ಹೆಸರಿನ ಮೊದಲ ಅಕ್ಷರ I ದಿಂದ P ತನಕ ನಿಮ್ಮ ಸ್ವಭಾವವನ್ನು ತಿಳಿಸಿಕೊಡುವುದು ಏನು ಗೊತ್ತಾ?

| Updated By: ಆಯೇಷಾ ಬಾನು

Updated on: Jul 14, 2021 | 6:42 AM

I ದಿಂದ ಶುರುವಾಗಿ P ತನಕ ಹೆಸರಿನ ಮೊದಲ ಅಕ್ಷರ ನಿಮ್ಮ ಸ್ವಭಾವವನ್ನು ತಿಳಿಸಿಕೊಡುತ್ತದೆ ಎಂಬ ಸಂಗತಿ ನಿಮಗೆ ಗೊತ್ತಾ? ಇದೊಂದು ಲೇಖನ ಸರಣಿ. ಇನ್ನೂ ಒಂದು ಭಾಗ ಬರಲಿದೆ.

ಹೆಸರಿನ ಮೊದಲ ಅಕ್ಷರ I ದಿಂದ P ತನಕ ನಿಮ್ಮ ಸ್ವಭಾವವನ್ನು ತಿಳಿಸಿಕೊಡುವುದು ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ವ್ಯಕ್ತಿಗಳ ಹೆಸರಿನ ಮೊದಲ ಅಕ್ಷರವು ಇಂಗ್ಲಿಷಿನಲ್ಲಿ ಯಾವುದರಿಂದ ಆರಂಭವಾಗುತ್ತದೆ ಎಂಬುದರ ಆಧಾರದಲ್ಲಿ ಸ್ವಭಾವವು ನಿರ್ಧಾರ ಆಗುತ್ತದೆ ಎಂಬ ಆಸಕ್ತಿಕರ ಸಂಗತಿ ಬಗ್ಗೆ ಈಗಾಗಲೇ ಒಂದು ಲೇಖನವನ್ನು ಪ್ರಕಟಿಸಲಾಗಿದೆ. ಅದರಲ್ಲಿ A ಅಕ್ಷರದಿಂದ ಶುರುವಾಗಿ H ತನಕ ಆಗಿತ್ತು. ಇಂದು ಲೇಖನದ ಮುಂದುವರಿದ ಭಾಗವಾಗಿ I ಅಕ್ಷರದಿಂದ ಶುರುವಾಗಿ P ತನಕದ ಮುಂದುವರಿಸಲಾಗಿದೆ. ಬಾಕಿ ಇರುವ Q ಅಕ್ಷರದಿಂದ ಆರಂಭವಾಗಿ Z ವರೆಗೆ ಮುಂದಿನ ಲೇಖನದಲ್ಲಿ ಪೂರ್ಣಗೊಳಿಸಲಾಗುತ್ತದೆ. ಇನ್ನೇಕೆ ತಡ ಮುಂದೆ ಓದಿ.

I
I ಅಕ್ಷರದಿಂದ ಆರಂಭವಾಗುವ ಹೆಸರಿನ ಜನರು ಶುದ್ಧ ಮನಸ್ಸಿನವರು ಮತ್ತು ಇತರರ ಬಗ್ಗೆ ದಯೆಯನ್ನು ತೋರುವಂಥವರು. ಇವರ ಮೇಲೆ ಇತರರು ಅವಲಂಬಿಸಬಹುದಾದಷ್ಟು ನಂಬಿಕಸ್ತರು ಮತ್ತು ಆಳವಾದ ಚಿಂತಕರು. ತಮಗಿಂತ ಕಡಿಮೆ ಅದೃಷ್ಟಶಾಲಿಗಳಿಗೆ ಸಹಾಯ ಹಸ್ತ ಚಾಚಲು ಇವರು ಏನು ಬೇಕಾದರೂ ಮಾಡುತ್ತಾರೆ. ಆಕರ್ಷಕ ವ್ಯಕ್ತಿತ್ವದ ಇವರು ಹೆಚ್ಚಿನ ಸಂದರ್ಭಗಳಲ್ಲಿ ಅತಿಯಾಗಿ ಯೋಚಿಸುತ್ತಾರೆ. ಜತೆಗೆ ಬಹಳ ಬೇಗೆ ಮಾನಸಿಕವಾಗಿ ನೊಂದುಕೊಂಡು ಬಿಡುತ್ತಾರೆ.

