Numerology: 4, 13, 31ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತೆ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ

ಯಾರು 4, 13 ಅಥವಾ 31ನೇ ತಾರೀಕಿನಂದು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 4 ಆಗುತ್ತದೆ. ಇವರು ರಾಹು ಗ್ರಹದ ಆಧಿಪತ್ಯಕ್ಕೆ ಒಳಪಟ್ಟಿರುತ್ತಾರೆ. ಅದರಿಂದಾಗಿ ಇವರ ಸ್ವಭಾವ ಹೇಗಿರುತ್ತದೆ ಎಂಬುದರ ವಿವರ ಇಲ್ಲಿದೆ.

Numerology: 4, 13, 31ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತೆ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 27, 2021 | 6:51 AM

ಯಾರು 4, 13 ಅಥವಾ 31ನೇ ತಾರೀಕಿನಂದು ಹುಟ್ಟಿರುತ್ತಾರೋ ಅವರ ಜನ್ಮ ಸಂಖ್ಯೆ 4 ಆಗುತ್ತದೆ. ಆ ಪೈಕಿ 4ನೇ ತಾರೀಕಿನಂದೇ ಹುಟ್ಟಿದವರ ಮೇಲೆ ರಾಹುವಿನ ಸಂಪೂರ್ಣ ಪ್ರಭಾವ ಇರುತ್ತದೆ. ಇನ್ನು 13 ಹಾಗೂ 31ನೇ ತಾರೀಕಿನಂದು ಯಾರು ಹುಟ್ಟಿರುತ್ತಾರೋ ಅವರ ಮೇಲೆ ರವಿ, ಗುರು ಹಾಗೂ ರಾಹು ಹೀಗೆ ಮೂರರ ಪ್ರಭಾವವೂ ಇರುತ್ತದೆ. ಈ ದಿನಾಂಕಗಳಂದು ಹುಟ್ಟಿದವರ ಜತೆಗಿನ ಒಡನಾಟ, ಮಾತುಕತೆ, ಸ್ನೇಹ ಯಾವುದೂ ಸಲೀಸಲ್ಲ. ಏಕೆಂದರೆ, ತಮ್ಮದೇ ಲೋಕದಲ್ಲಿ ಇವರು ಬಲು ಗಟ್ಟಿಗರು, ಸ್ಥಿರವಾಗಿರುತ್ತಾರೆ ಮತ್ತು ಆತ್ಮವಿಶ್ವಾಸ ಇರುತ್ತದೆ. ಬದಲಾವಣೆಗೆ ಒಗ್ಗಿಕೊಳ್ಳುವುದು ಬಹಳ ಕಷ್ಟದ ಕೆಲಸ ಇವರಿಗೆ. ಆ ಕಾರಣಕ್ಕೆ ಏನು ಇಷ್ಟೆಲ್ಲ ನಿಧಾನ ಅನ್ನಿಸಿಕೊಳ್ಳುತ್ತಾರೆ. ಈ ನಿಧಾನದ ಸ್ವಭಾವದ ಕಾರಣಕ್ಕೆ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಯಾವುದರ ಬಗ್ಗೆಯಾದರೂ ಆಲೋಚನೆ ಮಾಡುವುದಕ್ಕೆ ಅಂತಲೇ ಬಹಳ ಸಮಯವನ್ನು ಕಳೆಯುತ್ತಾರೆ. ಏನಾದರೂ ಹೊಸದನ್ನು ಆರಂಭಿಸುವುದರಲ್ಲಿ ಹಾಗೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿ ಇರುವ ತಲ್ಲೀನತೆ ಮಾತ್ರ ಎಂಥವರೂ ತಲೆ ತೂಗುವಂಥದ್ದಾಗಿರುತ್ತದೆ.

