ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜನವರಿ 28 ರಿಂದ ಫೆಬ್ರವರಿ 03ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ ರಾಶಿ: ಇದು ಈ ತಿಂಗಳ ಕೊನೆಯ ವಾರವಾಗಿದ್ದು ಗ್ರಹಗತಿಗಳು ನಿಮಗೆ ಶುಭಾಶುಭ ಫಲವು ಇರುವುದು. ನಿಮ್ಮ ರಾಶಿಯಲ್ಲಿಯೇ ಗುರುವಿರುವುದು ಮನಸ್ತಾಪಗಳನ್ನು ಕಡಿಮೆ ಮಾಡಲಿದೆ. ಏಕಾದಶದಲ್ಲಿ ಶನಿಯು ನಿಮಗೆ ಪೂರಕವಾಗಲಿದ್ದು, ಕೆಲಸಗಳನ್ನು ನಿಗದಿತ ಸಮಯಕ್ಕೆ ಪೂರೈಸುವಿರಿ. ನವಮದಲ್ಲಿ ಮೂರು ಗ್ರಹರಿದ್ದು ಸಾಮಾಜಿಕ ಗೌರವವನ್ನು ಸ್ಥಾನಮಾನವನ್ನು ಪಡೆಯುವಿರಿ. ಶತ್ರುಗಳ ವಿಚಾರದಲ್ಲಿ ಜಾಗರೂಕರಾಗುವುದು ಮುಖ್ಯ. ಕಾರ್ತಿಕೇಯನ ಸ್ಮರಣೆ ಅಗತ್ಯವಾಗಿ ಬಿಡದೇ ಮುಂದುವರಿಸಿ.
ವೃಷಭ ರಾಶಿ: ಈ ವಾರವು ನಿಮಗೆ ಅಶುಭಫಲವು ಅಧಿಕವಾಗಿ ಅನುಭವಕ್ಕೆ ಬರಲಿದೆ. ದ್ವಾದಶದಲ್ಲಿ ಗುರುವುದು ಬಲಹೀನನಾಗಿ ನಿಮಗೆ ಸಿಗಬೇಕಾದ ಫಲವು ಸಿಗದು. ಅಷ್ಟಮದಲ್ಲಿ ಮೂರು ಗ್ರಹಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಪಂಚಮದಲ್ಲಿ ಇರುವ ಕೇತುವು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯು ಉಂಟಾಗಬಹುದು. ತಂದೆಯ ಕಡೆಯಿಂದ ನಿಮಗೆ ಸಹಾಯವನ್ನು ಪಡೆಯುವಿರಿ. ಸರ್ಕಾರದ ಕೆಲಸವನ್ನು ಮೂರನೇ ವ್ಯಕ್ತಿಗಳಿಂದ ಮಾಡಿಸಿಕೊಳ್ಳುವಿರಿ. ಮಹಾದೇವಿಯ ಆರಾಧನೆಯು ಅನುಕೂಲವಾಗಲಿದೆ.
ಮಿಥುನ ರಾಶಿ: ಇದು ತಿಂಗಳ ಕೊನೆಯ ವಾರವಾಗಿದೆ. ಗ್ರಹಗಳು ಈ ವಾರವು ನಿಮಗೆ ಅನುಕೂಲಕರವಾಗಿರುವುದು. ಗುರುಬಲವು ನಿಮ್ಮ ಇತರ ಕಾರ್ಯಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ. ದಶಮದಲ್ಲಿ ನಿಮಗೆ ರಾಹುವು ಇರುವುದು ವೃತ್ತಿಯಲ್ಲಿ ಆಸಕ್ತಿಯು ಕಡಿಮೆ ಆಗುವುದು. ನವಮದಲ್ಲಿ ಶನಿಯು ನೌಕರರಿಂದ ಗೌರವವು ಪ್ರಾಪ್ತವಾಗುವುದು. ಮೂರು ಗ್ರಹಗಳು ಸಪ್ತಮದಲ್ಲಿ ಇರುವುದು ಬಹಳ ಅನುಕೂಲಕರವಾಗದು. ದಾಂಪತ್ಯದಲ್ಲಿ ಮನಸ್ತಾಪ ಬಂದರೂ ಅದು ನಿವಾರಣೆಯೂ ನಿಮ್ಮಿಂದಲೇ ಆಗುವುದು. ಕುಟುಂಬದಲ್ಲಿ ನಿಮಗೆ ಸಕಾರಾತ್ಮಕ ಮನಃಸ್ಥಿತಿಯು ಇರದು. ಸಪರಿವಾರ ರಾಮನ ಉಪಾಸನೆಯಿಂದ ಶ್ರೇಯಸ್ಸು ಲಭ್ಯವಾಗುವುದು.