J
J ಅಕ್ಷರದಿಂದ ಪ್ರಾರಂಭವಾಗುವ ಜನರು ಉಸ್ತುವಾರಿ ವಹಿಸಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಸ್ವಭಾವತಃ ಮಹತ್ವಾಕಾಂಕ್ಷೆ ಉಳ್ಳವರಾಗಿರುತ್ತಾರೆ. ಏನನ್ನು ಬಯಸುತ್ತೀರೋ ಅದನ್ನು ಪಡೆಯುವ ತನಕ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ದೃಢ ನಿಶ್ಚಯದ ಮತ್ತು ಸ್ವಾವಲಂಬಿ ಸ್ವಭಾವದ ಇವರು, ತಮ್ಮನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಕ್ಕಾಗ ಅತ್ಯುತ್ತಮವಾದದ್ದನ್ನು ಸಾಧಿಸುತ್ತಾರೆ.

K
ಇವರು ರಹಸ್ಯ ಮತ್ತು ನಾಚಿಕೆ ಸ್ವಭಾವದವರು. ಈ ಜನರು ಹೆಚ್ಚಿನ ಸಂದರ್ಭಗಳಲ್ಲಿ ತಾವು ಕೇಂದ್ರಬಿಂದುವಾಗಿರಬೇಕು ಎಂದು ಬಯಸುತ್ತಾರೆ. ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇತರರ ಜತೆಗೆ ಶಾಂತಿಯಿಂದ ಬದುಕಲು ಇಷ್ಟ ಪಡುತ್ತಾರೆ. ಇತರರ ಅಭಿಪ್ರಾಯಗಳನ್ನು ಸಹ ಗೌರವಿಸುತ್ತಾರೆ. ಸಂಬಂಧಗಳ ವಿಚಾರ ಬಂದಾಗ ಚೆಲ್ಲಾಟ ಆಡದ ಗಂಭೀರ ಸ್ವಭಾವದವರಾದ ಇವರು, ಸಂಗಾತಿಯ ಪ್ರೀತಿಯ ಬಗ್ಗೆ ಅತೀವ ವಿಶ್ವಾಸ ಹೊಂದಿರುತ್ತಾರೆ.

L
ಈ ಅಕ್ಷರದಿಂದ ಹೆಸರು ಆರಂಭವಾಗುವವರು ಜೀವನ ಮತ್ತು ಜನರನ್ನು ನೋಡುವ ಬಗೆಯೇ ಬೇರೆ. ವಿಭಿನ್ನ ದೃಷ್ಟಿಕೋನದಲ್ಲಿ ಆಲೋಚನೆ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಇವರನ್ನು ಅತ್ಯಂತ ವಿಶಿಷ್ಟವಾಗಿಸುತ್ತದೆ. ಈ ಜನರಿಗೆ ತಮ್ಮ ಸಂಗಾತಿಯೇ ಅತ್ಯಂತ ಪ್ರಮುಖ ವ್ಯಕ್ತಿಯಾಗಿರುತ್ತಾರೆ. ಇವರಿಗೆ ಅದ್ಭುತ ಹಾಸ್ಯ ಪ್ರಜ್ಞೆ ಇರುತ್ತದೆ. ಇನ್ನು ಸ್ವಭಾವತಃ ಬಹಳ ಮೋಜಿನ ವ್ಯಕ್ತಿತ್ವದವರಾಗಿರುತ್ತಾರೆ- ಇತರರಿಗೆ ಪ್ರೀತಿಪಾತ್ರರಾಗಿರುತ್ತಾರೆ.

M
ಈ ಅಕ್ಷರದೊಂದಿಗೆ ಹೆಸರು ಪ್ರಾರಂಭ ಆಗುವವರು ಸ್ವಭಾವತಃ ನಿಷ್ಠಾವಂತರು ಮತ್ತು ಕಠಿಣ ಕೆಲಸ ಮಾಡುವಂಥವರು. ಈ ಜನರು ಮೂಲತಃ ವರ್ಕೋಹಾಲಿಕ್​ಗಳು. ಇತರರನ್ನು ಮೆಚ್ಚಿಸಲು ಅಂತಲೇ ಮಾತನಾಡುವ ಪೈಕಿ ಇವರಲ್ಲ. ತಮ್ಮದೇ ಆದ ನಿಯಮಗಳು ಮತ್ತು ಪದ್ಧತಿಗಳ ಮೇಲೆ ತಮ್ಮ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಇವರು ತಮ್ಮ ತಾಳ್ಮೆಯನ್ನು ಕಳೆದುಕೊಂಡಾಗ ಆಕ್ರಮಣಕಾರಿಯಾಗುತ್ತಾರೆ.

