
ಇಂದು ನೀವು ಅಂದುಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಇದೇ ಕಾರಣಕ್ಕೆ ನಿಮ್ಮ ಆತ್ಮವಿಶ್ವಾಸ ಸ್ವಲ್ಪ ಮಟ್ಟಿಗೆ ಕಡಿಮೆ ಆದರೂ ಪ್ರಯತ್ನವೇ ಮಾಡದಂತೆ ಸುಮ್ಮನೆ ಇರುವುದು ಸರಿಯಲ್ಲ. ಆರ್ಥಿಕವಾಗಿ ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವ್ಯವಹಾರದಿಂದ ದೂರವಿರುವುದು ಒಳ್ಳೆಯದು. ಸಾಮಾಜಿಕ ಸೇವೆ- ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮನೆಯಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳಿಗಾಗಿ ಹಣ ವ್ಯಯವಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ.
ದಿನದ ಆರಂಭದಲ್ಲಿ ಮನಸ್ಸಿಗೆ ಸ್ವಲ್ಪ ಬೇಸರ ಎನಿಸಿದರೂ, ಸಂಜೆಯ ವೇಳೆಗೆ ಶುಭ ಸುದ್ದಿಯೊಂದು ಬರಲಿದೆ. ವಾಹನ ಚಾಲನೆ ಮಾಡುವಾಗ ಏಕಾಗ್ರತೆ ಬಹಳ ಮುಖ್ಯ. ಜತೆಗೆ ಇರುವವರು ಏನು ಹೇಳುತ್ತಿದ್ದಾರೆ ಎಂಬ ಧ್ವನಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಇರಬಹುದು, ಮೌನವಾಗಿರುವುದು ಸೂಕ್ತ. ಹಳೆಯ ಸ್ನೇಹಿತರ ಭೇಟಿಯಿಂದ ಹಳೆಯ ನೆನಪುಗಳು ಮರುಕಳಿಸಲಿವೆ. ಹೊಟ್ಟೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆಯಾದಲ್ಲಿ ಆಹಾರ ಪಥ್ಯ ಮಾಡುವುದು ಅಗತ್ಯ.
ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಇಂದು ಸಕಾಲವಲ್ಲ. ಮುಖ್ಯವಾದ ಕಡತಗಳ ಬಗ್ಗೆ ಗಮನವಿರಲಿ, ಕೆಲವು ಫೈಲ್ ಗಳು ಕಳೆದುಕೊಳ್ಳುವ ಸಾಧ್ಯತೆ ಇದೆ. ವಾಹನ ಸಂಚಾರದಲ್ಲಿ ಜಾಗರೂಕತೆ ಇರಲಿ. ಎಷ್ಟು ಖರ್ಚಾದರೂ ಪರವಾಗಿಲ್ಲ ಎಂಬ ಮಾತನ್ನು ನೀವು ಎಲ್ಲಿಯೇ ಆಡುವುದಕ್ಕೂ ಮುನ್ನ ನಾಲ್ಕಾರು ಬಾರಿ ಆಲೋಚಿಸುವುದು ಮುಖ್ಯ. ಇನ್ನು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಓಡಾಟ ನಡೆಸಬೇಕಾಗಬಹುದು. ಇಂದು ಯಾವುದೇ ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ.
ಲೇಖನ- ಎನ್.ಕೆ.ಸ್ವಾತಿ