Weekly Horoscope ವಾರ ಭವಿಷ್ಯ: ಮುಂದಿನ ವಾರ ಯಾವ ರಾಶಿಗೆ ಏನು ಫಲ?

| Updated By: shruti hegde

Updated on: Jun 19, 2021 | 7:07 AM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಮುಂದಿನ ವಾರ ಯಾವ ರಾಶಿಗೆ ಏನು ಫಲ?
ವಾರ ಭವಿಷ್ಯ
Follow us on

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ವಾರಭವಿಷ್ಯ
ತಾ.21-06-2021 ರಿಂದ ತಾ.27-06-2021 ರ ವರೆವಿಗೆ, ರಾಶಿಭವಿಷ್ಯ:-
***
ಮೇಷ ರಾಶಿ:-
ವೃತ್ತಿರಂಗದಲ್ಲಿ ನಿರೀಕ್ಷಿತ ಉನ್ನತ ಸ್ಥಾನ ಪ್ರಾಪ್ತಿಯಾಗಿ ಕಂಟ್ರಾಕ್ಟ್ ವೃತ್ತಿಯವರಿಗೆ ಧನಾಗಮನ ನಿರಂತರವಿದೆ. ಸಾಹಸ, ಕ್ರೀಡಾ ಮನೋಭಾವಕ್ಕೆ ಮನ್ನಣೆ ಸಿಗಲಿದೆ. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ ಇದೆ. ವಿದ್ಯಾರ್ಥಿ ಜೀವನದಲ್ಲಿ ಹೊಸ ಉತ್ಸಾಹ ವರ್ಧಿಸಲಿದೆ. ನೂತನ ವಾಹನ ಲಾಭವೂ ಇದ್ದೀತು. ಕಾರ್ಯಶೀಲರಾದ ನಿಮ್ಮ ಪ್ರಯತ್ನಬಲವೂ ಕಾರ್ಯಸಾಧನೆಗೆ ಅನುಗುಣವಾಗಲಿದೆ.
ಅದೃಷ್ಟ ಬಣ್ಣ:  ಕೆಂಪು ಬಣ್ಣ
ಅದೃಷ್ಟ ಸಂಖ್ಯೆ: 3

ವೃಷಭ ರಾಶಿ:-
ಕಾರ್ಯಗಳಿಗೋಸ್ಕರ ಅಧಿಕ ಸುತ್ತಾಟವಾದರೂ ನೆಮ್ಮದಿ ತಂದೀತು. ವೈವಾಹಿಕ ಸಂಬಂಧಗಳಲ್ಲಿ ಅಡೆತಡೆಗಳಿರುತ್ತವೆ. ಆರ್ಥಿಕವಾಗಿ ತುಸು ನೆಮ್ಮದಿ, ಚೇತರಿಕೆ ಇರುತ್ತದೆ. ಕೋರ್ಟು ಕಚೇರಿಗಳಲ್ಲಿನ ಕೆಲಸಕಾರ್ಯಗಳಲ್ಲಿ ಧನವ್ಯಯವಿದ್ದರೂ ಯಶಸ್ಸು ನಿಮ್ಮದಾಗಲಿದೆ. ಮಕ್ಕಳಿಂದ ಸುಖ ಹಾಗೂ ವಾಹನ ಸುಖ ಸಾಧ್ಯ. ನಿರೀಕ್ಷಿತ ಚಿಂತನೆಗಳು ಹಂತ ಹಂತವಾಗಿ ನೆರವೇರಲಿದೆ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 7

ಮಿಥುನ ರಾಶಿ:-
ಎಲ್ಲಾ ವಿಚಾರಗಳಲ್ಲಿ ಸಮಚಿತ್ತದಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ಗೃಹ ನಿರ್ಮಾಣ ಕಾರ್ಯಗಳು ಅಡೆತಡೆಗಳಿಂದ ನಡೆಯುತ್ತವೆ. ಶುಭಕಾರ್ಯಗಳಿಗಾಗಿ ಹಿರಿಯರೊಡನೆ ಸಮಾಲೋಚನೆ ಅಗತ್ಯವಿರುತ್ತದೆ. ದುಡುಕದಿರಿ. ಈ ದಿನ ಒಳಿತಲ್ಲ ಎಂಬ ಮನೋಭಾವನೆ ಬಿಟ್ಟು ಪ್ರಯತ್ನ ಬಲ, ಆತ್ಮವಿಶ್ವಾಸದಿಂದ ಕಾರ್ಯರಂಗಕ್ಕೆ ಧುಮುಕಿರಿ. ನಿಶ್ಚಿತ ರೂಪದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 6

