ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಎಷ್ಟೊಂದು ತ್ರಾಸದಾಯಕ; ನಿಮಗೂ ಅನುಭವವಾಗಿದೆಯಾ?

Railways Offline Ticket Booking: ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವುದು ಎಷ್ಟು ತ್ರಾಸದಾಯಕ ಕೆಲಸ ಎಂಬುದು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಅರ್ಜಿ ನಮೂನೆ ಭರ್ತಿ, ಕೌಂಟರ್‌ಗಳಲ್ಲಿನ ಸಾಲು, ಹಣ ಪಾವತಿಯ ಸಮಸ್ಯೆಗಳು ಮುಂತಾದ ಸವಾಲುಗಳು ಆಫ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಕಟ್ಟಿಟ್ಟ ಬುತ್ತಿ ಎನ್ನಬಹುದು.

ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಎಷ್ಟೊಂದು ತ್ರಾಸದಾಯಕ; ನಿಮಗೂ ಅನುಭವವಾಗಿದೆಯಾ?
ಟಿಕೆಟ್ ಬುಕ್ಕಿಂಗ್ (ಪ್ರಾತಿನಿಧಿಕ ಚಿತ್ರ)
Follow us
ಪೃಥ್ವಿಶಂಕರ
|

Updated on: Jan 10, 2025 | 6:10 PM

ಭಾರತೀಯ ರೈಲ್ವೆ… ಅತಿ ಕಡಿಮೆ ದರದಲ್ಲಿ, ಸುರಕ್ಷಿತವಾಗಿ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಕೆಲಸ ಮಾಡುತ್ತಿರುವ ದೇಶದ ಬಹುದೊಡ್ಡ ಸಾರಿಗೆ ವ್ಯವಸ್ಥೆಯಾಗಿದೆ.ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್​ವರ್ಕ್ ಎನಿಸಿಕೊಂಡಿರುವ ಭಾರತೀಯ ರೈಲ್ವೆಗೆ ಸುಮಾರು 170 ವರ್ಷಗಳ ಇತಿಹಾವಿದ್ದು, ಹಂತ ಹಂತವಾಗಿ ತನ್ನ ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಆದರೆ ಆನ್​ಲೈನ್ ಹೊರತುಪಡಿಸಿ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವುದು ಎಷ್ಟು ತ್ರಾಸದಾಯಕ ಕೆಲಸ ಎಂಬುದು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಎಲ್ಲಾ ಮಾಹಿತಿಯೊಂದಿಗೆ ಮುಂಗಡ ಟಿಕೆಟ್ ಬುಕ್ ಮಾಡಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹೋದ ನನಗೆ ಆದ ಕೆಟ್ಟ ಅನುಭವಗಳ ಪೂರ್ಣ ವಿವರ ಈ ಲೇಖನದಲ್ಲಿದೆ.

ಆನ್​ಲೈನ್ ಬುಕ್ಕಿಂಗ್ ವ್ಯವಸ್ಥೆ

ಮೇಲೆ ಹೇಳಿದಂತೆ ಪ್ರಯಾಣಿಕರ ಬೇಡಿಕೆಗಳಿಗೆ ತಕ್ಕಂತೆ ಭಾರತೀಯ ರೈಲ್ವೆ ತನ್ನ ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ದರ್ಜೆಯ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದರಲ್ಲಿ ಸ್ಲೀಪರ್ ಕೋಚ್, ಎಸಿ ಒನ್, ಟು ಅಥವಾ ಥ್ರೀ ನಂತಹ ಉನ್ನತ ದರ್ಜೆಯ ಕೋಚ್‌ಗಳ ಸೌಲಭ್ಯವನ್ನು ಬಹಳ ಹಿಂದಿನಿಂದಲೇ ಜಾರಿಗೆ ತರಲಾಗಿದೆ. ಈ ರೀತಿಯ ಸೌಲಭ್ಯಗಳಲ್ಲಿ ಪ್ರಯಾಣ ಬೆಳೆಸಲಿಚ್ಚಿಸುವವರು ಮುಂಗಡವಾಗಿ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಇದಕ್ಕಾಗಿ ಆನ್​ಲೈನ್ ಸೌಲಭ್ಯವನ್ನು ಸಹ ಭಾರಯತೀಯ ರೈಲ್ವೆ ಕಲ್ಪಸಿದೆ. ಆದರೆ ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೆ ರೈಲು ನಿಲ್ದಾಣಗಳಲ್ಲಿ ಟಿಕೆಟ್ ಬುಕ್ ಮಾಡಲು ಹೋದವರಿಗೆ ಎದುರಾಗುವ ಸವಾಲುಗಳು ಒಂದೆರಡಲ್ಲ. ಗ್ರಾಮೀಣ ಭಾಗದ ಅಥವಾ ಹೆಚ್ಚು ಜನಸಂದಣಿ ಇಲ್ಲದ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಲು ಹೆಚ್ಚು ಸಮಸ್ಯೆಯಾಗದು. ಆದರೆ ಪ್ರಮುಖ ನಗರಗಳಲ್ಲಿ ಅದರಲ್ಲೂ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲು ನಿಲ್ದಾಣಕ್ಕೆ ಮುಂಗಡ ಟಿಕೆಟ್ ಬುಕ್ ಮಾಡಲು ಹೋದವರಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ.

