Weekly Horoscope ವಾರ ಭವಿಷ್ಯ: ಮುಂದಿನ ವಾರದ ಭವಿಷ್ಯದಲ್ಲಿ ಯಾರ್ಯಾರಿಗೆ ಒಳಿತು?

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಮುಂದಿನ ವಾರದ ಭವಿಷ್ಯದಲ್ಲಿ ಯಾರ್ಯಾರಿಗೆ ಒಳಿತು?
ವಾರ ಭವಿಷ್ಯ
Follow us
TV9 Web
| Updated By: ಆಯೇಷಾ ಬಾನು

Updated on: Jun 27, 2021 | 6:40 AM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ತಾ.28-06-2021 ರಿಂದ ತಾ.04-07-2021 ರ ತನಕ ಮೇಷರಾಶಿ:- ಖಾಸಗಿ ಕಂಪನಿ ಕೆಲಸದಲ್ಲಿದ್ದರೆ,ಸ್ವಲ್ಪ ಕೆಲಸದ ಒತ್ತಡ ಇರುತ್ತದೆ ಹಾಗೂ ಸರ್ಕಾರಿ ಕೆಲಸದವರಿಗೆ ಈ ವಾರ ಉತ್ತಮವಾಗಿದೆ. ವ್ಯಾಪಾರಸ್ಥರಿಗೆ ಉತ್ತಮವಾದ ದಿನವಾಗಿದೆ ಹಾಗೂ ಉತ್ತಮ ಲಾಭ ಸಿಗುತ್ತದೆ ಸ್ವಲ್ಪ ಹಣದ ವಿಚಾರದಲ್ಲಿ ನೋಡಿಕೊಂಡು ಖರ್ಚು ಮಾಡಬೇಕು ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಕುಟುಂಬಕ್ಕೆ ಬೆಂಬಲವನ್ನು ಕೊಡುತ್ತೀರಿ ಮನೆಯ ಸದಸ್ಯರಿಗೆ ತುಂಬಾ ಸಹಾಯ ಮಾಡುತ್ತೀರಿ ಶೈಕ್ಷಣಿಕ ರಂಗದವರಿಗೆ ಉತ್ತಮ ವಾರವಾಗಿದೆ ಕುಟುಂಬದ ಸದಸ್ಯರ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಶೇರುಗಳು ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ. ಅದೃಷ್ಟ ಬಣ್ಣ: ಕೆಂಪು ಅದೃಷ್ಟ ಸಂಖ್ಯೆ: 4

ವೃಷಭರಾಶಿ. ಆತ್ಮವಿಶ್ವಾಸದಲ್ಲಿ ಕೆಲಸ ಮಾಡುತ್ತೀರಿ, ಆದರೆ ಅತಿ ವಿಶ್ವಾಸದಲ್ಲಿ ಯಾರನ್ನೂ ಕೂಡ ನಂಬಬೇಡಿ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ನಿಮಗೆ ಉತ್ತಮ ವಾರವಾಗಿದೆ. ಅದು ನಿಮಗೆ ಈಡೇರುತ್ತದೆ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುತ್ತದೆ ವ್ಯವಹಾರಗಳು ಇಂದು ಉತ್ತಮವಾಗಿರುತ್ತದೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಕಠಿಣವಾಗಿ ಮಾತನಾಡುತ್ತೀರಾ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಉತ್ತಮವಾದ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. ನೀವು ಸಂತೋಷವಾಗಿರುತ್ತೀರಿ, ಹಿರಿಯರ ಸಲಹೆಗಳು ನಿಮಗೆ ಸಿಗುತ್ತದೆ. ಅದೃಷ್ಟ ಬಣ್ಣ: ಬಿಳಿ ಅದೃಷ್ಟ ಸಂಖ್ಯೆ: 3

