Horoscope 2 August: ದಿನಭವಿಷ್ಯ, ಈ ರಾಶಿಯವರು ಯಾರ ಜೊತೆಯೂ ಕಲಹ ಮಾಡಿಕೊಳ್ಳಬೇಡಿ

| Updated By: Rakesh Nayak Manchi

Updated on: Aug 02, 2023 | 12:00 AM

ಇಂದಿನ (2023 ಜುಲೈ ಆಗಸ್ಟ್ 2​) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 2 August: ದಿನಭವಿಷ್ಯ, ಈ ರಾಶಿಯವರು ಯಾರ ಜೊತೆಯೂ ಕಲಹ ಮಾಡಿಕೊಳ್ಳಬೇಡಿ
ಇಂದಿನ ರಾಶಿಭವಿಷ್ಯ
Image Credit source: iStock Photo
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ ಆಗಸ್ಟ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಪ್ರೀತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:52 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ.

ಮೇಷ ರಾಶಿ: ಲಾಭವನ್ನು ಗಮನದಲ್ಲಿಟ್ಟುಕೊಂಡು ನೀವು ಮತ್ತೆಲ್ಲವನ್ನೂ ಮರೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ನಿಮ್ಮ ಮಾತನ್ನು ನಡಸಿಕೊಡಲು ನಿಮ್ಮಿಷ್ಟದವರು ಪ್ರಯತ್ನಿಸುವರು. ಆಪ್ತರನ್ನು ಬಿಟ್ಟುಕೊಡಲು ನಿಮಗೆ ಕಷ್ಟವಾದೀತು. ಕುಟುಂಬದವರ ಬಗ್ಗೆ ನಿಮ್ಮ ಅಭಿಪ್ರಾಯವು ಸರಿಯಾಗಿ ಇರಲಿ. ತಾಯಿಯು ನಿಮ್ಮ ಪರವಾಗಿ ನಿಲ್ಲುವರು. ವಾಹನವನ್ನು ಖರೀದಿಸುವ ಯೋಚನೆ ಮಾಡವಿರಿ. ಹಣಕ್ಕಾಗಿ ಸಾಲ‌ ಮಾಡಲು ಸಲಹೆಯನ್ನೂ ಕೊಡಬಹುದು.‌ ಸುಮ್ಮನೇ ಕುಳಿತು ಏನ್ನಾದರೂ ನಕಾರಾತ್ಮಕ ಯೋಚನೆಯನ್ನು ಮಾಡುವಿರಿ.

ವೃಷಭ ರಾಶಿ: ಭಾರದ ವಸ್ತುಗಳನ್ನು ನೀವು ಒಯ್ಯುವುದು ಬೇಡ. ನಿಮ್ಮದಾದ ಚೌಕಟ್ಟನ್ನು ಮಾಡಿಕೊಳ್ಳುವಿರಿ. ಅಸಾಮಾನ್ಯ ವಿಚಾರವನ್ನು ನೀವು ಸರಳೀಕರಿಸುವ ನೈಪುಣ್ಯತೆಯನ್ನು ಹೊಂದಿರುವಿರಿ. ಕೆಲವು ವಿಚಾರಕ್ಕೆ ಆಲಸ್ಯವು ವರವಾಗಬಹುದು. ಯಾರ ಜೊತೆಯೂ ನೀವು ಕಲಹವನ್ನು ಮಾಡಿಕೊಳ್ಳಬೇಡಿ. ಸಂಗಾತಿಯ ಜೊತೆ ದೂರ ಪ್ರಯಾಣವನ್ನು ಮಾಡಿ ಬನ್ನಿ. ಅನನುಕೂಲತೆಯನ್ನು ಸ್ನೇಹಿತರಿಗೆ ಹೇಳಿ ಸಮಾಧಾನವನ್ನು ತಂದುಕೊಳ್ಳುವಿರಿ. ಹಿರಿಯರ‌ ಮಾತನನ್ನು ಅನಿಸರಿಸಲು ನೀವು ಹಿಂದೇಟು ಹಾಕಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾದಾರು. ನಿಮ್ಮ ಸಹಾಯವನ್ನು ಕೇಳಿಯಾರು.

