
ಜೂನ್ 14ರಿಂದ ಜೂನ್ 20ರವರೆಗೆ ಪ್ರೇಮದಲ್ಲಿ ಅನೇಕ ಅಚ್ಚರಿಯ ಸಂಗತಿಗಳು ನಡೆಯಲಿವೆ. ಶುಕ್ರನು ಚಂದ್ರನ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಅನಿರೀಕ್ಷಿತವಾದ ರೋಮಾಂಚನದ ಕ್ಷಣಗಳು ನಿಮ್ಮದಾಗಲಿದೆ.
ಮೇಷ ರಾಶಿ :
ಹೃದಯದ ಬಡಿತಕ್ಕೆ ಹೊಸ ಲಯ ಸಿಗಲಿದ್ದು, ಮಂಗಳನ ಪ್ರಭಾವದಿಂದ ಪ್ರೀತಿಯಲ್ಲಿ ರೋಮಾಂಚನ ಕಾದಿದೆ. ಕಣ್ಣಲ್ಲೇ ಸನ್ನೆ ಮಾಡಿ ಮನಸ್ಸು ಕದಿಯುವಿರಿ. ಸಂಗಾತಿಯೊಂದಿಗೆ ಸುಂದರ ಪಯಣಕ್ಕೆ ಸಕಾಲವಿದು.
ವೃಷಭ ರಾಶಿ :
ಮೌನ ಕರಗಿ, ಒಲವಿನ ಮಾತು ಚಿಗುರುವುದು. ನಿಮ್ಮ ಪ್ರೀತಿಯ ಆಳ ಸಂಗಾತಿಗೆ ಮನವರಿಕೆಯಾಗಲಿದೆ. ಮುನಿಸುಗಳೆಲ್ಲಾ ಮರೆಯಾಗಿ, ಒಲವಿನ ಹೂವು ಅರಳಲಿದೆ. ಕಂಕಣ ಭಾಗ್ಯಕ್ಕೆ ದಾರಿಯಾಗುವ ಮಧುರ ವಾರವಿದು.
ಮಿಥುನ ರಾಶಿ :
ಮಾತುಗಳೇ ಮಂತ್ರವಾಗಿ ಹೃದಯ ಗೆಲ್ಲುವ ಕ್ಷಣವಾಗಲಿದೆ. ನಿಮ್ಮ ಮಾತುಗಳಿಗೆ ಸಂಗಾತಿ ಫಿದಾ ಆಗಲಿದ್ದಾರೆ. ಪ್ರೇಮದ ಸುಳಿಯಲ್ಲಿ ಸಿಲುಕಿ ಹೊಸ ಲೋಕವನ್ನೇ ಸೃಷ್ಟಿಸುವಿರಿ. ಪ್ರೀತಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ರೋಮಾಂಚನಕಾರಿ ತಿರುವು ಸಿಗಲಿದೆ.
ಕರ್ಕಾಟಕ ರಾಶಿ :
ಈ ರಾಶಿಯಲ್ಲಿ ಶುಕ್ರನ ವಾಸ, ಒಲವಿನ ಸಾಮ್ರಾಜ್ಯದಲ್ಲಿ ಹೊಸ ಹರ್ಷ. ನಿಮ್ಮ ರಾಶಿಯ ಶುಕ್ರ ಪ್ರೇಮದ ಮಳೆ ಸುರಿಸಲಿದ್ದಾನೆ. ಸಂಗಾತಿಯ ತೋಳಿನಲ್ಲಿ ಸ್ವರ್ಗ ಸುಖ ಕಾಣುವಿರಿ, ಆತ್ಮೀಯತೆ ದುಪ್ಪಟ್ಟಾಗಲಿದೆ.
ಸಿಂಹ ರಾಶಿ :
ಚಂದಿರನ ಬೆಳಕಿನಲ್ಲಿ ಪ್ರೇಮದ ಕಾವ್ಯ ಮೂಡುವುದಿದೆ. ಭಾವನೆಗಳ ಅಲೆ ನಿಮ್ಮನ್ನು ಸಂಗಾತಿಯ ಹತ್ತಿರ ತರಲಿದೆ. ಪ್ರೀತಿಯಲ್ಲಿ ನಿಷ್ಠೆ ಹೆಚ್ಚಲಿದ್ದು, ವಿಶೇಷ ಉಡುಗೊರೆಯೊಂದಿಗೆ ಅವರ ಮನಸ್ಸನ್ನು ಸಂಪೂರ್ಣವಾಗಿ ಗೆಲ್ಲುವಿರಿ.
ಕನ್ಯಾ ರಾಶಿ :
ವಾದಗಳನ್ನು ಬದಿಗಿಟ್ಟು, ಪ್ರೀತಿಯ ಗೀತೆ ಹಾಡುವ ಸಮಯ. ಮನಸ್ಸಿನ ಗೊಂದಲಗಳು ದೂರವಾಗಿ ಸಂಗಾತಿಯ ಸನಿಹ ಸುಖ ನೀಡಲಿದೆ. ಪ್ರೇಮಕ್ಕೆ ಕುಟುಂಬದ ಹರಕೆ ಸಿಗುವ ಸುವರ್ಣ ಅವಕಾಶವಿದೆ. ಪ್ರೀತಿ ಮಾಗುವ ಸುಂದರ ದಿನಗಳಿವು.