ಮಿಥುನ ರಾಶಿ- ನಿಮಗೆ ಆರೋಗ್ಯ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ, ಒಂದು ಸಣ್ಣ ತೊಂದರೆ ಕಾಣಿಸಿಕೊಂಡರು ವೈದ್ಯರ ಬಳಿ ತೋರಿಸಿಕೊಳ್ಳಬೇಕು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ನಿಮ್ಮ ಕುಟುಂಬದ ಜೊತೆ ನೀವು ಸ್ವಲ್ಪ ಕಠಿಣವಾಗಿ ಇರಬೇಕು ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆಫೀಸ್ ನಲ್ಲಿ ಕೆಲಸ ಮಾಡಬಹುದು ನಿಮ್ಮ ಬಾಸ್ ಜೊತೆ ಸ್ವಲ್ಪ ಚೆನ್ನಾಗಿ ಮಾತನಾಡಬೇಕು ಇಲ್ಲದಿದ್ದರೆ ನಿಮಗೆ ಬೈಯುತ್ತಾರೆ,ಮತ್ತು ಆರ್ಥಿಕ ಅಭಿವೃದ್ಧಿ ನಿಮಗೆ ಸ್ವಲ್ಪ ತೊಂದರೆ ಇದೆ, ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ವ್ಯಾಪಾರ ಉದ್ಯೋಗದಲ್ಲಿ ಉತ್ತಮ ದಿನವಾಗಿದೆ ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತೀರಿ ಹಾಗೂ ನಿಮಗೆ ಉತ್ತಮವಾದ ಲಾಭ ಸಿಗುತ್ತದೆ ವಿದ್ಯಾರ್ಥಿಗಳಿಗೆ ಒಳ್ಳೆಯ ವಾರವಾಗಿದೆ. ಸ್ನೇಹಿತರ ಜೊತೆ ಉತ್ತಮವಾಗಿ ಇರುತ್ತೀರ. ಅದೃಷ್ಟ ಬಣ್ಣ: ನೇರಳೆ ಅದೃಷ್ಟ ಸಂಖ್ಯೆ: 5

ಕಟಕ ರಾಶಿ- ವ್ಯಾಪಾರಸ್ಥರಿಗೆ ವಿಶೇಷವಾದ ಉತ್ತಮ ಲಾಭ ಸಿಗುತ್ತದೆ ಯಾವುದೇ ವ್ಯಾಪಾರ ಮಾಡಿದರು ಅಧಿಕ ಲಾಭ ಗಳಿಸುತ್ತಾರೆ ,ಅದರಲ್ಲೂ ತೈಲ ವ್ಯಾಪಾರದಲ್ಲಿ ಉತ್ತಮವಾದ ಆರ್ಥಿಕ ಪರಿಸ್ಥಿತಿ ಹೊಂದುತ್ತೀರಿ ಕುಟುಂಬ ಜೀವನದಲ್ಲಿ ಸ್ವಲ್ಪ ಹಲವರ ಸಮಸ್ಯೆ ಉಂಟಾಗುತ್ತದೆ, ಮತ್ತು ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ವಿದ್ಯಾರ್ಥಿಗಳು ತಾವು ಅಂದುಕೊಂಡ ಗುರಿಯನ್ನು ತಲಪಬಹುದು ಕಷ್ಟಪಟ್ಟು ಓದಿದ್ದಾರೆ ನಿಮಗೆ ಬರಬೇಕಾದ ಹಣ ನಿಮಗೆ ಬರುತ್ತದೆ ಅತಿಯಾದ ಆತ್ಮವಿಶ್ವಾಸ ನಿಮಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಕೃಷಿಕರಿಂದ ನಿಮಗೆ ಸಿಕ್ಕ ಪುಟ್ಟ ಮೊದಲಾದ ಸಿಗುತ್ತದೆ ಹಾಕಿದ ಬಂಡವಾಳಕ್ಕೆ ಉತ್ತಮ ಲಾಭ ಸಿಗುತ್ತದೆ ಕಾರ್ಯಕ್ಷೇತ್ರ ಮತ್ತು ಜೀವನದಲ್ಲಿ ಹಲವಾರು ಸಮಸ್ಯೆಯನ್ನು ಎದುರಿಸುತ್ತಿದೆ ನೀವು ಉದ್ಯೋಗ ಹುಡುಕುತ್ತಿದ್ದರೆ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗದೆ ಕೆಲಸ ಮಾಡುವಂತೆ ನೀವು ಹುಡುಕುತ್ತಿದ್ದೀರಿ ಜೀವನದಲ್ಲಿ ಬಹಳಷ್ಟು ಆಸೆಗಳನ್ನು ಇಟ್ಟುಕೊಂಡಿದ್ದೀರಿ ಎಲ್ಲವೂ ಈಡೇರುತ್ತದೆ ನೀವು ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ವಿಷಯವನ್ನು ಕೇಳುತ್ತೀರಾ ನಿಮ್ಮ