ಮಿಥುನ ರಾಶಿ: ಉದ್ಯೋಗದ ಕಾರಣದಿಂದ ಬೇರೆ ಊರಿನಲ್ಲಿ ಇದ್ದರೂ ಮನೆಯ ನೆನಪು ನಿಮ್ಮನ್ನು ಅತಿಯಾಗಿ ಕಾಡಬಹುದು. ಉದ್ಯೋಗವೇ ಸಾಕು ಎನಿಸಬಹುದು.‌ ಅತಿಯಾದ ಒತ್ತಡದಿಂದ ಹೊರಬರಲು ಯಂತ್ರಗಳನ್ನು ಮಾಡುವಿರಿ.‌ ಏಕಾಗ್ರತೆಯಿಂದ ಸ್ವಲ್ಪ ಓದಿದರೂ ನಿಮಗೆ ಹೆಚ್ಚು ಫಲವನ್ನು ಕೊಟ್ಟೀತು. ಅನಗತ್ಯ ತಿರುಗಾಟದಿಂದ ನಿಮಗೆ ಬೇಸರವಾಗಲಿದೆ. ಸಂಗಾತಿಯನ್ನು ನೀವು ದೂರ ಮಾಡಿಕೊಳ್ಳುವಿರಿ ಉಳಿತಾಯಕ್ಕೆ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ. ಪ್ರತ್ಯೇಕವಾಗಿ ಇರಲು ನಿಮಗೆ ಬಾರದು.

ಕಟಕ ರಾಶಿ: ನಿಮಗೆ ಸಂಬಂಧಿಸದ ವಿಚಾರಗಳನ್ನು ನೀವು ಹೆಚ್ಚು ಮಾತನಾಡಲು ಬಯಸುವಿರಿ. ದೂರ ಪ್ರಯಾಣದಿಂದ ಹೆಚ್ಚು ಆಯಾಸಗೊಳ್ಳುವಿರಿ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಿ. ನಿಮಗೆ ಎಷ್ಟೋ ವಿಷಯಗಳಿಗೆ ಸಾಂತ್ವನವು ಇಂದು ಸಿಗಲಿದೆ. ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯಕ್ಕೆ ಕೊಡುವರು. ನೀವು ಇಂದು ನಾಜೂಕಾದ ಮಾತುಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ. ಭೋಗವಸ್ತುಗಳ ಖರೀಯು ಅಧಿಕವಾಗಿ ಇರಲಿದೆ.‌ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ.

ಸಿಂಹ ರಾಶಿ: ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದು ಹೊರಟರೂ ಅದು ಮತ್ತೆಲ್ಲೋ ಒಂದು ಕಡೆ ಹರಿದು ಹೋಗುವುದು. ವೈವಾಹಿಕ ಜೀವನದ ಸುಖವನ್ನು ಅನುಭವಿಸುವಿರಿ. ದಾಂಪತ್ಯದಲ್ಲಿ ಸಣ್ಣ ಕಲಹವಾದರೂ ಅನಂತರ ಒಂದಾಗುವಿರಿ. ಮಕ್ಕಳನ್ನು ಪಡೆಯುವ ಬಯಕೆ ಅತಿಯಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿದ್ದು ವೈದ್ಯರ ಸಲಹೆಯನ್ನು ಪಡೆಯಿರಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ವಂಚಿತರಾಗುವ ಸಾಧ್ಯತೆ ಇದೆ.‌ ನಿಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಇರಲಿದೆ. ನಿಮ್ಮ ಗುಣಗಳನ್ನು ದುರುಪಯೋಗ ಮಾಡಿಕೊಳ್ಳುವರು. ಪ್ರೀತಿಯಿಂದ‌ ಗೆಲ್ಲುವ ನಿರ್ಧಾರವು ಒಳ್ಳೆಯದು.