ಕಟಕರಾಶಿ:-
ಸ್ವಉದ್ಯೋಗಸ್ಥರಿಗೆ ಅಲ್ಪ ಪರಿಶ್ರಮದಿಂದ ಹೆಚ್ಚಿನ ಗಳಿಕೆಯಾಗಲಿದೆ. ವೃತ್ತಿರಂಗದಲ್ಲಿನ ಹೆಚ್ಚಿನ ದಕ್ಷತೆಯಿಂದಾಗಿ ಮೇಲಾಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ಕುಟುಂಬದಲ್ಲಿ ಸುಖ, ನೆಮ್ಮದಿ, ಸಂತಸಗಳಿರುತ್ತವೆ. ಇಚ್ಛಾ ಕಾರ್ಯದ ಸಿದ್ಧಿಯ ಕಾಲವಿದು. ಸದುಪಯೋಗಿಸಿಕೊಳ್ಳಿರಿ. ವೈವಾಹಿಕ ಮಾತುಕತೆಗಳು ಕಂಕಣಬಲವನ್ನು ಒದಗಿಸಿಕೊಡಬಲ್ಲುದು. ರಾಜಕಾರಣಿಗಳಿಗೆ ಸೂಕ್ತ ಬೆಂಬಲ ದೊರಕಲಿದೆ. ಹೊಸ ಕಾರ್ಯಗಳ ಆರಂಭಕ್ಕೆ ಉತ್ಸುಕತೆ ತೋರದಿರಿ.
ಅದೃಷ್ಟ ಬಣ್ಣ: ತಿಳಿ ಹಳದಿ
ಅದೃಷ್ಟ ಸಂಖ್ಯೆ: 8

ಸಿಂಹ ರಾಶಿ:-
ಉತ್ತಮ ಗ್ರಹಗಳು ನಿಮ್ಮೊಡನೆ ಪರಿಣಾಮ ಬೀರಲಿದೆ. ನಿಮಗಿರುವ ವಿರೋಧ, ಭಿನ್ನಾಭಿಪ್ರಾಯ ಹಂತ ಹಂತವಾಗಿ ಕರಗಿಹೋಗಲಿದೆ. ರಾಹುಬಲ ಉತ್ತಮವಿದ್ದು, ಏನೋ ಒಂದು ಒಳ್ಳೆಯದು ನಿಮಗಾಗಲಿದೆ ಎಂಬ ಅರಿವು ಗೋಚರಕ್ಕೆ ಬಂದೀತು. ಅವಿವಾಹಿತರಿಗೆ ವಿವಾಹ ಪೂರಕ ವಾರ. ಮನಸ್ಸಿನ ವಿಚಾರವನ್ನು ವ್ಯಕ್ತಪಡಿಸುವ ಸಂದರ್ಭವಿರುತ್ತದೆ. ಸದುಪಯೋಗ ನಿಮ್ಮದಾಗಲಿ. ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಹಣಕಾಸಿನ ಪರಿಸ್ಥಿತಿ ನಿರಾಳವೆನ್ನಬಹುದು.
ಅದೃಷ್ಟ ಬಣ್ಣ: ಕೇಸರಿ
ಅದೃಷ್ಟ ಸಂಖ್ಯೆ: 5

ಕನ್ಯಾರಾಶಿ:-
ನಿಮಗೆ ಬೇಕಾದಷ್ಟು ಅವಕಾಶಗಳು ಒದಗಿ ಬಂದಾವು. ಅದನ್ನು ವ್ಯರ್ಥಗೊಳಿಸದೆ ಸದುಪಯೋಗಿಸಿಕೊಳ್ಳುವುದರಲ್ಲಿ ನಿಮ್ಮ ಜಾಣ್ಮೆ ಅಡಗಿದೆ. ಪ್ರಾಮಾಣಿಕ ಕೆಲಸಕ್ಕೆ ತಕ್ಕಫ‌ಲ ಇದ್ದೇ ಇರುತ್ತದೆ. ಆಗಾಗ ನಿರಾಶ ಮನೋಭಾವ ತುಂಬಿರುವುದಲ್ಲದೆ ಕೆಲಸಕಾರ್ಯಗಳು ಯಶಸ್ವಿಯಾಗುವ ಅನುಮಾನ, ನಿರ್ಧಾರಗಳಲ್ಲಿ ಅನಿಶ್ಚಿತತೆ ತೋರಿಬಂದೀತು. ಆತ್ಮವಿಶ್ವಾಸವಿರಲಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 7

