ಅಮೆರಿಕಾ ವೀಸಾ ನಿರಾಕರಿಸಿದಾಗ ಸವಾಲು ಹಾಕಿದ್ದೆ; ಹಳೆ ದಿನಗಳ ಮೆಲುಕು ಹಾಕಿದ ಮೋದಿ

ನರೇಂದ್ರ ಮೋದಿ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಗುಜರಾತ್​ನ ಶಾಸಕರಾಗಿ ಆಯ್ಕೆಯಾದಾಗ ಅಮೆರಿಕಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ, ಆಗ ಅಮೆರಿಕಾ ಅವರ ವೀಸಾವನ್ನು ತಿರಸ್ಕರಿಸಿತ್ತು. ಈ ಬಗ್ಗೆ ಕುತೂಹಲಕಾರಿ ವಿಷಯವನ್ನು ಪ್ರಧಾನಿಯಾಗಿರುವ ನರೇಂದ್ರ ಮೋದಿ ಪಾಡ್​ಕಾಸ್ಟ್​ ಶೋನಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಯುದ್ಧದ ಬಗ್ಗೆ ಭಾರತದ ನಿಲುವಿನ ಬಗ್ಗೆಯೂ ಮಾತನಾಡಿದ್ದಾರೆ.

ಅಮೆರಿಕಾ ವೀಸಾ ನಿರಾಕರಿಸಿದಾಗ ಸವಾಲು ಹಾಕಿದ್ದೆ; ಹಳೆ ದಿನಗಳ ಮೆಲುಕು ಹಾಕಿದ ಮೋದಿ
Narendra Modi
Follow us
ಸುಷ್ಮಾ ಚಕ್ರೆ
|

Updated on: Jan 10, 2025 | 6:35 PM

ನವದೆಹಲಿ: ಜೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಅವರ ಪಾಡ್​ಕಾಸ್ಟ್​ನಲ್ಲಿ ಅತಿಥಿಯಾಗಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ತಾವು ಶಾಸಕರಾಗಿದ್ದಾಗ ಆದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ತಾವು ಶಾಸಕರಾಗಿದ್ದಾಗ ಅಮೆರಿಕ ವೀಸಾ ನಿರಾಕರಣೆ ಮಾಡಿದ ಬಗ್ಗೆ ಮಾತನಾಡಿರುವ ಮೋದಿ, 2005ರಲ್ಲಿ ಮುಂದೊಂದು ದಿನ ಭಾರತದ ವೀಸಾಕ್ಕೂ ಬೇರೆ ದೇಶಗಳು ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಹೇಳಿದ್ದೆ. ಇದೀಗ ಆ ದಿನದತ್ತ ನಾವು ದೊಡ್ಡ ಹೆಜ್ಜೆಯಿಟ್ಟಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

“ಅಮೆರಿಕಾ ಸರ್ಕಾರ ನನಗೆ ವೀಸಾ ನೀಡಲು ನಿರಾಕರಿಸಿದಾಗ ನಾನು ಶಾಸಕನಾಗಿದ್ದೆ. ಒಬ್ಬ ವ್ಯಕ್ತಿಯಾಗಿ, ಅಮೆರಿಕಕ್ಕೆ ಹೋಗುವುದು ದೊಡ್ಡ ವಿಷಯವಲ್ಲ. ನಾನು ಇದಕ್ಕೂ ಮೊದಲು ಕೆಲವು ದೇಶಗಳಿಗೆ ಭೇಟಿ ನೀಡಿದ್ದೆ. ಆದರೆ ಅಮೆರಿಕಾದ ವೀಸಾ ನಿರಾಕರಣೆ ಚುನಾಯಿತ ಸರ್ಕಾರ ಮತ್ತು ಭಾರತ ದೇಶದ ಅಗೌರವವೆಂದು ನನಗೆ ಅನಿಸಿತು. ಹೀಗಾಗಿ, ಆ ದಿನ ನಾನು ಪತ್ರಿಕಾಗೋಷ್ಠಿ ನಡೆಸಿದ್ದೆ. ಅಲ್ಲಿ ನಾನು ಅಮೆರಿಕ ಸರ್ಕಾರ ನನ್ನ ವೀಸಾವನ್ನು ತಿರಸ್ಕರಿಸಿದೆ ಎಂದು ಹೇಳಿದೆ. ಮುಂದೊಂದು ದಿನ ಭಾರತದ ವೀಸಾಗಳಿಗಾಗಿ ಜಗತ್ತು ಸರತಿ ಸಾಲಿನಲ್ಲಿ ನಿಲ್ಲುವಂತಾಗುತ್ತದೆ. ಆ ದಿನವನ್ನು ನಾನು ನೋಡುತ್ತೇನೆ ಎಂದು ಆಗ ಹೇಳಿದ್ದೆ. ಇದು 2005ರಲ್ಲಿ ನಾನು ನೀಡಿದ್ದ ಹೇಳಿಕೆ. ಇಂದು ನಾವು 2025ರಲ್ಲಿ ನಿಂತಿದ್ದೇವೆ. ಆದ್ದರಿಂದ, ನಾನು 20 ವರ್ಷಗಳ ಹಿಂದೆ ಹೇಳಿದ ಆ ಸಮಯ ಈಗ ಭಾರತದ್ದಾಗಿದೆ ಎಂದು ನಾನು ಹೇಳಬಹುದು. ಆ ಕಾರಣಕ್ಕೆ ಭಾರತದ ಅಭಿವೃದ್ಧಿಯ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ನೋವಿನ ದೃಶ್ಯಗಳು, ಮೃತದೇಹಗಳನ್ನು ಕಂಡು ಕುಗ್ಗಿಹೋಗಿದ್ದೆ; ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ಗಲಭೆ ಬಗ್ಗೆ ಪ್ರಧಾನಿ ಮೋದಿ ಮಾತು