ಅದೃಷ್ಟ ಬಣ್ಣ: ಹಸಿರು ಅದೃಷ್ಟ ಸಂಖ್ಯೆ: 8

ಸಿಂಹರಾಶಿ- ನೀವು ಕೆಲಸಮಾಡುತ್ತಿದ್ದರೆ ಉನ್ನತ ಅಧಿಕಾರಿಗಳಿಂದ ಉತ್ತಮವಾದ ಗೌರವ ಪಡೆದುಕೊಳ್ಳುತ್ತೀರಿ, ವ್ಯಾಪಾರ ಮಾಡುವವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದೆ ಹಾಕಬೇಕು ಆರ್ಥಿಕ ಪರಿಸ್ಥಿತಿಯು ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಮತ್ತು ವೈಯಕ್ತಿಕ ವಿಚಾರದಲ್ಲಿ ಕುಟುಂಬದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಸಂಗಾತಿ ನೊಂದಿಗೆ ಸಂಬಂಧ ತೀವ್ರಗೊಳ್ಳುತ್ತದೆ ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ವಿದ್ಯಾರ್ಥಿಗಳಿಗೆ ಒಳ್ಳೆಯ ವಾರವಾಗಿದೆ. ನಿಮ್ಮ ಸ್ನೇಹಿತರಿಗೆ ಇಂದು ಸಹಾಯ ಮಾಡುತ್ತೀರಿ ನಿಮ್ಮ ಮನೆ ದೇವರನ್ನು ನೆನೆದು ಯಾವುದೇ ಕೆಲಸ ಮಾಡಬೇಕಾದರೂ ಈ ರೀತಿ ಮಾಡಿ. ಸಂಗತಿಯೊಂದಿಗೆ ನೀವು ವಾರ ಯಾವುದೇ ಜಗಳ ಆಡಬೇಡಿ. ಅದೃಷ್ಟ ಬಣ್ಣ: ಕಿತ್ತಳೆ ಅದೃಷ್ಟ ಸಂಖ್ಯೆ: 5

ಕನ್ಯಾರಾಶಿ- ಆರ್ಥಿಕ ಪರಿಸ್ಥಿತಿಗಳನ್ನು ಬಲಪಡಿಸಲು ನಿಮ್ಮ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಯಾವುದೇ ಕೆಲಸ ಮಾಡಬೇಕಾದರೆ ಆತುರ ಪಡಬೇಡಿ ಸ್ವಲ್ಪ ಯೋಚನೆ ಮಾಡಿ ಕೆಲಸ ಮಾಡಿ ಹಣಕಾಸಿನ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ತಾವು ನಿರೀಕ್ಷೆ ಮಾಡಿದಂತೆ ಫಲಿತಾಂಶ ಸಿಗುವುದಿಲ್ಲ ಕಚೇರಿಯಲ್ಲಿ ನೀವು ಶ್ರಮಿಸುತ್ತಿದೆ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ ಸ್ನೇಹಿತರ ಜೊತೆ ಒಂದು ಚಿಕ್ಕ ಪ್ರವಾಸಕ್ಕೆ ಹೋಗುತ್ತೀರಿ ಹಳೆಯ ಸಂಬಂಧಿಗಳು ನಿಮ್ಮ ಹತ್ತಿರ ಬಂದು ಉತ್ತಮವಾಗಿ ಮತ್ತು ಸಂತೋಷವಾಗಿರುತ್ತಾರೆ. ಅದೃಷ್ಟ ಬಣ್ಣ: ಬಿಳಿ ಅದೃಷ್ಟ ಸಂಖ್ಯೆ: 1

