ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಧ್ರುವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:18 ರಿಂದ 01:46, ಯಮಘಂಡ ಕಾಲ ಬೆಳಿಗ್ಗೆ 07:53ರಿಂದ 09:22ರವರೆಗೆ, ಗುಳಿಕ ಕಾಲ ಬೆಳಿಗ್ಗೆ 10:50 ರಿಂದ 12:18 ರವರೆಗೆ.
ಮೇಷ ರಾಶಿ : ಮಕ್ಕಳ ಭವಿಷ್ಯಕ್ಕೆ ಸಂಪತ್ತು ಮಾಡುವ ಯೋಚನೆ ಬರುವುದು. ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಪತ್ನಿಯ ಅನಗತ್ಯ ಖರ್ಚಿಗೆ ಕಡಿವಾಣ ಹಾಕುವಿರಿ. ಇದಕ್ಕಾಗಿ ವಾಗ್ವಾದವು ನಡೆಯಬಹುದು. ಮಕ್ಕಳನ್ನು ನಿರ್ಲಕ್ಷಿಸಿದರೆ ಕಷ್ಟವಾದೀತು. ನಿಮ್ಮ ಇಂದಿನ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಬೇಕಾದೀತು. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳದೇ ಪರಿಚಿತರನ್ನು ಕೇಳಿ. ಎಂದೋ ಆದ ದೈಹಿಕ ಪೀಡೆಯು ಪುನಃ ಕಾಣಿಸಿಕೊಳ್ಳಬಹುದು. ವಿವಾಹ ಸಂಭ್ರಮದ ವಾತಾವರಣ ಮನೆಯಲ್ಲಿ ಇರಲಿದೆ. ಉದ್ಯೋಗಸ್ಥ ಸ್ತ್ರೀಯರು ಮಾನಸಿಕ ಕಿರಿಕಿರಿಯನ್ನು ಅನುಭವಿಸುವರು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಯಾರಾದರೂ ತಮ್ಮ ಕಾರ್ಯವನ್ನು ಮಾಡಲು ಒತ್ತಾಯಿಸಬಹುದು.
ವೃಷಭ ರಾಶಿ : ಹಿರಿಯರ ಮೇಲಿನ ಪ್ರೀತಿಯಿಂದ ನೀವು ಸೇವೆ ಮಾಡುವಿರಿ. ನಿಮ್ಮ ಸ್ಥಾನದ ರಕ್ಷಣೆಗಾಗಿ ಇನ್ನೊಬ್ಬರ ಮೇಲೆ ಆರೋಪವನ್ನು ಮಾಡುವಿರಿ. ಕೆಲವು ಕೆಲಸಗಳಿಗೆ ನೀವು ಆಲಸ್ಯವನ್ನು ತೋರುವಿರಿ. ನಿಮ್ಮ ಸಂಕಟಕ್ಕೆ ಸ್ಪಂದಿಸಿದವರನ್ನು ನೀವು ಗೌರವಿಸಿ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯ ಕೊರತೆ ಕಾಣಿಸುವುದು. ನಕಾರಾತ್ಮಕ ಆಲೋಚನೆಯನ್ನು ನೀವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಆಸಕ್ತಿಯ ಕ್ಷೇತ್ರವೂ ನಿಮಗೆ ಇಷ್ಟವಾಗದೇ ಹೋಗುವುದು. ನಿಮ್ಮ ನಿರ್ಧಾರಗಳು ಬಲವಾದಂತೆ ಕಾರ್ಯಗಳಲ್ಲಿಯೂ ದೃಢತೆ ಇರಲಿ. ಸಿಕ್ಕ ಅಧಿಕಾರವನ್ನು ಸದುಪಯೋಗವಾಗುವಂತೆ ಮಾಡಿಕೊಳ್ಳಿ. ದೂರಾಲೋಚನೆಯನ್ನು ಅತಿಯಾಗಿ ಇಟ್ಟುಕೊಳ್ಳುವುದು ಬೇಡ. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ವಿಸ್ತರಿಸುವ ಯೋಚನೆ ಮಾಡುವಿರಿ.