ಕನ್ಯಾ ರಾಶಿ: ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ಮಮಕಾರದಿಂದ ನಿಮಗೆ ತೊಂದರೆಯಾಗಲಿದೆ. ಹಣದ ಸಂಪಾದನೆಗೆ ಅನೇಕ ಮಾರ್ಗಗಳು ಇದ್ದರೂ ನಿಮಗೆ ಅದಾವುದೂ ಇಷ್ಟವಾಗದು. ಪಾಲುದಾರಿಕೆಯಲ್ಲಿ ಉದ್ಯೋಗವನ್ನು ಪ್ರಾರಂಭಿಸಿ.‌ ಇಂದು ನಿಮ್ಮ ಒಬ್ಬರ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವು ದೊಡ್ಡದಾಗಬಹುದು. ನಿರ್ಮಾಣದ ಕೆಲಸವು ಬಹಳ ನಿಧಾನವಾಗಬಹುದು. ಇದರಿಂದ ನಿಮ್ಮಲ್ಲಿ ಆತಂಕ ಹೆಚ್ಚಬಹುದು. ಯಾರೋ ಮಾಡಿದ ತಪ್ಪಿಗೆ ನಿಮಗೆ ತೊಂದರೆಯಾಗಲಿದೆ. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಟ್ಟೀತು. ಅಧಿಕಾರಿಗಳು ನಿಮ್ಮ ಬಗ್ಗೆ ತಪ್ಪಾದ ಭಾವನೆಗಳನ್ನು ಇಟ್ಟುಕೊಳ್ಳುವರು.

ತುಲಾ ರಾಶಿ: ಯಾರದೋ ಮಾತಿನ ಮೇರೆಗೆ ಇಂದು ಕುಟುಂಬದಲ್ಲಿ ಕಲಹವಾಗಬಹುದು. ಯಾರನ್ನೂ ನಿಮ್ಮ ಮೂಗಿನ ನೇರಕ್ಕೆ ಅಳೆಯಬಾರದು. ಇಂದು ನಿಮಗೆ ಕಛೇರಿಯ ಕೆಲಸಗಳು ಅತಿಯಾಗಿದೆ ಎಂದು ಅನ್ನಿಸಬಹುದು. ಸಂಗಾತಿಗೆ ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ನಿಮ್ಮ ಸಾಮರ್ಥ್ಯದಿಂದ ಉನ್ನತ ಹುದ್ದೆಯನ್ನು ನೀವು ಅಲಂಕರಿಸುವಿರಿ. ಚಂಚಲವಾದ ಮನಸ್ಸು ನಿಮಗೆ ಅನೇಕ ಒಳ್ಳೆಯ ಆಯ್ಕೆಯನ್ನು ತಪ್ಪಿಸುವುದು.

ವೃಶ್ಚಿಕ ರಾಶಿ: ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಯಾರನ್ನೋ ಸಂಶಯಿಸುತ್ತ ಇರುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿಗೆ ಹೇಳಿ.‌ ಇಂದು ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವುದು ಕಷ್ಟವಾದೀತು. ಧಾರ್ಮಿಕ ವಿಚಾರದಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳುವುದು ಸರಿಯಲ್ಲ. ಕಾರಣಾಂತರಗಳಿಂದ ನೀವು ಹೋಗುವ ಪ್ರಯಾಣವು ಸ್ಥಗಿತಗೊಳ್ಳಬಹುದು.‌ ಆಡಳಿತಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಆಗಬಹುದು. ದೂರ ಪ್ರಯಾಣವು ನಿಮಗೆ ಇಷ್ಟವಾದೀತು.

ಧನು ರಾಶಿ: ನಿಮಗೆ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಲು ಕರೆ ಬರಬಹುದು. ಸಾಲದಿಂದ ನೀವು ಮುಕ್ತರಾಗಿ ಖುಷಿಪಡುವಿರಿ. ಕೃಷಿಕರು ಸ್ವಲ್ಪ ಲಾಭವನ್ನು ಪಡೆಯುವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಸರಿಯಾಗದು. ನಿಮ್ಮ ಪ್ರೇಮ ಪ್ರಕರಣವು ಹೊಸ ರೂಪವನ್ನು ಒಡೆಯುವುದು. ಅಧಿಕಾರಿಯುತವಾದ ವರ್ತನೆಯು ಸರಿಯಾಗದು. ದೂರ ಪ್ರಯಾಣವನ್ನು ಇಂದು ಮಾಡುವುದು ಬೇಡ. ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಕೆಲಸದ ಕುರಿತು ಗೊಂದಲ ಇರಲಿದೆ. ಸಭೆಯಲ್ಲಿ ನಿಮಗೆ ಗೌರವವು ಸಿಗಬಹುದು.

