Daily Horoscope: ರಾಶಿಭವಿಷ್ಯ, ಈ ರಾಶಿಯ ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯಕ್ಕೆ ಮೀಸಲಿಡುವರು

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ರಾಶಿಭವಿಷ್ಯ, ಈ ರಾಶಿಯ ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯಕ್ಕೆ ಮೀಸಲಿಡುವರು
ಇಂದಿನ ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Aug 02, 2023 | 12:15 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 02 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಪ್ರೀತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:52 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ.

ಮೇಷ ರಾಶಿ: ಲಾಭವನ್ನು ಗಮನದಲ್ಲಿಟ್ಟುಕೊಂಡು ನೀವು ಮತ್ತೆಲ್ಲವನ್ನೂ ಮರೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ನಿಮ್ಮ ಮಾತನ್ನು ನಡಸಿಕೊಡಲು ನಿಮ್ಮಿಷ್ಟದವರು ಪ್ರಯತ್ನಿಸುವರು. ಆಪ್ತರನ್ನು ಬಿಟ್ಟುಕೊಡಲು ನಿಮಗೆ ಕಷ್ಟವಾದೀತು. ಕುಟುಂಬದವರ ಬಗ್ಗೆ ನಿಮ್ಮ ಅಭಿಪ್ರಾಯವು ಸರಿಯಾಗಿ ಇರಲಿ. ತಾಯಿಯು ನಿಮ್ಮ ಪರವಾಗಿ ನಿಲ್ಲು ಅವರ. ವಾಹನವನ್ನು ಖರೀದಿಸುವ ಯೋಚನೆ ಮಾಡವಿರಿ. ಹಣಕ್ಕಾಗಿ ಸಾಲ‌ ಮಾಡಲು ಸಲಹೆಯನ್ನೂ ಕೊಡಬಹುದು.‌ ಸುಮ್ಮನೇ ಕುಳಿತು ಏನ್ನಾದರೂ ನಕಾರಾತ್ಮಕ ಯೋಚನೆಯನ್ನು ಮಾಡುವಿರಿ.

ವೃಷಭ ರಾಶಿ: ಭಾರದ ವಸ್ತುಗಳನ್ನು ನೀವು ಒಯ್ಯುವುದು ಬೇಡ. ನಿಮ್ಮದಾದ ಚೌಕಟ್ಟನ್ನು ಮಾಡಿಕೊಳ್ಳುವಿರಿ. ಅಸಾಮಾನ್ಯ ವಿಚಾರವನ್ನು ನೀವು ಸರಳೀಕರಿಸುವ ನೈಪುಣ್ಯತೆಯನ್ನು ಹೊಂದಿರುವಿರಿ. ಕೆಲವು ವಿಚಾರಕ್ಕೆ ಆಲಸ್ಯವು ವರವಾಗಬಹುದು. ಯಾರ ಜೊತೆಯೂ ನೀವು ಕಲಹವನ್ನು ಮಾಡಿಕೊಳ್ಳ ಬೇಡಿ. ಸಂಗಾತಿಯ ಜೊತೆ ದೂರ ಪ್ರಯಾಣವನ್ನು ಮಾಡಿ ಬನ್ನಿ. ಅನನುಕೂಲತೆಯನ್ನು ಸ್ನೇಹಿತರಿಗೆ ಹೇಳಿ ಸಮಾಧಾನವನ್ನು ತಂದುಕೊಳ್ಳುವಿರಿ. ಹಿರಿಯರ‌ ಮಾತನನ್ನು ಅನಿಸರಿಸಲು ನೀವು ಹಿಂದೇಟು ಹಾಕಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾದಾರು. ನಿಮ್ಮ ಸಹಾಯವನ್ನು ಕೇಳಿಯಾರು.

ಮಿಥುನ ರಾಶಿ: ಉದ್ಯೋಗದ ಕಾರಣದಿಂದ ಬೇರೆ ಊರಿನಲ್ಲಿ ಇದ್ದರೂ ಮನೆಯ ನೆನಪು ನಿಮ್ಮನ್ನು ಅತಿಯಾಗಿ ಕಾಡಬಹುದು. ಉದ್ಯೋಗವೇ ಸಾಕು ಎನಿಸಬಹುದು.‌ ಅತಿಯಾದ ಒತ್ತಡದಿಂದ ಹೊರಬರಲು ತಂತ್ರಗಳನ್ನು ಮಾಡುವಿರಿ.‌ ಏಕಾಗ್ರತೆಯಿಂದ ಸ್ವಲ್ಪ ಓದಿದರೂ ನಿಮಗೆ ಹೆಚ್ಚು ಫಲವನ್ನು ಕೊಟ್ಟೀತು. ಅನಗತ್ಯ ತಿರುಗಾಟದಿಂದ ನಿಮಗೆ ಬೇಸರವಾಗಲಿದೆ. ಸಂಗಾತಿಯನ್ನು ನೀವು ದೂರ ಮಾಡಿಕೊಳ್ಳುವಿರಿ, ಉಳಿತಾಯಕ್ಕೆ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ. ಪ್ರತ್ಯೇಕವಾಗಿ ಇರಲು ನಿಮಗೆ ಆಗದು.

ಕಟಕ ರಾಶಿ: ನಿಮಗೆ ಸಂಬಂಧಿಸದ ವಿಚಾರಗಳನ್ನು ನೀವು ಹೆಚ್ಚು ಮಾತನಾಡಲು ಬಯಸುವಿರಿ. ದೂರ ಪ್ರಯಾಣದಿಂದ ಹೆಚ್ಚು ಆಯಾಸಗೊಳ್ಳುವಿರಿ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಿ. ನಿಮಗೆ ಎಷ್ಟೋ ವಿಷಯಗಳಿಗೆ ಸಾಂತ್ವನವು ಇಂದು ಸಿಗಲಿದೆ. ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯಕ್ಕೆ ಕೊಡುವರು. ನೀವು ಇಂದು ನಾಜೂಕಾದ ಮಾತುಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ. ಭೋಗವಸ್ತುಗಳ ಖರೀಯು ಅಧಿಕವಾಗಿ ಇರಲಿದೆ.‌ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