ಹೆಸರಿನ ಮೊದಲ ಇಂಗ್ಲಿಷ್ ಅಕ್ಷರದ ಪ್ರಕಾರ ನಿಮ್ಮ ವ್ಯಕ್ತಿತ್ವ ಹೇಳಬಹುದು ಗೊತ್ತೆ?

ಹೆಸರಿನ ಮೊದಲ ಇಂಗ್ಲಿಷ್ ಅಕ್ಷರದ ಪ್ರಕಾರ ಈ ದಿನದ ಲೇಖನದಲ್ಲಿ A ಅಕ್ಷರದಿಂದ ಶುರುವಾಗಿ H ತನಕ ಮಾಹಿತಿ ನೀಡಲಾಗಿದೆ. ಈ ಮಾಹಿತಿಯನ್ನು ಹೋಲಿಕೆ ಮಾಡಿಕೊಂಡು ನೋಡಿ, ಇದು ಹೌದೋ ಇಲ್ಲವೋ ತಿಳಿಸಿ. ಅಂದಹಾಗೆ ಈ ಲೇಖನದಲ್ಲಿ Aಯಿಂದ Hವರೆಗೆ ಮಾಹಿತಿ ಇದೆ.

ಹೆಸರಿನ ಮೊದಲ ಇಂಗ್ಲಿಷ್ ಅಕ್ಷರದ ಪ್ರಕಾರ ನಿಮ್ಮ ವ್ಯಕ್ತಿತ್ವ ಹೇಳಬಹುದು ಗೊತ್ತೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jul 13, 2021 | 6:45 AM

ನಿಮ್ಮ ಹೆಸರು ಇಂಗ್ಲಿಷ್​ನ ಯಾವ ಅಕ್ಷರದಿಂದ ಶುರುವಾಗುತ್ತದೆ? ಅದರ ಆಧಾರದ ಮೇಲೆ ಸ್ವಭಾವವನ್ನು ಹೇಳಬಹುದು ಅಂತ ಕೆಲವರ ಅಭಿಪ್ರಾಯ ಇದೆ. ಅದು ಕೂಡ ಸಾಧ್ಯವಾ ಎಂಬ ಕುತೂಹಲದಿಂದ ಇಲ್ಲಿ ಅಂಥ ಮಾಹಿತಿಯನ್ನು ನೀಡಲಾಗುತ್ತಿದೆ. ಈ ದಿನದ ಲೇಖನದಲ್ಲಿ A ಅಕ್ಷರದಿಂದ ಶುರುವಾಗಿ H ತನಕ ಮಾಹಿತಿ ನೀಡಲಾಗಿದೆ. ಈ ಮಾಹಿತಿಯನ್ನು ಹೋಲಿಕೆ ಮಾಡಿಕೊಂಡು ನೋಡಿ, ಇದು ಹೌದೋ ಇಲ್ಲವೋ ತಿಳಿಸಿ. ಅಂದಹಾಗೆ ಈ ಲೇಖನದಲ್ಲಿ Aಯಿಂದ Hವರೆಗೆ ಮಾಹಿತಿ ಇದೆ. ಈ ಲೇಖನ ಸರಣಿಯು ಮುಂದುವರಿಯುತ್ತದೆ.

A ಇದು ಅತ್ಯಂತ ಶಕ್ತಿಶಾಲಿ ಅಕ್ಷರಗಳಲ್ಲಿ ಒಂದಾಗಿದೆ. ಮತ್ತು ನಿಮ್ಮ ಹೆಸರು A ಅದರೊಂದಿಗೆ ಪ್ರಾರಂಭವಾದರೆ, ದೃಢ ನಿಶ್ಚಯ ಇರುವಂಥ ಸ್ವಭಾವದವರು. ಉದ್ಯಮಶೀಲ ಮತ್ತು ಸ್ವಭಾವತಃ ಧೈರ್ಯಶಾಲಿಗಳು. ನಿಮ್ಮ ಕೌಶಲಗಳ ಬಗ್ಗೆ ತುಂಬಾ ವಿಶ್ವಾಸವಿರುತ್ತದೆ ಮತ್ತು ಸಾಹಸ ಹಾಗೂ ಚಟುವಟಿಕೆಯ ಹುಡುಕಾಟದಲ್ಲಿ ನಿರಂತರವಾಗಿ ಇರುತ್ತೀರಿ. ನಿಮ್ಮದೇ ಆದ ನಿಯಮಗಳಲ್ಲಿ ಜೀವನ ನಡೆಸಲು ಇಷ್ಟಪಡುತ್ತೀರಿ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಪ್ರೇರಕ ಶಕ್ತಿಯಾಗಿರಲು ಪ್ರಯತ್ನಿಸುತ್ತೀರಿ.