N
ಈ ಅಕ್ಷರದಿಂದ ಹೆಸರು ಆರಂಭವಾಗುವವರು ತಾವು ಏನು ಮಾಡಿದರೂ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಹೆಸರಿನ ಆರಂಭದ ಅಕ್ಷರವಾಗಿ N ಇರುವ ಜನರಿಗೆ ಸುಪ್ತಪ್ರಜ್ಞೆ ಜಾಗ್ರತೆಯಾಗಿರುತ್ತದೆ. ಮತ್ತು ಉತ್ತಮ ಕಮ್ಯುನಿಕೇಟರ್ ಆಗಿರುತ್ತಾರೆ. ಇವರು ಇತರರನ್ನು ಅನುಸರಿಸಲು ಇಷ್ಟಪಡುವುದಿಲ್ಲ. ಬದಲಿಗೆ ತಮ್ಮದೇ ಸ್ವಂತ ಮಾರ್ಗವನ್ನು ಕಂಡುಕೊಳ್ಳಲು ಇಷ್ಟಪಡುತ್ತಾರೆ.

O
ಈ ಅಕ್ಷರದಿಂದ ಹೆಸರು ಆರಂಭವಾಗುವವರು ಇತರರ ಬಗ್ಗೆ ಸಹಾನುಭೂತಿ ಇರುವಂಥವರು ಮತ್ತು ಮಹಾನ್ ಪ್ರೇಮಿಗಳು. ಇವರು ಅತ್ಯಂತ ವಿಶ್ವಾಸಾರ್ಹ ಜನರು. ತಮ್ಮದೇ ಸ್ವಂತ ತತ್ವ- ಸಿದ್ಧಾಂತ ಮತ್ತು ಆದರ್ಶಗಳ ಪ್ರಕಾರ ಬದುಕಲು ಬಯಸುತ್ತಾರೆ. ಇವರು ಉತ್ತಮ ಶಿಕ್ಷಕರು ಮತ್ತು ಸಂಶೋಧಕರಿಗೆ ನೀವು ಇಷ್ಟಪಡುತ್ತಾರೆ. ಇತರರ ಬಗ್ಗೆ ತೋರಿಸುವ ಪ್ರೀತಿಯ ಸ್ವಭಾವದಿಂದಾಗಿ ಎಲ್ಲೇ ಹೋದರೂ ಇವರನ್ನು ಜನಪ್ರಿಯಗೊಳಿಸುತ್ತದೆ.

P
ಈ ಅಕ್ಷರದಿಂದ ಹೆಸರು ಆರಂಭವಾಗುವವರು ಸಾಮಾನ್ಯವಾಗಿ ಜೀವನದ ಬಗ್ಗೆ ಕುತೂಹಲ ಹೊಂದಿರುತ್ತಾರೆ ಮತ್ತು ಎಲ್ಲಾ ಸಮಯದಲ್ಲೂ ತಾವು ಮೇಲ್ಮಟ್ಟದಲ್ಲಿ ಇರಲು ಬಯಸುತ್ತಾರೆ. ಇನ್ನು ಸ್ವಭಾವತಃ ಮೊಂಡುತನ ಇರುತ್ತದೆ. ತಮ್ಮ ಸುತ್ತಲಿನ ಜನರನ್ನು ಸಂತೋಷಪಡಿಸಲು ಯಾವಾಗಲೂ ಪ್ರಯತ್ನಿಸುತ್ತಾರೆ. ಇವರು ಕೆಲವೊಮ್ಮೆ ಸ್ವಾರ್ಥಿ ಎನಿಸುತ್ತಾರೆ. ಈ ಜನರಲ್ಲಿನ ವಿಚಿತ್ರ ಹಾಸ್ಯ ಪ್ರಜ್ಞೆ ಮತ್ತು ಕಲಿಯುವ ಹಂಬಲವು ಸ್ನೇಹಿತರ ಮಧ್ಯೆ ಜನಪ್ರಿಯಗೊಳಿಸುತ್ತದೆ.

(ಮುಂದುವರಿಯಲಿದೆ)

ಇದನ್ನೂ ಓದಿ: ಹೆಸರಿನ ಮೊದಲ ಇಂಗ್ಲಿಷ್ ಅಕ್ಷರದ ಪ್ರಕಾರ ನಿಮ್ಮ ವ್ಯಕ್ತಿತ್ವ ಹೇಳಬಹುದು ಗೊತ್ತೆ?

(Here is the series 2 of nature of person on the basis of first letter of name. Name starts with I to P people details here)