ವಾಸ್ತವವಾಗಿ ಮುಂಗಡ ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ಆನ್​ಲೈನ್ ಸೇವೆಯನ್ನು ಸಹ ಒದಗಿಸಿಕೊಟ್ಟಿದೆ. ಆ ಪ್ರಕಾರ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಯಾರು ಬೇಕಾದರೂ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ. ಆದರೆ ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡಲು ಬರದವರಿಗಾಗಿ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್​ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಇಲ್ಲಿಗೆ ಹೋಗಿ ಟಿಕೆಟ್ ಬುಕ್ ಮಾಡಬೇಕೆನ್ನುವವರಿಗೆ ಕನಿಷ್ಠ ಪಕ್ಷ ಕನ್ನಡ/ಇಂಗ್ಲೀಷ್ ಅಥವಾ ಹಿಂದಿ ಭಾಷೆಯನ್ನು ಓದಲು ಹಾಗೂ ಬರೆಯಲು ಗೊತ್ತಿರಬೇಕು. ಒಂದು ವೇಳೆ ಅನಕ್ಷರಸ್ಥರು ಹೋದರಂತು ಅವರ ಪಾಡು ದೇವರೇ ಬಲ್ಲ.

ಅರ್ಜಿ ನಮೂನೆ​ ಭರ್ತಿ ಮಾಡಲು ಗೊತ್ತಿರಬೇಕು

ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಲು ಹೋದವರಿಗೆ ಮೊದಲು ಎದುರಾಗುವ ಸಮಸ್ಯೆ ಎಂದರೆ ಅದು ಅರ್ಜಿ ನಮೂನೆ ಭರ್ತಿ ಮಾಡುವುದು. ಅನಕ್ಷರಸ್ಥರಿಗೆ ಇದು ಕಬ್ಬಿಣದ ಕಡೆಲೆಯೇ ಸರಿ. ಅರ್ಜಿ ನಮೂನೆಯಲ್ಲಿ ಮೊದಲು ನೀವು ಯಾವ ದಿನಾಂಕದಂದು, ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿದ್ದೀರಿ? ಯಾವ ರೈಲು? ಆ ರೈಲಿನ ಸಂಖ್ಯೆ ಎಲ್ಲವೂ ತಿಳಿದಿರಬೇಕು. ಆ ನಂತರ ಎಷ್ಟು ಜಯ ಪ್ರಯಾಣ ಮಾಡುತ್ತಿದ್ದೀರಿ, ಅವರ ಹೆಸರು ಹಾಗೂ ವಯಸ್ಸನ್ನು ನಿಮ್ಮ ಆಧಾರ್​ ಕಾರ್ಡ್​ನಲ್ಲಿರುವಂತೆಯೇ ನಮೂದಿಸಬೇಕು. ಇಲ್ಲಿ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ ಒಂದು ಅರ್ಜಿ ನಮೂನೆಯಲ್ಲಿ ಕೇವಲ 6 ಜನರಿಗೆ ಮಾತ್ರ ಟಿಕೆಟ್ ಬುಕ್ ಮಾಡಬಹುದು. ಅದಕ್ಕಿಂತ ಹೆಚ್ಚಿನವರಿದ್ದರೆ ಮತ್ತೊಂದು ಅರ್ಜಿ ನಮೂನೆಯನ್ನು ತೆಗೆದುಕೊಳ್ಳಬೇಕು.