B ನಿಮ್ಮ ಹೆಸರು Bಯೊಂದಿಗೆ ಪ್ರಾರಂಭವಾದರೆ ಭಾವನೆಗಳು ಮತ್ತು ಅನಿಸಿಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತೀರಿ. ಜನರನ್ನು ಎಚ್ಚರಿಕೆಯಿಂದ ಮತ್ತು ಸುಲಭವಾಗಿ ನಿಭಾಯಿಸುವುದು ನಿಮಗೆ ತಿಳಿದಿರುತ್ತದೆ. ಆದರೆ ನೀವು ಸ್ವ ಕೇಂದ್ರಿತ ವ್ಯಕ್ತಿತ್ವದವರು ಮತ್ತು ಕೆಲವೊಮ್ಮೆ ಸ್ವಲ್ಪ ದುರಾಸೆಯೂ ಆಗಬಹುದು.

C ಈ ಅಕ್ಷರದಿಂದ ಪ್ರಾರಂಭವಾಗುವ ಜನರು ಪ್ರತಿಭಾವಂತರು ಮತ್ತು ಇತರರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಸ್ವಭಾವತಃ ಸಮಾಜದಲ್ಲಿ ಚೆನ್ನಾಗಿ ಬೆರೆಯುತ್ತಾರೆ. ಆದರೆ ಇವರಿಗೆ ಯಾರಾದರೂ ತೊಂದರೆ ಮಾಡಿದರೆ, ನೋವು ಮಾಡಿದ್ದರೆ ಪ್ರತೀಕಾರವನ್ನು ತೆಗೆದುಕೊಳ್ಳದೆ ಬಿಡುವುದಿಲ್ಲ. ಇವರಲ್ಲಿ ಕಾಣುವ ಗಮನಾರ್ಹ ಸಂಗತಿ ಅಂದರೆ ನಿಷ್ಠೆ! ಉತ್ತಮ ವಾಗ್ಮಿಗಳು, ಆದರೆ ಕೆಲವೊಮ್ಮೆ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

D ಈ ಅಕ್ಷರದೊಂದಿಗೆ ಹೆಸರು ಪ್ರಾರಂಭ ಆಗುವ ಜನರು ಸುರಕ್ಷತೆ ಮತ್ತು ಕಠಿಣ ಪರಿಶ್ರಮವನ್ನು ಪ್ರತಿನಿಧಿಸುತ್ತಾರೆ. ಸ್ವಚ್ಛತೆಗೆ ಆದ್ಯತೆ ಹೆಚ್ಚು ನೀಡುತ್ತಾರೆ. ಎಂಥ ಸಮಯದಲ್ಲೂ ಎಲ್ಲ ವಿಷಯಗಳನ್ನು ಕ್ರಮವಾಗಿ ಇರಿಸಲು ಇಷ್ಟಪಡುತ್ತಾರೆ. ತಮ್ಮ ಉದ್ದೇಶದ ಬಗ್ಗೆ ಸ್ಪಷ್ಟತೆ ಇರುತ್ತದೆ. ಇವು ಅವರನ್ನು ಜನ ನಾಯಕರನ್ನಾಗಿ ಮಾಡುತ್ತದೆ. ಆದರೆ ಕೆಲವೊಮ್ಮೆ ವಿಪರೀತ ಮೊಂಡುತನ ಮಾಡುತ್ತಾರೆ ಮತ್ತು ತಮ್ಮ ಮೇಲೆ ಹತೋಟಿಯನ್ನು ಕಳೆದುಕೊಳ್ಳುತ್ತಾರೆ.