ತುಲಾ ರಾಶಿ :
ಹೃದಯಗಳು ಒಂದಾಗಿ, ಪ್ರೇಮದ ಹೆಜ್ಜೆ ಇಡುವ ಕಾಲ. ಸಂಗಾತಿಯ ಕಣ್ಣಲ್ಲೇ ನಿಮ್ಮ ಜಗತ್ತನ್ನು ಕಾಣುವಿರಿ. ಪ್ರೀತಿಯ ಸಂಬಂಧ ಮುಂದಿನ ಹಂತಕ್ಕೆ ತಲುಪಲು ಈ ವಾರ ಹೆಜ್ಜೆಯಿಡಲಿದ್ದೀರಿ. ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
ವೃಶ್ಚಿಕ ರಾಶಿ :
ಸಂಶಯದ ಮೋಡ ಸರಿದು, ಪ್ರೇಮದ ಸೂರ್ಯ ಮೂಡುವ ವಾರವಿದು. ನಿಮ್ಮ ನಿಗೂಢ ಪ್ರೀತಿ ಈಗ ಬಹಿರಂಗವಾಗುವ ಸಮಯ. ಸಂಗಾತಿಯ ನಂಬಿಕೆ ನಿಮ್ಮಲ್ಲಿ ಹೊಸ ಚೈತನ್ಯ ತುಂಬಲಿದೆ. ಪ್ರೇಮ ಸಾಮ್ರಾಜ್ಯದಲ್ಲಿ ನೀವೇ ರಾಜ ಮತ್ತು ರಾಣಿಯರು.
ಧನು ರಾಶಿ :
ಹೊಸ ಕನಸು, ಹೊಸ ಒಲವು ಮೂಡುವ ರಂಗಿನ ದಿನಗಳು ನಿಮಗೆ. ಒಂಟಿತನಕ್ಕೆ ಬ್ರೇಕ್ ಬೀಳಲಿದೆ. ಹೊಸಬರ ಪ್ರವೇಶದಿಂದ ಮನಸ್ಸು ತೇಲಲಿದೆ. ಹಳಬರ ಮುನಿಸು ಕರಗಿ, ಪ್ರೀತಿಯ ಸವಿ ಸಿಗುವ ಅದ್ಭುತ ವಾರವಿದು.
ಇದನ್ನೂ ಓದಿ: ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?
ಮಕರ ರಾಶಿ :
ನಂಬಿಕೆಯ ತಳಹದಿಯ ಮೇಲೆ ಪ್ರೇಮದ ಅರಮನೆ ನಿರ್ಮಾಣವಾಗಲಿ. ಮಾತಗಿಂತ ಕೃತಿಯಲ್ಲಿ ಪ್ರೀತಿ ತೋರಿಸುವಿರಿ. ಸಂಗಾತಿಯ ಜವಾಬ್ದಾರಿಯುತ ನಡವಳಿಕೆ ನಿಮ್ಮಲ್ಲಿ ನೆಮ್ಮದಿ ತರಲಿದೆ. ಪ್ರೇಮ ಜೀವನದಲ್ಲಿ ಸ್ಥಿರತೆ ಮತ್ತು ಗೌರವ ಹೆಚ್ಚಾಗಲಿದೆ.
ಕುಂಭ ರಾಶಿ :
ಹಠ ಬಿಟ್ಟು ಒಲವಿಗೆ ಶರಣಾಗುವ ಮಧುರ ಕ್ಷಣ ಬರಲಿದೆ. ಸಂಗಾತಿಯ ಸಣ್ಣ ಮುನಿಸನ್ನು ಪ್ರೀತಿಯಿಂದಲೇ ಗೆಲ್ಲುವಿರಿ. ವಾರಾಂತ್ಯದಲ್ಲಿ ದೂರವಿಹಾರ ನಿಮ್ಮ ಪ್ರೇಮದ ರಂಗನ್ನು ಮತ್ತಷ್ಟು ಹೆಚ್ಚಿಸಲಿದೆ.
ಮೀನ ರಾಶಿ :
ಶನಿಯ ಸ್ಥಿರತೆಯಲ್ಲಿ, ಅಮರ ಪ್ರೇಮದ ಪಿಸುಮಾತು ಬರಲಿದೆ. ಮೀನದ ಶನಿ ಪ್ರೀತಿಗೊಂದು ಜವಾಬ್ದಾರಿ ನೀಡಲಿದ್ದಾನೆ. ಸಂಗಾತಿಯ ಮೌನವನ್ನೂ ಅರ್ಥೈಸಿಕೊಂಡು, ಗಾಢವಾದ ಭಾವನಾತ್ಮಕ ಬಾಂಧವ್ಯವನ್ನು ಅನುಭವಿಸುವಿರಿ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