
ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಏಕಾಗ್ರತೆ ಮುಖ್ಯವಾಗುತ್ತದೆ. ಒಂದು ಕೆಲಸ ಮಾಡುವಾಗ ಇತರ ಸಂಗತಿಗಳ ಬಗ್ಗೆಯೂ ಯೋಚನೆ ಮಾಡುತ್ತಾ ಮುಂದುವರಿಸಲ್ಲಿ ಏನಾದರೂ ಸಮಸ್ಯೆ ಆಗುತ್ತದೆ. ಇನ್ನು ಇದೇ ವೇಳೆ ಮನೆಯಲ್ಲಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಮುಖ್ಯವಾಗಿ ಮೊಬೈಲ್ ಫೋನ್ ಚಾರ್ಜಿಂಗ್, ಲ್ಯಾಪ್ ಟಾಪ್ ಚಾರ್ಜಿಂಗ್ ಅಥವಾ ಟ್ಯಾಬ್ ಚಾರ್ಜಿಂಗ್ ಹಾಕುತ್ತಿದ್ದೀರಿ ಎಂದಾದಲ್ಲಿ ತುಂಬ ಹೊತ್ತು ಹಾಗೇ ಹಾಕಿಡದಿರುವುದು ಮತ್ತು ಚಾರ್ಜ್ ಗೆ ಹಾಕಿರುವಾಗಲೇ ಬಳಸುವುದನ್ನು ಮಾಡಬೇಡಿ.
ವಿದೇಶ ಪ್ರಯಾಣಕ್ಕೋ ಅಥವಾ ನೀವಿರುವ ಸ್ಥಳದಿಂದ ದೂರ ಪ್ರದೇಶಕ್ಕೆ ತೆರಳುತ್ತಿದ್ದೀರಿ ಅಂತಾದಲ್ಲಿ ಪ್ರಯಾಣದ ಮೂಲಕ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕ್ ನಲ್ಲಿ ಎಫ್ ಡಿ ಎಂದಿಟ್ಟಿದ್ದಲ್ಲಿ ಅದನ್ನು ಮುರಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅದೇ ಸಮಯದಲ್ಲಿ ಹಣವನ್ನು ಉತ್ತಮ ರಿಟರ್ನ್ ಬರುವ ಕಡೆಗೆ ಹೂಡಿಕೆ ಸಹ ಮಾಡುವ ಕಡೆಗೆ ಚಿಂತಿಸಲಿದ್ದೀರಿ. ತೀರಾ ಆಕ್ರಮಣಕಾರಿಯಾಗಿ ಹಣ ಕೂಡಿಡುವ ಬಗ್ಗೆ ಲೆಕ್ಕಾಚಾರ ಹಾಕಿಕೊಳ್ಳಲಿದ್ದೀರಿ.
ಇದನ್ನೂ ಓದಿ: ಜ. 25ರಂದು ಕೇತು ಸಂಚಾರ; ಈ ಮೂರು ರಾಶಿಯವರು ಜಾಗರೂಕರಾಗಿರಿ
ನೀವೇನಾದರೂ ಒಡವೆ, ಸೈಟು ಅಥವಾ ಮನೆ- ವಾಹನವೂ ಸೇರಿದಂತೆ ವಸ್ತುಗಳನ್ನು ಅಡಮಾನ ಮಾಡಿದ್ದೀರಿ ಅಂತಾದಲ್ಲಿ ಅದು ಹರಾಜಿಗೆ ಬರುವಂಥ ಸಾಧ್ಯತೆಗಳಿವೆ. ವಿಪರೀತ ಕೆಲಸದ ಒತ್ತಡ ಬೀಳಲಿದೆ. ಕೆಲವು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇನ್ನು ಕೆಲವು ಅನಿರೀಕ್ಷಿತವಾಗಿ ತಾವಾಗಿಯೇ ಹುಡುಕಿಕೊಂಡು ಬರಲಿವೆ. ಇತರರಿಗೆ ನೀವು ನೀಡಿದಂಥ ಸಲುಗೆ ಬಗ್ಗೆ ನಿಮಗೆ ಬೇಸರ ಆಗಲಿದೆ. ಇತರರ ಸಾಲಕ್ಕೆ ನೀವು ಶ್ಯೂರಿಟಿಯಾಗಿ ನಿಂತಲ್ಲಿ ಅಥವಾ ಜಾಮೀನಾಗಿ ನಿಂತಲ್ಲಿ ಭವಿಷ್ಯದಲ್ಲಿ ಪರಿತಪಿಸಬೇಕಾಗುತ್ತದೆ.
ಲೇಖನ- ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