ತುಲಾರಾಶಿ- ಸಂಗಾತಿ ಜೊತೆ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ನಿಮ್ಮ ಪ್ರೀತಿಪಾತ್ರರ ಅವರಿಗೆ ಏನಾದರೂ ಉಡುಗೊರೆ ನೀಡುತ್ತೀರಿ ಮದುವೆಯಾಗದಿದ್ದರೆ ನಿಮಗೆ ಕಂಕಣ ಭಾಗ್ಯ ದೊರೆಯುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ವ್ಯಾಪಾರದಲ್ಲಿ ನಿಮಗೆ ಉತ್ತಮವಾದ ಲಾಭ ಸಿಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ತುಂಬಾ ಅದ್ದೂರಿಯಾಗಿ ಆಗುತ್ತದೆ ನಿಮಗೆ ಮಧುಮೇಹ ಕಾಯಿಲೆ ಇದ್ದರೆ ಸೇವಿಸುವ ಆಹಾರದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಈ ವಾರ ನಿಮಗೆ ಮನೆಯ ಕೆಲಸದಲ್ಲಿ ಸ್ವಲ್ಪ ಒತ್ತಡ ಇರುತ್ತದೆ. ನೀವು ವಾರ ಯಾರಿಗೂ ಸಾಲ ಕೊಡಬಾರದು ಹಾಗೂ ಸ್ನೇಹಿತರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೃಷ್ಟ ಬಣ್ಣ: ಗುಲಾಬಿ ಅದೃಷ್ಟ ಸಂಖ್ಯೆ: 1

ವೃಶ್ಚಿಕ ರಾಶಿ- ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಮಹತ್ವ ವಾರವಾಗಲಿದೆ. ನೀವು ಹಲವು ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ ಮತ್ತು ಉದ್ಯೋಗ ಇಲ್ಲದವರಿಗೆ ಅವಕಾಶ ಸಿಗುತ್ತದೆ ನೀವು ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಬೇಕು ಎಂದರೆ ನಿಮಗೆ ಒಳ್ಳೆಯ ದಿನವಾಗಿದೆ. ನೀವು ಈ ವಾರ ಹಳೆಯ ಸಾಲದ ಬಗ್ಗೆ ಸ್ವಲ್ಪ ಚಿಂತನೆ ಮಾಡುತ್ತೀರಿ. ನಿಮ್ಮ ಹಣಕಾಸಿನ ಎಚ್ಚರದ ಬಗ್ಗೆ ಸ್ವಲ್ಪ ನಿರ್ಧಾರ ತೆಗೆದುಕೊಳ್ಳಬೇಕು ಮನೆಯವರಿಂದ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಹಣಕಾಸಿನ ಸಮಸ್ಯೆ ಸ್ವಲ್ಪ ನಿವಾರಣೆಯಾಗುತ್ತದೆ ನಿಮ್ಮ ಸ್ವಂತ ಕೆಲಸ ಮತ್ತು ಕುಟುಂಬದ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುತ್ತೀರಿ ಮತ್ತು ವ್ಯಾಪಾರದಲ್ಲಿ ಉತ್ತಮವಾದ ಲಾಭ ಸಿಗುತ್ತದೆ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಚಿಂತನೆ ಮಾಡುತ್ತಾರೆ. ಅದೃಷ್ಟ ಬಣ್ಣ: ಕಪ್ಪು ಅದೃಷ್ಟ ಸಂಖ್ಯೆ: 4