ಕಟಕ ರಾಶಿ: ಈ ರಾಶಿಯವರಿಗೆ ಈ ವಾರವು ಮಿಶ್ರಫಲಪ್ರದವಾಗಿದೆ. ಹಿತಶತ್ರುಗಳಿಂದ ತೊಂದರೆಗಳು ಆಗಬಹುದು. ನಿಮ್ಮ ಪ್ರಯತ್ನಗಳು ವಿಫಲವಾಗಿ, ಸಂಪತ್ತು ಹಾಗೂ ಸಮಯವನ್ನು ವ್ಯರ್ಥ ಮಾಡುವಿರಿ. ಗುರುಬಲವೂ ಶನಿಬಲವೂ ನಿಮಗೆ ಇಲ್ಲದ ಕಾರಣ ಮನಸ್ಸು ಒತ್ತಡಕ್ಕೆ ಸಿಲುಕುವಿರಿ. ವಿವಾಹಕ್ಕೆ ಅನುಕೂಲಕರವಾದ ವಾತಾವರಣ ಇದ್ದರೂ ಕಾರಣಾಂತರದಿಂದ ಅದು ತಪ್ಪಬಹುದು. ಆರೋಗ್ಯದಲ್ಲಿ ನಿಮಗೆ ಪೂರ್ಣ ಸ್ವಾಸ್ಥ್ಯವಿರದೇ ಕಿರಿಕಿರಿ ಎನಿಸಬಹುದು. ಮಹಾಗೌರಿಯನ್ನು ಉಪಾಸನೆ ಮಾಡಿ. ಸಂಕಷ್ಟವು ದೂರವಾಗುವಂತೆ ಬೇಡಿಕೊಳ್ಳಿ.
ಸಿಂಹ ರಾಶಿ: ಇದು ಜನವರಿ ತಿಂಗಳ ಕೊನೆಯ ವಾರವಾಗಿದೆ. ಮಿಶ್ರಫಲಗಳ ವಾರವೆಂದು ನಿಮಗೆ ಹೇಳಬಹುದು. ಗುರುಬಲವು ನಿಮ್ಮ ಎಲ್ಲ ಕಾರ್ಯಗಳಿಗೂ ಸೇರ್ಪಡೆಯಾಗುವುದು. ಆದ್ದರಿಂದ ಹಿಂಜರಿಕೆ ಬೇಡ. ಪಂಚಮದಲ್ಲಿ ಕುಜ, ಶುಕ್ರ, ಬುಧರು ನಿಮಗೆ ಇನ್ನಷ್ಟು ಪುಷ್ಟಿಯನ್ನು ಹಾಗೂ ಕಾರ್ಯಕ್ಕೆ ಬೇಕಾದ ಬಲವನ್ನೂ ಶ್ರೇಯಸ್ಸನ್ನೂ ಕೊಡುವರು. ದ್ವಿತೀಯದಲ್ಲಿ ಕೇತುವು ಹಣಕಾಸಿನ ಹರಿವನ್ನು ಬದಲಿಸಬಹುದು. ಸಪ್ತಮದಲ್ಲಿ ಶನಿಯು ವಿವಾಹವನ್ನು ವಿಳಂಬಮಾಡಬಹುದು. ಪ್ರಬಲ ಶತ್ರುಗಳನ್ನು ಎದುರಿಸಬೇಕಾಗಬಹುದು. ಶಿವಕವಚವನ್ನು ಪಠಿಸಿ.