ಅದೆಂಥ ಅದ್ಭುತವಾದದ್ದೇ ಎದುರಿಗಿದ್ದರೂ ಪೂರ್ಣ ತೃಪ್ತಿ ಅನ್ನೋದು ಇವರ ಪಾಲಿಗೆ ಇರಲ್ಲ. ಯಾವಾಗಲೂ ಇಂಪ್ರೂವೈಸೇಷನ್​ಗೆ ಎದುರು ನೋಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಈ ಕಾರಣಕ್ಕೆ ಇವರಲ್ಲೊಂದು ಹತಾಶೆ ಸದಾ ಎದ್ದು ಕಾಣುತ್ತದೆ. ಕೆಲಸ ಅಂತ ಬಂದರೆ ವಿಪರೀತ ಗಂಭೀರವಾಗುತ್ತಾರೆ. ವಿಶ್ರಾಂತಿ ಸಮಯ ಅಂತಲೇ ಸಿಗುವುದಿಲ್ಲ. ಕೆಲಸ ಮಾಡದಿರುವ ಅಥವಾ ಬಿಡುವಾದ ಸಮಯ ಎಂಬುದನ್ನು ಊಹಿಸಿಕೊಳ್ಳುವುದು ಸಹ ಈ 4ರ ಸಂಖ್ಯೆಯವರಿಗೆ ಕಷ್ಟ. ಕರುಣೆ ಅನ್ನೋದು ಕಮ್ಮಿ, ಕೆಲವು ಬಾರಿ ಕಂಜ್ಯೂಸ್ ಥರ ಅನಿಸಿಕೊಳ್ಳುತ್ತಾರೆ ಮತ್ತು ಕ್ರೂರಿಗಳಂತೆ ಕಾಣುತ್ತಾರೆ. ಇವರಿಗೆ ತಮಗೆ ನಿಜವಾಗಲೂ ಬೇಕಾದದ್ದು ಏನು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇರುವುದಿಲ್ಲ ಅನ್ನೋದು ಕೂಡ ಸಮಸ್ಯೆ. ತಾವು ಅಂದುಕೊಂಡಿದ್ದು ಆಗಿಬಿಟ್ಟರೆ ಸಾಕು, ಅದರಿಂದ ಲಾಭವಾಯಿತೋ ನಷ್ಟವಾಯಿತೋ ನೋಡುವುದಕ್ಕೆ ಹೋಗಲ್ಲ.

ಜೀವನದಲ್ಲಿ ಮೇಲೇರುವುದಕ್ಕೆ ಬಹಳ ಶ್ರಮವನ್ನು ಹಾಕುತ್ತಾರೆ. ಆದರೂ ತಮ್ಮ ಯಶಸ್ಸಿನ ಬಗ್ಗೆ ಪೂರ್ಣ ತೃಪ್ತಿ ಸಿಗಲ್ಲ. ಇವರಿಗೆ ಅಭದ್ರತಾ ಭಾವ ಹೆಚ್ಚು ಕಾಡುತ್ತದೆ. ಪ್ರಣಯದ ಸಂಗತಿಗಳು ಅಷ್ಟೇನೂ ಆಕರ್ಷಿಸುವುದಿಲ್ಲ. ಪ್ರೀತಿ- ಸಂಬಂಧಗಳನ್ನು ಸರಿಯಾಗಿ ನಿಭಾಯಿಸುವುದಕ್ಕೆ ಹೆಣಗಾಡುತ್ತಾರೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಹಾಗೂ ಮುಕ್ತವಾಗಿ ಮಾತನಾಡುವುದಕ್ಕೆ ತುಂಬ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಒಂದು ಸಲ ಪ್ರೀತಿಯಲ್ಲಿ ಬಿದ್ದರೆ ಅದರ ಆಳದಲ್ಲಿ ಇಳಿಯುತ್ತಾರೆ ಮತ್ತು ನಿಷ್ಠರಾಗಿರುತ್ತಾರೆ. ತುಂಬ ಉತ್ಕಟವಾದ ಪ್ರೀತಿ, ಪ್ರಣಯದ ಕ್ಷಣಗಳು, ಶೃಂಗಾರ ಇಂಥವೆಲ್ಲ ಇವರಿಂದ ನಿರೀಕ್ಷಿಸುವುದು ಕಷ್ಟ. ನಿಷ್ಠೆಯಿಂದ ಪ್ರೀತಿಸುತ್ತಾರೆ. ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ: Numerology: ಯಾವುದೇ ತಿಂಗಳಿನ 9, 18 ಹಾಗೂ 27ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

(People who born on 4th, 13th and 31st their nature and characteristics explained according to numerology)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