ಲಾಭದಾಯಕವಾಗಿರುತ್ತದೆ. ಆಲಸ್ಯವು ಅಧಿಕವಾಗಬಹುದು. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ.‌ ಮನೆಯ ವಿಷಯಗಳಿಗೆ ತಕ್ಷಣದ ಗಮನ ಬೇಕು. ನಿಮ್ಮ ನಿರ್ಲಕ್ಷ್ಯವು ದುಬಾರಿಯಾಗಬಹುದು. ಸ್ನೇಹಸಂಬಂಧಗಳನ್ನು ದೂರ ಮಾಡಿಕೊಳ್ಳುವಿರಿ. ಸ್ತ್ರೀಯರು ವಿಶೇಷವಾಗಿ ಸಮಾಜದ ಪ್ರಮುಖ ಸ್ಥಾನವನ್ನು ಅಲಂಕರಿಸುವರು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ.

ಮೀನ ರಾಶಿ: ಇಂದು ನೀವು ಹೊಸ ಆಲೋಚನೆಗಳಿಂದ ತುಂಬಿರುತ್ತೀರಿ. ಇದೇ ಉತ್ಸಾಹದ ದಿನಗಳಾಗಿರಲಿವೆ.‌ ನಿಮ್ಮ ಕೆಲಸವು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಕೃಷಿಯಲ್ಲಿ ಇಂದು ನಷ್ಟ. ಮಾನಿಸಕವಾಗಿ ಕುಗ್ಗುವ ಸಾಧ್ಯತೆ ಇದೆ. ದುರಾಸೆ ಪಡದೆ ಬಂದಿದ್ದನ್ನು ಸ್ವೀಕರಿಸಿ ದೊಡ್ಡವರಾಗುವಿರಿ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ಮಾನಸಿಕವಾಗಿ ಕುಗ್ಗಿರುವಿರಿ. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದವು ಆಗಬಹುದು. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡುವಿರಿ. ಸಹಾಯವನ್ನು ಯಾವುದೇ ಮುಲಾಜಿಲ್ಲದೇ ಕೇಳುವಿರಿ. ನಿಮ್ಮಿಂದಾಗದ ಕಾರ್ಯವನ್ನು ಅನ್ಯರಿಂದ ಮಾಡಿಸುವಿರಿ. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.

ಲೋಹಿತ ಹೆಬ್ಬಾರ್ 8762924271 (what’s app only)