ಕನ್ಯಾ ರಾಶಿ: ಈ ವಾರ ನಿಮಗೆ ಅಶುಭಫಲವು ಹೆಚ್ಚು ಕಾಣಿಸುತ್ತದೆ ಮತ್ತು ಹಳೆಯ ಎಲ್ಲ ಅಶುಭ ಘಟನೆಗಳೂ ನಿಮ್ಮ ಮನಸ್ಸಿಗೆ ಬಂದು ಬಹಳ ಹತಾಶೆಯಲ್ಲಿ ಇರುವಿರಿ. ವಿವಾಹದ ಜೀವನವೂ ನಿಮಗೆ ಸುಖವೆನಿಸದು. ಗುರುವೂ ನಿಮಗೆ ಪ್ರತಿಕೂಲನಾಗಿದ್ದಾನೆ. ಅಗೌರವವು ನಿಮಗೆ ಇನ್ನಷ್ಟು ಬೇಸರವನ್ನು ತರಿಸುವುದು. ಕುಟುಂಬದ ವಾತಾವರಣವು ಹೆಚ್ಚು ಕಡಿಮೆ ಇಲ್ಲದೇ ಒಂದೇ ರೀತಿಯಲ್ಲಿ ಇರುವುದು. ಪಂಚಮದಲ್ಲಿ ಸೂರ್ಯನು ಮಕ್ಕಳಿಂದ ಅಲ್ಪ ಸಂತೋಷವು ಸಿಗುವಂತೆ ಮಾಡುವನು. ನರಸಿಂಹನ ಉಪಾಸನೆಯು ನಿಮಗೆ ಹಿತಕರವೂ ಅನುಕೂಲವು ಆಗಿದೆ.
ತುಲಾ ರಾಶಿ: ಇದು ಈ ತಿಂಗಳ ಐದನೇ ವಾರವೂ ಕೊನೆಯ ವಾರವೂ ಆಗಿದೆ. ನಿಮಗೆ ಅನೇಕ ಗ್ರಹಗಳ ಬಲವು ಇರುವುದರಿಂದ ಯಾವುದಕ್ಕೂ ಚಿಂತಿಸದೇ ಆನಂದವಾಗಿ ಇರುವಿರಿ. ಎಲ್ಲವನ್ನೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸವೂ ಬರಲಿದೆ. ತೃತೀಯದಲ್ಲಿ ಕುಜ, ಬುಧ, ಶುಕ್ರರ ಸಮಾಗಮದಿಂದ ಅನುಕೂಲತೆಗಳು ಇರುವುದು. ಅಲ್ಪ ಕಾರ್ಯವು ಹೆಚ್ಚು ಫಲಿತಾಂಶವನ್ನು ಕೊಡುವುದು. ಚತುರ್ಥದಲ್ಲಿ ಸೂರ್ಯನಿದ್ದು ಮನೆಯಲ್ಲಿ, ತಂದೆಯ ವಿಚಾರದಲ್ಲಿ ನಿನಗೆ ಸದ್ಭಾವವು ಇರಲಿದೆ. ಶನಿಯು ಮಕ್ಕಳ ವಿದ್ಯಾಭ್ಯಾಸವನ್ನು ವಿದೇಶದಲ್ಲಿ ಮಾಡಿಸಲು ಪ್ರೇರಿಸುವನು. ಮಹಾಲಕ್ಷ್ಮಿಯ ಉಪಾಸನೆಯು ನಿಮಗೆ ಶುಭಪ್ರದವಾಗಲಿದೆ.
ವೃಶ್ಚಿಕ ರಾಶಿ: ಈ ವರ್ಷದ ಮೊದಲ ತಿಂಗಳು ಮುಕ್ತಾಯವಾಗುತ್ತಿದ್ದು ಗ್ರಹಗಳು ನಿಮಗೆ ಅಷ್ಟು ಅನುಕೂಲವೆನ್ನಲಾಗದು. ಮೊದಲನೆಯದಾಗಿ ಗುರುಬಲವು ಇಲ್ಲದ ಕಾರಣ ನಿಮ್ಮ ಎಲ್ಲ ಕಾರ್ಯಗಳೂ ಪೂರ್ಣಪ್ರಮಾಣದ ಗೆಲುವನ್ನು, ಯಶಸ್ಸನ್ನು, ಸಂಪತ್ತನ್ನು ತಂದುಕೊಡಲಾರವು. ದ್ವಿತೀಯದಲ್ಲಿ ಮೂರು ಗ್ರಹಗಳು ಇದ್ದರೂ ಅತಿಯಾದ ಅನುಕೂಲವೆನ್ನಲಾಗದು. ಬರಬೇಕಾದ ಹಣವು ಅಲ್ಪವು ಬರಬಹುದು. ಪಂಚಮದಲ್ಲಿ ರಾಹುವು ಮಕ್ಕಳ ವಿಚಾರದಲ್ಲಿ ಅದರಲ್ಲೂ ಹೆಣ್ಣುಮಕ್ಕಳ ವಿಚಾರದಲ್ಲಿ ನಿಮಗೆ ಅಪನಂಬಿಕೆ, ಅವರಿಂದ ವಂಚನೆಯು ಆಗಬಹುದು. ಏಕಾದಶದಲ್ಲಿ ಕೇತುವು ನಿಮ್ಮ ಆದಾಯದ ಮಾರ್ಗವನ್ನು ಬದಲಿಸಬಹುದು.