ಧನಸ್ಸು ರಾಶಿ- ಯಾವುದೇ ಸಣ್ಣ ಕೆಲಸವನ್ನು ನೀವು ಆಸಕ್ತಿಯಿಂದ ಮತ್ತು ಸಹನೆಯಿಂದ ಮಾಡಬೇಕು ನೀವು ಕೆಲಸದ ಬಗ್ಗೆ ಯೋಚನೆ ಮಾಡುತ್ತಿದ್ದರೆ ಹಾಗೂ ಅದರ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ವ್ಯಾಪಾರಸ್ಥರು ಉತ್ತಮವಾದ ವಾರವಾಗಿದೆ. ಹಾಗೂ ಉತ್ತಮವಾದ ಲಾಭ ಸಿಗುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ನಿಮ್ಮ ಮನೆಗೆ ಅತಿಥಿ ಆಗಮನವಾಗುತ್ತದೆ. ನೀವು ಯಾವುದೋ ಒಂದು ವಸ್ತುವನ್ನು ಖರೀದಿ ಮಾಡುತ್ತೀರಿ ಹಿರಿಯ ಧಾರ್ಮಿಕ ಕಾರ್ಯಗಳಿಂದ ನಿಮಗೆ ಉತ್ತಮವಾದ ಅನುಕೂಲ ಆಗುತ್ತದೆ ಬೇರೆಯವರ ಕಷ್ಟಗಳಿಗೆ ಸ್ಪಂದಿಸುತ್ತೀರಿ ನಿಮಗೆ ಹಲವಾರು ಕಡೆಯಿಂದ ಇಂದು ಹಣ ಬರುತ್ತದೆ ಹಾಗೂ ಬೇರೆಯವರ ಜೊತೆ ಸ್ವಲ್ಪ ಜಗಳಾಡುವ ಸಂದರ್ಭ ಬರುತ್ತದೆ ನಿಮ್ಮ ಸಂಗಾತಿಯೊಂದಿಗೆ ಉತ್ತಮವಾಗಿ ಇರುತ್ತೀರಿ. ಅದೃಷ್ಟ ಬಣ್ಣ: ಕಂದು ಅದೃಷ್ಟ ಸಂಖ್ಯೆ: 9

ಮಕರ ರಾಶಿ:- ಉದ್ಯೋಗ ಮಾಡುತ್ತಿದ್ದರೆ ನಿಮಗೆ ಸ್ವಲ್ಪ ಬದಲಾವಣೆ ಉಂಟಾಗುತ್ತದೆ. ಹಾಗೂ ವ್ಯಾಪಾರದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಕೊಡಬೇಕು ಹಾಗೂ ಕೆಲಸದಲ್ಲಿ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಸ್ನೇಹಿತರ ಸಹಾಯದಿಂದ ಒಂದು ಪ್ರಮುಖವಾದ ಕೆಲಸ ನೆರವೇರುತ್ತದೆ ಹಣದ ಪರಿಸ್ಥಿತಿಯಿಂದ ಬಲವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ನೀವು ಚೆನ್ನಾಗಿ ಸಮಯ ಕಳೆಯುತ್ತೀರ,ಮತ್ತು ಸಂತೋಷವಾಗಿರುತ್ತೀರಿ. ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಯಾವುದೇ ನಿಮಗೆ ತೊಂದರೆ ಉಂಟಾಗುವುದಿಲ್ಲ ನೀವು ಚೆನ್ನಾಗಿ ಜೀವನದಲ್ಲಿ ಮುಂದೆ ಬರುತ್ತಿರಿ. ಅದೃಷ್ಟ ಬಣ್ಣ: ನೀಲಿ ಅದೃಷ್ಟ ಸಂಖ್ಯೆ: 1