ಮಕರ ರಾಶಿ: ಪಾಲುದಾರಿಕೆಯಲ್ಲಿ ಕಲಹವಾಗಬಹುದು. ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಮಾತನಾಡಿ. ನಿಮ್ಮದಲ್ಲದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲಿದ್ದೀರಿ. ಗೊತ್ತಿಲ್ಲ ಕೆಲಸಕ್ಕೆ ಮುನ್ನುಗ್ಗುವುದು ಬೇಡ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗಿ ಇರಲಿದೆ‌. ಹೊಸ ಯೋಜನೆಗಳನ್ನು ಆರಂಭಿಸುವಾಗ ಆಪ್ತರ ಜೊತೆ ಚರ್ಚೆಯನ್ನು ಮಾಡಿ. ಧನದ ವ್ಯವಹಾರದಲ್ಲಿ ನಿಮಗೆ ಸರಿಯಾದ ಮಾಹಿತಿಯ ಕೊರತೆ ಇರಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆಯುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧಾನ ಇರಬಹುದು. ಇಂದು ಮುಗಿಯಬೇಕಾದ ಕೆಲಸಗಳು ಹಾಗೆಯೇ ಇರಲಿವೆ.

ಕುಂಭ ರಾಶಿ: ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಯಶಸ್ಸು ಸಿಗದು. ಸಂಗಾತಿಯು ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ನಿಮಗೆ ಬೇಸರ ಮಾಡಬುದು. ಆಲಸ್ಯವನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ನಿಮಗಾದ ಸಹಾಯವನ್ನು ನೀವು ನೆನಪಿಸಿಕೊಳ್ಳುವಿರಿ. ಅಧಿಕಾರಿವರ್ಗದ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿ. ಸಿಟ್ಟನ್ನು ಬಿಟ್ಟು ಶಾಂತವಾಗಿ ವರ್ತಿಸುವುದು ಮುಖ್ಯವಾಗುವುದು. ನೆರಹೊರೆಯರ ಸಂಕಷ್ಟಕ್ಕೆ ನೀವು ನೆರವಾಗುವ ಮನಸ್ಸು ಇರಲಿದೆ. ಕಛೇರಿಯಲ್ಲಿ ನೀವು ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಶಿಸ್ತಿನಿಂದ ಇರುವಿರಿ. ದಾನವನ್ನು ನೀವು ಮಾಡಲಿದ್ದೀರಿ.

ಮೀನ ರಾಶಿ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ನಿನ್ನೆಗಿಂತ ಉತ್ತಮವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟ‌ಮಾಡುವ ಆಲೋಚನೆ ಇರಲಿದೆ. ಸ್ವೋದ್ಯೋಗವನ್ನು ಮಾಡುತ್ತಿದ್ದರೆ ಸ್ವಲ್ಪ ನಷ್ಟವಾಗಬಹುದು. ಕುಟುಂಬವು ನಿಮ್ಮ ಜೊತೆಗೆ ನಿಲ್ಲುವುದು. ಹಳೆಯ ವಿಚಾರಗಳನ್ನು ನೀವು ಮತ್ತೆ ಕೆದಕುವಿರಿ. ಬಾಯಿ‌ ಮಾತಿನ ಯಾವುದನ್ನೂ ದಾಖಲೆಯಾಗಿ ಪಡೆಯದೇ ಬರಹದ ಮೂಲಕ ವ್ಯಕ್ತಪಡಿಸಿ. ಅನ್ಯರ ವಿಚಾರಗಳನ್ನು ಆಡಿಕೊಳ್ಳಲಿದ್ದೀರಿ.

-ಲೋಹಿತಶರ್ಮಾ (ವಾಟ್ಸ್​ಆ್ಯಪ್-8762924271)