“ಜಗತ್ತು ನಮ್ಮನ್ನು ನಂಬುತ್ತದೆ. ಏಕೆಂದರೆ ನಮ್ಮಲ್ಲಿ ಯಾವುದೇ ದ್ವಂದ್ವತೆ ಇಲ್ಲ, ನಾವು ಏನು ಹೇಳಿದರೂ ನಾವು ಸ್ಪಷ್ಟವಾಗಿ ಹೇಳುತ್ತೇವೆ. ಈ ಬಿಕ್ಕಟ್ಟಿನ ಸಮಯದಲ್ಲೂ, ನಾವು ತಟಸ್ಥರಲ್ಲ ಎಂದು ನಾವು ಪದೇ ಪದೇ ಹೇಳಿದ್ದೇವೆ. ನಾನು ಶಾಂತಿಯ ಪರವಾಗಿದ್ದೇನೆ ಮತ್ತು ಅದಕ್ಕಾಗಿ ಮಾಡುವ ಯಾವುದೇ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ. ನಾನು ಇದನ್ನು ರಷ್ಯಾ, ಉಕ್ರೇನ್, ಇರಾನ್, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್‌ಗೂ ಹೇಳಿದ್ದೇನೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಹೇಳುತ್ತಿರುವುದು ಸರಿ ಎಂದು ಅವರೂ ಒಪ್ಪಿದ್ದಾರೆ” ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಹಳೆಯ ಭಾಷಣಗಳ ಬಗ್ಗೆ ಕೇಳಿದಾಗ, ಪ್ರಧಾನಿ ಮೋದಿ “ನಾನು ಸೂಕ್ಷ್ಮವಲ್ಲದ ರೀತಿಯಲ್ಲಿ ಕೆಲವು ಬಾರಿ ಮಾತನಾಡಿದ್ದೇನೆ. ತಪ್ಪುಗಳು ಸಂಭವಿಸುತ್ತವೆ. ಏಕೆಂದರೆ ನಾನು ಕೂಡ ಮನುಷ್ಯನೇ ವಿನಃ ದೇವರಲ್ಲ.” ಎಂದಿದ್ದಾರೆ.

ಇದನ್ನೂ ಓದಿ: ನಾನೂ ಮನುಷ್ಯನೇ ವಿನಃ ದೇವರಲ್ಲ, ತಪ್ಪಾಗುವುದು ಸಹಜ; ಪ್ರಧಾನಿ ಮೋದಿ ಹೀಗಂದಿದ್ದೇಕೆ?

“ನಾನು ಮುಖ್ಯಮಂತ್ರಿಯಾದಾಗ ನನ್ನ ಒಂದು ಭಾಷಣದಲ್ಲಿ, ನನ್ನ ಪ್ರಯತ್ನಗಳಲ್ಲಿ ಯಾವುದೇ ಕಲ್ಲನ್ನು ಬಿಡುವುದಿಲ್ಲ ಎಂದು ಹೇಳಿದ್ದೆ. ಎರಡನೆಯದಾಗಿ, ನಾನು ನನಗಾಗಿ ಏನನ್ನೂ ಮಾಡುವುದಿಲ್ಲ ಎಂದಿದ್ದೆ. ಮೂರನೆಯದಾಗಿ ನಾನು ಕೂಡ ಮನುಷ್ಯ, ನಾನು ತಪ್ಪುಗಳನ್ನು ಮಾಡಬಹುದು. ಆದರೆ ನಾನು ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ ಎಂದಿದ್ದೆ. ನಾನು ಅವುಗಳನ್ನು ನನ್ನ ಜೀವನದ ಮಂತ್ರಗಳನ್ನಾಗಿ ಮಾಡಿಕೊಂಡಿದ್ದೇನೆ. ತಪ್ಪುಗಳನ್ನು ಮಾಡುವುದು ಸಹಜ. ಏಕೆಂದರೆ ಎಲ್ಲರಂತೆ ನಾನು ಒಬ್ಬ ಮನುಷ್ಯ, ನಾನೇನು ದೇವರಲ್ಲ. ಆದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!