ಕುಂಭರಾಶಿ- ಭಾವನಾತ್ಮಕವಾಗಿ ಬಲಶಾಲಿಯಾಗಿ ಇರುತ್ತೀರಿ ಯಾವುದೇ ಸವಾಲುಗಳನ್ನು ತುಂಬಾ ಧೈರ್ಯ ಧರಿಸುತ್ತೇನೆ ಹಾಗೂ ಯಾವುದೇ ಸಮಸ್ಯೆ ಬಂದರೂ ಅದನ್ನು ತುಂಬಾ ಸುಲಭವಾಗಿ ನಿವಾರಣೆ ಮಾಡುತ್ತೀರಿ ಯಾವುದೇ ಮಾತನಾಡುವಾಗ ಸ್ವಲ್ಪ ತಾಳ್ಮೆಯಿಂದ ಮಾತಾಡಬೇಕು ಈ ವಾರ ನೀವು ಚಿನ್ನ ತೆಗೆದುಕೊಳ್ಳುವ ಸಾಧ್ಯತೆ ಇದೆ ಕುಟುಂಬ ಸದಸ್ಯರ ಜೊತೆ ತುಂಬಾ ಚೆನ್ನಾಗಿ ಇರುತ್ತೀರ. ನಿಮ್ಮ ಸಂಗಾತಿಯನ್ನು ಅನಗತ್ಯವಾಗಿ ಅನುಮಾನಿಸಬೇಡಿ ಇಲ್ಲದಿದ್ದರೆ ನಿಮ್ಮ ಸಂಬಂಧ ಮುರಿದು ಬೀಳುತ್ತದೆ ಮಹಿಳೆಯರಿಗೆ ತಮ್ಮ ಜೀವನದ ಬಗ್ಗೆ ಬಹಳಷ್ಟು ಆಸೆ ಇರುತ್ತದೆ ಈ ವಾರ ದೂರದ ಪ್ರಯಾಣ ಮಾಡುತ್ತೀರಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ ನಿಮ್ಮ ಕುಟುಂಬದ ಜೊತೆ ತುಂಬಾ ಸಂತೋಷವಾಗಿ ಇರುತ್ತೀರಿ ಯಾವುದೇ ಸಮಸ್ಯೆ ಬಂದರೆ ನೀವು ಎದುರಿಸುತ್ತೀರಿ. ಅದೃಷ್ಟ ಬಣ್ಣ: ನೀಲಿ. ಅದೃಷ್ಟ ಸಂಖ್ಯೆ: 8

ಮೀನರಾಶಿ- ಕೆಲವು ಸಂದರ್ಭದಲ್ಲಿ ನೀವು ಸಮಸ್ಯೆಯನ್ನು ಎದುರಿಸಬಹುದು ಇತರರ ಜೊತೆ ಸ್ವಲ್ಪ ಸಂಬಂಧ ಉಳಿಸಿಕೊಳ್ಳಲು ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಸ್ವಲ್ಪ ವಿರೋಧಿಗಳ ಜೊತೆ ಜಾಗೃತರಾಗಿರಬೇಕು ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನಿಮ್ಮ ವ್ಯವಹಾರದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನ ಮಾಡುತ್ತಾರೆ ಸ್ವಲ್ಪ ನಿರ್ಲಕ್ಷ್ಯವಹಿಸಿದ್ದಾರೆ ನಷ್ಟವನ್ನು ಅನುಭವಿಸುತ್ತವೆ ನೀವು ಸಂಗಾತಿಯೊಂದಿಗೆ ಸ್ವಲ್ಪ ಜಗಳ ಮಾಡುತ್ತೀರಿ ನಿಮ್ಮ ನಡುವಿನ ಅಂತರದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ರಾಜಕೀಯದವರು ಉನ್ನತ ಸ್ಥಾನಮಾನ ಸಿಗುತ್ತದೆ ಪಾಲುದಾರಿಕೆ ಸಂಸ್ಥೆಯ ಉತ್ತಮ ಲಾಭ ಸಿಗುತ್ತದೆ. ಅದೃಷ್ಟ ಬಣ್ಣ: ಹಳದಿ ಅದೃಷ್ಟ ಸಂಖ್ಯೆ: 3

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