E ಇವರು ಸ್ವಭಾವತಃ ಸಹಾನುಭೂತಿ ತೋರಿಸುವ, ಸೌಮ್ಯ ಗುಣದವರು. ಸಂಕೀರ್ಣ ಸಮಸ್ಯೆಗಳನ್ನೂ ಸುಲಭವಾಗಿ ಪರಿಹರಿಸಬಲ್ಲಂಥವರು. ಶೀಘ್ರ ಚಿಂತಕರು ಮತ್ತು ಜೀವನದ ಬಗ್ಗೆ ಉತ್ತಮ ದೃಷ್ಟಿಕೋನ ಇರುವಂಥವರು. ಆಕರ್ಷಕ ವ್ಯಕ್ತಿತ್ವದ ಮೂಲಕ ಹೊಸ ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಗೆಲ್ಲುತ್ತಾರೆ. ಆದರೆ ಪ್ರಣಯ ಸಂಬಂಧಗಳಲ್ಲಿ ವಿಶ್ವಾಸಾರ್ಹರಲ್ಲ ಮತ್ತು ಸೋಗಲಾಡಿಗಳು/

F ಈ ವ್ಯಕ್ತಿಗಳು ಕಾಳಜಿಯುಳ್ಳ, ಜವಾಬ್ದಾರಿಯುತ, ಸ್ವಭಾವತಃ ಕುಟುಂಬ-ಆಧಾರಿತ ಮನಸ್ತತ್ವದವರು. ಅತ್ಯಂತ ರೋಮ್ಯಾಂಟಿಕ್ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಬದ್ಧರಾಗಿರುತ್ತಾರೆ. ತೊಂದರೆ ಸಮಯದಲ್ಲಿ, ಕೆಲವೊಮ್ಮೆ ಬಾಲಿಶ ಮತ್ತು ಪ್ರತೀಕಾರದ ಸ್ವಭಾವವನ್ನು ಹೊಂದಿರುತ್ತಾರೆ.

G ಇವರು ತಮ್ಮದೇ ರೀತಿಯಲ್ಲಿ ಕೆಲಸ ಮಾಡಲು ಇಷ್ಟಪಡುವ ಸೃಜನಶೀಲ ಮತ್ತು ಸಹಜ ವ್ಯಕ್ತಿಗಳು. ಇತರರು ಸಲಹೆ ನೀಡಿದರೆ ಸಿಟ್ಟು ಬರುತ್ತದೆ. ಅದನ್ನು ಸಾಮಾನ್ಯವಾಗಿ ಹಸ್ತಕ್ಷೇಪ ಎಂದು ಭಾವಿಸುತ್ತಾರೆ. ಮೂಲತಃ, ಸ್ವಂತ ನಿಯಮಗಳು ಮತ್ತು ಲೆಕ್ಕಾಚಾರಗ ಮೇಲೆ ನಿಮ್ಮ ಜೀವನವನ್ನು ನಡೆಸಲು ನೀವು ಇಷ್ಟಪಡುತ್ತಾರೆ. ಬುದ್ಧಿವಂತ ಮತ್ತು ತ್ವರಿತ ಮನಸ್ಸಿನ ಇವರು, ಸತ್ಯವನ್ನು ಕಂಡುಹಿಡಿಯುವಲ್ಲಿ ನಿಸ್ಸೀಮರು.

H ಎಚ್ ಅಕ್ಷರದಿಂದ ಹೆಸರು ಶುರುವಾಗುವವರು ಜೀವನವನ್ನು ಪ್ರಾಕ್ಟಿಕಲ್ ಆಗಿ ನೋಡುತ್ತಾರೆ. ಅತ್ಯಂತ ಮಹತ್ವಾಕಾಂಕ್ಷೆಯ ಜನ ಇವರು. ಹಣದ ಹರಿವು ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಕುಶಾಗ್ರಮತಿಗಳು. ಇವರು ಉತ್ತಮ ನಾಯಕರಾಗಬಲ್ಲರು. ರೋಗ ಬಾಧಿತರು, ಸೂಕ್ಷ್ಮ ದೇಹದವರಾಗಿರುತ್ತಾರೆ. ಗುರಿಗಳನ್ನು ತಲುಪಲು ತುಂಬಾ ಶ್ರಮಿಸುತ್ತಾರೆ. ಸಂಬಂಧದ ನಿಭಾಯಿಸುವಲ್ಲಿ ವಿಫಲರಾಗುತ್ತಾರೆ. ಸದಾ ತಮ್ಮ ಬಗ್ಗೆ ಮಾತ್ರ ಆಲೋಚಿಸುತ್ತಾರೆ. (ಮುಂದುವರಿಯಲಿದೆ)

ಇದನ್ನೂ ಓದಿ: Numerology: 4, 13, 31ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತೆ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ನಿಮ್ಮ ಮನೆಯ ಯಾವ ರೂಮಿಗೆ ಯಾವ ಬಣ್ಣ ಬೆಸ್ಟ್?; ಇಲ್ಲಿದೆ ಮಾಹಿತಿ

( Characteristics of person on the basis of first letter of name)

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!