ತುಲಾರಾಶಿ:-
ಆರ್ಥಿಕ ಸ್ಥಿತಿಯಲ್ಲಿ ಆಗಾಗ ಏರುಪೇರಾದರೂ ದೈವಾನುಗ್ರಹದಿಂದ ನಿಶ್ಚಿತ ರೂಪದಲ್ಲಿ ಆದಾಯ ವೃದ್ಧಿಯಾಗುತ್ತಲೇ ಹೋಗಲಿದೆ. ಆತ್ಮೀಯರ ಸಹಕಾರದಿಂದ ಕಾರ್ಯಸಿದ್ಧಿ. ಚಿನ್ನಾಭರಣ ಸಂಗ್ರಹದಿಂದ ಯಶಸ್ವಿ ಬಾಳ್ವೆಯೆನಿಸಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ವೃತ್ತಿರಂಗದಲ್ಲಿ ನಿಮಗೆ ಕ್ರಿಯಾಶೀಲತೆಗೆ ಹಾಗೇ ನೀವಿಟ್ಟ ವಿಶ್ವಾಸ ಇವೆಲ್ಲ ಸಫ‌ಲತೆಯನ್ನು ಹೊಂದುವುದು. ಸಾಮಾಜಿಕ ಕ್ಷೇತ್ರದಲ್ಲಿ ಜನಾನುರಾಗದ ಅನುಭವವಾಗುತ್ತದೆ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 3

ವೃಶ್ಚಿಕ ರಾಶಿ:-
ಉತ್ತಮ ಯಶಸ್ಸಿನ ವಾರವಿದು. ಜೀವನ ಶೈಲಿ ಹಾಗೂ ವಿಚಾರ ಚಿಂತನೆಯನ್ನು ಬದಲಿಸಿಕೊಳ್ಳುವ ಕಾಲ ಪಕ್ವವಾಗಲಿದೆ. ದೇವತಾನುಗ್ರಹದಿಂದ ತೆಗೆದುಕೊಳ್ಳುವ ಹೆಜ್ಜೆಗಳು ಸರಿದಾರಿಯಲ್ಲಿ ಮುನ್ನಡೆಸಲಿವೆ. ಆತ್ಮವಿಶ್ವಾಸ ವಿರಲಿ. ನಿಮ್ಮ ಸಾಮರ್ಥ್ಯ ಹಾಗೂ ಪ್ರಯತ್ನವನ್ನು ಕೀಳಂದಾಜಿಸಬೇಡಿ. ಒಳ್ಳೆಯದು ನಿಮ್ಮದಾಗಲಿದೆ. ಪ್ರಣಯಿಗಳಿಗೆ ಪ್ರೀತಿ, ಪ್ರೇಮಕ್ಕೆ ಪೂರಕವಾದ ಸಮಯ. ವಿದ್ಯಾರ್ಥಿಗಳು ಅಭ್ಯಾಸಬಲವನ್ನು ಹೆಚ್ಚಿಸಿಕೊಳ್ಳಲಿದ್ದಾರೆ.
ಅದೃಷ್ಟ ಬಣ್ಣ: ಕಂದು ಬಣ್ಣ
ಅದೃಷ್ಟ ಸಂಖ್ಯೆ: 2

ಧನಸ್ಸುರಾಶಿ:-
ಆಗಾಗ ನಿರಾಶಾ ಮನೋಭಾವದಿಂದ ಕೊರಗದಿರಿ. ಮುಖ್ಯವಾಗಿ ನಿಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ಮರೆಯದಿರಿ. ಅಧಿಕ ರೀತಿಯ ಖರ್ಚುವೆಚ್ಚಗಳಿಂದ ಆತಂಕ ತಂದರೂ ಆಗಾಗ ಧನಾಗಮನದಿಂದ ಚೇತರಿಕೆ ತಂದುಕೊಡಲಿದೆ. ಕೆಲಸಕಾರ್ಯಗಳಲ್ಲಿ ವಿಘ್ನಗಳೇ ತೋರಿಬಂದರೂ ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿರಿ. ಯೋಗ್ಯ ನೆಂಟಸ್ತಿಕೆಗಳು ಅವಿವಾಹಿತರಿಗೆ ಕಂಕಣಭಾಗ್ಯವನ್ನು ಒದಗಿಸುವುವು.
ಅದೃಷ್ಟ ಸಂಖ್ಯೆ: ಹಳದಿ
1

