
ನಿಮ್ಮಿಂದ ಎಷ್ಟು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸ್ಪಷ್ಟ ಚಿತ್ರಣವೊಂದು ಇರಿಸಿಕೊಂಡ ನಂತರವೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಬರುವಂಥ ಕೆಲವು ಕೆಲಸಗಳು ಮೇಲ್ನೋಟಕ್ಕೆ ಬಹಳ ದೊಡ್ಡ ಲಾಭ ತಂದುಕೊಡುವಂತೆ ಅನಿಸಲಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಆಗಿರುವ ಅಥವಾ ಮುಂದೆ ಆಗುವ ಬದಲಾವಣೆಗಳ ಕಾರಣಕ್ಕೆ ನೀವು ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಲಾಭ ತಂದುಕೊಡುವುದಿಲ್ಲ.
ಯಾಕೆ ಅವರು ಹಾಗೆ ಮಾತನಾಡಿದರು ಎಂದು ಒಬ್ಬರೇ ವ್ಯಕ್ತಿಯು ಆಡಿದ ಮಾತು, ಬಳಸಿದ ಪದಗಳು ದಿನವಿಡೀ ನಿಮ್ಮನ್ನು ಕಾಡಲಿವೆ. ಈ ಹಿಂದೆ ಇದ್ದಂಥ ಉತ್ಸಾಹದಲ್ಲಿ ನಿಮ್ಮ ವೃತ್ತಿ- ವ್ಯಾಪಾರ- ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು, ಮುಂದಕ್ಕೆ ಹೋಗಬೇಕಾದ ಜವಾಬ್ದಾರಿಗಳಿಂದ ಕಳಚಿಕೊಳ್ಳಬೇಕು ಎಂಬ ಭಾವ ಬಲವಾಗಿ ಆವರಿಸಿಕೊಳ್ಳುತ್ತದೆ. ನಿಮ್ಮ ಜತೆ ಈ ಹಿಂದೆ ಉದ್ಯೋಗ ಮಾಡಿದ್ದವರು ಏನಾದರೂ ವ್ಯಾಪಾರ- ವ್ಯವಹಾರದ ಆಫರ್ ತಂದಲ್ಲಿ ಗಂಭೀರವಾಗಿ ಪರಿಗಣಿಸಿ.
ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಾ ಇರುವವರು ವ್ಯಾಪಾರದ ವಿಸ್ತರಣೆಗೆ ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮಾಡಿದ್ದ ಹಣವನ್ನು ತೆಗೆದು, ಅದನ್ನು ಈ ಉದ್ದೇಶಕ್ಕೆ ಬಳಸುವುದಕ್ಕೆ ಮುಂದಾಗಲಿದ್ದೀರಿ. ಹೊಸ ಮಾರುಕಟ್ಟೆಯಲ್ಲಿ ಈಗಷ್ಟೇ ಕೆಲಸ ಆರಂಭಿಸಿದವರು ತಾಳ್ಮೆ- ಸಂಯಮ ವಹಿಸುವುದು ಮುಖ್ಯವಾಗುತ್ತದೆ. ಸೇಲ್ಸ್- ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾದಲ್ಲಿ ಮೇಲಧಿಕಾರಿ ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.