ಮಿಥುನ ರಾಶಿ : ಹಣವು ತಿರುಗಿ ಬರುವುದು ನಿಮಗೆ ಸಮಾಧಾನ ತರಲಿದೆ. ಹಣಕಾಸಿನ ವ್ಯವಹಾರದಿಂದ ನಿಮಗೆ ಅಪವಾದವು ಬರಬಹುದು. ದಾಂಪತ್ಯದಲ್ಲಿ ಅನಗತ್ಯ ವಾಗ್ವಾದಗಳು ನಡೆಯಬಹುದು. ಕುಟುಂಬದಲ್ಲಿ ಕೆಲವು ವಿಷಯಗಳನ್ನು ನಿಮಗೆ ಹೇಳದೇ ರಹಸ್ಯವಾಗಿ ಇಡುವರು. ಯಾರದೋ ಸಿಟ್ಟನ್ನು ಇನ್ನಾರದೋ ಮೇಲೆ ತೀರಿಸಿಕೊಳ್ಳುವಿರಿ. ಹಿತಶತ್ರುಗಳ ಬಾಧೆಯಿಂದ ತಪ್ಪಿಸಿಕೊಳ್ಳುವ ತನಕ ನಿಮ್ಮ ಯಾವ ಉದ್ಯೋಗವೂ ಊರ್ಜಿತವಾಗದು. ಪಾಲುದಾರಿಕೆಯ ವ್ಯವಹಾರವು ನಿಮಗೆ ಸಾಕು ಎನಿಸಬಹುದು. ಹಳೆಯ ವಾಹನವನ್ನು ನೀವು ಮಾರಾಟಮಾಡುವಿರಿ. ನೀವು ಇಂದು ಹೆಚ್ಚು ಒಂದೇ ಚಿಂತೆಯಲ್ಲಿ ಮಗ್ನರಾಗಿ ಇರುವಿರಿ. ಮನಸ್ಸು ನಿರ್ಲಿಪ್ತವಾಗಿ ಇರುವುದು. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ. ವೈಯುಕ್ತಿಕ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಿ. ಶತ್ರುಗಳಿಗೆ ತಿರುಗೇಟು ನೀಡಲು ಸಮಯ ಕಾಯುವಿರಿ.
ಕರ್ಕಾಟಕ ರಾಶಿ : ಹಳೆಯ ಪ್ರೀತಿಯಿಂದ ನಿಮಗೆ ಕಷ್ಟವಾದೀತು. ನೀವು ಅಂದುಕೊಂಡ ಕೆಲಸವು ಆಗದೇಹೋದೀತು. ಸರ್ಕಾರಿ ದಾಖಲೆಗಳನ್ನು ಭದ್ರವಾಗಿ ಇರಿಕೊಳ್ಳಿ. ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಚರ್ಚೆಯು ನಡೆಯಬಹುದು. ವಾಹನ ಚಲಾಯಿಸಲು ನಿಮಗೆ ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಎತ್ತಿಹೇಳಬಹುದು. ಸಾಹಿತ್ಯದ ಆಸಕ್ತರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಎಲ್ಲವನ್ನೂ ಬಾಹುಬಲದಿಂದ ಸಾಧಿಸುತ್ತೇನೆ ಎಂಬ ಹುಂಬುತನ ವ್ಯರ್ಥ. ಬುದ್ಧಿಯನ್ನು ಬಳಸಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ಇನ್ನೊಬ್ಬರ ಮೇಲಿನ ಅಸಮಾಧಾನವನ್ನು ನೀವು ಯಾವುದೋ ಸಂದರ್ಭದಲ್ಲಿ ಹೊರಹಾಕುವಿರಿ. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಯಾವುದೇ ಪ್ರೇರಣೆ ನಿಮಗೆ ಸಿಕ್ಕಿ, ಯೋಜನೆ ಬದಲಾಯಿಸುವಿರಿ. ಹೂಡಕೆ ನಿಮಗೆ ಪ್ರಶಸ್ತ ಎನಿಸಬಹುದು. ಇತರರ ಮಾತುಗಳು ನಿಮಗೆ ಹಿಡಿಸದೇ ಹೋಗಬಹುದು.