ಇದಾದ ಬಳಿಕ ನೀವು ರಿಟರ್ನ್​ ಟಿಕೆಟ್ ಬುಕ್ ಮಾಡಲು ಇಚ್ಚಿಸಿದರೆ, ಅದೇ ಅರ್ಜಿ ನಮೂನೆಯ ಕೆಳ ಭಾಗದಲ್ಲಿ ಇದಕ್ಕೆ ಅವಕಾಶ ನೀಡಲಾಗಿದ್ದು, ಅಲ್ಲಿ ನೀವು ವಾಪಸ್ಸಾಗುವ ದಿನಾಂಕ, ರೈಲಿನ ಹೆಸರು, ಅದರ ಸಂಖ್ಯೆ ಎಲ್ಲವನ್ನೂ ನಮೂದಿಸಬೇಕು. ಇದೆಲ್ಲವನ್ನು ತಿಳಿದವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಈ ಬಗ್ಗೆ ಗೊತ್ತಿಲ್ಲದವರು ಹೋದರೆ, ಅರ್ಜಿ ನಮೂನೆ ಹಿಡಿದು, ಇದರ ಬಗ್ಗೆ ಗೊತ್ತಿರುವ ಸಹ ಪ್ರಯಾಣಿಕರ ಬಳಿಗೆ ಅಲೆಯಬೇಕಾಗುತ್ತದೆ. ಏಕೆಂದರೆ ರೈಲ್ವೆ ಇಲಾಖೆಯಿಂದ ಈ ಬಗ್ಗೆ ಮಾಹಿತಿ ನೀಡುವುದಕ್ಕಾಗಲಿ ಅಥವಾ ಅರ್ಜಿ ನಮೂನೆ ಭರ್ತಿ ಮಾಡುವುದಕ್ಕಾಗಲಿ ನೌಕರರನ್ನು ನೇಮಿಸಿರುವುದಿಲ್ಲ. ಟಿಕೆಟ್ ನೀಡುವವರನ್ನು ಕೇಳಿದರೆ ಅವರಿಂದ ಸೂಕ್ತ ಪ್ರತಿಕ್ರಿಯೆ ಬಂದರೆ ಅದು ನಿಮ್ಮ ಪುಣ್ಯ. ಇಲ್ಲದಿದ್ದರೆ ನೀವು ಇಂಗು ತಿಂದ ಮಂಗನಂತೆ ಅವರಿವರ ಮುಖ ನೋಡುತ್ತ ನಿಲ್ಲಬೇಕಾಗುತ್ತದೆ.

ಒಂದು ಕೌಂಟರ್​ನಲ್ಲಿ ಒಂದು ಅರ್ಜಿ ನಮೂನೆಗೆ ಮಾತ್ರ ಟಿಕೆಟ್

ಇನ್ನು ಮೇಲಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ನೀವು ಟಿಕೆಟ್ ಕೌಂಟರ್ ಬಳಿ ಹೋದರೆ ಅಲ್ಲಿ ಎದುರಾಗುವ ಮತ್ತೊಂದು ಸಮಸ್ಯೆ ಎಂದರೆ, ನೀವೊಬ್ಬರೇ ಎರಡು ಮೂರು ಅರ್ಜಿ ನಮೂನೆಗಳನ್ನು ಅಂದರೆ 6 ಕ್ಕಿಂತ ಹೆಚ್ಚು ಜನರಿಗೆ ಟಿಕೆಟ್ ಬುಕ್ ಮಾಡಲು ಹೋದರೆ, ಒಂದು ಕೌಂಟರ್​ನಲ್ಲಿ 6 ಜನರಿಗೆ ಮಾತ್ರ ಟಿಕೆಟ್ ಬುಕ್ ಮಾಡಬಹುದು. ಉಳಿದವರಿಗೆ ಟಿಕೆಟ್ ಬುಕ್ ಮಾಡಲು ನೀವು ಮತ್ತೊಂದು ಕೌಂಟರ್​ನಲ್ಲಿ ಕ್ಯೂ ನಿಲ್ಲಬೇಕು. ಇದರಿಂದ ನೀವು ಕುಟುಂಬವಾಗಿ ಅಥವಾ ಸ್ನೇಹಿತರೆಲ್ಲ ಒಟ್ಟಿಗೆ ಪ್ರಯಾಣ ಬೆಳೆಸಬೇಕು ಎಂದುಕೊಂಡಿದ್ದರೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ನೀವು ಇನ್ನೊಂದು ಕೌಂಟರ್​ನಲ್ಲಿ ನಿಂತು ಟಿಕೆಟ್ ಬುಕ್ ಮಾಡಿದಾಗ ಉಳಿದವರಿಗೆ ಬೇರೆ ಬೋಗಿಯಲ್ಲಿ ಸೀಟು ಸಿಗುವ ಸಾಧ್ಯತೆಗಳಿರುತ್ತವೆ.