ಧನು ರಾಶಿ: ಇದು ತಿಂಗಳ ಐದನೆಯ ವಾರವಾಗಿದೆ. ಮೂರು ಗ್ರಹಗಳು ನಿಮ್ಮ ರಾಶಿಯಲ್ಲಿಯೇ ಇವೆ. ಮಾನಸಿಕ ನೀವು ದುರ್ಬಲರಾಗಲು ಸಾಧ್ಯವೇ ಇಲ್ಲ. ಎಂತಹ ಸಂದರ್ಭವನ್ನೂ ಎದುರಿಸಬಲ್ಲಿರಿ. ಪಂಚಮದಲ್ಲಿ ಗುರು ಅನುಕೂಲಕರ. ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮವಾದ ಫಲವೂ ಸಿಗಲಿದೆ. ತೃತೀಯದಲ್ಲಿ ಶನಿಯು ಸ್ವಸ್ಥನಾದಲ್ಲಿ ನಿಮ್ಮ ಶ್ರಮಕ್ಕೆ ಯೋಗ್ಯವಾದ ಫಲಿತಾಂಶವನ್ನು ಕೊಡುವನು. ಚತುರ್ಥದಲ್ಲಿ ರಾಹುವು ತಾಯಿಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ಗೃಹನಿರ್ಮಾಣ ಮಾಡುವವರಿಗೆ ಮನಸ್ಸಿನಲ್ಲಿ ನಕಾರಾತ್ಮಕ ಭಾವವು ಬಂದು ಅರ್ಧಕ್ಕೆ ನಿಲ್ಲಿಸಲೂಬಹುದು. ಮಹಾವಿಷ್ಣುವಿನ ಉಪಾಸನೆಯು ನಿಮ್ಮ ಹಿನ್ನಡೆಗೆ ಅನುಕೂಲವಾಗಲಿದೆ.
ಮಕರ ರಾಶಿ: ಇದು ಜನವರಿ ತಿಂಗಳ ಕೊನೆಯ ವಾರವು ಇದಾಗಿದೆ. ಗ್ರಹಗಳು ನಿಮಗೆ ಮಿಶ್ರಫಲವನ್ನು ಕೊಡಬಹುದು. ದ್ವಿತೀಯದಲ್ಲಿ ಶನಿಯು ನೀವು ಬಯಸಿದ್ದನ್ನು ಪೂರ್ಣ ಸಿಗುವಂತೆ ಮಾಡಲಾರನು. ಮೂಗಿಗೆ ತುಪ್ಪ ಒರೆಸಿದಂತೆ ಆಗಬಹುದು. ಹೆಚ್ಚು ಶ್ರಮ ಹಾಕಿ ಲಾಭವನ್ನು ಪಡೆಯಬೇಕಾಗಿದೆ. ದ್ವಾದಶದಲ್ಲಿ ಕುಜ, ಬುಧ, ಶುಕ್ರರಿದ್ದು ಬಂಧುಗಳಿಂದ ದೂರವಿರಬೇಕಾಗುವುದು. ವಾಹನ ನಷ್ಟ ಅಥವಾ ವಾಹನದಿಂದ ತೊಂದರೆಗಳು ಬರಬಹುದು. ತೃತೀಯದಲ್ಲಿ ರಾಹುವು ದುರ್ಬಲವಾಗುವ ಸಮಯದಲ್ಲಿ ನಿಮ್ಮನ್ನು ಎಚ್ಚರಗೊಳಿಸಿ, ಬಲವನ್ನು ತುಂಬುವನು. ಸೂರ್ಯನು ನಿಮ್ಮ ರಾಶಿಯಲ್ಲಿಯೇ ಇರುವನು. ಆರೋಗ್ಯದ ಬಗ್ಗೆ ಗಮನ ಬೇಕು. ಜ್ವರ, ನೆಗಡಿ ಇತ್ಯಾದಿಗಳು ಬರಬಹುದು. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