ಮಕರರಾಶಿ:-
ಯಾವುದೇ ವಿಚಾರಗಳಲ್ಲಿ ಅಡೆತಡೆಗಳಿದ್ದರೂ ಮೇಲುಗೈ ಸಾಧಿಸುವಿರಿ. ಸಾಂಸಾರಿಕ ಸುಖ ವೃದ್ಧಿಯಾಗಲಿದೆ. ವ್ಯಾಪಾರ, ವ್ಯವಹಾರಸ್ಥರಿಗೆ ಲಾಭ. ವಿದ್ಯಾರ್ಥಿ ವರ್ಗಕ್ಕೆ ಏಳಿಗೆಯ ಸೂಚನೆಯು ಕಂಡುಬರುತ್ತದೆ. ಗುಡಿ ಕೈಗಾರಿಕೆ ಹಾಗೂ ಕರಕುಶಲ ವೃತ್ತಿಯವರಿಗೂ ಲಾಭವಿದೆ. ಯೋಗ್ಯವಯಸ್ಕರಿಗೆ ವೈವಾಹಿಕ ಭಾಗ್ಯ ಹುಡುಕಿಕೊಂಡು ಬರಲಿದೆ. ಸದುಪಯೋಗಿಸಿರಿ.
ಅದೃಷ್ಟ ಸಂಖ್ಯೆ:  ಕಪ್ಪು
ಅದೃಷ್ಟ ಸಂಖ್ಯೆ: 4

ಕುಂಭರಾಶಿ:-
ನಿಮ್ಮ ಪರಿಶ್ರಮದ ಪ್ರಭಾವ, ವೃತ್ತಿರಂಗದಲ್ಲಿ ಮುನ್ನಡೆಗೆ ಸಾಧಕ ವಾಗಲಿದೆ. ಸಾಂಸಾರಿಕವಾಗಿ ಆಗಾಗ ಚಿಕ್ಕಪುಟ್ಟ ಸಮಸ್ಯೆಗಳು ಇದ್ದೇ ಇರುತ್ತದೆ. ಆಕಸ್ಮಿಕವಾಗಿ ದೂರಸಂಚಾರಕ್ಕೆ ಹೊರಡುವ ಸಾಧ್ಯತೆ ತಂದೀತು. ಆರೋಗ್ಯ ಭಾಗ್ಯದಲ್ಲಿ ಸುಧಾರಣೆ ತೋರಿಬಂದರೂ ಉದಾಸೀನತೆ ಸಲ್ಲದು. ಧನಾಗಮನಕ್ಕೆ ಕೊರತೆ ಕಂಡುಬರುವುದಿಲ್ಲ. ಕುಟುಂಬದ ಹಿರಿಯರ ಆರೋಗ್ಯದ ತಪಾಸಣೆ ಮಾಡಿಸಿರಿ. ಕ್ರೀಡಾಪಟುಗಳಿಗೆ ನಿರೀಕ್ಷಿತ ಯಶಸ್ಸು ಸಿಗಲಾರದು.
ಅದೃಷ್ಟ ಸಂಖ್ಯೆ: ನೀಲಿ
ಅದೃಷ್ಟ ಸಂಖ್ಯೆ: 8

ಮೀನರಾಶಿ:-
ಸರಕಾರದಿಂದ ಅಗತ್ಯದ ಕೆಲಸಕಾರ್ಯಗಳು ಈ ವಾರ ಕೈಗೂಡುವವು. ನಾನಾ ರೀತಿಯ ಧನಸಂಗ್ರಹವಾದರೂ ಅಧಿಕ ರೀತಿಯಾಗಿ ಆಕಸ್ಮಿಕ ಖರ್ಚುವೆಚ್ಚಗಳು ಆತಂಕಕ್ಕೆ ಕಾರಣವಾಗಬಹುದು. ಶುಭಮಂಗಲ ಕಾರ್ಯ ಗಳಿಗಾಗಿ ಸಂಚಾರ, ಸಂಭ್ರಮ, ಓಡಾಟಗಳಿರುತ್ತವೆ. ಆರೋಗ್ಯ ಕೂಡಾ ಚೆನ್ನಾಗಿರುತ್ತದೆ. ಮಕ್ಕಳ ವಿಚಾರದಲ್ಲಿ ಕಾರ್ಯಪ್ರವೃತ್ತರಾಗುವ ಸಂಭವವಿರುತ್ತದೆ. ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ ಏರ್ಪಡಲಿದೆ.
ಅದೃಷ್ಟ ಸಂಖ್ಯೆ: ಬಿಳಿಬಣ್ಣ
ಅದೃಷ್ಟ ಸಂಖ್ಯೆ: 6


ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937