ಸೂಪರ್​ವೈಸರ್ ಬಳಿ ಒಪ್ಪಿಗೆ

ಒಂದು ವೇಳೆ ನೀವು ಕುಟುಂಬ ಸಮೇತರಾಗಿ ಅಥವಾ 6 ಕ್ಕಿಂತ ಹೆಚ್ಚು ಜನರಿಗೆ ಟಿಕೆಟ್ ಬುಕ್ ಮಾಡಲಿಚ್ಚಿಸಿದರೆ, ಅದರಲ್ಲೂ ಅವರೆಲ್ಲರಿಗೂ ಒಂದೇ ಬೋಗಿಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಸೀಟು ಪಡೆಯಬೇಕೆಂದರೆ ನೀವು ಸೂಪರ್​ವೈಸರ್ ಬಳಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಆ ಸಮಯಕ್ಕೆ ಅವರು ಕಛೇರಿಯಲ್ಲಿದ್ದರೆ ಸರಿ, ಇಲ್ಲದಿದ್ದರೆ ಅವರು ಬರುವವರೆಗೂ ನೀವು ಕಾಯಬೇಕು. ಬಂದ ನಂತರವೂ ನೀವು ಹೇಳುವ ದಿನಾಂಕದಂದು ಸೀಟುಗಳು ಖಾಲಿ ಇದ್ದರೆ ಮಾತ್ರ ನಿಮ್ಮಿಚ್ಚೆಯಂತೆ ಟಿಕೆಟ್ ಸಿಗುತ್ತದೆ. ಇಲ್ಲದಿದ್ದರೆ ಅವರು ನೀಡುವ ಸೀಟುಗಳಲ್ಲೇ ಕುಳಿತು ಪ್ರಯಾಣಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮಿಚ್ಚೆಯಂತೆ ಎಲ್ಲರಿಗೂ ಒಂದೇ ಕಡೆ ಸೀಟು ಸಿಕ್ಕರೂ ನೀವು ಅದಕ್ಕಾಗಿಯೇ ಮೀಸಲಿರಿಸಿರುವ ಕೌಂಟರ್​ನಲ್ಲಿ ನಿಂತು ಟಿಕೆಟ್ ಬುಕ್ ಮಾಡಬೇಕಾಗುತ್ತದೆ.

ಆನ್​ಲೈನ್ ಪೇಮೆಂಟ್ ಸಮಸ್ಯೆ

ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ನೀವು ಟಿಕೆಟ್ ಬುಕ್ ಮಾಡಿದರೂ ನಿವು ಆನ್​ಲೈನ್​ನಲ್ಲಿ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕೆಲವೊಮ್ಮೆ ತಾಂತ್ರಿಕ ದೋಷದ ಕಾರಣ ಹೇಳಿ ನಗದು ರೂಪದಲ್ಲಿ ಹಣ ಪಾವತಿಸಬೇಕಾಗುತ್ತದೆ. ಅಂದರೆ ನೀವು ಎಷ್ಟು ಜನಕ್ಕೆ ಟಿಕೆಟ್ ಬುಕ್ ಮಾಡುತ್ತಿದ್ದೀರಿ? ಈ ಪ್ರಯಾಣಕ್ಕೆ ಎಷ್ಟು ವೆಚ್ಚವಾಗುತ್ತದೆ? ಎಂಬುದನ್ನೇಲ್ಲ ನೀವು ಮೊದಲೇ ಲೆಕ್ಕ ಹಾಕಿ ನಿಮ್ಮ ಕಿಸೆಯಲ್ಲಿ ಹಣವನ್ನು ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ, ಎಟಿಎಮ್​ಗಳಿಗೆ ಅಥವಾ ಸಹ ಪ್ರಯಾಣಿಕರ ಬಳಿ ಹಣಕ್ಕಾಗಿ ಮನವಿ ಮಾಡುತ್ತಾ ನಿಲ್ಲಬೇಕಾಗುತ್ತದೆ.

ಗಮನಿಸಬೇಕಾದ ಸಂಗತಿ: ಎಲ್ಲಿಂದ, ಎಲ್ಲಿಗೆ? ಯಾವ ದಿನಾಂಕದಂದು? ಯಾವ ರೈಲು? ಎಂಬಿತ್ಯಾದಿ ಮಾಹಿತಿಗಳನ್ನೆಲ್ಲ ಕಲೆಹಾಕಿ ಟಿಕೆಟ್ ಬುಕ್ ಮಾಡಲು ಹೋದ ನನಗೆ ಕೇವಲ 9 ಜನರಿಗೆ ಮುಂಗಡ ಟಿಕೆಟ್ ಬುಕ್ ಮಾಡಲು ಏನಿಲ್ಲವೆಂದರೂ 2 ಗಂಟೆಗಿಂತ ಹೆಚ್ಚು ಸಮಯಬೇಕಾಯಿತು. ಇದೆಲ್ಲ ಗೊತ್ತಿಲ್ಲದೆ ಹೋಗುವವರ ಪಾಡು ಏನಾಗಬೇಡ ಎಂಬುದನ್ನು ನೀವೇ ಊಹಿಸಿ. ಹೀಗಾಗಿ ಮುಂಗಡ ಟಿಕೆಟ್​ ಬುಕ್ಕಿಂಗ್​ನಲ್ಲಿರುವ ಲೋಪದೋಷಗಳನ್ನು ನಿವಾರಿಸುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಈ ಲೇಖನದ ಕಾಳಜಿಯಾಗಿದೆ.

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್