Horoscope: ದಿನಭವಿಷ್ಯ; ಈ ರಾಶಿಯವರು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ

|

Updated on: Feb 24, 2024 | 7:00 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಇಂದಿನ (ಫೆಬ್ರವರಿ​​​​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ; ಈ ರಾಶಿಯವರು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ
ರಾಶಿ ಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಮಘಾ, ಯೋಗ : ಅತಿಗಂಡ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:50 ರಿಂದ 11:18ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:54 ರಿಂದ 08:22ರ ವರೆಗೆ.

ಸಿಂಹ ರಾಶಿ: ನೀವು ಬಹಳ ವರ್ಷಗಳಿಂದ ಕಾಯುತ್ತಿದ್ದ ಜೀವನಕ್ಕೆ ಹೊಂದಿಕೊಂಡು ಖುಷಿಯಗಿರುವಿರಿ. ಸಂಕಷ್ಟವನ್ನು ದೂರ ಮಾಡಿಕೊಳ್ಳಲು ನೀವು ಮಾನಸಿಕವಾಗಿ ದೃಢರಾಗಬೇಕು. ಸಂಬಂಧಿಗಳಿಂದ ಹಣ ಸಾಲ ಪಡೆದವರು ಯಾವ ಸನ್ನಿವೇಶದಲ್ಲಾದರೂ ಸಾಲವನ್ನು ಮರುಪಾವತಿಸಬೇಕಾಬಹುದು. ನಿಮ್ಮ ಅನಿರೀಕ್ಷಿತ ನಡವಳಿಕೆಯಿಂದ ಸಂಗಾತಿಗಳು ನಿರಾಶರಾಗಬಹುದು. ಪ್ರೇಮದಲ್ಲಿ ನಿರಾಶೆಯನ್ನು ಇಟ್ಟಕೊಳ್ಳುವುದು ಬೇಡ. ಸಮಯದ ಚಕ್ರವು ವೇಗವಾಗಿ ಸುತ್ತಿದಂತೆ ಕಾಣಿಸುವುದು. ಇಂದು ಹಲವು ಕಾರ್ಯಗಳನ್ನು ಒಂದೇ ಸಲ ಮಾಡಬೇಕಾಗಬಹುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ ಬೇಡ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಕಾರ್ಯದಲ್ಲಿ ಪ್ರವೃತ್ತರಾಗುವಿರಿ.

ಕನ್ಯಾ ರಾಶಿ: ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಿಸಬೇಕಾಗಿದೆ. ವಿಶ್ರಾಂತಿಯ ಸಮಯವನ್ನು ನೀವು ಬದಲಿಸಿಕೊಳ್ಳುವಿರಿ. ಮನೆಯ ಚಿಕ್ಕ ಕೆಲಸಗಳಿಗೆ ನಿಮ್ಮ ಹಣ ವ್ಯರ್ಥವಾಗಬಹುದು. ಮಕ್ಕಳು ತಮ್ಮ ಸಾಧನೆಗಳಿಂದ ಗರ್ವಪಡುವರು. ಪ್ರೇಮಿಗಳ‌ ನಡುವೆ ವಾಗ್ವಾದವು ನಡೆಯಬಹುದು. ಇಂದು ತಜ್ಞರ ಜೊತೆ ನಿಮ್ಮ ಅನುಭವವನ್ನು ಹಂಚಿಕೊಳ್ಳುವಿರಿ. ನಿಮ್ಮ ಹಿಂಜರಿಕೆಗೆ ಕಹಿ ಅನುಭವಗಳು ಕಾರಣವಾಗಬಹುದು. ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು. ರಾಜಕೀಯ ಏರಿಳಿತವನ್ನು ನೀವು ಊಹಿಸುವುದು ಕಷ್ಟವಾದೀತು.

ತುಲಾ ರಾಶಿ: ಇಂದು ನಿಮ್ಮ ಅನುಭವಗಳು ಪ್ರಯೋಜನಕ್ಕೆ ಬರಬಹುದು. ಅತಿಯಾದ ಚಿಂತೆಯನ್ನು ಮಾಡಿ, ಇರುವ ಕಾರ್ಯವನ್ನು ನೀವು ಕೆಡಿಸಿಕೊಳ್ಳುವಿರಿ. ನಿಮ್ಮ ನಿರಾಶೆಯನ್ನು ಮೀರಿಸಿ ಸಂತೋಷವು ಬರಬಹುದು. ಕುಟುಂಬದ ಒಳಿತಿಗಾಗಿ ಸಹೋದರರ ನಡುವೆ ಸಂಘರ್ಷಗಳು ಉಂಟಾಗಬಹುದು. ಕುಟುಂಬದ ಹೊಣೆಗಾರಿಕೆಗಳಲ್ಲಿ ನಿಮ್ಮ ಉದಾಸೀನತೆಗೆ ಕೋಪಿಸಿಕೊಳ್ಳುವಿರಿ. ನ್ಯಾಯಸಮ್ಮತವಾದ ಮತ್ತು ಉದಾರವಾದ ಪ್ರೀತಿಯಿಂದ ಪ್ರಶಂಸೆ ಸಾಧ್ಯ. ನಿಮ್ಮ ಸಾಮರ್ಥ್ಯವನ್ನು ವರ್ಧಿಸಲು ಕೌಶಲವೂ ಇರಲಿ. ಸ್ತ್ರೀಯರು ತಮ್ಮ ಕೌಶಲವನ್ನು ತೋರಿಸುವರು. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಯಾರಸದರೂ ಅಸತ್ಯವನ್ನು ಆಡಿದರೆ ಅದನ್ನು ಸರಳವಾಗಿ ಕಂಡು ಹಿಡಿಯುವಿರಿ.‌ ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು.

ವೃಶ್ಚಿಕ ರಾಶಿ: ನೀವು ಮಾನಸಿಕ ದೌರ್ಬಲ್ಯಕ್ಕೆ ಬೇಕಾದುದನ್ನು ಮಾಡಿಕೊಳ್ಳುವಿರಿ. ಇಂದು ನಿಮಗೆ ಹೂಡಿಕೆ ಮಾಡುವುದು ಸಾಕೆನಿಸಬಹುದು. ಪಿರ್ತ್ರಾರ್ಜಿತ ಆಸ್ತಿಯ ಬಗ್ಗೆ ಆಸೆ ಬರಬಹುದು. ನಿಮ್ಮ ಯೋಜನೆಗಳು ಅಂತಿಮ ಸ್ವರೂಪವನ್ನು ಪಡೆಯಲಿವೆ. ಮನೆಯ ಸದಸ್ಯರೊಂದಿಗೆ ವಾದ ಮಾಡುವ ವೇಳೆಯಲ್ಲಿ ಕೋಪಗೊಳ್ಳುವ ಸಂಭವವಿದೆ. ಇದಾದ ನಂತರ ಮನೆಯ ಸದಸ್ಯರನ್ನು ಮನವೊಲಿಸಲು ನಿಮ್ಮ ಹೆಚ್ಚಿನ ಸಮಯ ವ್ಯಯವಾಗಬಹುದು. ನಿಮ್ಮನ್ನು ಖುಷಿಪಡಿಸಲು ನಿಮ್ಮ ಜೀವನ ಸಂಗಾತಿ ಇಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.