ಕುಂಭ ರಾಶಿ: ಈ ತಿಂಗಳು ನಿಮಗೆ ಶುಭಾಶುಭ ಮಿಶ್ರಫಲವು ಇರಲಿದೆ. ಸ್ವ ರಾಶಿಯಲ್ಲಿಯೇ ಶನಿಯು ಇರಲಿದ್ದು ಇನ್ನೊಬ್ಬರ ಒತ್ತಾಯದಲ್ಲಿ ಕಾರ್ಯಗಳನ್ನು ಮಾಡುವಿರಿ. ಸ್ವಂತವಾಗಿ ಯೋಚಿಸಲು, ಕಾರ್ಯ ಮಾಡಲು ಆಗದು. ದ್ವಿತೀಯದಲ್ಲಿ ರಾಹುವು ಕುಟುಂಬದ ಜೊತೆ ಸೌಹಾರ್ದ ಮಾತು ಮಾಡಲು ಕೊಡನು. ಜಗಳಗಳು ತಾರಕಕ್ಕೆ ಹೋದಾಗ ಸುಮ್ಮನಿರುವುದು ಉತ್ತಮ. ತೃತೀಯದಲ್ಲಿ ಇರುವ ಗುರುವು ಬಲವಂತನಾಗಿಲ್ಲ ಅಷ್ಟಮದಲ್ಲಿ ಕೇತುವು ಚಿಕಿತ್ಸೆಯ ಮೂಲಕ ರೋಗವನ್ನು ಪರಿಹರಿಸುವನು. ಏಕಾದಶದಲ್ಲಿ ಬುಧ, ಶುಕ್ರ ಹಾಗೂ ಕುಜರು ನಿಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನ, ಲಾಭವಾಗುವಂತೆ ಮಾಡುವರು. ತಂದೆಯಿಂದ ನೋವು ಅಥವಾ ತಂದೆಯ ಕಾರಣಕ್ಕೆ ಖರ್ಚು ಮಾಡಬೇಕಾಗಬಹುದು. ಹನೂಮಾನ್ ಚಾಲಿಸ್ ಪಠಣವು ನಿಮಗೆ ಬಲವನ್ನು ಕೊಡುವುದು.
ಮೀನ ರಾಶಿ: ಇದು ಜನವರಿ ತಿಂಗಳ ಕೊನೆಯ ವಾರವು ಮಧ್ಯಮಫಲವು ಇರಲಿದೆ. ಸ್ವರಾಶಿಯಲ್ಲಿ ರಾಹುವಿದ್ದು ಒಟ್ಟಾರೆ ನಿಮ್ಮ ಬದುಕನ್ನು ಬೇರೆ ಕಡೆಗೆ ಹೊರಳುವಂತೆ ಮಾಡುವನು. ದ್ವಿತೀಯದಲ್ಲಿ ಗುರುವಿದ್ದು ಪೂರ್ವಾರ್ಜಿತ ಸಂಪತ್ತನ್ನು ನೀವು ಪಡೆಯಬಹುದು. ದ್ವಾದಶದಲ್ಲಿ ಶನಿಯು ನಿಮ್ಮ ಯಾವುದೋ ಪ್ರಯೋಜನ ಇಲ್ಲದ ಕೆಲಸಕ್ಕೆ ಖರ್ಚನ್ನು ಮಾಡಿಸುವನು. ದಶಮಸ್ಥಾನದಲ್ಲಿ ಬುಧ, ಶುಕ್ರ ಹಾಗೂ ಕುಜರಿರುವರು. ಉದ್ಯಮದಲ್ಲಿ ಹೆಚ್ಚು ಅನುಕೂಲತೆ, ಸ್ಥಾನಮಾನವನ್ನು ಪಡೆಯುವ ಅವಕಾಶಗಳು ಬರಬಹುದು. ವಿವಾಹಕ್ಕೆ ಅಡಚಣೆ, ಮನಸ್ಸಿನಲ್ಲಿ ಸದಾ ಏನೋ ಕಿರಿಕಿರಿ ಇರಲಿದೆ. ಸಾತ್ತ್ವಿಕ ದೇವರ ಉಪಾಸನೆಯ ಕಡೆ ಮನಸ್ಸನ್ನು ತಿರುಗಿಸಿ. ಪೂರ್ವಜರ ಸೇವೆಯಿಂದ ಸೌಖ್ಯವಿದೆ.
ಲೋಹಿತ ಹೆಬ್ಬಾರ್-8762924271 (what’s app only)